ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೇನು ಬೇಕಯ್ಯ ಶ್ರೀ ಹರಿಯೆ ನಿನಗೇ ನೀನೆ ಗತಿಯೆಂದು ಸರ್ವಸ್ವವೊಪ್ಪಿಸುವೇ ಪ ತರಳನಾಗಿಹ ಧೃವನು ಘೋರ ತಪವಂಗೈಯ ಹರುಷದಿಂ ಬಾಲಕಗೆ ವರ ಪದವಿಯಿತ್ತೇ ಕರುಣಾಳು ಶ್ರೀ ಹರಿಯೇ ನಿಂನ ಮೆಚ್ಚಿಸಲಿಕ್ಕೆ ಉರುತರದ ತಪವು ಬೇಕೇನೊ ನಾನರಿಯೇ 1 ದೊರೆಯು ರುಕುಮುಂಗದನು ಯೇಕಾದಶೀವ್ರತವ ಸರಸದಿಂದಾಚರಿಸೆ ನಿಜಭಕ್ತಗೊಲಿದೇ ಕರುಣಾಳು ಶ್ರೀಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ವ್ರತವು ಬೇಕೇನೊ ನಾನರಿಯೇ 2 ತರಳ ಪ್ರಲ್ಹಾದ ತಾ ಹರಿನಾಮ ಕೀರ್ತಿಸಲು ದುರುಳ ತಾತನ ಕೊಂದು ಕಂದನನು ಪೊರೆದೆ ಕರುಣಾಳು ಶ್ರೀ ಹರಿಯೆ ನಿಂನÀ ಮೆಚ್ಚಿಸಲಿಕ್ಕೆ ಉರುತರದ ಕೀರ್ತನೆಯು ಬೇಕೋ ನಾ ನಾನರಿಯೇ 3 ಭರದಿ ದುಶ್ಯಾಸನನು ಮಾನವಂ ಕಳಯುತಿರೆ ಸರಳೆಗೇ ನೀನೊಲಿದು ಅಕ್ಷಯವನಿತ್ತೇ ಕರುಣಾಳು ಶ್ರೀಹರಿಯೆ ನಿನ್ನ ಮೆಚ್ಚಿಸಲಿಕ್ಕೆ ಉರುತರದ ಸ್ತೋತ್ರಗಳು ಬೇಕೋ ನಾನರಿಯೇ4 ಧರಣಿಸುತೆ ಜಾನ್ಹಕಿಯೆ ಹುಡುಕಲ್ಕಿ ವಿಕ್ರಮದಿ ಶರಧಿಯನು ದಾಟಿದಗೆ ಭರದಿಂದಲೊಲಿದೇ ಕರುಣಾಳು ಶ್ರೀಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ದಾಸ್ಯತ್ವ ಬೇಕೋ ನಾನರಿಯೇ 5 ನಿರುತದಾಸರು ನಿನ್ನ ಸೇವೆಯನು ಮಾಡಲ್ಕೆ ಕರುಣದಿಂ ದಾಸರಿಗೆ ಪ್ರತ್ಯಕ್ಷನಾದೇ ಕರುಣಾಳು ಶ್ರೀ ಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ಸೇವೆ ಬೇಕೇನೊ ನಾನರಿಯೇ 6 ವರ ದುರ್ವಾಪುರದಲ್ಲಿನಿತ್ತು ಮೆರೆಯುವಿಯೆಂದು ಸಿರಿ ಚನ್ನಕೇಶವನೆ ಪರಮಾತ್ಮನಂದೂ ಕರುಣಾಳು ಶ್ರೀ ಹರಿಯೆ ನಿನ್ನ ನಂಬುತಲಿಂದು ಮರೆಹೊಕ್ಕೆ ಕಾಯೋ ಶ್ರೀ ಈಶ ಸರ್ವೇಶಾ 7
