ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಕ್ಕೊ ಇಲ್ಲೆವೆ ಅದ ನಿಜಧನಾ ತಕ್ಕೊಂಬುದು ಬಲುಕಠಿಣ ಧ್ರುವ ಅದಕೊಂದದ ಉಪಾಯ ನೋಡಿ ಸದ್ಗುರುಪಾದಕ ಮನಗೂಡಿ ಒದಗಿ ಬಾಹುದು ತಾಂ ಕೈಗೂಡಿ ಇದೇ ಸಾಧಿಸಿ ಸುಖ ಸೂರ್ಯಾಡಿ 1 ಎಡಬಲಕ ತಾಂ ತುಂಬೇದ ದೃಢಮನಕ ತಾಂ ಸಿದ್ಧದ ಮೂಢಜನರಿಗಿದೇ ದೂರದ ನೋಡೇನೆಂದರ ಬಲು ಸಾರ್ಯದ 2 ಗುರುಪಾದಲ್ಯದ ಧನಸಮಸ್ತ ಅರಿತುಕೊಂಬುದು ಮನಮಾಡಿ ಸ್ವಸ್ಥ ತರಳಮಹಿಪತಿಗಿದೆ ಸುಪ್ರಸ್ತ ಗುರುನಾಥನೆ ತಾಂ ಸುವಸ್ತಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಸುಪಥನೋಡಿ ಸ್ವಹಿತ ಸಾಧು ಜನರ ಸುಸನ್ಮತ ವೇದಾಂತದ ಸುಸಾರಬೋಧವ್ಹೇಳಿದ ವಸ್ತು ಭಗವದ್ಗೀತಾ ಸಂದಿಸೀಹ್ಯದÀು ಸದೋದಿತ ಭೇದಿಸಿ ನೋಡಲು ತನ್ನೊಳಗ ತಾಂ ದೋರುತಿದೆ ಸಿದ್ದಾಂತ 1 ಮಮೈವಾಂಶೋ ಜೀವಲೋಕೇ ಜೀವಭೂತ ಸನಾತನ ಃ ಸ್ವಾಮಿ ಹೇಳಿದ್ದ ತಿಳಿಯಲಿಕ್ಕೆ ಆತ್ಮಾನುಸಂಧಾನದ ಖೂನ ನೇಮದಿಂದಲಿ ಹೇಳಿದ ಮಾತಿಗೆ ಮುಟ್ಟಿದನೊಬ್ಬರ್ಜುನ ತುಂಬೇದ ವಿಶ್ವದಿ ಪರಿಪೂರ್ಣ 2 ಏಕಾಂಶೇನ ಸ್ಥಿತೋ ಜಗತ ವೆಂಬ ವಾಕ್ಯದನುಭವ ಸೇವಿಸಿದೊಬ್ಬ ಶುಕದೇವ ನಾಲ್ಕುಶೂನ್ಯವು ಮೆಟ್ಟಿನೋಡಲು ಭಾಸುತಿದೆ ಸುಮನದೈವ ತಾನಾಗೀ ಹ್ಯದು ಜೀವ 3 ಜಾನಾತಿ ಪುರುಷೋತ್ತಮಂ ಮನುಷ್ಯರೊಳಗಧಮಾಧಮಾ ಕ್ರಮತಿಳಿದವನೆ ಪರಮಯೋಗಿ ಆತನೇ ಉತ್ತಮೋತ್ತಮಾ ತಾಂ ಕೇಳಿ ನಿಜಾಧ್ಯಾತ್ಮಾ 4 ` ಹರಿ ಃ ಓಂ ತತ್ಸದಿತಿ ' ವೆಂಬ ನಿಜ ತಿಳಯಬೇಕಿದೆ ಮುಖ್ಯ ಏಳುನೂರು ಶ್ಲೋಕದವಾಕ್ಯ ತ್ವರ ತಾಂ ತಿಳಿಯದು ಒಂದೇ ಮಾತಿನ ಬ್ರಹ್ಮಾದಿಕರಿಗಾಟಕ್ಯ ತರಳಮಹಿಪತಿಗಿದೆ ಸೌಖ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಲುಸೂಕ್ಷ್ಮ ಗುರು ಗೂಢವಿದ್ಯ ನೆಲೆವಂತಗಿದು ನಿಜವಾಗುದು ಸಾಧ್ಯ ಧ್ರುವ ಕಣ್ಣಿನ ಕೊನೆ ಮುಟ್ಟಿನೋಡಿ ನಿಜಖೂನ ಉನ್ಮನವಾಗಿ ಬೆರೆದಾಡುವ ನಿಜಸ್ಥಾನ ಚೆನ್ನಾಗ್ಯಾದಾನಂದ ಘನ ಭಿನ್ನವಿಲ್ಲದೆ ಮಾಡಿ ನಿಜಗುರು ಧ್ಯಾನ 1 ಜಾಗ್ರ ನಿದ್ರೆಯ ಮಧ್ಯ ಅರವಿನೊಳು ನಿಜಗೂಡಿ ಶೀಘ್ರ ಸಿದ್ಧಾಂತನುಭವಿಸಿ ತಾಂ ನಿಜಮಾಡಿ ಅಗ್ರ ಗುರುಪಾದವನು ಕೂಡಿ ಶುಕ ಮುನಿಗಳಿಗಿದೆ ನೋಡಿ 2 ಶಿರದಲಿ ಕರವಿಟ್ಟು ನೋಡಿ ನಿಜವರ್ಮ ಹರಿಸಿ ಅನೇಕ ಜನ್ಮಾಂತರದ ದುಷ್ಕರ್ಮ ತರಳಮಹಿಪತಿಗಿದೆ ಸುಬ್ರಹ್ಮ ಗುರು ಭಾಸ್ಕರಸ್ವಾಮಿ ಶ್ರೀಪಾದ ಧರ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸದ್ಬಾವಮಾಡಿ ಸ್ಥಿರ ಸದ್ಗುರು ತಾನಿದ್ದಲ್ಲಿ ದೂರ ಸಾರ ಸದ್ಗೈಸುವ ಮನೋಹರ ಧ್ರುವ ಕಣ್ಣಿಂದ ಕಡಿಯಲಿಲ್ಲ ಚೆನ್ನಾಗೆಲೆವೆ ನೋಡಿ ಉನ್ನಂಥ ಮಹಿಮ ಪೂರ್ಣ ತಾನೆತಾನಾಗಿಹ್ಯ ಕೂಡಿ ಉನ್ಮನವಾಗಿ ಬ್ಯಾಗ ಘನಸುಖ ಬೆರೆದಾಡಿ ಪುಣ್ಯಕ ಪಾರವಿಲ್ಲ ಖೂನದೋರುದಿದರಡಿ 1 ಸದ್ಬಕ್ತಿಗಿದೇ ಕೀಲ ಸಾಧಿಸುವದೀ ವಿಚಾರ ಸದ್ಗತಿಗಿದೆಮೂಲ ಸಾಧುಜನರ ಸಹಕಾರ ಸಾಧಕರ ಸುಶೀಲ ಬುಧಜನರ ಮಂದಾರ ಸದ್ಫನದ ಕಲ್ಲೋಳ ವಸ್ತುದೋರುವ ವಿವರ 2 ಗುರುದಯದಿಂದ ನೋಡಿ ಇದೆರಿಟ್ಟುವಂತೀ ಖೂನ ಕರುಣಾಳು ಸ್ವಾಮಿ ನಮ್ಮ ತಾನೆದೋರಿದ ಸಾಧನ ತರಣೋಪಾಯಕ ಪೂರ್ಣ ತೋರುದಿದನು ಸಂಧಾನ ತರಳಮಹಿಪತಿಗಿದೆ ಇಹ್ಯ ಪರಕ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು