ಒಟ್ಟು 15 ಕಡೆಗಳಲ್ಲಿ , 12 ದಾಸರು , 15 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೇನು ಬೇಕಯ್ಯ ಶ್ರೀ ಹರಿಯೆ ನಿನಗೇ ನೀನೆ ಗತಿಯೆಂದು ಸರ್ವಸ್ವವೊಪ್ಪಿಸುವೇ ಪ ತರಳನಾಗಿಹ ಧೃವನು ಘೋರ ತಪವಂಗೈಯ ಹರುಷದಿಂ ಬಾಲಕಗೆ ವರ ಪದವಿಯಿತ್ತೇ ಕರುಣಾಳು ಶ್ರೀ ಹರಿಯೇ ನಿಂನ ಮೆಚ್ಚಿಸಲಿಕ್ಕೆ ಉರುತರದ ತಪವು ಬೇಕೇನೊ ನಾನರಿಯೇ 1 ದೊರೆಯು ರುಕುಮುಂಗದನು ಯೇಕಾದಶೀವ್ರತವ ಸರಸದಿಂದಾಚರಿಸೆ ನಿಜಭಕ್ತಗೊಲಿದೇ ಕರುಣಾಳು ಶ್ರೀಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ವ್ರತವು ಬೇಕೇನೊ ನಾನರಿಯೇ 2 ತರಳ ಪ್ರಲ್ಹಾದ ತಾ ಹರಿನಾಮ ಕೀರ್ತಿಸಲು ದುರುಳ ತಾತನ ಕೊಂದು ಕಂದನನು ಪೊರೆದೆ ಕರುಣಾಳು ಶ್ರೀ ಹರಿಯೆ ನಿಂನÀ ಮೆಚ್ಚಿಸಲಿಕ್ಕೆ ಉರುತರದ ಕೀರ್ತನೆಯು ಬೇಕೋ ನಾ ನಾನರಿಯೇ 3 ಭರದಿ ದುಶ್ಯಾಸನನು ಮಾನವಂ ಕಳಯುತಿರೆ ಸರಳೆಗೇ ನೀನೊಲಿದು ಅಕ್ಷಯವನಿತ್ತೇ ಕರುಣಾಳು ಶ್ರೀಹರಿಯೆ ನಿನ್ನ ಮೆಚ್ಚಿಸಲಿಕ್ಕೆ ಉರುತರದ ಸ್ತೋತ್ರಗಳು ಬೇಕೋ ನಾನರಿಯೇ4 ಧರಣಿಸುತೆ ಜಾನ್ಹಕಿಯೆ ಹುಡುಕಲ್ಕಿ ವಿಕ್ರಮದಿ ಶರಧಿಯನು ದಾಟಿದಗೆ ಭರದಿಂದಲೊಲಿದೇ ಕರುಣಾಳು ಶ್ರೀಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ದಾಸ್ಯತ್ವ ಬೇಕೋ ನಾನರಿಯೇ 5 ನಿರುತದಾಸರು ನಿನ್ನ ಸೇವೆಯನು ಮಾಡಲ್ಕೆ ಕರುಣದಿಂ ದಾಸರಿಗೆ ಪ್ರತ್ಯಕ್ಷನಾದೇ ಕರುಣಾಳು ಶ್ರೀ ಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ಸೇವೆ ಬೇಕೇನೊ ನಾನರಿಯೇ 6 ವರ ದುರ್ವಾಪುರದಲ್ಲಿನಿತ್ತು ಮೆರೆಯುವಿಯೆಂದು ಸಿರಿ ಚನ್ನಕೇಶವನೆ ಪರಮಾತ್ಮನಂದೂ ಕರುಣಾಳು ಶ್ರೀ ಹರಿಯೆ ನಿನ್ನ ನಂಬುತಲಿಂದು ಮರೆಹೊಕ್ಕೆ ಕಾಯೋ ಶ್ರೀ ಈಶ ಸರ್ವೇಶಾ 7
--------------
ಕರ್ಕಿ ಕೇಶವದಾಸ
ಕರುಣದಿ ಪೊರೆಯೆ ಭಾರತಿ ಸತಿ ಪ ಪರಮ ಮಂಗಾಳೆ ನಿನ್ನ ಚರಣ ಕಮಲಾವ ಮರೆಯ ಹೊಕ್ಕೆನು ಕಣ್ಣ ತೆರೆದು ನೋಡೌ ತಾಯೆ 1 ಸರುವದ ದುರಿತದಿ ಚರಿಸಿದವನೆಂದು ತರಳನಾದೆನ್ನನು ಜರಿದು ನೂಕುವರೆ 2 ದುರಿತದೂರ ಗುಣಪೂರ್ಣ ಸಿರಿ ರಂಗೇಶವಿಠಲನೆ ಸರಿಯೆಂಬ ಮತಿಯನ್ನು ಸ್ಥಿರವಾಗಿ ಕೊಟ್ಟೆನ್ನ 3
--------------
ರಂಗೇಶವಿಠಲದಾಸರು
ಜೋ ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ಜೋ ರಣಭೀಮ ಪ ಜೋ ಜೋ ಭಕ್ತರ ಕಷ್ಟನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ ಅ.ಪ. ಭೂಮಿಯ ಚಿನ್ನದ ತೊಟ್ಟಿಲ ಮಾಡಿಸೋಮಸೂರ್ಯರೆಂಬ ಕಲಶವ ಹೂಡಿನೇಮದಿ ವೇದಗಳ ಸರಪಣಿ ಮಾಡಿಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ1 ಸರಸಿಜೋದ್ಭವ ಸರಸ್ವತಿ ಭಾರತಿಗರುಡಶೇಷ ರುದ್ರರಿವರ ಸತಿಯರುಸುರರ ಕಿನ್ನರರು ಕಿಂಪುರುಷ ನಾರದರುಪರಿಪರಿ ಗೀತದಿ ತುತಿಸಿ ಪಾಡಿದರು 2 ವಸುದೇವಸುತನಾದ ಮುದ್ದುಮುರಾರಿಅಸುರೆ ಪೂತನಿಯ ಪ್ರಾಣಾಪಹಾರಿಅಸಮ ಸಾಹಸಮಲ್ಲ ದೈತ್ಯರ ವೈರಿಶಿಶುವಾಗಿ ದೇವಕೀಗಾನಂದ ತೋರಿ 3 ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿನಿಗಮಗೋಚರ ನಿತ್ಯಾನಂದನೆ ತ್ರುವ್ವಿ ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ 4ತಮನ ಮರ್ದಿಸಿ ವೇದತತಿಗಳನು ತಂದೆಸುಮನಸರಿಗಾಗಿ ಮಂದರಪೊತ್ತು ನಿಂದೆಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ 5 ತರಳನಾಗಿ ಬಲಿಯ ದಾನವ ಬೇಡ್ದೆಪರಶು ಧರಿಸಿ ಕ್ಷತ್ರಿಯರ ಸವರಿದೆದುರುಳ ರಾವಣನ ಶಿರವ ಚೆಂಡಾಡಿದೆಚರಿಸಿ ಮನೆಗಳ ಪಾಲ ಮೊಸರನ್ನು ಕುಡಿದೆ 6 ಬುದ್ಧನಾಗಿ ಪತಿವ್ರತೆರನಾಳಿದೆಯಲ್ಲಮುದ್ದು ತುರಗವನೇರಿ ಕಲ್ಕ್ಯನಾದ್ಯಲ್ಲಪದ್ಮನಾಭ ಸರಿ ಭಕ್ತವತ್ಸಲನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ 7
--------------
ಶ್ರೀಪಾದರಾಜರು
ತಂದೆ ಮುದ್ದು ಮೋಹನಾ | ನಿನ್ | ಅಂದ ಪಾದವ ಭಜಿಸುವೆ ಪ ನಂದ ಕಂದನ ತಂದು ತೋರಿಸಿ | ಬಂಧನವ ಪರಿಹರಿಸು ನೀ ಅ.ಪ. ವತ್ಸರ | ತರಳನಾಗಿರುವಾಗಲೇ 1 ಹರಿಯ ವ್ಯಾಪ್ತಿಯ ಕಂಡು ನೀ | ಗಿರಿ ಗುಹೇಯಲಿ ಚರಿಸುತಾತೊರೆದು ಮಮತೆಯ ಚರಿಸಿದೇ | ಕರೆಕರೆಯ ಸಂಸಾರದೀ 2 ತಪವನಾಚರಿಸುತ್ತಲೀ | ವಿಪಿನವಸಿ ಸಂಚರಿಸುತಾವಿಪವರಸ ಪೆಗಲೇರಿದವನ್ನ | ಅಪರೋಕ್ಷದಿ ಕಾಣುತಾ 3 ನಡುನಡುವೆ ಮನೆಗೈದುತಾ | ಮಡದಿಯನೆ ತಕ್ಕೈಸುತಾ ಎಡ ಬಲದ ಒಡನಾಡಿ ಜನ ಕಡು | ಮೋಹಬಡುವಂತಾಡುತಾ 4 ಇಭಗಿರೀ ರಥೋತ್ಸವಕ್ಕೇ | ಪ್ರಭು ಮುದ್ದು ಮೋಹನ ದಾಸರುವಿಭವದಿಂದಲಿ ಬಂದು ನಿಮಗೆ | ಶುಭದ ಅಂಕಿತವಿತ್ತರು 5 ಶಾಂತ ಚಿತ್ತದಿ ಜಪಿಸುತಾ | ಮಂತ್ರ ಸಿದ್ಧಿಯ ಪಡೆಯುತಾ ಭ್ರಾಂತ ಜನರನು ಭಕ್ತಿ ಪಂಥದಿ | ನಿಂತು ನಲಿವಂತೆ ಮಾಡುತಾ6 ಸಾಹಸ್ರಾರಂಕಿತವನಿತ್ತೂ | ಮಾಹಿತಾಂಘ್ರಿಯ ಭಜಿಸಿದಾ ಸಾಹಸಿಗ ಶೇಷಾಂಶ ಭಕ್ತರ | ಮೋಹ ಕಳೆದುದ್ಧರಿಸಿದಾ 7 ನಕ್ರಹರಗತಿ ಪ್ರೀತನಾ | ವಿಕ್ರಮದಿ ಸಂಸ್ಥಾಪಿಸೀಚಕ್ರಿಪುರಿಗಾ ರಾಮನವಮಿಲಿ | ವಿಕ್ರಮದಿ ನೀ ಹೊರಡುತಾ 8 ಅಹಿ ಭವ ವಂದ್ಯನಾ | ಗುರುಗೋವಿಂದ ವಿಠಲನನಿರುತ ಭಜಿಸುವ ಜ್ಞಾನವಾ | ಕರುಣಿಸೀ ಸಲಹೆನ್ನನು 9
--------------
ಗುರುಗೋವಿಂದವಿಠಲರು
ದಾಸ ನಾನೆಲೊ ಹರಿದಾಸ ನಾನೆಲೊ ಶ್ರೀಶ ನಿಮ್ಮ ಶ್ರೀಪಾದಕಮಲ ಪ ಭವಭವದಿ ಜನಿಸಿ ಜನಿಸಿ ಬವಣಿಸಿದ್ದನುಭವಕ್ಕೆ ತಂದು ಭವಭೀತನಾಗಿ ನಿಮ್ಮ ಪಾವನಂಘ್ರಿ ಮರೆಯಹೊಕ್ಕೆ1 ಶರಧಿ ಈಸಿ ಪರಲೋಕ ಪಥದಿ ನಿಂತು ಪರಕೆ ಪರಮಪರತರನ ಪರಮಬಿರುದುಪೊಗಳುವಂಥ 2 ಶರಣಾಗತವತ್ಸಲ ನಿನ್ನ ಚರಣನಂಬಿ ಶರಣು ಮಾಳ್ಪೆ ತರಳನಾಲಾಪ ಕರುಣದಾಲಿಸಿ ಚರಣದಾಸಸೆನಿಸಿಕೊ ಶ್ರೀರಾಮ 3
--------------
ರಾಮದಾಸರು
ದುಮು ದುಮು ಬಸವಂತನ ಹಬ್ಬಾ ಪ ರಾಮಕೃಷ್ಣ ಗೋವಿಂದ ಮುರಾರಿ | ಶಾಮ ಸುಂದರ ಸುರಜ ಸಹಕಾರಿ | ಕಾಮಿತ ಫಲಗಳ ನೀವ ಉದಾರಿ | ಶ್ರೀ ಮಾಧವನೇ ಕಾಯೋ ಚರಣವ ದೋರಿ 1 ಬನ್ನ ಬಡುತಲಿ ಬಲು ಭವದಲಿ ಬಂದೆ | ಮುನ್ನಿನ ತಪ್ಪವನೆಣಿಸದೆ ತಂದೆ | ಚೆನ್ನಾಗಿ ರಕ್ಷಿಸು ನಮೋ ನಮೋ ಎಂದೆ 2 ಈ ರೀತಿಯಿಂದಲಿ ಹರಿಯ ಕೊಂಡಾಡಿ | ಆ ರಾಧಿಪ ನವವಿಧದಲ್ಲಿ ಕೂಡಿ | ನಾರಕ ಭಯಗಳುವನು ಮೂಲದೀಡ್ಯಾಡೀ | ಸೂರ್ಯಾಡು ಸ್ವ ಸುಖ ಎಲೊ ಹುಚ್ಚು ಖೋಡಿ 3 ಮುನ್ನಿನ ಪುಣ್ಯದಿ ನರದೇಹ ತಾಳಿ | ಮಾನವನಾಗಿ ಹರಿಕಥೆ ಕೇಳಿ | ಚೆನ್ನಾಗಿ ವಿಷಯದಲನುದಿನ ಬಾಳೀ | ವೈರಿ ನೀನಾದೆ ಗೈಯ್ಯಾಳಿ 4 ಮೃಗಜಲ ಹೋಲುವ ವಿಷಯಾ ನಂದಾ | ಬಗೆದೆಲೋ ಶಾಶ್ವತವೆಂದು ನಿನ್ನಿಂದಾ | ಭಕುತಿಯ ಮಾರ್ಗವ ಬಿಟ್ಟೆಲೋ ಛಂದಾ | ಜಗ ದೊಳಗಾದೆಲೋ ನೀ ಮತಿ ಮಂದಾ 5 ಹೆಂಡರು ಮಕ್ಕಳು ಮಮತೆಯ ಸ್ಥೂಲಾ | ಖಂಡದಿ ಬಿದ್ದಿದೆ ಕಾಲಿಗೆ ಕೋಳಾ | ಅಂಡಲೆವುತ ಹೊಟ್ಟೆಹೊರೆದೆಲೋ ಮೂಳಾ 6 ಸುಖವಿಲ್ಲ ಇದರೊಳಗಿಂದು | ಪಾದ ಹೊಂದು 7 ತ್ವರಿತದಿ ಭಾವಭಕ್ತಿಗೆ ಗಮನವಿಟ್ಟು | ತರಳನಾಗಿ ಹೋಗದಿರೆಲೋ ಕೆಟ್ಟು 8 ಚಿನುಮಯ ಗೆಚ್ಚರಗಳೆದೆಲೋ ಭ್ರಾಂತಾ | ಕುಣಿಸ್ಯಾಡುತಿ ಹನು ಅಚ್ಯುತಾನಂತಾ 9 ಒಬ್ಬರು ಶಾಸ್ತ್ರದ ಮದದಲಿ ಬಿಗಿದು ಉಬ್ಬುಬ್ಬಿ ಕುಣಿದರು ಹೇಳಲೇನಿಂದು 10 ಅಷ್ಟಮದದಿಂದ ಕಣ್ಣು ಮುಚ್ಚಿ | ಕುಟ್ಟುವಾಗ ನೆಲ್ಲಿಕಾಲನು ಘಟ್ಟಿಸಿ 11 ಸಂತರ ಕಥೆ ಕಿವಿಯಲಿ ಕೇಳಲಿಲ್ಲಾ | ಭ್ರಾಂತನೆ ನಾಳೆ ಮುರಿವನು ಹಲ್ಲಾ 12 ನೆರೆದಹಿಸುತ ದುರ್ಮದ ಬೂದಿ ಚೆಲ್ಲಿ | ನರಜನ್ಮ ಸಾರ್ಥಕ ಮಾಡೆಲೊಹುಳ್ಳಿ 13 ಕಂದನು ಸಾರಿದಾ ಹೋಳಿಯಾ ವಂದಾ | ಭವ ಬಂದಾ 14
