ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅಮ್ಮೆಂಬಳದ ಕುರ್ನಾಡು ಸೋಮನಾಥ) ಕಾಮಿತ ಫಲದಾತ ಕಟ್ಟೆಯ ಸ್ವಾಮಿ ಸೋಮನಾಥಾ ಪೂಜೆಯ ನಿರುತದಿ ಕೊಳ್ಳುವ ಪ. ಅಂಬಿಕೆಯನು ವರಿಸಿ ಗಜಚ ರ್ಮಾಂಬರವನು ಧರಿಸಿ ಶಂಬರಾರಿಯನು ಸುಲಭದಿ ಗೆಲಿದಂ- ಮ್ಮೆಂಬಳಜನರನು ನಂಬಿಸಿ ಸಲಹುವ 1 ಒಡೆಯನು ನೀನೆಂದೂ ಊರಿನ ಬಡ ಜನರುಗಳಿಂದೂ ಕೊಡುವ ಪೂಜೆಯನು ಮಡದಿಸಮೇತೀ- ಗಿಡದ ಬುಡದಿ ಕೊಂಬುಡುಪತಿಶಿಖರ 2 ದೋಷಗಳನು ತರಿವಾ ಪನ್ನಗ ಭೂಷಣನೀ ಬರುವಾ ತೋಷಪಡುವ ಸಜ್ಜನರಿಗೆ ಶೇಷಗಿ ರೀಶನು ಸಕಲಭಿಲಾಷೆಯ ಸಲಿಸುವ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಕಾವೇರಿ ಪ್ರಾರ್ಥನೆ) ಕಾವೇರಿ ಕಲುಷಹರಿ ಭುವನ ಪಾವನ ನಾರಿ ಶ್ರೀವರನ ಕೃಪೆ ದೋರಿ ಕಾವುದಕಾಗುವಿ ಸ್ವಾರಿ ಪ. ತಾಪಗಳೆಲ್ಲವ ತರಿವಾ ಶ್ರೀಪತಿಪಾದಾಶ್ರಯವಾ ಯೀ ಪರಿಯಿಂದೊದಗಿಸುವ ಲೋಪಾಮುದ್ರೆಯೆನಿಸುವಾ 1 ಮನಸಿಜನಯ್ಯನ ಕಥೆಯು ಮನೆಯಲಿ ಸಾಂಗದೊಳಿಂದು ಅನುಕೃತವಾಗುವುದೆಂದು ಕನಸಿಲಿ ತೋರಿದಿ ಬಂದು 2 ದಕ್ಷಿಣ ಗಂಗೆಯ ನೋಡಿದಾಕ್ಷಣ ಕಷ್ಟವ ದೂಡಿ ಪಕ್ಷಿವರ ಧ್ವಜಯನ್ನಾಪೇಕ್ಷೆಯ ನೀಡಿದ ಮುನ್ನ 3 ಕಲಿಮಲಕಾಲನ ಹರಿಯ ಒಲುಮೆಯ ತಾಳಿದ ಪರಿಯ ಕರ ಕರಿಯ 4 ತಪ್ಪುಗಳೆಲ್ಲವ ಕ್ಷಮಿಸಿ ಒಪ್ಪುವುದುತ್ತಮಕರಸಿ ಸರ್ಪಗಿರೀಂದ್ರನ ಕರುಣಾ ತಪ್ಪು ಮನ್ನಿಸು ಶರಣಾ 5
--------------
ತುಪಾಕಿ ವೆಂಕಟರಮಣಾಚಾರ್ಯ
ಆವ ಬಲವಿದ್ದರೇನು - ವಾಸುದೇವನಾ ಬಲವು ನಿಜವಾಗಿ ಇರದನಕ ಪ ನೊಸಲಗಣ್ಣನ ಬಲ ನಾಲ್ಕು ತೆರದ ಬಲತ್ರಿಶುಲ ಡಮರು ಅಗ್ನಿ ಫಣಿಯ ಬಲವುಪಶುಪತಿಯ ರೂಪಿನ ಬಲದ ಶಿಶುಪಾಲನಅಸುರಮರ್ದನ ಕೃಷ್ಣ ಶಿರವ ಛೇದಿಸುವಾಗ 1 ಹರನ ಕರುಣದ ಬಲವು ಸುರರ ಗೆಲಿದಾ ಬಲವುಪರಮ ಶಕ್ತಿಯು ತನ್ನ ಭುಜದ ಬಲವುಧರೆಯನೆತ್ತಿದ ಬಲವುಳ್ಳ ಹಿರಣ್ಯಾಕ್ಷನಶಿರವ ಹರಿ ವರಾಹನಾಗಿ ತರಿವಾಗ2 ಮುನ್ನ ಗೆಲಿದ ಬಲ ಮುಕ್ಕಣ್ಣ ಹರನ ಬಲಘನ್ನ ಲಂಕಿಣಿಯ ಕಾವಲಿನ ಬಲವುತನ್ನ ವಂಶದ ಬಲವುಳ್ಳ ರಾವಣನ ಶಿರವಸನ್ನುತ ರಾಘವ ಪಟ್ಟನೆ ಪಾರಿಸುವಾಗ 3 ಲಿಂಗಪೂಜೆಯ ಬಲ ನಿಶ್ಚಿಂತನಾಗಿಹ ಬಲಹಿಂಗದೆ ಹರನು ಬಾಗಿಲ ಕಾಯ್ದ ಬಲವುಮುಂಗೈಯ ಶಕ್ತಿ ಸಾವಿರ ತೋಳ ಬಾಣನತುಂಗ ವಿಕ್ರಮ ಕೃಷ್ಣ ತೋಳ ಖಂಡಿಸುವಾಗ 4 ಈಸು ದೇವರ ಬಲಗಳಿದ್ದರೆ ಫಲವೇನುವಾಸುದೇವನ ಬಲವಿಲ್ಲದವಗೆದೇಶಕಧಿಕ ಕಾಗಿನೆಲೆಯಾದಿಕೇಶವನಲೇಸಾದ ಚರಣ ಕಮಲದ ಬಲವಿರದನಕ 5
--------------
ಕನಕದಾಸ
ಖಳರನು ತರಿವಾ ಬಗಳಾಂಬೆಗೆಕಮಲದಾರತಿ ಬೆಳಗಿರೆ ಪ ಅರಿ ಎಂಬ ಶಬ್ಧವು ಕಿವಿಗೆ ಬೀಳಲುಸರಿದವು ಸರಿದವು ಖಡ್ಗದಿಂ ಕೆಂಗಿಡಿಭರದಿಂದರಿಯನೆ ತುಡುಕಿಯೆ ಮುಂದಲೆತರಿದಳಾಗಲೆ ತಲೆಯ ಬಗಳಾಂಬೆಮುರಿದಳಾಗಲೆ ತಲೆಯ ಬಗಳಾಂಬೆ1 ಕಡಿಯುತ ಅವುಡನು ಅರಿಯನು ದೃಷ್ಟಿಸಿಝಡಿಯುತ ಮುದ್ಗರ ಹಿಡಿದು ನಾಲಗೆಮೃಡಹರಿ ಬ್ರಹ್ಮರು ಅಹುದಹುದೆನೆಹೊಡೆದಳಾಗಲೆ ಅರಿಯ ಬಗಳಾಂಬಪುಡಿಯ ಮಾಡಿದಳರಿಯ ಬಗಳಾಂಬ 2 ಕಾಲಲಂದುಗೆ ಗೆಜ್ಜೆ ಕಂಠಾಭರಣವುಮೇಲೆ ಸರಿಗೆವೋಲೆ ಮೂಗುತಿ ಹೊಳೆಯಲುಲೋಲ ಚಿದಾನಂದ ರೂಪಿಣಿ ಬಗಳೆಯುಪಾಲಿಸಿದಳು ಭಕ್ತರ ಬಗಳಾಂಬಲಾಲಿಸಿದಳು ಭಕ್ತರ ಬಗಳಾಂಬ 3
--------------
ಚಿದಾನಂದ ಅವಧೂತರು
ರಾಮನ ನಾಮವ ಪ್ರೇಮದಿ ಭಜಿಸಲು ರಾಮನು ವಲಿಯುವಾ ಬಿಡದೆ ಪಾಲಿಸುವಾ ಪ ಕಾಮಿತ ವರಗಳ ನೀಯುತ ಭಜಕರ ಸ್ವಾಮಿಯು ವಲಿದೆಮ್ಮ ನಿರುತ ಪಾಲಿಸುವಾ ಅ.ಪ. ತರಳರ ಮಾತಿಗೆ ಸೈಯೆಂದು ನುಡಿಯುತ್ತ ಪರಮ ಸಾಮ್ರಾಜ್ಯದ ಪದವಿಯ ಕೊಡುತ್ತಾ ಸರಳರ ಹೃದಯವ ನೀಕ್ಷಿಸಿ ಜವದೊಳು ಕರೆದು ಸಾಯುಜ್ಯದ ಪದವಿಯ ಕೊಡುವಾ 1 ದುರುಳರ ಸುಖಗಳಿಗಂತಕನಾಗುತ ಶರಣರ ಪಿಡಿದು ಶಿಷ್ಟರನು ಕಾಯುತ್ತ ಭರದಿಂದ ಸುಜನರ ಕಷ್ಟವ ತರಿವಾ 2 ಕೌಸಲೆ ಗರ್ಭದಿ ಬಂದ ಶ್ರೀಹರಿ ತಾನು ವಾಸುಕಿ ಭಾರವ ನಿಳುಹಲಿಕ್ಕೆ ವಾಸ ಮಾಡುವನೀಗ ವರ ದೂರ್ವಾಪುರದಲ್ಲಿ ದಾಸನ ಸಲಹುವ ಕೇಶವನೆಂಬ 3
--------------
ಕರ್ಕಿ ಕೇಶವದಾಸ
ಲಕ್ಷ್ಮೀ ದೇವಿಯ ಗಂಡ ಹರಧನುರ್ಭಂಗಾ ರುಕ್ಮಾಂಗ ಧನಪಾಲಾ ಕರುಣಾಂತರಂಗಾ ಪ ಪೂಜಿಸಿದವರಿಗಭೀಷ್ಟವ ಕೊಡುವಾ ಪೂಜಿಪ ದಾಸರ ಕಷ್ಟವ ತರಿವಾ ಸಜ್ಜನರಿರುವಲ್ಲಿ ನಿರುತನಾಗಿರುವಾ 1 ಸ್ಮಾರನನ್ನು ಪಡೆದ ಮನೋಹರ ಮೂರ್ತಿ ಶರಣು ಬಂದವರಿಗೆ ವರ ಚಕ್ರವರ್ತಿ ಧರೆಯಲ್ಲಿ ಪೊಗಳುವೆ ಶ್ರೀಹರಿ ಕೀರ್ತಿ ಅರಿಯದ ದಾಸಗೆ ಸುಖಗಳ ಭರತೀ 2 ಪನ್ನಗಶಯನ ಶ್ರೀದಾಸರ ಪೋಷಾ ಸನ್ನುತ ಕಾವ ಶ್ರೀ ದೂರ್ವಾಪೂರೇಶಾ ಮನ್ನಿಸಿ ರಕ್ಷಿಸೊ ಭಜಕರ ಪೋಷಾ ಚನ್ನಿಗ ಕೇಶವದಾಸನಧೀಶಾ3
--------------
ಕರ್ಕಿ ಕೇಶವದಾಸ
ಶ್ರೀ ಜಗನ್ನಾಥದಾಸರ ಸ್ತೋತ್ರ ರಾಯರ ನೋಡಿರೈ ದಾಸರಾಯರ ಪಾಡಿರೈ |ಮಾಯ ರಮಣಪ್ರಿಯಾ |ಇವರ ಮನದೊಳಗೆ ಸುಳಿದಾ | ಶ್ರೀರಂಗವಲಿದ ಪ ಮೋದ |ಕಾಣಿಸುವದು ಜಗದೊಳಗೆ, ಇವರಿಗೆ ಕೀರುತಿಯ |ಪುಣ್ಯ ಮೂರುತಿಯು |ಧೇನಿಸಿ ಎರಡನೆ ಜನ್ಮದಿ, ಈತನೆ ಶಲ್ಯಾ |ತತ್ವವ ಬಲ್ಲಾ 1 ಮೂರನೆ ಜನ್ಮದಿ ಕೊಂಡಪ್ಪ, ರಾಜನದೂತ | ಸುಪ್ರಖ್ಯಾತಾ |ಸಾರ ಜನರ ಪ್ರಿಯ ಶ್ರಿ ಪುರಂದರದಾಸಾರ್ಯ |ಸುತ ಆಶ್ಚರ್ಯ |ತೋರುವ ಐದನೆ ಜನ್ಮದಿ ಶ್ರೀಹರಿದೂತ |ಗುರು, ಜಗನ್ನಾಥ 2 ನರಹರಿಯ ತುತಿಪ ವಂದಂಶದಿ ಸಾಂಶರೆಂದುಖಂಬದಿ ನಿಂದು |ಮೆರೆವರು ಊಧ್ರ್ವಪುಂಢವು ತುಲಸಿಯಮಾಲಾ |ಅಕ್ಷ ಸುಶೀಲಾ |ಪರಿಪರಿ ಸೇವಿಪ ಜನರಿಗಭೀಷ್ಟವ ಗೆರೆವಾ |ದುರಿತವ ತರಿವಾ 3 ದೇಶದೇಶವ ಜನರುಗಳೆಲ್ಲರು ಬಂದು |ನೋಡಲು ನಿಂದು |ಸೋಸಿಲಿ ದರುಶನಕೊಳಲವರಿಗೆ ಆನಂದ |ವಾಹುದು ಛಂದ |ಮೀಸಲಹುದು ಮನ, ಕೈಸೇರುವ ಶ್ರೀಪತಿಯೂ |ಹರ ಅಘತತಿಯು 4 ಎಷ್ಟು ಪೇಳಲಿ ಇವರ ಮಹಿಮೆ ತುತಿಸಲ್ಕೆ |ವಶವಲ್ಲ ಮನಕೆ |ನಿಷ್ಠಿಯಿಂದಿವರನು ತುತಿಸಲು ಶ್ರೀವರತುಷ್ಟಾ |ಪಾಪವು ನಷ್ಟಾ |ಸೃಷ್ಟಿಯೊಳಗೆ ಶ್ರೀಶ ಪ್ರಾಣೇಶವಿಠಲನ ದಾಸ |ದಾಸೋತ್ತಂಸ 5
--------------
ಶ್ರೀಶಪ್ರಾಣೇಶವಿಠಲರು
ಆ ರಣಾಗ್ರದಿ ಭೀಮಗಡ್ಡಯಿಪರಾರು? |ವಾರಿಧಿಮೇರೆದಪ್ಪಲು ನಿಲ್ಲಿಸುವವರಾರು?ಪನಾನಾ ದೇಶದ ಭೂನಾಯಕರಿದ್ದರಲ್ಲವೆತಾನು ದುಶ್ಯಾಸನನ ತತ್ತರಿವಾಗ ||ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆಆನೆಯ ಕೈಯ ಕಬ್ಬಿಗೆ ಅಂಗಯಿಸುವರಾರು? 1ಘುಡುಘುಡಿಸುತ ರಾಯ ಕುರುಪತಿಯನು ಕೆಡಹಿತೊಡೆಗಳನು ಗದೆಯಿಂದ ತುಂಡಿಸುವಾಗ ||ಕಡುಕೋಪದವ ಹಲಧರನೇನ ಮಾಡಿದ?ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ? 2ಸಂದಿಗೆ ಸಾವಿರ ಸಿಂಹಸತ್ತ್ವದ ಕೀಚಕನಕೊಂದು ಬಿಸುಡುವಾಗ ಮುಂಕೊಂಡರುಂಟೆ? ||ಚೆಂದದಿಪುರಂದರವಿಠಲದಾಸರು ಮನದಂದಕೆ ಬಂದಂತೆ ನಡೆದುದೆಮಾರ್ಗ3
--------------
ಪುರಂದರದಾಸರು