--------------
ಕರ್ಕಿ ಕೇಶವದಾಸ
ಜೋ ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ಜೋ ರಣಭೀಮ ಪ ಜೋ ಜೋ ಭಕ್ತರ ಕಷ್ಟನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ ಅ.ಪ. ಭೂಮಿಯ ಚಿನ್ನದ ತೊಟ್ಟಿಲ ಮಾಡಿಸೋಮಸೂರ್ಯರೆಂಬ ಕಲಶವ ಹೂಡಿನೇಮದಿ ವೇದಗಳ ಸರಪಣಿ ಮಾಡಿಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ1 ಸರಸಿಜೋದ್ಭವ ಸರಸ್ವತಿ ಭಾರತಿಗರುಡಶೇಷ ರುದ್ರರಿವರ ಸತಿಯರುಸುರರ ಕಿನ್ನರರು ಕಿಂಪುರುಷ ನಾರದರುಪರಿಪರಿ ಗೀತದಿ ತುತಿಸಿ ಪಾಡಿದರು 2 ವಸುದೇವಸುತನಾದ ಮುದ್ದುಮುರಾರಿಅಸುರೆ ಪೂತನಿಯ ಪ್ರಾಣಾಪಹಾರಿಅಸಮ ಸಾಹಸಮಲ್ಲ ದೈತ್ಯರ ವೈರಿಶಿಶುವಾಗಿ ದೇವಕೀಗಾನಂದ ತೋರಿ 3 ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿನಿಗಮಗೋಚರ ನಿತ್ಯಾನಂದನೆ ತ್ರುವ್ವಿ ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ 4ತಮನ ಮರ್ದಿಸಿ ವೇದತತಿಗಳನು ತಂದೆಸುಮನಸರಿಗಾಗಿ ಮಂದರಪೊತ್ತು ನಿಂದೆಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ 5 ತರಳನಾಗಿ ಬಲಿಯ ದಾನವ ಬೇಡ್ದೆಪರಶು ಧರಿಸಿ ಕ್ಷತ್ರಿಯರ ಸವರಿದೆದುರುಳ ರಾವಣನ ಶಿರವ ಚೆಂಡಾಡಿದೆಚರಿಸಿ ಮನೆಗಳ ಪಾಲ ಮೊಸರನ್ನು ಕುಡಿದೆ 6 ಬುದ್ಧನಾಗಿ ಪತಿವ್ರತೆರನಾಳಿದೆಯಲ್ಲಮುದ್ದು ತುರಗವನೇರಿ ಕಲ್ಕ್ಯನಾದ್ಯಲ್ಲಪದ್ಮನಾಭ ಸರಿ ಭಕ್ತವತ್ಸಲನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ 7
--------------
ಶ್ರೀಪಾದರಾಜರು
