ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೇನು ಬಲ್ಲವನು ನಾನಲ್ಲ ಹರಿಯೆ ನಿನ್ನ ಧ್ಯಾನಧಿಕೆಂಬುದೊಂದೆ ನಾ ಬಲ್ಲೆ ಪ ನಿನ್ನ ಧ್ಯಾನವೆ ಮರೆವ ತರಿದ್ಹಾಕುವುದೆಂಬೆ ನಿನ್ನ ಧ್ಯಾನವೆ ಅರಿವ ಸ್ಥಿರ ಮಾಳ್ಪುದೆಂಬೆ ಶರಧಿ ಹೀರುವುದೆಂಬೆ ಸಿರಿ ನೀಡ್ವುದೆಂಬೆ 1 ನಿನ್ನ ಧ್ಯಾನವೆ ದು:ಖದೂರ ಮಾಡುವುದೆಂಬೆ ನಿನ್ನ ಧ್ಯಾನವೆ ಸುಖದ ವಾರಿಧಿಯೆಂಬೆ ನಿನ್ನ ಧ್ಯಾನವೆ ಮುಖ್ಯ ಚಾರುವೇದಗಳೆಂಬೆ ನಿನ್ನ ಧ್ಯಾನವೆ ಜ್ಞಾನಮೂಲಸಾರೆಂಬೆ 2 ನಿನ್ನ ಧ್ಯಾನವೆ ತತ್ವರೂಪವಾಗಿಹ್ಯದೆಂಬೆ ನಿನ್ನ ಧ್ಯಾನವೆ ಮುಕ್ತಿಮೂಲಾಧಾರೆಂಬೆ ನಿನ್ನ ಧ್ಯಾನವೆ ಭಕ್ತ ಜನಪ್ರಾಣಪದಕೆಂಬೆ ಎನ್ನಯ್ಯ ಶ್ರೀರಾಮ ನಿನ್ನಿಂದೆ ನಾನೆಂಬೆ 3
--------------
ರಾಮದಾಸರು
ಮನವೆ ಎಲೆ ಮನವೆ ನೀನು ಯೋಚಿಸಿ ಕೆಡುವುದು ಅನುಚಿತವಲ್ಲೆ ಪ ನೀ ಮನನಮಾಡಿದ ಸಂಸಾರಿರದು ಕಾನನದ ಬೆಳದಿಂಗಳು ಇದು ಪರಿ ತಿಳಿದು ಹೀನಯೋಚನೆ ಬಿಟ್ಟು ಧ್ಯಾನಕವಚ ತೊಟ್ಟು ಜ್ಞಾನವೆಂಬಾಯುಧಪಾಣಿಯಾಗೆಲೊ ಬೇಗ 1 ಈ ದೇಹವೆಂಬುವ ಕಾಂತಾರ್ಹೊಕ್ಕು ಉಪಾ ಯುದ್ಹುಲಿಗಳ ತರಿದ್ಹಾಕು ಮಹಮಾಯ ಕೋಣಗಳೆಂಟು ನೂಕು ದಾಯಾದ್ಯೈವರ ಕೊಂದು ಜೀವಘಾತಕರಾದ ಮೂವರಂ ಭಂಜಿಸಿ ದ್ವಯಮಾರ್ಗ ಗೆಲಿಯೆಲೊ 2 ಕಂಟಕ ಬದಿಗಿಟ್ಟು ಬಹ ಆರೊಂದು ನದಿಗಳ ದಾಂಟು ಭೋರ್ಗರೆವ ಸರ್ಪನ ಹೆಡೆ ಮೆಟ್ಟು ಮಾರಾರಿ ವಿನಮಿತ ಧೀರ ಶ್ರೀರಾಮಪಾದ ವಾರಿಜಕ್ಕೆರಗಿ ಗಂಭೀರ ಸುಖದಿ ಮೆರಿ 3
--------------
ರಾಮದಾಸರು