ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರಳುತನವು ಬಂದು ಎನ್ನ ಕೊರಳ ಕೊಯ್ವುದು ದುರುಳನಾಗಿ ಇರುಳು ಹಗಲು ಒರಲುತಿಪ್ಪುದು ಪ ಮಾರಿಯನ್ನು ಮನೆಗೆ ತಂದು ತೋರಿಯಿಡುವುದು ಚೋರರನ್ನು ತಂದು ತನಗೆ ಸೇರಿ ಕೊಡುವುದು ದೂರುಬಪ್ಪ ದಾರಿಯನ್ನು ಸೇರಿ ನಡೆವುದು ಸಾರಿ ಪರನಾರಿಯನ್ನು ಸೂರೆಗೊಂಬುದು 1 ಹೆಂಡತಿಯ ಸುಲಿದು ತನ್ನ ಮಿಂಡಿಗಿಡುವುದು ಕಂಡು ಕಂಡು ಹರುಷ ತಾಳಿ ಕೊಂಡುಯಿರುವುದು ಭಂಡತನದಿ ಕೊಂದು ದೂರ ಕೊಂಡು ಪೋಪುದು ಉಂಡು ಉಡುವ ಹರುಷ ಸರಿಯ ಮಿಂಡಿಗಪ್ಪುದು 2 ಸೂಳೆಯನ್ನು ಕಂಡು ಹರುಷ ತಾಳಿಯಿರುವುದು ವೇಳೆಗವಳು ಬಾರದಿರಲು ಚೀ[ರಿ]1ಯಳುವುದು ಹಾಳು ಬದುಕಿನೊಳಗೆ ಬಹಳ ಚಾಳು ತೋರ್ಪುದು ಖೂಳರನ್ನು ಕರೆದು ಅನ್ನ ಪಾಲನೆರೆವುದು 3 ಇಲಿಯು ಹೆಚ್ಚಿತೆಂದು ಮನೆಗೆ ಉರಿಯನಿಡುವುದು ಚಳಿಯು ಹೋಯಿತೆಂದು ಮನದಿ ನಲಿವುತಿರುವುದು ಬಿಳಿದು ಬೂದಿಯನ್ನು ಕೊಂಡು ಹೊಳೆಗೆ ಬಿಡುವುದು ಸ್ಥಳವ ಕೆಡಿಸಿ ಕುಲವನೆಲ್ಲ ಬಳಕೆ ತೀರ್ಪುದು 4 ಹೆತ್ತ ಮಗನ ತೊರೆದು ತಾನು ದತ್ತ ತಪ್ಪುದು ಸತ್ತ ಎಮ್ಮೆ ಹಾಲು ಹತ್ತು ಸೇರಿಗಳವುದು ಕತ್ತಿಯನ್ನು ಬಿಸುಟು ಒರೆಯ ಹತ್ತಿರಿಡುವುದು ಶತ್ರುವಾಗ ಬಂದ ತನ್ನ ಒತ್ತಿ ನಿಲುವುದು 5 ಗಾಳವಿಲ್ಲದೆ ಮೀನುಗಳ ಮೇಲೆ ತೆಗೆವುದು ಕೋಲುಯಿಲ್ಲದ ಕೊಲೆಗಳೆನ್ನ ಮೇಲೆ ಬೀಳ್ವುದು ಸಾಲವನ್ನು ಕೊಟ್ಟವರು ಸಾಯಲೆಂಬುದು ಕಾಲನೊಳು ಕೈಯ ಕಟ್ಟಿ ಶೂಲೆ ತಪ್ಪುದು 6 ಸರ್ವತಂತ್ರವೆಲ್ಲ ಹರಿಯ ಹತ್ತಿರಿಡುವುದು ಗರ್ವವನ್ನು ತೋರಲವನ ಸುತ್ತಿ ಬರುವುದು ಇರುವೆಯಂತೆ ಮೈಯನೆಲ್ಲ ಕುತ್ತಿ ತರಿವುದು ತೋರ ವರಾಹತಿಮ್ಮಪ್ಪನ ಎತ್ತಿ ನೆನೆವುದು 7
--------------
ವರಹತಿಮ್ಮಪ್ಪ
ರಾಮ ನಿನ್ನಯ ದಿವ್ಯ ನಾಮವೇ ಗತಿಯೆಂಬೆ ಪಾಮರನೆಂದೆನ್ನ ಪಾಲಿಸು ತಂದೆ ಪ. ಸುರರಾಜನಂಗಸಂಗವಗೈದು ಶಿಲೆಯಾದ ವರಮುನಿ ಗೌತಮನರಸಿಯು ನಿನ್ನ ಚರಣಾರವಿಂದ ಸಂಸ್ಪರ್ಶಮಾತ್ರದಿ ದಿವ್ಯ ತರುಣಿಯಾಗಿಹಳೆಂಬ ಪರಿಯ ನಂಬಿದೆನು 1 ಪ್ರಥಮ ವರ್ಣವು ಪಾಪ ತತಿಗಳ ತರಿವುದು ಜತನ ಮಾಡುವುದನ್ಯ ವರ್ಣವೆಂದೆನುತ ನಿತ್ಯ ಸಂಸ್ತುತಿಮಾಳ್ಪವದರಿಂದಾ- ಶ್ರಿತ ಕಲ್ಪತರು ನೀನೆ ಗತಿಯೆಂಬೆ ನಿರತಾ 2 ನಿತ್ಯ ನಿರ್ನಾಮಗೊಳಿಸು ಪನ್ನಗಾಚಲನಾಥ ಪರಿಪೂರ್ಣ ಕೃಪೆಯಿಂದ ಮನ್ನಿಸಿ ಮನಸನ್ನು ನಿನ್ನಲ್ಲಿ ಇರಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಲಕುಮಿವಲ್ಲಭ ಹರಿಯ ಮಂದಿರದಿಂದ ಬಕುಳೆ ಬಂದ ಪರಿಯ ನಗುತ ಸದ್ಯುಕುತಿಯಿಂದಲಿ ಪೇಳ್ದಳು ಪ. ಯಾರು ಬಲ್ಲರಿವನ ಸಂಸ್ಥಿತಿಯನ್ನು ನೀರೆ ನೀ ಪೇಳ್ವದನ ದಾರಿಯ ಪೇಳೆ ಜಾಣೆ 1 ಕ್ಷೀರಾಂಬುಧಿವಾಸನ ಸಕಲಗುಣ ವಾರುಧಿ ವರದೇಶನ ಸಾರಿ ಸಾರಿಗೆ ಸರ್ವ ಸುರಮುನೀಶ್ವರರೆಲ್ಲ ಸೇರಿ ಬಾಳುವರೀತನ 2 ಮಾತಿಗೆ ದೊರೆಯನಂತೆ ಮನೋಗತಿ ನೀತಿಯು ನಡೆಯದಂತೆ ಜಾತಿ ಗೋತ್ರ ಬಂಧು ಜನರಿಲ್ಲದವನಿಗಿನ್ಯಾತಕೆ ಪರಿಣಯವು 3 ಭೂತೇಂದ್ರಿಯ ಮನವು ಬಲಿಷ್ಠ ಮಹಾತತ್ವ ಹಂಕೃತಿಯು ಶ್ರೀ ತರುಣಿಯ ಗುಣ ತ್ರಯಮುಖ ತತ್ವ ಸಂಘಾತವೀತನಿರಲು 4 ಮನೆಯ ಕಟ್ಟಿದನೆಂಬೊರು ನಿಜವಾಗಿ ಪೇಳು 5 ಸಕಲ ಜಗನ್ನಿವಾಸ ಸಾಂಗೋಪಾಂಗ ಮುನಿಗಳ ಸರಿವನಂತೆ ತನುಮನದಲಿ ತನ್ನ ನೆನೆವರ ಕೃತ್ಯಗಳನು ತಾನೆ ಮಾಳ್ಪನಂತೆ 6 ಮನೆವಾರ್ತೆಗಳ ಬಿಟ್ಟು ಸಂಚರಿಸುವ ಮುನಿಗಳ ಸರಿವನಂತೆ ತನುಮನದಲಿ ತನ್ನ ನೆನೆವರ ಕೃತ್ಯಗಳನು ತಾನೆ ಮಾಳ್ಪನಂತೆ 7 ದಾಸರ ಪಾಲಿಪುದು ಎಂದೆಂದಿಗು ಶ್ರೀಶನ ಮಹಬಿರುದು ದೋಷದೂರನಾದರಿಂದ ಮೌನಿ ಮನೋವಾಸನಾಗಿಹ ನೆರದು 8 ಕುಲಹೀನನಾಗಿ ಕಲ್ಪಾಂತದೊಳಿರುವಗೆ ಲಲನೆಯ ನಿಪ್ಪುದೆಂತೆ 9 ಸುಧೆಯನು ತಾನೆ ತಂದ ಮುದವ ತೋರಿದ ಮುಕುಂದ 10 ಹೊಡದಾಡಿ ಬರುವನಂತೆ ಕೊಡುವದೆಂತೆ 11 ಮಗುವಿನ ಮಾತ ಕೇಳಿ ತಕ್ಷಣ ನರಮೃಗನಾಗಿ ಕೋಪತಾಳಿ ಬಗೆದು ಬಲಿಷ್ಠ ದೈತ್ಯನು ಸುಲಭದಿ ಬೇಗ ತೆಗೆದನು ಕರುಳನಂತೆ 12 ಸಿರಿಯನಾಳುವನಾದರೆ ದೈತ್ಯರ ಮುಂದೆ ತರಿವುದು ಸರಿಯೆ ನೀರೆ ಮರುಳು ಮಾತುಗಳಾಡಲ್ಯಾತಕೆ ಸುಮ್ಮನೆ ಥರವಲ್ಲ ಹಿಂದೆ ಸಾರೆ 13 ಕೃತ್ರಿಮ ದ್ವಿಜನಿವನು ಭೂಭಾರಕ ಕ್ಷತ್ರ ಸಮೂಹವನು ಶಸ್ತ್ರ ಪಿಡಿದು ಬುಡ ಕತ್ತ್ರಿಸಿ ಮಡುಗಳ ನೆತ್ರದಿ ರಚಿಸಿದನು 14 ದಾನವರನು ಗೆಲಲು ಚಪಲ ಬುದ್ಧಿ ವಾನರರನು ಒಲಿಸಿ ಪೇಳ್ವ ಹೀನವಾರ್ತೆಗಳೇನಿದು 15 ಧರೆಯ ಭಾರವನಿಳುಹಿ ಸಕಲ ಸುರವರ ಮುನಿಗಳ ಸಲಹಿ ತೆರವ ತೋರಿದ ಕೃಷ್ಣನು 16 ಜೈನರ ಸಭೆಯೊಳಗೆ ಮೈಯೊಳು ವಸ್ತ್ರಹೀನನಾಗಿರುವ ಬಗೆ ನಾನರಿಯೆನೆ ಬಹು ಮಾನ ಬಿಟ್ಟವನಿಗೆ ಏನೆಂದು ಮಗಳೀವನೆ 17 ಕೊಲುವನು ಖಡ್ಗದಲಿ ನಿಖಿಳ ಕುಲವನುದ್ಧರಿಸುವನು 18 ಏನೆಂದರು ಮನದಿ ನಿರ್ಣಯ ತೋರದೇನು ಮಾಡಲಿ ಕೆಳದಿ ಮಾನಿನಿ ಶಿರೋಮಣಿಯೆ 19 ದೋಷ ಲೇಶಹೀನನು ಸಕಲಗುಣ ಭೂಷಿತ ಶ್ರೀವರನು ಶೇಷ ಗಿರೀಶನೆನಲು ತನ್ನ ಮಗಳೀವ ಭಾಷೆಕೊಟ್ಟಳು ಧರಣಿ 20
--------------
ತುಪಾಕಿ ವೆಂಕಟರಮಣಾಚಾರ್ಯ