ತಂದೆ ಮುದ್ದು ಮೋಹನಾ | ನಿನ್ | ಅಂದ ಪಾದವ ಭಜಿಸುವೆ ಪ ನಂದ ಕಂದನ ತಂದು ತೋರಿಸಿ | ಬಂಧನವ ಪರಿಹರಿಸು ನೀ ಅ.ಪ. ವತ್ಸರ | ತರಳನಾಗಿರುವಾಗಲೇ 1 ಹರಿಯ ವ್ಯಾಪ್ತಿಯ ಕಂಡು ನೀ | ಗಿರಿ ಗುಹೇಯಲಿ ಚರಿಸುತಾತೊರೆದು ಮಮತೆಯ ಚರಿಸಿದೇ | ಕರೆಕರೆಯ ಸಂಸಾರದೀ 2 ತಪವನಾಚರಿಸುತ್ತಲೀ | ವಿಪಿನವಸಿ ಸಂಚರಿಸುತಾವಿಪವರಸ ಪೆಗಲೇರಿದವನ್ನ | ಅಪರೋಕ್ಷದಿ ಕಾಣುತಾ 3 ನಡುನಡುವೆ ಮನೆಗೈದುತಾ | ಮಡದಿಯನೆ ತಕ್ಕೈಸುತಾ ಎಡ ಬಲದ ಒಡನಾಡಿ ಜನ ಕಡು | ಮೋಹಬಡುವಂತಾಡುತಾ 4 ಇಭಗಿರೀ ರಥೋತ್ಸವಕ್ಕೇ | ಪ್ರಭು ಮುದ್ದು ಮೋಹನ ದಾಸರುವಿಭವದಿಂದಲಿ ಬಂದು ನಿಮಗೆ | ಶುಭದ ಅಂಕಿತವಿತ್ತರು 5 ಶಾಂತ ಚಿತ್ತದಿ ಜಪಿಸುತಾ | ಮಂತ್ರ ಸಿದ್ಧಿಯ ಪಡೆಯುತಾ ಭ್ರಾಂತ ಜನರನು ಭಕ್ತಿ ಪಂಥದಿ | ನಿಂತು ನಲಿವಂತೆ ಮಾಡುತಾ6 ಸಾಹಸ್ರಾರಂಕಿತವನಿತ್ತೂ | ಮಾಹಿತಾಂಘ್ರಿಯ ಭಜಿಸಿದಾ ಸಾಹಸಿಗ ಶೇಷಾಂಶ ಭಕ್ತರ | ಮೋಹ ಕಳೆದುದ್ಧರಿಸಿದಾ 7 ನಕ್ರಹರಗತಿ ಪ್ರೀತನಾ | ವಿಕ್ರಮದಿ ಸಂಸ್ಥಾಪಿಸೀಚಕ್ರಿಪುರಿಗಾ ರಾಮನವಮಿಲಿ | ವಿಕ್ರಮದಿ ನೀ ಹೊರಡುತಾ 8 ಅಹಿ ಭವ ವಂದ್ಯನಾ | ಗುರುಗೋವಿಂದ ವಿಠಲನನಿರುತ ಭಜಿಸುವ ಜ್ಞಾನವಾ | ಕರುಣಿಸೀ ಸಲಹೆನ್ನನು 9
--------------
ಗುರುಗೋವಿಂದವಿಠಲರು
ದುಮು ದುಮು ಬಸವಂತನ ಹಬ್ಬಾ ಪ ರಾಮಕೃಷ್ಣ ಗೋವಿಂದ ಮುರಾರಿ | ಶಾಮ ಸುಂದರ ಸುರಜ ಸಹಕಾರಿ | ಕಾಮಿತ ಫಲಗಳ ನೀವ ಉದಾರಿ | ಶ್ರೀ ಮಾಧವನೇ ಕಾಯೋ ಚರಣವ ದೋರಿ 1 ಬನ್ನ ಬಡುತಲಿ ಬಲು ಭವದಲಿ ಬಂದೆ | ಮುನ್ನಿನ ತಪ್ಪವನೆಣಿಸದೆ ತಂದೆ | ಚೆನ್ನಾಗಿ ರಕ್ಷಿಸು ನಮೋ ನಮೋ ಎಂದೆ 2 ಈ ರೀತಿಯಿಂದಲಿ ಹರಿಯ ಕೊಂಡಾಡಿ | ಆ ರಾಧಿಪ ನವವಿಧದಲ್ಲಿ ಕೂಡಿ | ನಾರಕ ಭಯಗಳುವನು ಮೂಲದೀಡ್ಯಾಡೀ | ಸೂರ್ಯಾಡು ಸ್ವ ಸುಖ ಎಲೊ ಹುಚ್ಚು ಖೋಡಿ 3 ಮುನ್ನಿನ ಪುಣ್ಯದಿ ನರದೇಹ ತಾಳಿ | ಮಾನವನಾಗಿ ಹರಿಕಥೆ ಕೇಳಿ | ಚೆನ್ನಾಗಿ ವಿಷಯದಲನುದಿನ ಬಾಳೀ | ವೈರಿ ನೀನಾದೆ ಗೈಯ್ಯಾಳಿ 4 ಮೃಗಜಲ ಹೋಲುವ ವಿಷಯಾ ನಂದಾ | ಬಗೆದೆಲೋ ಶಾಶ್ವತವೆಂದು ನಿನ್ನಿಂದಾ | ಭಕುತಿಯ ಮಾರ್ಗವ ಬಿಟ್ಟೆಲೋ ಛಂದಾ | ಜಗ ದೊಳಗಾದೆಲೋ ನೀ ಮತಿ ಮಂದಾ 5 ಹೆಂಡರು ಮಕ್ಕಳು ಮಮತೆಯ ಸ್ಥೂಲಾ | ಖಂಡದಿ ಬಿದ್ದಿದೆ ಕಾಲಿಗೆ ಕೋಳಾ | ಅಂಡಲೆವುತ ಹೊಟ್ಟೆಹೊರೆದೆಲೋ ಮೂಳಾ 6 ಸುಖವಿಲ್ಲ ಇದರೊಳಗಿಂದು | ಪಾದ ಹೊಂದು 7 ತ್ವರಿತದಿ ಭಾವಭಕ್ತಿಗೆ ಗಮನವಿಟ್ಟು | ತರಳನಾಗಿ ಹೋಗದಿರೆಲೋ ಕೆಟ್ಟು 8 ಚಿನುಮಯ ಗೆಚ್ಚರಗಳೆದೆಲೋ ಭ್ರಾಂತಾ | ಕುಣಿಸ್ಯಾಡುತಿ ಹನು ಅಚ್ಯುತಾನಂತಾ 9 ಒಬ್ಬರು ಶಾಸ್ತ್ರದ ಮದದಲಿ ಬಿಗಿದು ಉಬ್ಬುಬ್ಬಿ ಕುಣಿದರು ಹೇಳಲೇನಿಂದು 10 ಅಷ್ಟಮದದಿಂದ ಕಣ್ಣು ಮುಚ್ಚಿ | ಕುಟ್ಟುವಾಗ ನೆಲ್ಲಿಕಾಲನು ಘಟ್ಟಿಸಿ 11 ಸಂತರ ಕಥೆ ಕಿವಿಯಲಿ ಕೇಳಲಿಲ್ಲಾ | ಭ್ರಾಂತನೆ ನಾಳೆ ಮುರಿವನು ಹಲ್ಲಾ 12 ನೆರೆದಹಿಸುತ ದುರ್ಮದ ಬೂದಿ ಚೆಲ್ಲಿ | ನರಜನ್ಮ ಸಾರ್ಥಕ ಮಾಡೆಲೊಹುಳ್ಳಿ 13 ಕಂದನು ಸಾರಿದಾ ಹೋಳಿಯಾ ವಂದಾ | ಭವ ಬಂದಾ 14
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರಜಗಂಧಿಯೇ ಹೇಳೇ ಸುಳಿದವರಾರಮ್ಮಾ | ನೀರಜ ಶರಪತಿ ಕಾಣಮ್ಮಾ ಪ ಅರುಣನಖಾಂಗುಲಿ ಗುಲ್ಫ ಗೆಜ್ಜೆ ಕಾ- ಪುರ ನೂಪುರದ ಲೊಪ್ಪುವನವದಾರಮ್ಮಾ | ಸರಸಿಯೊಳಗಪೊಕ್ಕು ತಮನಸುವ ಬಗೆದು | ವರಶೃತಿ ತಂದವ ಕಾಣಮ್ಮಾ 1 ಕಲಿ ದಶನಂದದಿ ಜಂಘೆ ಪೊಂಬಾಳೆಯ | ಪರಿಯ ತೊಡೆಯುಳ್ಳುವ ದಾರಮ್ಮಾ | ಶರಧಿ ಮಥಿಸುವಂದುಗಿರಿನಿಲ್ಲದಿರೆ ಬಂದು | ಭರದಿ ಬೆನ್ನೆವಿತ್ತವ ಕಾಣಮ್ಮ2 ಕಾಂಚನ ವಸನನಿರಿಯ ಮ್ಯಾಲ ವಡ್ಯಾಣ ಮಿಂಚಿನ ಘಂಟೆಯ ದಾರಮ್ಮಾ | ಕ್ಷಿತಿ ವಯ್ದದನುಜನ ಶೀಳಿ ವಿ | ರಂಚಿ ಗುಳಹಿದವ ಕಾಣಮ್ಮಾ3 ಕಿರಿಡೋಳ್ಳಾತ್ರಿವಳಿಯ ನವರತ್ನ ಪದಕಿಹ | ಉರಸಿನ ವತ್ಸನವ ದಾರಮ್ಮಾ | ನರಹರಿ ರೂಪದಿ ಹಿರಣ್ಯಕನನು ಕೊಂದು | ಶರಣನ ಕಾಯ್ದವ ಕಾಣಮ್ಮಾ4 ಕೌಸ್ತುಭಹಾರ ಮೌಕ್ತಿಕದ ಕೊರಳಲಿಹ | ಹಸ್ತ ಕಡಗದವ ನಾರಮ್ಮಾ | ಸ್ವಸ್ತಿ ಎನುತ ಬಂದು ಬೇಡಿ ಬಲಿಯಾಗರ್ವ | ಸ್ವಸ್ತಿ ಮಾಡಿವನು ಕಾಣಮ್ಮಾ5 ಕ | ಪೋಲ ಹೊಳಹಿನವ ದಾರಮ್ಮಾ | ಏಳು ಮೂರು ಬಾರಿ ಕ್ಷತ್ರಿಯ ರಾಯರ ಸೋಲಿಸಿ ಬಂದವ ಕಾಣಮ್ಮಾ6 ಕರ್ಪೂರ ಕರಡಿಗಿ ಬಾಯಿ ಸಂಪಿಗೆಯಂತೆ | ತೋರ್ಪ ನಾಶಿಕದವ ದಾರಮ್ಮಾ | ದರ್ಪ ಮುರಿದು ರಾವಣನ ತಲಿಯ ಧರೆ | ಗೊಟ್ಟಿಸಿದವ ನಿವ ಕಾಣಮ್ಮಾ7 ಕುಡಿಗಂಗಳ ಭ್ರೂಲತೆಯ ಪೆರೆನೆಣೆಸಲು | ಪೊಡವಿಯೊಳಗ ನಂಬಿದ್ದ ಪಾಂಡವರನು | ಬಿಡದೆ ಸ್ಪಾಪಿಸಿದವ ಕಾಣಮ್ಮಾ8 ಕುರುಳು ಗೂದಲು ತಳಕದ ಮಾಲ್ಯ ಮೌಲಿಕ | ಧರಸಿದ ಮುಕುಟವ ದಾರಮ್ಮಾ | ತರಳನಾಗಿ ಮುಪ್ಪುರ ನಾರಿಯರ ವೃತ | ತ್ವರಿತದಿ ಅಳಿದವ ಕಾಣಮ್ಮಾ9 ನೋಡಲು ಮನಸಿಗೆ ಮೋಹನೆ ಮಾಡುವ | ಪ್ರೌಡದಿ ಮನವವ ದಾರಮ್ಮಾ | ರೂಢಿಲಿ ಕುದುರೆಯ ಏರಿ ಕಲಿಮಲವ | ಝಾಡಿಸಿದವನಿವ ಕಾಣಮ್ಮ10 ಸಹಜದಿ ಸವಿಸವಿ ಮಾತಲಿ ಸೋಲಿಸು | ತಿಹ ಸರ್ವರಿಗಿವ ದಾರಮ್ಮಾ | ಮಹಿಪತಿ ಸುತನ ಹೃದಯದಲಿ ನಿಂತು ತನ್ನ| ಮಹಿಮೆ ಬೀರಿಸುವವ ಕಾಣಮ್ಮಾ11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸೋ | ಪಾವ9ತಿಯ ಪ್ರಾಣೇಶ | ಪಾಲಿಸೋ ಪ ಪಾಲಿಸೆಮ್ಮನು ಪಶುಪತಿಯೆ | ನಿಜ | ಬಾಲಾಕ9 ಕೋಟಿದೀಧಿತಿಯೆ | (ನಮ್ಮ) | ಏಳಿಗೆಗೊಳಿಪ ಸದ್ಗತಿಯೆ ಎಂಬು || ಮೂಲ ಮೂರುತಿ ಸರ್ವಕಾಲಕಾಲನೆ ತ್ರೀ || ಶೂಲವ ಪಿಡಿದೆನ್ನ ಆಲಸ್ಯ ತ್ಯಜಿಸಿನ್ನು 1 ಪ್ರಮಥ ಪ್ರಜಾಪ್ರಭೂದಾರ | ಧರ್ಮ | ದ್ರುಮ ಸುಮನಸರಿಗಾಧಾರ |ಜಗ | ತ್ಕ್ರಮಜಳಿಂತೆನುವ ವಿಚಾರ | ಸ್ವಾಮಿ | ನಮಿಸಿ ಕೇಳುವೆ ಸವ9ಸಾರ | ಆಹಾ || ಗಾತ್ರ | ದ್ಯುಮಣಿಸನ್ನುತ ನಮೋ | ನಮೋಯೆಂಬೆ ಜಯ ಶಂಭೋ 2 ಶರಣವತ್ಸಲ ಮೃತ್ಯುಂಜಯನೆ | ನಿನ್ನ | ಮರೆಯ ಹೊಕ್ಕೆನು ಕಾಲಾಂತಕನೆ | ಎನ್ನ | ಕರುಣದಿ ಸಲಹೊ ಶಂಕರನೆ | ಶಿರ- ವೆರಗಿ ಬೇಡುವೆ ದಯಾಪರನೆ | ದೇವ || ಕರುಣಾಸಾಗರ ನಿನ್ನ | ತರಳನಾಗಿದೆ9ನ್ನ | ಪರ ಗುರುರಾಯನೆ 3
--------------
ಸದಾನಂದರು
ಲೋಕನೀತಿಯ ಹಾಡುಗಳು ಆರು ಹಿತರಾದಾರು ಈ ವಿಶ್ವದೊಳಗೆ ಕೃತಿ ಹೊರತು ಪ ಪಿತನಲ್ಲ ಸುತನಲ್ಲ ರತಿಯಲ್ಲ ಸುತೆಯಲ್ಲ ಅತಿ ಪ್ರೀತಿಯಿಂ ಪೊರೆದ ನಿಜಮಾತೆಯಲ್ಲಾ ಸುತನಪೇಕ್ಷಿಸಿ ಹೆದರಿ ಅಜಮಿಳನು ಕರೆಯಲ್ಕೆ ಪತಿತ ಪಾವನ ಹರಿಯ ನಾಮ ಹಿತವಾಯ್ತು 1 ಧನವಲ್ಲ ಸಿರಿಯಲ್ಲ ಬಹು ಬೆಳೆದ ಮೈಯಲ್ಲ ಹಣ ರಾಶಿ ಗಳಿಸುವ ದುರ್ಬುದ್ಧಿಯಲ್ಲ ಮನ ಮತ್ಸರಗಳಲ್ಲ ಕಾಮಕ್ರೋಧಗಳಲ್ಲ ತನುವಲ್ಲ ಡಂಬರದ ವೇದಾಂತವಲ್ಲ2 ತರಳನಾಗಿಹ ಧೃವಗೆ ತರುಣ ಪ್ರಲ್ಹಾದನಿಗೆ ಕರಿರಾಜ ಹನುಮಾದಿ ನಿಜ ಭಕ್ತರಿಂಗೇ ವರಧರ್ಮ ಪುತ್ರನಿಗೆ ಮಧ್ಯ ಪಾಂಡವನಿಗೇ ಪರಮ ಪತಿವ್ರತಾ ರಮಣಿ ದ್ರೌಪದಿಗೇ 3 ಧರಣಿಯನು ಹೊತ್ತಿರುವ ಆದಿಶೇಷಗೆ ಮತ್ತೆ ನಿರುತವೂ ಭಜಿಸಿದ ಪರಮ ದಾಸರಿಗೆ ಸಿರಿಯರಸ ಶ್ರೀಹರಿಯ ಭಜನೆಯೊಂದುಳಿದು 4 ಜನ್ಮಬಂಧವ ನೀಗಿ ಪರಮ ಪದವಿಯ ಕೊಡುವ ಸನ್ನುತವು ನಿಜ ಸೌಖ್ಯವನ್ನು ಕರುಣಿಸುವ ಪ್ರಾಣಿಯಲಿ ಆತ್ಮನಲಿ ಶ್ರಧ್ಧೆ ಹುಟ್ಟಿಸುವಂಥ ಚನ್ನಕೇಶವ ಸ್ವಾಮಿ ಭಕ್ತಿಯೊಂದುಳಿದು 5
--------------
ಕರ್ಕಿ ಕೇಶವದಾಸ