ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಳಿ ಕೂಗಿತು ತಂಪು ಗಾಳಿ ಬೀಸಿತು ಏಳಯ್ಯಾ ಬೆಳಗಾಯಿತು ಪ ಧೀರ ಸೋಮಕನಿರಿದು ಮೇರು ಬೆನ್ನಲಿ ಪೊತ್ತು ಘೋರ ಹಿರಣ್ಯಾಕ್ಷ ಕಶ್ಯಪರ ಶೀಳಿ ಮಾರಿ ಬಲಿಯನ್ನೊತ್ತಿ ಕಂಸ ದಾನವರನಳಿದು ಶೇರಿ ತ್ರಿಪುರರ ದಹಿಸಿ ಕ್ರೂರ ದುಷ್ಟರ ತರಿದು ಭಾರಿ ಆಯಾಸದಲಿ ನಿದ್ರೆ ಹತ್ತಿರೆ ಸ್ವಾಮಿ1 ವೇದವನು ತಂದೆ ಸುರವೃಂದಕಮೃತವನಿತ್ತೆ ಮೇದಿನಿಯ ನೆಲಸಿ ಪ್ರಲ್ಹಾದನಾ ಪೊರೆದೆ ಮೋದಿಗಂಗೆಯ ಜನಿಸಿ ಭೂದಾನ ಮಾಡಿದೆ ಮೋದದಿಂದಜಪದವಿಯ ಆಂಜನೇಯಗಿತ್ತೆ ಪೋದ ಮಕ್ಕಳ ತಂದು ಗುರುಪತ್ನಿಗೇ ನೀಡಿ ವೇದನುತ ನಿರ್ವಸನ ಸುಹಯಾರೂಢನೇ2 ಶರಣಜನ ಬಂದು ಸುಸ್ವರದಿಂದ ಪಾಡುತಿರೆ ಪರಿ ಕಣ್ಣಮುಚ್ಚುವುದೇ ಸರಿಯೆ ಬೆನ್ಮರೆಮಾಡಿ ಮಣ್ಣನಾಡಾಡುವುದೇ ಉರಿಮೋರೆಯಿಂದ ತರಳಾಟ ಆಡುವುದೇ ಪರಶು ಶರ ಚಕ್ರಗಳ ಪಿಡಿದು ಉಡಿಗೆಯ ಮರೆತೆ ಭರದಿ ತುರಗವನೇರು ನರಸಿಂಹ ವಿಠ್ಠಲಾ 3
--------------
ನರಸಿಂಹವಿಠಲರು
ರಾಜಕುಲ ವನರಾಶಿ ರಾಜರಾಜೇಶ್ವರಾ | ರಾಜೀವ ನಯನ ಯದುರಾಜ ಎಲೊ ಭಾಪುರೆ ಪ ಗರಳ ಪೇರ್ಮೊಲೆಯಿತ್ತ ಅಸುರಿಯಳ ಸಂಹರಿಸಿ | ಮರಳಿ ಅವಳಿಗೆ ಉತ್ತಮ ಗತಿಯನಿತ್ತೆ | ದುರಳ ಶಕಟಾಸುರನ ಚರಣ ದುಂಗುಟದಲ್ಲಿ | ತರಳಾಟದಿಂದ ಮರ್ದಿಸಿದೆ ಎಲೆ ಭಾಪುರೆ 1 ವ್ರಜ | ಪುರವ ಪಾಲಿಸಿದೆ ಕಾಳಿಂಗನೈದು | ಸಿರದಲ್ಲಿ ತುಳಿದು ರಮಣ ದ್ವೀಪಕೆ ಕಳುಹಿ | ಪರಿಪರಿಯ ಖಳರ ಮರ್ದಿಸಿದೆ ಎಲೊ ಭಾಪುರೆ 2 ಕರೆಯ ಬಂದಾ ಕ್ರೂರ ಭಕ್ತನಿಗೆ ಯಮುನೆಯಲಿ | ಕರುಣದಿಂದಲಿ ನಿಜರೂಪ ತೋರಿ | ಮುರಿದು ಧರಿಗೆ ವರಿಸಿದೆ ಕಂಸನ ಎಲೆ ಭಾಪುರೆ 3 ವನಧಿಯೊಳು ಪುರ ಬಿಗಿದು ಕಾಲಯವನನ ಸದೆದು | ಅನಿಲ ಸುತನಿಂದ ಮಾಗಧನ ಕೊಲ್ಲಿಸಿ | ವನಿತೆಯರ ಸೆರೆ ಬಿಡಿಸಿ ಸೂತತನವನೆ ವೊಹಿಸಿ | ಫಲ್ಗುಣಗೆ ವಿಶ್ವರೂಪವ ತೋರಿದೆ ಎಲೊ ಭಾಪುರೆ 4 ಗುರು ಭೀಷ್ಮ ಶಲ್ಯ ಶಕುನಿ ಸುಬಲ ಭಗದತ್ತ | ತರಣಿಸುತ ದುಶ್ಶಾಸ ಕೌರವೇಶಾ | ಎರಡು ಬಲ ವ್ಯಾಜ್ಯದಲಿ ಭೂಭಾರನಿಳುಹಿ ಸಾ | ವಿರ ತೋಳ ಖಳನ ಭಂಗಿಸಿದೆ ಎಲೊ ಭಾಪುರೆ5 ದ್ವಾರಕಾಪುರದಲ್ಲಿ ನಾರದಗೆ ಸೋಜಿಗವ | ತೋರಿದೆ ಒಬ್ಬೊಬ್ಬ ನಾರಿಯಲಿ | ನಾರಿಯರ ಕೂಡ ಬಲು ಕ್ರೀಡೆಗಳನಾಡಿ ಅ | ವರ ಸಂತಾನವನು ಪಡದೆ ಎಲೊ ಭಾಪುರೆ 6 ವರ ಚಂದ್ರಹಾಸ ಮಿಗಿಲಾದ ಭೂಪಾಲಕರ | ಕರೆಸಿ ಪಾಂಡುವರ ಯಾಗವನೆ ಮುಗಿಸಿ | ಹರುಷದಲಿ ಯದುಕುಲವಾಸ ಮಾಡಿದೆ | ಪರಮ ಪುರುಷ ವಿಜಯವಿಠ್ಠಲನೆ ಎಲೆ ಭಾಪುರೆ 7
--------------
ವಿಜಯದಾಸ