ವಂದನೆ ಮಾಡಿರೈಗುರುವರದೇಂದ್ರರ ಪಾಡಿರೈ ಪಬಂದ ದುರಿತಗಳ ಹಿಂದೆ ಮಾಡಿ ಸುಖ |ತಂದುಕೊಡುವ ದಯಾಸಿಂಧುಯತೀಂದ್ರರ ಅ.ಪ.ಮರುತ ಮತಾಂಬುಧಿ ಸೋಮನೆನಿಪ ವಸುಧೇಂದ್ರ - ಸದ್ಗಣಸಾಂದ್ರ|ಗುರುಗಳಕರಕಮಲದಿ ಜನಿಸಿದ ಸುಕುಮಾರಾ - ಕುಜನ ಕುಠಾರಾ ||ನೆರೆನಂಬಿದ ಭಕುತರನನುದಿನದಲಿ ಪೊರೆವಾ - ದುರಿತವ ತರಿವಾ |ಧರೆಯೊಳು ತ್ಯಾಗದಿ ಕರ್ಣನ ಮರೆಸಿದ ನೋಡಿ - ವರಗಳ ಬೇಡಿ1ಕರಿಹಿಂಡೊಳುಹರಿಹೊಕ್ಕ ತೆರದಿ ವಾದಿಗಳ - ಕೀಳು ಮತಗಳ |ವರಶಾಸ್ತ್ರಗಳಲಿ ಗೆಲಿದು ಸುಬುದ್ಧಿಯ ವರದ - ಜಗದೊಳು ಮೆರೆದ ||ಶರಭಂಗವರದಚರಣಸರಸೀರುಹಭೃಂಗ- ವಿಷಯ ಅಸಂಗ |ಸ್ಮರಣೆಯ ಮಾಡೆ ಪಿಶಾಚ ರೋಗಗಳ ಭಯವೂ - ಮುಟ್ಟದಲಿಹವೂ 2ಸಾನುರಾಗದಲಿ ಶ್ರೀ ರಾಘವೇಂದ್ರರ ಸ್ತೋತ್ರ - ಮಾಳ್ಪ ಸುಪಾತ್ರ |ಜಾನಕಿಪತಿ ಆನಂದದೊಳಿವರಿಗೆ ಒಲಿವ - ಹೃದಯದಿ ಸುಳಿವ ||ದೀನ ದಯಾಳು ಅಪರಿಮಿತ ಮಹಿಮ ಗುಣಾಢ್ಯ - ವಾದದಿ ದಾಢ್ರ್ಯಾ |ಧ್ಯಾನಿಸೆ ಮನದೊಳು ಜ್ಞಾನ ಕೀರ್ತಿ ಸುಖ ಕೊಡುವ - ಅಘಗಳ ಕಡಿವ 3ವಿಷ್ಣುನ ಲೋಕ ಪ್ರವೇಶ ಮಾಡಿದ ಚರಿಯಾ - ಕೇಳಿರಿ ಪರಿಯಾ |ಶಿಷ್ಟ ಜನರು ವಿಶ್ವಾವಸು ನಾಮಕ ಅಬ್ದ - ಆಷಾಢ ಶುದ್ಧ ||ಷಷ್ಠಿಯು ಕುಜವಾಸರ ಉತ್ತರಾ ನಕ್ಷತ್ರಾ -ವರಪುಣ್ಯಕ್ಷೇತ್ರ |ನಟ್ಟ ನಡುವೆ ವೃಂದಾವನ ಮಧ್ಯದೊಳಿರುವಾ - ಸೌಖ್ಯವ ಸುರಿವಾ 4ಆನೆ ಹಂಡೆ ವಸನಗಳು ದ್ರವ್ಯವು ನಾನಾ - ಮಾಡಿದ ದಾನಾ |ಆ ನಗರದಿ ಬಹು ಮಂದಿಯು ಭಕುತಿಯಲಿಂದಾ - ಪೂಜಿಪ ಚಂದ ||ಸೂನುಪಡೆದು ಸುಖ ಪಡುವರು ಸರ್ವರುನಿತ್ಯ- ಈತನು ಸತ್ಯ |ನಾನೆಂತುಸಿರಲಿ ಪ್ರಾಣೇಶ ವಿಠಲನ ದಾಸಾ, ಮುನಿ ಉತ್ತಂಸಾ 5
--------------
ಪ್ರಾಣೇಶದಾಸರು