ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದು ಬಣ್ಣಿಸಲಿ ಎಲೆ ಧನವೆ ನಿನ್ನ ಮಾಣುವ ವಿಷಯಸುಖ ಅಹುದೆನಿಪ ಪರಿಯ ಪ ಏರಿಸುವಿ ಹಿರಿಕುದುರೆ ತೋರಿಸುವಿ ದುರ್ಮದವ ಹಾರಿಸುವಿ ಸುವಿಚಾರ ಮೀರಿಸುವಿ ಸುಪಥ ದೂರಿಸುವಿ ಮಹನೀತಿ ಘೋರಿಸುವಿ ಬಡವರನು ಕಾರಿಸುವಿ ತಿಂದನ್ನ ಧಾರುಣಿಯೊಳು 1 ಮೆರೆಸುವಿ ಅಂದಣದಿ ಸುರಿಸುವಿ ದುರ್ವಚನ ನರಸುವಿ ಎಡಬಲದಿ ಪರಿಪರಿಯ ಜನರ ತರಿಸುವಿ ಸತಿಸುತರ ಇರಿಸುವಿ ಅರಮನೆಯೊಳ್ ಮರೆಸುವಿ ಮಹಿಮರ ಸಂದರುಶನದ ಸುಖವ 2 ವೇದಶಾಸ್ತ್ರಕಿಳಿಸುವಿ ವಾದನುಡಿ ಕಲಿಸುವಿ ನೀ ಸಾಧುಸಜ್ಜನರ ನಿಜಬೋಧ ತೋರಿಸುವಿಯೋ ಭೇದನಿಕ್ಕುತ ವೈರ ಸಾಧಿಸುತ ಪರಲೋಕ ಸಾಧನೆಯ ಕೆಡಿಸ್ಯಮಬಾಧೆಗಾನಿಸುವಿ 3 ತೊಡಿಸುವಿ ವಿಧವಿಧದ ಒಡವೆವಸ್ತ್ರಂಗಳನು ನುಡಿಸುವಿ ಕಡೆತನಕ ಕಡುದುಗುಡ ಬಡಿಸುವಿ ಬಲುಜಂಬ ನಡೆಸುವಿ ದುಷ್ಷಥದಿ ಕೆಡಿಸುವಿಯೋ ಸಲೆ ಪುಣ್ಯಪಡೆದ ನರಜನುಮ 4 ಇನ್ನೆಷ್ಟು ಬಣ್ಣಿಸಲಿ ನಿನ್ನ ಕರುಣದ ಗುಣವ ನಿನ್ನ ನಂಬಲು ಬಿಡದೆ ಕುನ್ನಿಯೆಂದೆನಿಸಿ ಪನ್ನಂಗಶಯನ ಮಮ ಸನ್ನುತಾಂಗ ಶ್ರೀರಾಮ ನುನ್ನತಂಘ್ರಿಯ ಧ್ಯಾನವನ್ನು ಅಗಲಿಸುವಿ 5
--------------
ರಾಮದಾಸರು
ಹಣವೆÉ ನಿನ್ನಯ ಗುಣವೇನು ಬಣ್ಣಿಪೆನೊ ಪ. ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯಾ ಅ.ಪ. ಬೆಲೆಯಾಗದವನೆಲ್ಲ ಬೆಲೆಯ ಮಾಡಿಸುವಿ ಎಲ್ಲ ವಸ್ತುಗಳನಿದ್ದಲ್ಲೆ ತರಿಸುವಿ ಕುಲಗೆಟ್ಟವರ ಸತ್ಕುಲಕೆ ಸೇರಿಸುವಿ ಹೊಲೆಯನಾದರೂ ತಂದೊಳಗಿರಿಸುವಿ 1 ಅಂಗನೆಯರ ಸಂಗ ಅತಿಶಯದಿ ಮಾಡಿಸುವಿ ಶೃಂಗಾರಾಭರಣಂಗಳ ಬೇಗ ತರಿಸುವಿ ಮಂಗನಾದರೂ ಅನಂಗನೆಂದೆನಿಸುವಿ ಕಂಗಳಿಲ್ಲದವಗೆ ಮಗಳ ಕೊಡಿಸುವಿ 2 ಚರಣಕ್ಕೆ ಬಂದಂಥ ದುರಿತವನು ಬಿಡಿಸುವಿ ಸÀರುವರಿಗೆ ಶ್ರೇಷ್ಠನರನ ಮಾಡಿಸುವಿ ಅರಿಯದ ಶುಂಠನ ಅರಿತವನೆನಿಸುವಿ ಸಿರಿ ಹಯವದನನ ಸ್ಮರಣೆ ಮರೆಸುವಿ 3
--------------
ವಾದಿರಾಜ
ನೆಲೆಸೆನ್ನ ಹೃದಯ ಮಂದಿರದಿ - ಶ್ರೀ ಹರಿಯೆ ನೀ |ಸಲಿಸೆಮ್ಮ ಮನದಿಷ್ಟಅನುದಿನ ದಯದಿಪಸಿರಿಮಿಂಚಿ ಮರುತ್ಯುಪರ್ಣ ಪು - |ರಾರಿವಂದಿತಚರಣಸರಸಿಜ ||ಪರಮಭಕ್ತ ಪ್ರಹ್ಲಾದ ನಾರದ |ವರಪರಾಶರ ಮುಖಸುಸನ್ನುತ ಅ.ಪನಾರುವಿ ಭಾರವ ಪೊರುವಿ - ಬಲು - |ಬೇರುಗಳನೆ ಕಿತ್ತು ಮೇಲುವಿ -ಕರಿ - |ವೈರಿ ರೂಪಗೊಂಡ ಗರುವಿ - ಬ್ರಹ್ಮ - |ಚಾರಿ ಖಳರ ಕತ್ತರಿಸುವಿ |ವೀರದಶರಥಸುತ ಸುರಾರ್ಚಿತ |ಜಾರತನದಲಿ ವ್ರತವ ಕೆಡಿಸುತ |ತೋರಿ ಮೆರೆವನೆತರಳ ಬಲು ಗಂ - |ಭೀರ ಕುದುರೆಯನೇರಿ ಮೆರೆವನೆ 1ಅನಿಮಿಷ ಮಂದರೋದ್ಧರಣ - ನೀನಾ - |ವನಗಪಂಚಾನನವದನ - ವಾ - |ಮನ ದಾನವರ ಕೊಯ್ವಕದನ - ಹೀನ - |ದನುಜರಾವಣ ಸಂಹರಣ ||ಧೇನುಕಾಸುರ ಶಕಟಮರ್ದನ |ಜಾÕನದಾನ ವಿಡಂಬನಾನಕ |ಭಾನುಮಸ್ತಕ ನೀಲವರಕರ |ದೀನಜನಸಂತ್ರಾಣ ನಿಪುಣನೆ 2ಮಚ್ಛಕಚ್ಛಪ ಸ್ವಚ್ಛಕಿರನೆ - ಬಲು - |ಅಚ್ಚ ಶಿಶುಮೊರೆ ಕೇಳಿದವನೆ ||ಸ್ವೇಚ್ಛೆಯವಟು ಪರಶುಕರನೆ - ರಾಮ - |ವತ್ಸಾಸುರನ ವಧಿಸಿದವನೆ ||ತುಚ್ಛ ಜನರಿಗೆ ಕಪಟಕಾರಣ |ಹೆಚ್ಚಿನಶ್ವದ ಮೇಲೆ ಹೊಳೆವನೆ |ಮೆಚ್ಚಿಪುರಂದರ ವಿಠಲನಪರ - |ಮಾಚ್ಯುತದ ಪದವೀವ ದೇವನೆ 3
--------------
ಪುರಂದರದಾಸರು