ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಕ್ಕಲ ಮಾಡೆನ್ನ ಮುಕ್ಕುಂದ ತಂದೆ ಒಕ್ಕಲ ಮಾಡೆನ್ನ ಪ ಒಕ್ಕಲ ಮಾಡೆನ್ನ ದಕ್ಕಿಸಿ ಭವದೊಳು ಅಕ್ಕರದಲಿ ನಿಮ್ಮ ಮಿಕ್ಕ ಪ್ರಸಾದ ನೀಡಿ ಅ.ಪ ಆಸೆ ನೀಗಿಸೆನ್ನಭವದ ಪಾಶ ತರಿಯೊ ಮುನ್ನ ಪಾದ ದಾಸಾನುದಾಸರ ವಾಸದಿರಿಸಿ ಎನ್ನ ಪೋಷಿಸು ದಯದಿಂ 1 ಸೊಕ್ಕು ಮುರಿದು ಎನ್ನ ನಿಮ್ಮಯ ಪಕ್ಕದೆಳಕೊ ಎನ್ನ ತಿಕ್ಕಿ ಮುಕ್ಕುವ ಘನ ಮಕ್ಕಮಾರಿ ಸತಿಯ ರಕ್ಕರ್ಹಾರಿಸಿ ನಜರಿಕ್ಕೆ ಸಲಹುಜೀಯ 2 ಜನನ ಮರಣ ಬಿಡಿಸೊ ಎನ್ನಯ ಮನವ ನಿನ್ನೊಳಿರಿಸೊ ವನರುಹ ಬ್ರಹ್ಮಾಂಡ ಜನನಿ ಜನಕನಾದ ವನಜಾಕ್ಷ ಶ್ರೀರಾಮ ಘನಮುಕ್ತಿ ಪಾಲಿಸಿ 3
--------------
ರಾಮದಾಸರು
ಭಾರ ನಿನ್ನದು ದೇವಾ ಭಕುತ ಸಂಜೀವಾ ಪ ದೂರ ನೋಡದೆ ಪೊರೆಯೊ ದುರಿತಗಳ ತರಿಯೊ ಅ.ಪ. ಮೂರನೆ ಗುಣದಿಂದ ಮತ್ತನಾಗಿ ಬಹಳ ಮೂರು ವಿಧ ವಿಷಯದಲಿ ಮಗ್ನನಾದೆ ಮೂರುಖಾಗ್ರೇಸರಿಗೆ ಮುಂದಾವಗತಿಯೈಯ ಮೂರಾವತಾರವುಳ್ಳ ಮರುತಾತ್ಮಜನೆ 1 ಆರು ಮೂರರ ದ್ವಾರದ ಸ್ಥಿರದ ಮನೆಯೊಳಗೆ ಆರು ವೈರಿಗಳು ಕಂಡಾವಾಗಲೂ ಆರು ಬಿಡಿಸದ ಬವಣೆ ಬಡಿಸುತಲೈದಾವರೆ ಆರೆರಡು ಪೆಸರುಳ್ಳ ಅಂಜನಾತ್ಮಜನೆ 2 ಪಂಚೇಂದ್ರಿಯಗಳು ಕೂಡೆ ಪರಿಪರಿ ಬಗೆಯಿಂದ ಪಂಚಮಹಾ ಪಾತಕಕೆ ಎಳೆಯುತಾರೆ ಪಂಚಕಷ್ಟಕೆ ಗುರಿಯು ಆಗಲಾರೆನು ಪ್ರಾಣ ಪಂಚಪದಕವೇ Pದರುಂಡಲಗಿ ಹನುಮಯ್ಯ 3
--------------
ಕದರುಂಡಲಗಿ ಹನುಮಯ್ಯ
ಶ್ರೀ ಹರಿಸ್ತುತಿ ಎಂದೆಂದಿಗೂ ಎನಗೆ ತಂದೆ ನೀ ದೇವಾಬಂದೆನ್ನ ಕರಪಿಡಿಯೊ ಬಿಂದು ಮಾಧವಾ ಪ ಸಾರ ಮಾರ ಜನಕನೆ 1 ಮಂದರಗಿರಿಯನ್ನೆ ಚಂದಾದಿಂದೆತ್ತಿದೋಕಂದನೆಂತೆಂದೆನ್ನ ಮುಂದಕೆ ಕರೆಯೋ 2 ವರಾಹ ರೂಪವ ತಾಳಿ ಧರೆಯ ಸಲಹಿದೆಯೋದುರುಳ ಮನವನಳಿದು ತ್ವರದಿ ನೀ ಕಾಯೋ 3 ಕಂಬದಿಂದಲಿ ಬಂದ್ಯೊ ಅಂಬುಜನಯನಬಿಂಬನ ಪಾಲಿಸೊ ಅಂಬುಧಿಶಯನ 4 ಇಳೆಯ ದಾನವ ಬೇಡಿ ಬಲಿಯ ಮೆಟ್ಟಿದೆಯಾಭಳಿರೆ ಪಾದವ ತೋರಿ ಉಳಹೊ ಮಹರಾಯ 5 ಛಲದಿಂದ ಕ್ಷತ್ರಿಯ ಕುಲವನಳಿದನೆಬಲವಾದ ದುರಿತವ ಕಳೆಯೊ ಸುರವರನೆ 6 ಶಿಲೆಯ ಸತಿಯ ಮಾಡಿ ಸಲಹಿದ ರಾಮಾನಲಿನಲಿವುತ ಬಾರೊ ಜಲಜ ಸಂಭವ ಪ್ರೇಮಾ 7 ಆಕಳ ಕಾಯ್ದೆಯೊ ಗೋಕುಲನಾಥಏಕಭಕ್ತಿಯನೀಯೋ ಲೋಕವಿಖ್ಯಾತ 8 ಉತ್ತಮ ಸ್ತ್ರೀಯರ ಚಿತ್ತವ ಹರಿಸಿದ್ಯೋಉತ್ತಮ ಜ್ಞಾನವನಿತ್ತು ಪೊರೆಯೊ 9ತುರಗ ರಾವುತನಾಗಿ ಮೆರೆದಂಥಾ ವೀರಭರದಿ ಕಾಡುವ ಖಳರ ತರಿಯೊ ಗಂಭೀರ 10 ಶರಧಿಶಯನ ತಂದೆವರದವಿಠಲನುಶರಣು ಬಂದವರನ್ನು ನಿರುತ ಕಾಯುವನು 11
--------------
ಸಿರಿಗುರುತಂದೆವರದವಿಠಲರು