ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲಮುಖಿಯೆ ಕಮಲಾಲಯೆ ಕಮಲೆಕಮಾಲಾಕ್ಷಿಯೆ ಕೋಮಲೆ ಪ. ಕಮಲನಾಭನ ಪಾದಕಮಲಯುಗಳ ಮಧುಪೆಕಮಲಜ ಜನನಿಯೆ ಕಮಲಮಿತ್ರೆ ಸುಪ್ರಭೆ ಅ.ಪ. ಅರುಣನ ಪೋಲುವ ಚರಣವು ಬಾಲಚಂದಿರನ ಸೋಲಿಪ ನಖವುಬೆರಳಲ್ಲಿ ಪಿಲ್ಲಿ ಕಾಲುಂಗುರ ಮೆಂಟಿಕೆ ಕಿರುಗೆಜ್ಜ್ಯಂದಿಗೆ ಪೆಂಡೆಯುಕರಿಯ ದಂತದಂತೆ ಜಾನುದರ್ಪಣ ಜಂಘೆ ಉಟ್ಟ ದಟ್ಟಿಯು ನೆರಿಗೆಯುಹರಿನಡು ಕಿಂಕಿಣಿ ಭರದಿ ಒಡ್ಯಾಣವು ಉದರ ತ್ರಿವಳಿರೇಖೆ ವರ ಕಂಚುಕಧಾರಿ1 ಉರೆ ವೈಜಯಂತೀ ಮಂದಾರಮೆರೆವ ಚುಬುಕ ಬಿಂಬಾಧರ ಕೂರ್ಮಕದಪು ಕಿರಿದಂತ ರತುನದ ಕರಡಿಗೆ ವದನೆ 2 ಸುರಭಿ ಚಂಪಕನಾಸಿಕ ಮೂಗುತಿ ಶಾಂತ ಪರಮ ಕರುಣ ನೋಟದಹರಿಣನಯನೆ ಪುಬ್ಬುಸ್ಮರನ ಚಾಪದಂತೆ ಕರ್ಣಾಭರಣಲಂಕಾರ ಸಿರಿಕುಂಕುಮ ಕಸ್ತೂರಿ ತಿಲಕದ ಮೇಲೆ ಅರಳೆಲೆ ಬೈತಲೆಯ ಸರ ಕುರುಳುಸುಳಿಯು ಪರಿಪರಿ ರತ್ನ ಖಚಿತದ ವರ ಮಕುಟವು ಕೋಟಿ ತರಣಿಯಂತೊಪ್ಪುವ 3 ತೆತ್ತೀಸಕೋಟಿ ದೇವತೆಗಳು ವಾಣಿ ಭಾರತಿ ಪಾರ್ವತಿ ಮೊದಲಾದಉತ್ತಮಸ್ತ್ರೀಯರು ಛತ್ರಚಾಮರನೆತ್ತಿ ಬೀಸುವಲಂಕಾರಸುತ್ತಗಂಧರ್ವರು ತುಂಬುರ ನಾರದರು ಸ್ವರವೆತ್ತಿ ಪಾಡುವ ಝೇಂಕಾರತತ್ತರಿತರಿಘಟ್ಟ ಝಣುತ ಝಣುತ ಎಂದು ಎತ್ತ ನೋಡಿದರತ್ತ ತಥೈ ಎಂಬೊ ಶಬ್ದ 4 ಅಜ ಫಾಲಾಕ್ಷ ಸುರವಿನುತೆಮೋಕ್ಷದಾಯಕಿ ಲೋಕರಕ್ಷಕಿ ರಮಾದೇವಿ ಇಕ್ಷುಧನ್ವನ ಜನನಿಅಕ್ಷಯಫಲದ ಗೋಪಾಲವಿಠಲನ ಪ್ರತ್ಯಕ್ಷ ತೋರಿಸೆನ್ನಪೇಕ್ಷೆ ಪೂರೈಸೆ ತಾಯೆ 5
--------------
ಗೋಪಾಲದಾಸರು
