ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲವೆಂತು ಕಳೆಯಲೆನ್ನಯ್ಯ ಪ ಕಾಲಕಳೆಯಲೆಂತು ನಾನು ತಾಳಿಮೂಗುತಿ ಕಾಣದೊನಿತೆಯ ಹಾಳುಮುಖವ ನೋಡೆವೆಂದು ಶೀಲಮುತ್ತೈದೇರ್ಹಳಿಯುತಿಹ್ಯರು ಅ.ಪ ಏಳುಸುತ್ತಿನಕೋಟಿ ಪಟ್ಟಣದಿ ಖೂಳರುಪಟಳ ಹೇಳಲಳವಲ್ಲ ಸೇರಿ ವಿಧ ವಿಧದಿ ದಾಳಿನಿಕ್ಕಿ ಹಾಳು ಮಾಡ್ವರು ಮನಕೆ ಬಂದತೆರದಿ ಗೋಳು ಕೇಳುವರಿಲ್ಲವೋರ್ವರು ತಾಳೆನೀಬಾಧೆ ಶೀಲದೆನ್ನ ಬಹು ಜೋಕಿಯಿಂ ಮೇಲ್ಮಾಲಿನೋಳಿಟ್ಟು ಆಳುವಂಥ ಮೂಲಪುರಷನಿಲ್ಲದಿನ್ನು 1 ಆರು ಕೇಳುವರಿಲ್ಲ ಇವಳಿಗೆಯೆನುತ ಕೀಳ ಮೂರು ಮಂದಿ ಊರ ಬೀದಿಯೊಳಗೆ ದಾರಿ ತರುಬಿ ಸಾರಿ ತರಿವರು ಮಾರಕೇಳಿಗೆ ಸೈರಿಸಲಿ ಹ್ಯಾಗೆ ಚೋರನೋರ್ವನು ಮೀರಿ ಬಾಧಿಪ ಆರು ಮಂದಿ ಬಿಡದೆ ಎನ್ನನು ಘೋರಿಸುವರು ನಾನ ವಿಧದಿ ಪಾರುಗಾಣೆನು ವ್ರತದಿ ಇನ್ನು 2 ಪತಿಯು ಇಲ್ಲದ ಜನ್ಮವ್ಯಾತಕ್ಕೆ ಕ್ಷಿತಿಯಮೇಲೆ ಸತಿಗೆ ಪರಮ ಗತಿಯ ಕೊಡಲಿಕ್ಕೆ ಪತಿಯೆ ಬಾಧ್ಯ ಇತರರು ಕಾರಣಲ್ಲ ಕಾಯಕ್ಕೆ ಜತನ ಗೈಲಿಕ್ಕೆ ಪ್ರಥಮ ಮುತ್ತಿನ ಮೂಗುತಿಯನು ಹಿತದಿ ಕರುಣಿಸಿ ಪತಿಯಾಗೆನಗೆ ಗತಿಯ ನೀಡಿ ಹಿತದಿಂ ಸಲಹು ಪತಿತ ಪಾವನೆನ್ನ ಪ್ರಾಣ ಶ್ರೀರಾಮ 3
--------------
ರಾಮದಾಸರು
ಧನ್ಯನಾದೆನಾ ಗುರು ಪ ಸನ್ನುತಾಂಗ ಗುರುರಾಜರ ನೋಡಿಅ.ಪ ಘನ್ನ ಮಹಿಮರಿವರು | ವರ ಪಾವನ್ನಚರಿತರಿವರು | ಸುಖಗಳನೀವರ ನೋಡಿ 1 ಬುಧರ ಮಹಾತ್ಪ್ರಭುವೋ| ಭಜಿಪರ ಮಧುರ ಸುರದ್ರುಮವೋ| ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು| ಅಧಮರ ಮುರಿದಿಹ ಧೀರರ ನೋಡಿ2 ಶ್ರೀಶ ಕೇಶವನ್ನ | ಮನದೊಳುಪಾಸನೆಗೈವರನು | ಕೊಂಡಾಡುತೆ ನೋಡಿ3
--------------
ಶ್ರೀಶ ಕೇಶವದಾಸರು