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರಜಗಂಧಿಯೇ ಹೇಳೇ ಸುಳಿದವರಾರಮ್ಮಾ | ನೀರಜ ಶರಪತಿ ಕಾಣಮ್ಮಾ ಪ ಅರುಣನಖಾಂಗುಲಿ ಗುಲ್ಫ ಗೆಜ್ಜೆ ಕಾ- ಪುರ ನೂಪುರದ ಲೊಪ್ಪುವನವದಾರಮ್ಮಾ | ಸರಸಿಯೊಳಗಪೊಕ್ಕು ತಮನಸುವ ಬಗೆದು | ವರಶೃತಿ ತಂದವ ಕಾಣಮ್ಮಾ 1 ಕಲಿ ದಶನಂದದಿ ಜಂಘೆ ಪೊಂಬಾಳೆಯ | ಪರಿಯ ತೊಡೆಯುಳ್ಳುವ ದಾರಮ್ಮಾ | ಶರಧಿ ಮಥಿಸುವಂದುಗಿರಿನಿಲ್ಲದಿರೆ ಬಂದು | ಭರದಿ ಬೆನ್ನೆವಿತ್ತವ ಕಾಣಮ್ಮ2 ಕಾಂಚನ ವಸನನಿರಿಯ ಮ್ಯಾಲ ವಡ್ಯಾಣ ಮಿಂಚಿನ ಘಂಟೆಯ ದಾರಮ್ಮಾ | ಕ್ಷಿತಿ ವಯ್ದದನುಜನ ಶೀಳಿ ವಿ | ರಂಚಿ ಗುಳಹಿದವ ಕಾಣಮ್ಮಾ3 ಕಿರಿಡೋಳ್ಳಾತ್ರಿವಳಿಯ ನವರತ್ನ ಪದಕಿಹ | ಉರಸಿನ ವತ್ಸನವ ದಾರಮ್ಮಾ | ನರಹರಿ ರೂಪದಿ ಹಿರಣ್ಯಕನನು ಕೊಂದು | ಶರಣನ ಕಾಯ್ದವ ಕಾಣಮ್ಮಾ4 ಕೌಸ್ತುಭಹಾರ ಮೌಕ್ತಿಕದ ಕೊರಳಲಿಹ | ಹಸ್ತ ಕಡಗದವ ನಾರಮ್ಮಾ | ಸ್ವಸ್ತಿ ಎನುತ ಬಂದು ಬೇಡಿ ಬಲಿಯಾಗರ್ವ | ಸ್ವಸ್ತಿ ಮಾಡಿವನು ಕಾಣಮ್ಮಾ5 ಕ | ಪೋಲ ಹೊಳಹಿನವ ದಾರಮ್ಮಾ | ಏಳು ಮೂರು ಬಾರಿ ಕ್ಷತ್ರಿಯ ರಾಯರ ಸೋಲಿಸಿ ಬಂದವ ಕಾಣಮ್ಮಾ6 ಕರ್ಪೂರ ಕರಡಿಗಿ ಬಾಯಿ ಸಂಪಿಗೆಯಂತೆ | ತೋರ್ಪ ನಾಶಿಕದವ ದಾರಮ್ಮಾ | ದರ್ಪ ಮುರಿದು ರಾವಣನ ತಲಿಯ ಧರೆ | ಗೊಟ್ಟಿಸಿದವ ನಿವ ಕಾಣಮ್ಮಾ7 ಕುಡಿಗಂಗಳ ಭ್ರೂಲತೆಯ ಪೆರೆನೆಣೆಸಲು | ಪೊಡವಿಯೊಳಗ ನಂಬಿದ್ದ ಪಾಂಡವರನು | ಬಿಡದೆ ಸ್ಪಾಪಿಸಿದವ ಕಾಣಮ್ಮಾ8 ಕುರುಳು ಗೂದಲು ತಳಕದ ಮಾಲ್ಯ ಮೌಲಿಕ | ಧರಸಿದ ಮುಕುಟವ ದಾರಮ್ಮಾ | ತರಳನಾಗಿ ಮುಪ್ಪುರ ನಾರಿಯರ ವೃತ | ತ್ವರಿತದಿ ಅಳಿದವ ಕಾಣಮ್ಮಾ9 ನೋಡಲು ಮನಸಿಗೆ ಮೋಹನೆ ಮಾಡುವ | ಪ್ರೌಡದಿ ಮನವವ ದಾರಮ್ಮಾ | ರೂಢಿಲಿ ಕುದುರೆಯ ಏರಿ ಕಲಿಮಲವ | ಝಾಡಿಸಿದವನಿವ ಕಾಣಮ್ಮ10 ಸಹಜದಿ ಸವಿಸವಿ ಮಾತಲಿ ಸೋಲಿಸು | ತಿಹ ಸರ್ವರಿಗಿವ ದಾರಮ್ಮಾ | ಮಹಿಪತಿ ಸುತನ ಹೃದಯದಲಿ ನಿಂತು ತನ್ನ| ಮಹಿಮೆ ಬೀರಿಸುವವ ಕಾಣಮ್ಮಾ11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸೋ | ಪಾವ9ತಿಯ ಪ್ರಾಣೇಶ | ಪಾಲಿಸೋ ಪ ಪಾಲಿಸೆಮ್ಮನು ಪಶುಪತಿಯೆ | ನಿಜ | ಬಾಲಾಕ9 ಕೋಟಿದೀಧಿತಿಯೆ | (ನಮ್ಮ) | ಏಳಿಗೆಗೊಳಿಪ ಸದ್ಗತಿಯೆ ಎಂಬು || ಮೂಲ ಮೂರುತಿ ಸರ್ವಕಾಲಕಾಲನೆ ತ್ರೀ || ಶೂಲವ ಪಿಡಿದೆನ್ನ ಆಲಸ್ಯ ತ್ಯಜಿಸಿನ್ನು 1 ಪ್ರಮಥ ಪ್ರಜಾಪ್ರಭೂದಾರ | ಧರ್ಮ | ದ್ರುಮ ಸುಮನಸರಿಗಾಧಾರ |ಜಗ | ತ್ಕ್ರಮಜಳಿಂತೆನುವ ವಿಚಾರ | ಸ್ವಾಮಿ | ನಮಿಸಿ ಕೇಳುವೆ ಸವ9ಸಾರ | ಆಹಾ || ಗಾತ್ರ | ದ್ಯುಮಣಿಸನ್ನುತ ನಮೋ | ನಮೋಯೆಂಬೆ ಜಯ ಶಂಭೋ 2 ಶರಣವತ್ಸಲ ಮೃತ್ಯುಂಜಯನೆ | ನಿನ್ನ | ಮರೆಯ ಹೊಕ್ಕೆನು ಕಾಲಾಂತಕನೆ | ಎನ್ನ | ಕರುಣದಿ ಸಲಹೊ ಶಂಕರನೆ | ಶಿರ- ವೆರಗಿ ಬೇಡುವೆ ದಯಾಪರನೆ | ದೇವ || ಕರುಣಾಸಾಗರ ನಿನ್ನ | ತರಳನಾಗಿದೆ9ನ್ನ | ಪರ ಗುರುರಾಯನೆ 3
--------------
ಸದಾನಂದರು
ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ ಮುಕ್ತಿಯೋಗ್ಯ ಮಾಡೊ ಭಾವಭೋಕ್ತ ಕೃಪಾನಿಧೆ ಧ್ರುವ ಧ್ಯಾನ ಮೌನ ಸ್ನಾನ ಸಂಧ್ಯಾಖೂನ ಗುರುತು ಅರಿಯೆ ನಾ ನ್ಯೂನ ಪೂರ್ಣ ನೋಡದೆನ್ನ ರಕ್ಷಿಸೋ ದಯಾನಿಧೆ 1 ಹೀನ ದೀನ ಜ್ಞಾನಶೂನ್ಯ ದಾನ ಧರ್ಮ ಅರಿಯೆ ನಾ ನೀನೆ ಕಾಯಬೇಕು ಎನ್ನ ಕರುಣಾ ಕೃಪಾನಿಧೆ 2 ದುರುಳ ದುರ್ವಾಸನೆಯ ದುರಾಚಾರಿ ದುರಾತ್ಮ ನಾ ತರಣೋಪಾಯ ದೋರಿಸೆನ್ನ ಹೊರಿಯೊ ದಯಾನಿಧೆ 3 ಅರುಹು ಕುರುಹು ನರಿಯ ದೀಹ್ಯ ಮರುಳಮಂಕ ತರಳನಾ ಕರವ ಪಿಡಿಯ ಧರೆಯೊಳಿನ್ನು ತಾರಿಸೊ ದಯಾನಿಧೆ 4 ಆಶಾಪಾಶದೊಳು ವಾಸವಾದ ದೋಷ ರಾಶಿ ನಾ ಭಾಸಿ ಪಾಲಿಸು ಪುಣ್ಯ ಪ್ರಕಾಶಿಸೊ ದಯಾನಿಧೆ 5 ಏಸು ಜನ್ಮ ಮೋಸಹೋಗಿ ಘಾಸಿಯಾದ ಜೀವ ನಾ ದಾಸರೊಡನೆ ಕೂಡಿಸೊ ಭಾಸ್ಕರ ದಯಾನಿಧೆ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೋಕನೀತಿಯ ಹಾಡುಗಳು ಆರು ಹಿತರಾದಾರು ಈ ವಿಶ್ವದೊಳಗೆ ಕೃತಿ ಹೊರತು ಪ ಪಿತನಲ್ಲ ಸುತನಲ್ಲ ರತಿಯಲ್ಲ ಸುತೆಯಲ್ಲ ಅತಿ ಪ್ರೀತಿಯಿಂ ಪೊರೆದ ನಿಜಮಾತೆಯಲ್ಲಾ ಸುತನಪೇಕ್ಷಿಸಿ ಹೆದರಿ ಅಜಮಿಳನು ಕರೆಯಲ್ಕೆ ಪತಿತ ಪಾವನ ಹರಿಯ ನಾಮ ಹಿತವಾಯ್ತು 1 ಧನವಲ್ಲ ಸಿರಿಯಲ್ಲ ಬಹು ಬೆಳೆದ ಮೈಯಲ್ಲ ಹಣ ರಾಶಿ ಗಳಿಸುವ ದುರ್ಬುದ್ಧಿಯಲ್ಲ ಮನ ಮತ್ಸರಗಳಲ್ಲ ಕಾಮಕ್ರೋಧಗಳಲ್ಲ ತನುವಲ್ಲ ಡಂಬರದ ವೇದಾಂತವಲ್ಲ2 ತರಳನಾಗಿಹ ಧೃವಗೆ ತರುಣ ಪ್ರಲ್ಹಾದನಿಗೆ ಕರಿರಾಜ ಹನುಮಾದಿ ನಿಜ ಭಕ್ತರಿಂಗೇ ವರಧರ್ಮ ಪುತ್ರನಿಗೆ ಮಧ್ಯ ಪಾಂಡವನಿಗೇ ಪರಮ ಪತಿವ್ರತಾ ರಮಣಿ ದ್ರೌಪದಿಗೇ 3 ಧರಣಿಯನು ಹೊತ್ತಿರುವ ಆದಿಶೇಷಗೆ ಮತ್ತೆ ನಿರುತವೂ ಭಜಿಸಿದ ಪರಮ ದಾಸರಿಗೆ ಸಿರಿಯರಸ ಶ್ರೀಹರಿಯ ಭಜನೆಯೊಂದುಳಿದು 4 ಜನ್ಮಬಂಧವ ನೀಗಿ ಪರಮ ಪದವಿಯ ಕೊಡುವ ಸನ್ನುತವು ನಿಜ ಸೌಖ್ಯವನ್ನು ಕರುಣಿಸುವ ಪ್ರಾಣಿಯಲಿ ಆತ್ಮನಲಿ ಶ್ರಧ್ಧೆ ಹುಟ್ಟಿಸುವಂಥ ಚನ್ನಕೇಶವ ಸ್ವಾಮಿ ಭಕ್ತಿಯೊಂದುಳಿದು 5
--------------
ಕರ್ಕಿ ಕೇಶವದಾಸ
ಶ್ರೀಮಾಧವ ಪಾದವ ಸಂತತ ಮನದಿ ನೇಮದಿ ಧ್ಯಾನಿಸು ನೀ ಪ ಪ್ರೇಮಮೂರ್ತಿಯನೆನೆವರಾರಾದರೇನಯ್ಯ ಸ್ವಾಮಿತಾನವರನು ಸರ್ವತ್ರ ಸಲಹುವನು ಅ.ಪ ಮದಗಜವನುಸರದಿ ಮೊಸಲೆಯನು ತಾನು ಅಧಿಕ ಕಷ್ಟವ ಗೊಳಸೆ ಪದುಮನಾಭ ನೀನೆ ಪೊರೆಯಬೇಕೆನ್ನಲು ಮುದದಿಂದಲೊದಗುತ್ತ ಸೌಖ್ಯವ ತೋರಿದೆ 1 ತರಳನಾದ ಧ್ರುವನು ಪ್ರಹ್ಲಾದನು ಶರಣೆಂದು ಮೊರೆವೋಗಲು ಸರಸಿಜಾಕ್ಷ ಶ್ರೀಶ ತ್ವರಿತದಿಂದಲಿ ಬಂದು ಕರುಣದಿ ಕರೆದೆತ್ತಿಕೊಂಡು ಮುದ್ದಾಡಿದ 2 ಮಾನಿನಿ ದ್ರೌಪದಿಯು ತನ್ನಯ ಘನ ಮಾನಭಂಗದ ಕಾಲದಿ ದೀನರಕ್ಷಕ ಕೃಷ್ಣ ದಾನವಾರಿಯೆನೆ ಸಾನುರಾಗದಿಂದಲಕ್ಷಯ ವರವಿತ್ತ3 ಅಜಮಿಳ ಬಹುಪಾಪದಿ ಮೆರೆಯುತಲಿದ್ದು ನಿಜಸುಖ ಮರೆತಂತ್ಯ ಕಾಲದಿ ಬಜಬಜಿಸುತಮಗನನು ಹೆಸರೆತ್ತಲು ಭಜನೆಯಾಯ್ತು ನಾರಾಯಣ ನಾಮವು 4 ವಿದುರನುಧ್ದವನರ್ಜುನ ಕುಚೇಲನು ಮೊದಲಾದ ಭಕ್ತರೆಲ್ಲ ಹೃದಯದಿ ಬಚ್ಚಿಟ್ಟು ನಿರುತ ಪೂಜೆಯ ಮಾಡೆ ಪದವಿಯಿತ್ತು ಕಾಯ್ದ ಜಾಜಿಯೀಶನ5
--------------
ಶಾಮಶರ್ಮರು
ಸಂಕ್ಷೇಪ ರಾಮಾಯಣ ಶ್ರೀಜಾನಕೀಮನೋಹರ ಚರಿತೆಯನು ಮುನಿ ರಾಜವಾಲ್ಮೀಕರಿಗೆ ನಾರದಂಪೇಳ್ದನದು ರಾಜೀವನೇತ್ರ ಪೇಳಿಸಿದಂತೆ ಸಂಕ್ಷೇಪದಿಂ ಪೇಳ್ವೆನಾಲಿಸುವುದು ವರಮುನಿಯಯಾಗಮಂ ಕಾಯ್ದುತಾಟಕಿಯಸಂ ಮುರಿದು ಭೂಸುತೆಯ ಕರಪಿಡಿದಯೋಧ್ಯಾಪುರಿಗೆ ಬರುತ ಭಾರ್ಗವನ ಗರ್ವವಸೆಳೆದು ತಂದೆಯಂ ಹರುಷಪೊಂದಿಸಿದಂರಘುದ್ವಹಂ ರಾಮಚಂದ್ರನು ಬಾಲಕಾಂಡದಲಿ 1 ಮಾತೆಯನುಡಿಗೆ ಪಿತನಭಾಷೆಯಂ ಸಲಿಸಲ್ಕೆ ತಾತಮ್ಮಲಕ್ಷ್ಮಣ ಧರಾತ್ಮಜೆಯರ್ಸಹಿತ ಪ್ರ ಭರತಬಂದು ಜಾತಂಗೆ ಪಾದುಕವನಿತ್ತು ಮನ್ನಿಸಿಮುನಿ ರಘುವರನಯೋಧ್ಯಾಕಾಂಡದಿ 2 ದಂಡಕಾರಣ್ಯದಿ ವಿರಾಧನಂ ಸಂಹರಿಸಿ ಚಂಡಿ ಶೂರ್ಪಣಖಿ ಕಿವಿಮೂಗನಂ ಕೊಯಿಸಿಯು ಮಾಯಾಮೃಗದವ್ಯಾಜದಿಂ ರಾವಣಂ ಕೊಂಡೊಯ್ಯೆಸೀತೆಯಂಅರುಣಸುತನಿಂದಕೋ ದೀಕ್ಷಾಚಾರ್ಯ ಕೇಳ್ದಸತಿವಾರ್ತೆಯಂ ಕಂಡು ಶಬರಿಯನು ಪಂಪಾತಟಕೆಬಂದ ನಾರಣ್ಯಕಾಂಡದೊಳ್ರಾಮನು 3 ಮರುತಾತ್ಮಜನಕಂಡು ಸುಗ್ರೀವಸಖ್ಯವಾ ಚರಿಸಿ ವಾಲಿಯ ಮುರಿದು ಕಪಿರಾಜ್ಯದೋಳ್ ದಿವಾ ಸೀತೆಯಕುಶಳವಂತಹುದೆನೆ ತೆರಳಲು ಚತುರ್ದಿಕ್ಕಿಗಾಗವಾನರರುಮೂ ವರುಬಂದುಪೇಳ್ದರೆಲ್ಲಿಯು ಕಾಣೆವೆಂದು ವನ ಕಿಷ್ಕಿಂಧಕಾಂಡದಲಿ 4 ಶರಧಿಯದಾಟಿ ಲಂಕೆಯ ಪೊಕ್ಕುಲಂಕಿನಿಯ ಮುರಿದು ಪುರವೆಲ್ಲಮುಂ ತಿರುಗಿವನದೊಳಗೆರಘು ವನಭಂಗಮಂಗೈಯ್ಯುತ ಪರಮ ಸಂಭ್ರಮದೊಳಕ್ಷಾದ್ಯರಂಕೊಂದುವಿಧಿ ಶರಕೆ ಮೈಗೊಟ್ಟುಲಮಂಕಾಪುರವಸುಟ್ಟುಬಂ ಪತಿಗೆಸುಂದರಕಾಂಡದಲ್ಲಿ ಹನುಮಾ 5 ವನಧಿಯೊಳ್ಸೇತುವೆಯಗಟ್ಟಿ ಧುರದೊಳಗೆರಾ ವಣ ಕುಂಭಕರ್ಣಾದ್ಯರೆಲ್ಲರಂ ಸದೆದುತ ಪೊಗಳಲು ಜನಕನಂದನೆಯ ಪಾವಕನಿಂ ಪರಿಗ್ರಹಿಸಿ ಘನಪುಷ್ಪಕವನೇರಿಬರುತ ವಹಿಲದಲಿ ಭರ ಯುದ್ಧಕಾಂಡದಲಿ 6 ಪರಮಧರ್ಮದಲಿ ರಾಜ್ಯವಾಳುತಲಿ ಕಲಿರಾಮಭೂ ವರನು ಹನ್ನೊಂದುಸಾವಿರಲವಣನಂ ಪುತ್ರರಿಗೆ ರಾಜ್ಯವಿತ್ತು ಪುರಜನವ ಪಶುಪಕ್ಷಿ ಕೀಟವ್ರಜ ಸಹಿತ ತೆರಳಿದಂದಿವಿಗೆದೇವರ್ಕಳರಳಿನಮಳೆಯ ಸುರಿದು ಜಯಜಯವೆಂದು ಪೊಗಳಿದರುಹರಿ ಯನುತ್ತರಕಾಂಡದಲಿ ತಿಳಿವದು 7 ಇಪ್ಪತ್ತುನಾಲ್ಕುಸಾವಿರ ಶ್ಲೋಕ ಕಾಂಡಗ ಳೊಪ್ಪುವುದು ಸಪ್ತವೈನೂರುಸರ್ಗಗಳೆಂದು ವಾಲ್ಮೀಕಿ ಮುನಿವಿರಚಿಸಿದನು ತಪ್ಪದೇ ಪಠಿಸುವಗಮುದಿನಂ ಗಾಯತ್ರಿ ಇಪ್ಪತ್ತು ನಾಲ್ಕುಲಕ್ಷದ ಜಪದಫಲಬಹುದು ಚರಿತಸಜ್ಜನ ಕಲ್ಪವೃಕ್ಷವಿದುವೆ 8 ಇಂತಪ್ಪ ಮಹಿಮೆಯುಳ್ಳೀಕಥೆಯ ಸಂಕ್ಷೇಪ ದಿಂ ತರಳನಾಂ ಪೇಳ್ದೆತಪ್ಪಿದ್ದಡೆಯು ತಿದ್ದಿ ಸೇವಕಂಸೇವ್ಯನವನು ಎಂತಾದಡೆಯು ಹರಿಯನಾಮಾಮೃತದರುಚಿಮ ಹಾಂತರರಿವರು ದುರ್ಜನರು ನಿಂದಿಸಿದಡೇನು ಸಂಕ್ಷೇಪರಾಮಾಯಣಂ 9
--------------
ಗುರುರಾಮವಿಠಲ
ಉಗಾಭೋಗಕರುಣವಾರಿಧಿ ನೀ ಕರುಣವಾರಿಧಿಯಾದ ಕಾರಣಕರಿಕುಲಾಗ್ರಣಿಯನ್ನ ಕಾಯ್ದೆಉರಿಉರಗಬಾಧೆಯ ತಪ್ಪಿಸಿ ತರಳನಾರೈದೆಕರುಣವಾರಿಧಿಯಾದ ಕಾರಣಸುರರ ಸಂಕಟ ಹರಿದುಕನಕಪುರದರಸುತನ ಕೊಟ್ಟೆ ಪೌಲಸ್ತ್ಯ ಅನುಜಗೊಲಿದುಕರುಣವಾರಿಧಿಯಾದ ಕಾರಣಸ್ಮರಿಸುತಿಹಗಂಬರದಿ ನಿಲಿಸಿದೆಭರದಿ ಮುನಿ ಬಂದೆದೆಯನೊದೆದರೆ ಮರಳಿ ಮನ್ನಿಸಿದೆಕರುಣವಾರಿಧಿ ನೀನು ನಿನ್ನಯಕರುಣ ಪಾತ್ರರುಸಿರಿವಿಧಾತ್ರರುಪರಿಚರರ ಅಭಿಮಾನಿ ಪ್ರಸನ್ವೆಂಕಟರೇಯ ಮಾಸಹಾಯ 1
--------------
ಪ್ರಸನ್ನವೆಂಕಟದಾಸರು
ಕ್ಷಮಾ ಸಮುದ್ರ ನಿನ್ನ ಸಮಾನರಿಲ್ಲರಮಾ ಬ್ರಹ್ಮಾದಿಗಳು ಪೊಗಳೆ ಪಉಮೆಯರಸ ನಿನ್ನ ಚರಣಮಹಿಮೆ ತನ್ನತರುಣಿಯೊಡನೆ ಹಗಲಿರುಳು ಪೇಳುವ ದಿವ್ಯ ಅ.ಪಅರಿಯದೆ ಅಜಮಿಳತರಳನಾರಗನೆಂದುಮರಣ ಕಾಲದಿ ಒದರೆಸರಸೀಜಾಕ್ಷನು ತನ್ನ ಪರಿವಾರದವರೆಂದುಸಿರಿದೇವಿಯೊಳು ಪೇಳಿ ತ್ವರಿತದಿ ರಕ್ಷಿಸಿದ 1ನಕ್ರನ ಬಾಧೆಗೆ ಸಿಕ್ಕಿದ ಗಜರಾಜಚಕ್ರಪಾಣಿಯ ಭಜಿಸೆಆ ಕ್ಷಣದಿ ತನ್ನ ಚಕ್ರಕಾಙÉÕಯ ಮಾಡಿಲಕ್ಷ್ಮೀದೇವಿಗ್ಹೇಳದೆ ಪಕ್ಷಿ ಹೆಗಲೇರಿ ಬಂದ 2ಹಿರಣ್ಯಕಶ್ಯಪು ತನ್ನತರಳಪ್ರಹ್ಲಾದನಿಗೆಪರಿಪರಿ ಬಾಧೆ ಪಡಿಸೆಹರಿಯ ತೋರೆಂದು ಆರ್ಭಟಿಸಿ ನುಡಿಯೆ ದೈತ್ಯನರಮೃಗರೂಪನಾಗಿ ಭರದಿ ಕಂಬದಿ ಬಂದ3ಪತಿಗಳೈವರು ಲಕ್ಷ್ಮೀಪತಿಯ ಧ್ಯಾನದೊಳಿರೆಮತಿಹೀನನೆಳೆತರಲುಗತಿನೀನಲ್ಲದೆ ಮತ್ತೆ ಹಿತರೊಬ್ಬರಿಲ್ಲವೆನೆಅತಿಬೇಗದಿಂದ ಧರ್ಮಸತಿಗೆ ಅಕ್ಷಯವಿತ್ತ 4ಇದರಂತೆ ತರಳಧ್ರÀುವ ಒದಗಿದ ತಾಪದಿಂದಪದುಮನಾಭನÀ ಭಜಿಸೆಮುದದಿಂದಾತಗೆ ಧ್ರುವಪದವಿಯನಿತ್ತು ಕಾಯ್ದೆಪದುಮನಾಭನೆ ನಿನಗೆದುರುಂಟೆ ತ್ರಿಜಗದಿ 5ಘಣಿಶಾಯಿ ನಿನ್ನಗುಣಮಹಿಮೆಯ ಪೊಗಳಲುಅಹಿಭೂಷಣನಿಗಳವೆಕ್ಷಣ ಬಿಡದಲೆ ನಿನ್ನ ಚರಣಸೇವೆಯ ಮಾಳ್ಪಸಿರಿದೇವಿ ಅರಿಯೆನೆಂದೆನಲು ನಿನ್ನಯಗುಣ6ಕರುಣಾಸಾಗರ ದೇವ ವಿಮಲಸ್ವರೂಪನೆ ಕಮಲನಾಭ ವಿಠ್ಠಲಶರಣಜನರ ಬಹುತ್ವರದಿಂದ ಬಂದು ಕಾಯ್ದಪರಮದಯಾಳೊ ನಿನ್ನ ಚರಣಕ್ಕೆ ನಮೋ ಎಂಬೆ7
--------------
ನಿಡಗುರುಕಿ ಜೀವೂಬಾಯಿ
ನಾರದ ಕೊರವಂಜಿ1ಜಯ ಜಯ ಜಯ ಜಯ ಜಯ ಜಯ ಪ.ಶ್ರೀ ರಮಾರಮಣ ಜಯ ಶ್ರೀಕರ ಗುಣಾಬ್ಧಿ ಜಯಶ್ರೀ ರುಕ್ಮಿಣೀಶ ಜಯ ಶ್ರೀ ಶ್ರೀನಿವಾಸ ಜಯನೀರಚರಕಮಠಕಿಟಿನೃಹರಿವಟುಭೃಗುಜ ರಘುವೀರ ಯದುಪತೆಬುದ್ಧಕಲ್ಕಿ ಸ್ವರೂಪಾ ಜಯ ಜಯ1ಶ್ರೀ ಮತ್ಕಪಿಲ ಋಷಭ ಯಜÕದತ್ತ ಕಂಸ್ತುಘ್ನ ?ಕೌಮಾರ ವ್ಯಾಸ ಹಯಗ್ರೀವ ಶ್ರೀಮದ್ದಜಿತ ಜಯಸ್ವಾಮಿ ಮಹಿದಾಸ ತಾಪಸ ಉರುಕ್ರಮಶೂಲಿವ್ಯಾಮೋಹ ಧನ್ವಂತರೆ ಹಂಸ ಶುಕ್ಲಾ ಜಯ ಜಯ 2ಆನಂದ ಜ್ಞಾನ ಬಲಮಯ ಚಿತ್‍ಸ್ವರೂಪ ಜಯಅನಂತ ಮಹಿಮ ವೈರಾಜ ಪುರುಷೋತ್ತಮ ಜಯಅನಂತ ಬ್ರಹ್ಮ ರುದ್ರೇಂದ್ರಾದಿಸೇವ್ಯಜಯಅನಂತ ಜೀವಗ ಪ್ರಸನ್ವೆಂಕಟ ಕೃಷ್ಣಾ ಜಯ ಜಯ 32ಶರಣು ಮಂಗಳ ದೇವತೇವರಶರಣುಚಿತ್ಸುಖಸಾಗರಶರಣುಅಗಣಿತಗುಣಶುಭಾಕರಶÀರಣು ವೆಂಕಟ ಮಂದಿರ 4ದುರುಳದೈತ್ಯರು ಸೊಕ್ಕಿ ವರದಲಿಧರೆಗೆ ಕಂಬನಿ ತರಿಸಲುತ್ವರದಿ ಸುರರಿಗೆ ಮೊರೆಯನಿಟ್ಟಳುಧರಿಸಲಾರೆನು ಎನುತಲಿ 5ಸರಸಿಜೋದ್ಭವಭವಪುರುಹೂತರರಿದು