ಭಾಗವತರಿಗೇ ನಮೋ ನಮೋ ಹರಿ | ಯೋಗವುಳ್ಳವರಿಗೆ ನಮೋ ನಮೋ ಪ ನಂದನದೊಳಗ ಅಳಿಕುಳಗಳು ಪುಳಕುತ | ನಲುವ ಪರಿಲಿ ಗುರುವಲುವಿನಲಿ | ಕಳವಳದಳಕವಗಳದುಳದಿಳೆಯೊಳು | ಹೊಳೆಯುತಲಿಹರಿಗೆ ನಮೋ ನಮೋ 1 ಸಿರಿ ಮದಜರಿದರಿಹರಿಯಂಕುರಮುರಿ | ದರಿಸಖರನು ಸರಿಯರಿದಿರುತಾ | ಪರಿಪರಿ ಮುಮ್ಮುಳಿ ತರುತರಿತರಿವುತ | ಚರಿಪರಿಗ್ಹರುಷದಿ ನಮೋ ನಮೋ | 2 ಸುಜನ ಕುಜನರೊಳಗ | ಘನವನು ಸಮತಿಳಿದನು ಭವದೀ | ಅನುದಿನ ಮಹಿಪತಿ ನಂದನ ಪ್ರಭುವಿನ | ನೆನೆಯುತಲಿಹರಿಗೆ ನಮೋ ನಮೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಂಗ ಕರುಣಿಸೊ ಚರಣಾ ಶ್ರೀ ಪ ರಂಗಗರುಡತುರಂಗಸಿರಿಮನ ತುಂಗಭವಗಜ ಸಿಂಗರಿಪುಕುಲ ಭಂಗ ಮಹಿಮತರಂಗ ದೇವೋತ್ತುಂಗನಿಜನಿಸ್ಸಂಗ ನರಹರಿ ಅ.ಪ ದೇವಸಕಲ ಸೃಷ್ಠಿಯಗೈವ ಸುಸ್ವಭಾವ ದೇವ ತ್ರಿಭುವನ ಜೀವಭಕ್ತರ ಕಾವಶೃತಿತತಿ ಭಾವ ದೋಷಾಭಾವನಿಜಸುಖ ವೀವ ಬ್ರಾಹ್ಮಿಯ ಮಾವ ತರಿತರಿ ನೋವ ಪರಿಮರ 1 ಛೇಧಖಳಜನ ಖೇದ ಸಜ್ಜನ ಮೋದನಿರ್ಗತ ಭೇದ ಸಿರಿನುತ ಪಾದವ್ಯಾಹೃತಿ ನಾದಸಿರಿಜಗ ಭೇದ ಸುಖಮಯ ಸಾಧು ಶಿರಶ್ರೀ2 ಶ್ರೀಶ ನಿಜದಾಸ ಜನರ ಮನ ಉಲ್ಲಾಸಾ ಶ್ರೀಶ ತರಿತರಿ ಪಾಶ ಕೊಡುಕೊಡು ಲೇಸ ನಿಖಿಳರ ಭಾಸ ಸಿರಿಮನೆ ವಾಸ ವಿಶ್ವನು ಪೋಷ ಬ್ರಹ್ಮಸುಕೋಶ ನಿರ್ಗತ ನಾಶ 3 ಸತ್ಯ ನಿತ್ಯಾನಿತ್ಯ ಜಗರೂಪ ಸ್ವತಂತ್ರ ಕಳತ್ರ ಪರಮಪ ವಿತ್ರ ಚಿನ್ಮಯ ಭೃತ್ಯವತ್ಸಲ ನಿತ್ಯನೂತನ ಸತ್ಯವತಿಸುತ ಚಿತ್ತಮಂದಿರ 4 ವಿಶ್ವತೈಜಸ ಪ್ರಾಜ್ಞತುರಿಯ ಶರಣು ಅಶ್ವತ್ಥ ವಿಶ್ವವಿಶ್ವಗ ವಿಷ್ಣುಜಗ ಬಲ ವಿಶ್ವಪ್ರೇರಕ ಜಿಷ್ಣುಸಾರಥಿ ಕೃಷ್ಣವರಸ್ಥಿತ “ಕೃಷ್ಣವಿಠಲ” ಶಿಷ್ಟದೋಷಸಹಿಷ್ಣುವಂದಿಪೆ 5
--------------
ಕೃಷ್ಣವಿಠಲದಾಸರು