ಬರಬಾರದಾಗಿತ್ತು ಬಂದೆನಯ್ಯಾ ಪ ಕರೆತರಲು ಬಂದುದಕೆ ಫಲವೇನೊ ದೇವಾಅ.ಪ ತರಳತನದಲ್ಲಿ ಎನ್ನ ಕರಣಗಳು ಮಾಡಿದ ಪರಿಪರಿಯ ಕ್ರೀಡೆಗಳ ಫಲವೇನೊ ಎನಗೆ ದುರುಳ ಸಂಗದೊಳಿದ್ದು ಹರುಷದಿಂದಲಿ ಎನ್ನ ಆಯುವನು ಕಳೆದೆ1 ಸತಿಸುತರು ಹಿತರಿವರು ಎನಗೆಂದು ಉಬ್ಬುಬ್ಬಿ ಮಿತಿ ಇಲ್ಲದಾ ಕಾರ್ಯಗಳನೆ ಮಾಡೀ ಗತಿಯೇನು ಮುಂದು ಹಿತವು ಯಾವುದು ಎಂದು ಮತಿಗೆಟ್ಟಮೇಲೆನಗೆ ಗೊತ್ತಾಗುವುದೆಂತೋ 2 ಶ್ವಾನ ಸೂಕರಗಳು ಸ್ವೇಚ್ಛೆಯಿಂದಲಿ ಚರಿಸಿ ತನ್ನ ಪರಿವಾರವನೆ ತಾ ಪೊರೆಯುತಿಹವೋ ಎನ್ನ ಸತಿಸುತರುಗಳ ಉದರಪೋಷಣೆಗಾಗಿ ಹೀನಸೇವೆಯಿಂದ ಉಪಜೀವಿಸಲು ಬಹುದೆ 3 ತನುಬಲವು ಇದ್ದಾಗ ಕೋಣನಂದದಿ ತಿರುಗಿ ಜ್ಞಾನ ಕರ್ಮಗಳನ್ನು ಆಚರಿಸದೇವೆ ಧನ ವನಿತೆ ಮೋಹಕೆ ಕೊನೆಮೊದಲು ಇಲ್ಲದೆ ಮನವೆಲ್ಲವನು ನಾನು ಹೊಲೆಗೆಡಿಸಿದಮೇಲೆ4 ವಿಕಳಮತಿಯನು ಹರಿಪ ಅಕಳಂಕ ಹರಿಭಕ್ತ- ರಕುಟಿಲಾಂತಃತರಣ ದೊರೆತು ಎನ್ನ ಸಕಲಾಪರಾಧಗಳ ಕ್ಷಮಿಸುವರ ಸಂಗ ನೀ ಕರುಣಿಸದಿದ್ದ ಮೇಲೆ ಶ್ರೀ ವೇಂಕಟೇಶಾ 5
--------------
ಉರಗಾದ್ರಿವಾಸವಿಠಲದಾಸರು
ಶ್ರೀ ಪಾದರಾಜ ಸಂದರ್ಶನದಿ ಸಕಲ ಸಂ ತಾಪಗಳು ಕಳೆದುವಿಂದು ಪ ತಾಪಸೋತ್ತಮರಿವರು ಇಹ ಪರಗಳಲ್ಲೆಮ್ಮ ಕಾಪಾಡುತಿರುವರೆಂದು ಅ.ಪ ಪೂರ್ಣರಿದ್ದರು ಲೋಕದಿ ಸ್ವರ್ಣಾಕ್ಷರಗಳಿಂದ ಬರೆಯುವಂತಹ ಶಾಸ್ತ್ರ ನಿರ್ಣಯಗಳಿತ್ತರಿವರು 1 ಮಂಗಳಾತ್ಮಕ ನಮ್ಮ ರಂಗವಿಠಲ ಕೃಪಾ ಪಾಂಗ ಪಾತ್ರರು ಪೂಜ್ಯರು ಕಂಗಳಿಗೆ ಹಬ್ಬವಿದು ಮಂಗಳಕೆ ಸಾಧನವು ಹಿಂಗಿತೆಮ್ಮಯ ಕೊರತೆಯು 2 ಜ್ಞಾನ ಭಂಡಾರವನು ಲೋಕಕೀಯಲು ಶುದ್ಧ ಮಾನಸ ಪ್ರಸನ್ನರಿವರು ಮೌನಿವರ ವ್ಯಾಸತೀರ್ಥರಲಿ ಪರಮಾದರದಿ ಜ್ಞಾನಧಾರೆಯ ಕರೆದರು 3
--------------
ವಿದ್ಯಾಪ್ರಸನ್ನತೀರ್ಥರು
ಸ್ಮರಿಸಿ ಬದುಕಿರೊ ಗುರುವರರಾ ನರ- ಹರಿಸ್ಮರಣೆ ಮರೆಯದಲೆ ಕೀರ್ತಿಸಿ ನಲಿದವರ ಪ ದಾಸದೀಕ್ಷೆಯ ವಹಿಸಿದವರ ಹರಿ ದಾಸರ ಕೂಡಿ ನರ್ತಿಸಿ ನಲಿದವರ ಶ್ರೀಶನ ಮಹಿಮೆ ಬಲ್ಲವರ ಭವ ಪಾಶಗಳಳಿವ ಸನ್ಮಾರ್ಗಬೋಧಕರ 1 ಬಡತನದಲಿ ಬಳಲಿದವರ ಭಾಗ್ಯ ಬಿಡದೆ ಬಂದೊದಗೆ ಹಿಗ್ಗದೆ ತಗ್ಗಿದವರ ಮೃಡಸಖನೊಲುಮೆ ಪಡೆದವರ ಬಹು ಸಡಗರದಲಿ ಹರಿ ಭಜನೆ ಮಾಡ್ದವರ 2 ಪಂಕಜಾಕ್ಷನ ಪೊಗಳಿದವರ ತಂದೆ ವೆಂಕಟೇಶ ವಿಠ್ಠಲ ದಾಸರಿವರ ಬಿಂಕದಿ ಹರಿಯ ಮರೆತವರ ಗರ್ವ ಬಿಂಕಗಳಳಿಯ ಸನ್ಮಾರ್ಗಕೆಳದವರ3 ತಾಳ ತಂಬೂರಿ ಪಿಡಿದವರ ಗೆಜ್ಜೆ ತಾಳ ಮೇಳದಿ ನರ್ತಿಸಿ ನಲಿದವರ ವ್ಯಾಳ ಶಯನನ ಭಕ್ತರಿವರ ಸಂಜೆ ವೇಳೆ ಹರಿಭಜನೆ ಮಾಡಿ ನಲಿದವರ 4 ಮಡದಿ ಮಕ್ಕಳು ಬಂಧು ಜನರ ಕೂಡಿ ಕಡು ಸಂಭ್ರಮದಿ ಹರಿಭಜನೆ ಮಾಡ್ದವರ ಕಡಲ ಶಯನನ ಭಕ್ತರಿವರು ಭಾಗ್ಯ ಬಡತನ ಸಮವೆಂದು ತಿಳಿಯ ಹೇಳ್ದವರ 5 ಹರಿಗುಣ ಕೀರ್ತಿಸಿದವರ ನರ ಹರಿಯ ಮಹಿಮೆಗಳ ಶಿಷ್ಯರಿಗೊರೆದವರ ಹರಿಯೆ ಸರ್ವೋತ್ತಮನೆಂದವರ ನಮ್ಮ ಉರುಗಾದ್ರಿವಾಸ ವಿಠ್ಠಲನ ನಂಬಿದವರ6 ಮಮತೆಯ ಬಿಡಬೇಕೆಂದವರ ದೇಹ ಮಮತೆಯ ಬಿಡುತ ಹರಿಪುರ ಸೇರಿದವರ ಕಮಲಾಕ್ಷನ ಭಕ್ತರಿವರ ನಮ್ಮಕಮಲನಾಭನ ವಿಠ್ಠಲನ ನಂಬಿದವರ 7
--------------
ನಿಡಗುರುಕಿ ಜೀವೂಬಾಯಿ
ಆಚರಸ ನೀ ಬಾಚರಸ ನೀ ಈಚಿಯೊಳುಕಟ್ಟಿರುವ ಪೆಸರಿದ ನೆರೆದು ಸುವಾಚ್ಯ ಸಂಪನ್ನಸತ್ಕೀರ್ತಿಕರನೆನಿಪ ಲಿಂಗರಸ ಪೂರ್ಣ ಪುರುಷ |ಶ್ರೀಚಂದ್ರಮೌಳಿಪದಾಂಬುಜಮಧುಪ........... ದೇ ನಾಮ ಗುಜಾಯಿ ಗರ್ಭಜ......... ಸಪ್ತ ಋಷಿಗಳವತಾರನೆಂಬ ತೇಜೆನಿಸಿದ ರಾಶಿಗೆ1xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'(ಹಿರಿಯ) ಮಗ ಮುದ್ದಣ ಖೊಬ್ಬರಸ ಕಮಲರಸ.............ಹಿ ರಮಣ ಮೋಬರಸ ಬಾಲರಸ ತಿಪ್ಪರಸಸಿರಿವಂತರಿವರು ಪೂರ್ವಜ ಲಿಂಗರಸನಸತಿಗುಜಾಯಿಕುವರರೆನಿಸಿ | ಮೆರೆವ ಸಿಂಧಾಪುರದಿ ಕರಣಿಕಿರ್ಪಪ್ರತಿಸೃಷ್ಟಿ ಕರ್ತಾ ವಿಶ್ವಾಮಿತ್ರ ಗೋತ್ರಜ ಸಂಗಮೇಶ್ವರನ ಕೃಪಾಪಡೆದಹರ್ನಿಶಿ ಭಕ್ತರೆನಿಸಿಹನರಲೋಕದಿ2
--------------
ಜಕ್ಕಪ್ಪಯ್ಯನವರು