ಚಿಂತಿಸಿ ಮನದಲಿವರಪಯೋನಿಧಿಗೈದಿ ಸ್ತುತಿಸಲುಕರುಣದಲಿ ಅವತರಿಸಿದೆ 6ಬಂದು ಧರ್ಮದ ವೃಂದ ರಕ್ಷಿಪೆನೆಂದು ದೀಕ್ಷೆಯವಿಡಿದು ನೀಅಂದಗೆಡಿಸುತ ದನುಜನಿಕರವಹೊಂದಿ ದ್ವಾರಕ ನಗರವ 7ಇಂದಿರೆಯು ನಿನ್ನಿಚ್ಛೆಯನುಸರದಿಂದ ಕ್ರೀಡಿಪಳನುದಿನÀಮಂದಜನರಿಗೆ ಮೋಹಿಸುತನರರಂದದಲಿ ತೋರಿದೆ ಹರೆ 8ದೇವಋಷಿ ನಾರದನು ಶ್ರೀಪದಸೇವೆಗÉೂೀಸುಗ ಕೊರವಿಯಭಾವದಲಿ ಜಗದಂಬೆ ರುಕ್ಮಿಣಿದೇವಿಯಳ ಬಳಿಗೈದು ತಾ 9ದೇವ ನಿನ್ನಯ ಬರವ ಬೆಸಸಿದಕೋವಿದತೆಯನು ಪೇಳುವೆಶ್ರೀವರ ಪ್ರಸನ್ವೆಂಕಟ ಕೃಷ್ಣಪಾವನ ಮತಿಯ ಕರುಣಿಸೊ 103ಶ್ರೀ ರಂಭೆ ಭೀಷ್ಮಕನಭೂರಿಪುಣ್ಯದ ಗರ್ಭವಾರಿಧಿಯಲ್ಲಿ ಜನಿಸಿನಾರಿ ರುಕ್ಮಿಣಿಯೆಂಬ ಚಾರುನಾಮದಿಕಳೆಯೇರಿ ಬೆಳೆದಳಂದವ್ವೆ 11ಜನನಿಜನಕರೆಲ್ಲ ತನುಜೆಯ ಹರಿಯಂಘ್ರಿವನಜಕೆ ಕೊಡಬೇಕೆನ್ನೆನೆನೆದು ತಾನೊಂದು ರುಕ್ಮನು ದಮಘೋಷನತನುಜಗೆ ತಂಗಿಯನು 12ಕೈಗೂಡಿಸುವೆನೆಂಬ ವೈಭವದಲ್ಲಿರೆವೈಮನಸದೊಳು ಕನ್ಯೆಯುಸುಯ್ಗರಿಯುತ ಮುರವೈರಿ ಪ್ರಸನ್ವೆಂಕಟಕೃಷ್ಣಯ್ಯನೊಳ್ ಮನವಿಟ್ಟಿರೆ 134ದನುಜಮಥನÀ ಹರಿಸೇವೆ ಇದೆಂದುಅನಿಮಿಷಮುನಿ ಧರೆಗಿಳಿದು ತಾ ಬಂದುವನಿತೆ ಕೊರವಂಜಿಯ ವೇಷವÀ ಧರಿಸಿಜನಪ ಭೀಷ್ಮಕನೋಪವನದಲ್ಲಿ ನೆಲಸಿ 14ಹಲವು ಕೊರವಿಯರ ಕೂಡಿ ಸಿಂಗರದಿಬೆಲೆ ಇಲ್ಲದುಡಿಗೆ ತೊಡಿಗೆ ಇಟ್ಟು ಮುದದಿಇಳೆಯ ಜನರು ಮೋಹಿಸುವಪರಿಇಹಳುಕೆಳದೇರ ಗಡಣದಲಿ ಚೆಲುವೆ ಒಪ್ಪಿದಳು 15ಮಂಜುಗಾವಿಯ ಸೀರೆ ನಿರಿತೆಗೆದುಟ್ಟುಕೆಂಜೆಡೆ ಬಿಟ್ಟೋರೆದುರುಬಿನ ಕಟ್ಟುಪಂಜಿನೋಲೆಯ ಮೂಗುತಿಯ ಬಲಿದಿಟ್ಟು ಗುಲಗಂಜಿ ಹೊಂದಾಳೆ ಸರಗಳಳವಟ್ಟು 16ಕಂಚುಕಪುಟ ಬಿಗುಪೇರಿದ ಕಟ್ಟುಚಂಚಲನೇತ್ರಕಂಜನ ಕಾವಲಿಟ್ಟುಮಿಂಚುವಾಭರಣಿಟ್ಟು ಪ್ರಸನ್ವೆಂಕಟ ಕೃಷ್ಣನಂ ಚಿಂತಿಸಿ ಜಯ ಜಯಯೆಂದಳುಕೊರವಿ175ಅಡಿಗಡಿಗೆ ಝಣ ಝಣರೆಂದು ನಡೆತಂದು ನಡೆತಂದುಮಡದಿ ರಾಜಬೀದಿಯಲಿನಿಂದು18ಮೃಡಗಹಿತನ ಪಟ್ಟದಾನೆ ಮಂದಗಮನೆ ಮಂದಗಮನೆಕಡುಮೌನಿ ಜನರ ಮೋಹಿನೆ 19ಚಪಲ ನೋಟಕೆ ನಾಗರಿಕರು ನೋಟಕರು ನೋಟಕರುಲಿಪಿಯ ಚಿತ್ರದೊಲು ನಿಂತಿಹರು 20ನಿಪುಣೆಕೊರವಿಶ್ರೀಪ್ರಸನ್ವೆಂಕಟ ಕೃಷ್ಣನ್ನ ಕೃಷ್ಣನ್ನಶ್ರೀಪ್ರÀ್ರಸಾದವ ಬೇಡುತಿದ್ದಳಣ್ಣ 216ಬೆಡಗಿನ ಗಮನದಿ ಎಡಬಲಕೊಲಿದುಕಡಗ ಶಂಖದ ಬಳೆ ನುಡಿಸುತ ನಡೆದುಅಡಿಗೊಮ್ಮೆ ತಿರುಮಲ ಒಡೆಯನ ನೆನೆದು ತಕ್ಕಡ ಧಿಗಿಧಿಮಿಕೆಂದುಜಡಿದುತಾಳ್ವಿಡಿದು22ತಿಗುರಿದ ಗಂಧ ಸೆಳ್ಳುಗುರಿನ ನಾಮಮೃಗಮದದ ಬೊಟ್ಟಿನ ನಗೆಮೊಗದ ಪ್ರೇಮಮಗುವನುಡಿಯಲೆತ್ತಿ ಜಗಚ್ಚರಿಯಮ್ಮಹೆಗಲ ರನ್ನದ ಬುಟ್ಟಿ ಮುಳ್ಳುವಿಡಿದಮ್ಮ 23ನಗರದ ಜನದ ಕಣ್ಣಿಗೆ ಕೌತುಕೆನಿಸಿಬಗೆ ಬಗೆ ಒಗಟು ಮಾತುಗಳನುಚ್ಚರಿಸಿನಗರಾಧಿಪತಿಯ ಮನೆಯಕೇಳಿನಡೆದುಮಿಗೆ ಪ್ರಸನ್ವೆಂಕಟ ಕೃಷ್ಣಗೆ ಕೈಮುಗಿದು 247ಬ್ರಾಹ್ಮರ ಕೇರಿಗೆ ಬಂದಳಾಕೊರವಿಪರಬ್ರಹ್ಮನ ಗುರುತ ಕೇಳುತ್ತನಮ್ಮಮ್ಮ ನಮ್ಮವ್ವೆ ನಮ್ಮಜ್ಜಿ ನೀಡೆಂದುಸನ್ಮಾನದಾಲಯವ ಪೊಗುತಾ 25ಇಂತಪ್ಪ ಸೊಬಗುಳ್ಳ ಕೊರವಿಯನು ಕಂಡುನೃಪನಂತಃಪುರದ ಸತಿಯರೈದಿಕಂತುವಿನ ಜನನಿಗೆ ಕರವೆರಡು ಮುಗಿದು ಏಕಾಂತ ಪೇಳಿದರು ಚೆನ್ನಾಗಿ 26ಓರ್ವ ಕಾಲಜ್ಞಾನ ಪೇಳ್ವ ಕೊರವಮ್ಮ ನಮ್ಮೂರ್ವಳಗೆ ತಿರುಗುತಿಹಳಮ್ಮಸರ್ವೇಶ ಪ್ರಸನ್ವೆಂಕಟ ಕೃಷ್ಣನಾಗಮದನಿರ್ವಚನ ಕರೆಸಿ ಕೇಳಮ್ಮ 278ಬಂದಳು ನೃಪನರಮನೆಗೆ ತಾನಿಂದಲ್ಲಿ ನಿಲ್ಲದೆ ಕಿಲಿಕಿಲಿ ನಗುತಾ ಕುಲು ಕುಲು ನಗುತಾ ಪ.ಬಂದ್ಹೇಳಿದ ನುಡಿಗೇಳ್ದು ಪೂರ್ಣೇಂದುವದನೆ ಮುದತಾಳ್ದುಮಂದಿರಕೆ ಕರೆಸಿದಳು ನಲವಿಂದಲಿ ಬಲು ಬೆಡಗಿನ ಕೊರವಂಜಿ 28ತಳಪಿನ ಮುತ್ತಿನ ಕಟ್ಟುಶುಭತಿಲಕದ ಹಚ್ಚೆಯ ಬಟ್ಟುಅಲುಗುವ ಮೂಗುತಿಯಬಲೆ ಸಲೆಬಳುಕುತ ಬಡನಡುವಿನ ಚಪಲೆ 29ಬಟುಗಲ್ಲದ ಮಕರಿಕಾಪತ್ರ ಪವಳದುಟಿ ದಾಡಿಮರದಗೋತ್ರವಿಟಮೃಗಸ್ಮರಶರ ನೇತ್ರ ಕೊರಳ್ದಟಿಸುವಮಣಿಮುತ್ತಿನ್ಹಾರಗಳೊಲಪಲಿ30ಇಟ್ಟೆಡೆ ಮೊಲೆಯ ಪಟ್ಟಿಕೆಯು ಶ್ರೋಣಿಮುಟ್ಟುವ ಮುಡಿಯ ಮಾಲಿಕೆಯುಬಿಟ್ಟ ಮುಂಜೆರಗಮಲಿಕೆಯು ಕಣ್ಣಿಟ್ಟ ಮೃಗಕೆ ಭ್ರೂಸ್ಮರಕಾರ್ಮುಕೆಯು 31ತೆಳ್ವೋದರದ ತ್ರಿವಳಿಯ ಜಗುಳಿಬೀಳ್ವ ಮಣಿಮುಕ್ತಾವಳಿಯಸಲ್ಲಲಿತ ಸಂಪಿಗೆ ಕಳೆಯ ಗೆಲ್ವಚೆಲ್ವೆಕೊರವಿಪುರವೀಥಿಯ ಬಳಿಯ32ಕಿಣಿ ಕಿಣಿ ರವದ ಕಿಂಕಿಣಿಯುಝಣ ಝಣತ್ಕಾರಿಪಂದುಗೆ ಮಣಿಯುಕಣಿ ಕಣಿ ಒಯ್ಯೆಂಬೊಕ್ಕಣಿಯು ಕುಚಕುಣಿ ಕುಣಿಸಿ ನಟಿಪ ನಡೆವಾಂಗನೆಯು 33ಸಿಂಗನ ಉಡಿಯಲ್ಲಿಕಟ್ಟಿಉತ್ಸಂಗದೊಳೊಲಪಿನ ದಿಟ್ಟಿರಂಗ ಶ್ರೀ ಪ್ರಸನ್ವೆಂಕಟ ಕೃಷ್ಣಾಂಗನೆಯನು ಕಾಂಬುವೆನೆಂಬ ತವಕದಿ 349ವಚನಪದುಮನಾಭನ ರಾಣಿ ರಾಣಿವಾಸದಲಿಯದುಕುಲೇಂದ್ರನ ಚರಣೋಚ್ಚಾರಣೆಯಲ್ಲಿರಲುಒದಗಿ ಬಂದಳುಕೊರವಿಕರೆಯುತ್ತ ತಾನುಚದುರ ಪ್ರಸನ್ವೆಂಕಟ ಕೃಷ್ಣನರಸಿಯನು 3510ಎಲ್ಲಿಹಳೆಲ್ಲ್ಲಿಹಳಾ ರಾಯನ ಮಗಳೆಲ್ಲಿಹಳೆ ನೀಡೆಯವ್ವನಲ್ಲೆ ಬಾ ನಲ್ಲೆ ಬಾ ನಲ್ಲೆ ಬಾ ರುಕ್ಮಿಣಿನಲ್ಲೆ ಬಾರೆ ಮುಂದಕವ್ವ 36ಬಲ್ಲೆ ನಾ ಬಲ್ಲೆ ನಿನ್ನಯ ಮನದೆಣಿಕೆಯಸೊಲ್ಲುವೆನೆ ನೀಡೆಯವ್ವನಿಲ್ಲದು ನಿಲ್ಲದಕ್ಕಿಯು ನಿನ್ನದ್ಹಸಿತ ಕೈಒಳ್ಳೆ ಕಜ್ಜಾಯ ನೀಡೆಯವ್ವ 37ಕೆಟ್ಟೋಗರಕೆ ಚಿತ್ತವಿಟ್ಟ ಕೊರವಿಯಲ್ಲಮೃಷ್ಟಾನ್ನವ ನೀಡೆಯವ್ವಶ್ರೇಷ್ಠಾದ ಶಾವಿಗೆ ಬಟ್ಟುವಿ ಪಾಯಸಹೊಟ್ಟೆ ತುಂಬ ನೀಡೆಯವ್ವ 38ಅಟ್ಟಿಟ್ಟ ಪಂಚವಿಧ ಭಕ್ಷ್ಯ ಎನಗಿಂದುಇಷ್ಟ ಕಾಣೆ ನೀಡೆಯವ್ವಇಷ್ಟುಣಲಿಕ್ಕೆನ್ನತುಷ್ಟಿಬಡಿಸಿ ಸತ್ಯಗೋಷ್ಠಿಕೇಳೆ ನೀಡೆಯವ್ವ39ಮನ್ನಣೆ ಇಲ್ಲದ ಮನೆಯ ಹೊಗುವಳಲ್ಲಕನ್ನೆ ಬಾರೆ ಮುಂದಕವ್ವಮುನ್ನ ರಕ್ಕಸನೊಯ್ದ ಮಡದಿಗೆ ಒಳಿತವನೆಲ್ಲ ಹೇಳಿದ್ದೆನವ್ವ 40ನಿನ್ನ ಪ್ರಾಣದ ಪ್ರಿಯನೊಬ್ಬನೆ ಪರದೈವಕನ್ನೆ ಕೇಳಜಕಾಮರವ್ವಕಣ್ಣಾರ ಕಾಂಬೆ ನಿನ್ನಣ್ಣನಪಾಟುಪ್ರಸನ್ನವೆಂಕಟ ಕೃಷ್ಣನಿಂದವ್ವ 4111ಚೂರ್ಣಿಕೆಈ ವಾಕ್ಯವಂಕೇಳಿತೀವಿ ತೋಷವ ತಾಳಿದೇವಿ ರುಕ್ಮಿಣಿಯಕ್ಕ ಪಾವನ ಹಾಸಂಗಿಯಿಕ್ಕಿಆವಲ್ಲಿಂ ಬಂದ್ಯವ್ವ ದೇವಲೋಕದ ಕೊರವೆಈ ಒಳ್ಳೆ ಮೆಚ್ಚು ಮಾತು ಆವಾಗನುಭವೆಂ ಮಾತೆಹೀಗೆಂದಾಸನ ಕೊಟ್ಟು ಬಾಗಿಲೊಳು ಕಾವಲಿಟ್ಟುಬೇಗ ಪ್ರಸನ್ವೆಂಕಟ ಕೃಷ್ಣನಾಗಮವ ಮನದಿ ಕೇಳ್ದಳವ್ವೆ 4212ಕುಳ್ಳಿರೆ ಕುಳ್ಳಿರೆ ಕುಳ್ಳಿರೆ ಕೊರವಂಜಿಫುಲ್ಲಬಾಣನಾನೆ ಕುಳ್ಳಿರೆಸೊಲ್ಲಮ್ಮ ಸೊಲ್ಲಮ್ಮ ಹಲವು ಮಾತಿನ ಜಾಣೆಎಲ್ಲ ಬಯಕೆಯನೆಲ್ಲ ಸೊಲ್ಲಮ್ಮ ಕೊರವಂಜಿ 43ಆದರದಾ ಮಾತ ಕೇಳುತ ಕುಳಿತಳುಯಾದವರರಸ ಮುಕುಂದನಕೋದಂಡಪಾಣಿ ತಿರುವೆಂಗಳ ಮೂರ್ತಿಯಪಾದಕೆ ಮಾಡಿದಳೊಂದನೆ ಕೊರವಂಜಿ 44ಮಣಿಮಯ ಬುಟ್ಟಿಯ ಎಡದಲಿಟ್ಟುಕೊಂಡುವನಿತೆ ಪದ್ಮಾಸನವಿಟ್ಟಳುಮಿನುಗುವ ಎಳೆನಗೆಯಣುಗನ್ನ ಮಲಗಿಸಿವನಿತೆ ರುಕ್ಮಿಣಿಯನ್ನು ಕರೆದಳು ಕೊರವಂಜಿ 45ಜಾಣೆ ಬಾರೆ ಸುಗುಜಾಣೆ ಬಾರೆ ನಾರಿಮಾಣಿಕಳೆಕಟ್ಟಾಣಿಬಾರೆವಾಣಿಪತಿಪಿತ ಪ್ರಸನ್ವೆಂಕಟ ಕೃಷ್ಣನರಾಣಿ ಬಾರೆಸುಪ್ಪಾಣಿಬಾರೆ ಕಲ್ಯಾಣಿ ಬಾರೆ ಫಣಿವೇಣಿ ಬಾರೆಶುಭಶ್ರೋಣಿ ಬಾರೆ ಎಂದು ಕರೆದಳು ಕೊರವಂಜಿ 4613ವಚನಅಮ್ಮ ರುಕ್ಮಿಣಿಯಮ್ಮ ಉಮ್ಮ್ಮಯವಟ್ಟುಮುಮ್ಮೊರದ ರತುನ ಮುತ್ತಿನ ಕಾಣಿಕಿಟ್ಟುಪರಬೊಮ್ಮಪ್ರಸನ್ವೆಂಕಟಕೃಷ್ಣನ ಅಡಿಗಳನಮ್ಮಿಸುತ ಮನೋರಥವÀ ಮನದಿ ಬೆಸಗೊಳ್ಳಲು 47ಉಂಡ ಊಟ ಕಂಡ ಕನಸು ಪುಂಡರೀಕಾಂಬಕಿಯೆತಂಡ ತಂಡದ ವಾರುತೆಗಳ ಪೇಳುವೆನು ಸಖಿಯೆಹಿಂಡುದೈವದಗಂಡಪ್ರಸನ್ವೆಂಕಟ ಕೃಷ್ಣನ ಕಣ್ಣಾರಕಂಡು ಸಾರುವಕೊರವಿಎಳ್ಳನಿತು ಸಟೆಯರಿಯೆ4815ಚೂರ್ಣಿಕೆಕಾಸಿನಾಸೆಯವಳು ನಾನಲ್ಲಭಾಷೆ ಹುಸಿದರೆ ಬಿರುದು ಬಿಸುಡುವೆನೆಲ್ಲಭಾಷೆ ಪಾಲಕರು ನಮ್ಮ ಸಿದ್ಧರೆಲ್ಲ ಲೇಸುಲೇಸೆಂದುಕೇಸಕ್ಕಿತಿಮ್ಮಯ್ಯನ ಬೆತ್ತವ ಮುಟ್ಟೆಲೆ ದುಂಡೆಎನ್ನ ಮನದ ದೈವ ಎನ್ನಕ್ಕ ಕೇಳೆಯವ್ವತಿರುಮಲೆ ತಿರುವೆಂಗಳಯ್ಯವರಅಹೋಬಲ ನರಸಿಂಗಯ್ಯಹರಿಕಂಚಿ ವರದರಾಜಯ್ಯಶಿರಿ ರಂಗದ ರಂಗರಾಯಯ್ಯಬದರಿಯ ನರನಾರಾಯಣಯ್ಯಪುಂಡರೀಕವರದ ಪಂಢರಿರಾಯ ಎಮ್ಮಉಡುಪ ಕುಲಜ ಮನ್ನಾರು ಕೃಷ್ಣಮ್ಮಒಡ್ಡಿಜಗನ್ನಾಥ ಅಲ್ಲಾಳನಾಥಯದುಗಿರಿನಾಥ ಶಿರಿಮುಷ್ಣನಾಥಕೃತಪುರದ ವೀರ ನಾರಾಯಣಕೊಲ್ಲಾಪುರದ ಕನ್ನೆ ವೇಲಾಪುರದ ಚೆನ್ನಅನಂತಶಯನ ಜನಾರ್ದನ್ನಅನವರತಪರಸನ್ನ ವೆಂಕಟ ಕೃಷ್ಣನ ಕನ್ನೆಇಂತಪ್ಪಾನೇಕ ದೈವ ಏಕವೆಂದು ಏಕಾನೇಕವೆಂದುನಂಬಿಪ್ಪೆನೆ ಕೇಳೆಯವ್ವ 4916ಇಂತಿಪ್ಪ ಎನ್ನ ಮನೆಯ ದೈವ ಅವರಂತವ ಬೊಮ್ಮರರಿಯರವ್ವ ವಿಶ್ರಾಂತಿಲಿ ಕೊಂಡಾಡುವೆನವ್ವ ನಾನುಕಂತುವಿನಣ್ಣನ ಮಗಳವ್ವ 50ಇಪ್ಪಲ್ಲಿಪ್ಪಕೊರವಿನಾನಲ್ಲ ಹೋಗಿಬಪ್ಪೆ ಹದಿನಾಲ್ಕು ಲೋಕಕೆಲ್ಲಛಪ್ಪನ್ನದೇಶಗಳ ಸುದ್ದೀನೆಲ್ಲಕೇಳಿಬಪ್ಪುವ ಕಜ್ಜವ ಕೃಷ್ಣ ಬಲ್ಲ 51ಆವಾವ ದೇಶದ ಸುದ್ದಿ ಕೇಳವ್ವ ನಿನ್ನಭಾವದ ಬಯಕೆಯನೆಲ್ಲ ಕೇಳವ್ವಶ್ರೀವರ ಪ್ರಸನ್ನವೆಂಕಟಾದ್ರಿ ಕೃಷ್ಣ ದ್ವಾರಕಿಂದಾವಾಗ ಬಪ್ಪನೆಂದು ಕೇಳವ್ವ 5217ಚೂರ್ಣಿಕೆಓಯಮ್ಮ ನಿನ್ನವರುಗಳು ಆ ಬಲಮಗು ಮದನಕಾಮಬುಡುಕ್ಕಾನೆ ಪರತಾನು ಚಿಂತಿಶೆ ಮಾಣಮ್ಮನಾ ತಿರುಕ್ಕಿ ವಂದ ದೇಶ ಐವತ್ತಾರು ಶೊಲ್ಲರೆಅಂಗ ವಂಗ ಕಳಿಂಗ ಕಾಂಬೋಜ ಭೋಟಕರ್ನಾಟಕ ಘೋಟ ಮಹಾಘೋಟಜಿನ್ನ ಮಹಾಜಿನ್ನ ಜೊನ್ನಗಕಾಶ್ಮೀರ ತುರುಷ್ಕಮಾಗಧಬಂಗಾಳ ಗೌಳ ಮಾಳವ ಮಲೆಯಾಳನೇಪಾಳ ಗೌಡ ಗುರ್ಜರ ಕೊಂಕಣದರ್ದುರಬರ್ಬರ ಸೌರಾಷ್ಟ್ರ ಮಹಾರಾಷ್ಟ್ರಸಂಬರ ಮುಂಗಿಳ ಘೋಟ ಮುಖಏಕಪಾದ ಸೌಳ ಸಂಸಾಳಕಆನರ್ತ ಹಮ್ಮೀರ ಕೊಮ್ಮೀರಮತ್ಸ್ಯಪಾಂಚಾಲರಾಜಶೇಖರ ವರಶೇಖರ ಯುಗಂಧರ ಮಧ್ಯದೇಶಲಂಬಕರ್ಣ ಸ್ತ್ರೀರಾಜ್ಯ ಆಂಧ್ರ ದ್ರವಿಡಅರವ ಕನ್ನಡ ತುಳುವ ತುಳಾಂಡಜಾಳೇಂದ್ರ ಕೈಕೇಯ ಕೌಸಲ ಕಂಚಿಕನೋಜ ಸವ್ವೀರಸಿಂಧುಕೇರಳವೈದರ್ಭ ದೇಶದೊಳ್ಕುಂಡಿನಾಪುರದೊಳ್ ನಿನ್ನಂ ಕಂಡುಮನದಂಡಲಿಕೆಗೆ ಸಾಗಿತ್ತೆನೆಲೆ ದುಂಡೆ 5318ಈ ನಾಡ ಚರಿಸಿ ನಿನ್ನರಸುತ ಬಂದೆನೆಜಾಣೆ ಬಂಗಾರವ್ವ ಕೈ ತೋರೆ 54ನಿನ್ನ ಕಾಣುತ ಹಸಿವೆ ನೀರಡಿಕೆಲ್ಲ ಹೋಯಿತುಜಾಣೆ ಬಂಗಾರವ್ವ ಕೈ ತೋರೆ 55ಸಂಧಾನಕ್ಹಾರುವನಟ್ಟಿದ್ದೆ ಮೊದಲಹುದೇನೆ ಮಂಗಳದೇವಿ ಕೈ ತೋರೆ 56ನೀ ಬರೆದೊಕ್ಕಣೆ ಯದುರಾಯನರಿತಾನುಸೌಭಾಗ್ಯವಂತೆ ಕೈ ತೋರೆ 57ರಥವನೇರಿಕೊಂಡು ಬರಹ ನೋಡಿಕೊಳ್ವಜಾಣೆ ಬಂಗಾರವ್ವ ಕೈ ತೋರೆ 58ಧ್ಯಾನದ ಕಳವಳ ಮುಸುಡುಗಂಟಿನ ಚಿಂತೆಮಾಣು ಮಂಗಳದೇವಿ ಕೈತೋರೆ 59ತ್ರಿಭುವನೇಶ ಪ್ರಸನ್ನವೆಂಕಟ ಕೃಷ್ಣತಾ ಬಹನೆಲೆ ದುಂಡಿ ಕೈ ತೋರೆ 6019ಚೂರ್ಣಿಕೆಎಲೆಲೆ ಎಳೆವೆಂಗಳೆ ಎಲೆ ಹುಲ್ಲೆಗಂಗಳೆಮಹಾಭೂಷಣದ ಮಾರುವೇಣಿ ಮಡದಿಯರಸುಪ್ಪಾಣಿಕೀರವಾಣಿ ಕಿಸಲಯಪಾಣಿಕಂಧಿಜ ಬಿಂಬವದನೆ ಕುಲಿಶಮಣಿರದನೆಮದನಕಾರ್ಮುಕೋಪಮ ಭ್ರೂಲತೆಯಳೆ ಮಹಾಲಕುಮಿಯಳೆಅರುಣವಿಧ್ರುಮಾಧರೆ ಅಬ್ಜಜಾ ಕಂಧರೆಅರ್ಧಚಂದ್ರನ ಪೋಲ್ವಡಿ ಪಣೆಯಳೆ ಅನಘ್ರ್ಯ ಚೂಡಾಮಣಿಯಳೆಸಿಂಧೂರಸೀಮಂತಿನಿಯೆಸಿರಿತಿಲಕದ ಶೋಭಿನಿಯೆನುಣ್ಗದಪುನಾಸಿಕಮಣಿಯಳೆ ನೂತನೊಜ್ರದೋಲೆಯಳೆನಿಷ್ಕ ಕಂಠಾಭರಣೆಯಳೆ ನಿತ್ಯಮಂಗಳ ಸೂತ್ರಿಯಳೆನಿಡುಜಾಲಕ ಮಾಲೆಯಳೆಬುಗುಡಿ ಚಳತುಂಬು ಕೊಪ್ಪಿನ ಕಿವಿಯಳೆಬಾವಲಿ ನಾಗೋತ್ರ ಪೊಂಬರಳೆಲೆ ಲಲಿತ ಬಾಹುಲತೆಯಳೆಲಸತ್ವನಜಕೋರಕ ಸ್ತನಿಯಳೆಕಡು ತೆಳ್ವೋದರಿ ನಿಮ್ನ ನಾಭಿಯಳೆಕಂಠೀರವಕಟಿಯಳೆ ಕರಭೋರು ಯುಗಳೆಯಳೆಅಪರಂಜಿಕಂಚುಕಾಂಬರ ಉತ್ತರೀಯಳೆಅಮೂಲ್ಯ ಕಾಂಚಿದಾಮಾಂಕಿತಳೆಬಟುಗನ್ನಡಿ ಜಾನುದ್ವಯಳೆ ಬ್ಞಣ ಪಂಚಕನ ಬತ್ತಳಿಕೆ ಜಂಘೆಯಳೆಕೋಮಲತರಾಂಘ್ರಿ ಸರಸಿಜಯುಗಳೆನೀಲಪಚ್ಚ ಪದ್ಮರಾಗ ಹೀರ ಮುತ್ತಿನ ಪೆಂಡೆಯಳೆಕಾಲಂದಿಗೆ ಮೆಂಟಿಕೆ ವೀರಮುದ್ರೆ ಕಿರಿ ಪಿಲ್ಲಿಯಳೆಮಣಿಮಯಾಂಗುಲ್ಯದ ವಲಯಾಭರಣೆ ಮದಗಜಗಮನೆಪ್ರತಿಯಿಲ್ಲದ ರನ್ನದ ಬೊಂಬೆ ಪರಬೊಮ್ಮನ ಪಟ್ಟದ ರಂಭೆಬಾಬಾ ತಾತಾ ಎಂದು ವಾಮಕರವಬೇಡಲಿತ್ತಳಾ ರುಕ್ಮಿಣಿ ತಾಯಿ 6120ಜಗದ ನಾರಿಯರ ಕೈಗಳ ಕಂಡೆನವ್ವಮೃಗಮದಗಂಧಿ ನಿನ್ಹೋಲ್ವರಿಲ್ಲವ್ವ 62ಯುಗಯುಗಾಂತರ ದೇಶ ದೇಶದಲ್ಲವ್ವಅಗಲ್ಯಾಟವಿಲ್ಲ ನಿನ್ನರಸ ನಿನಗವ್ವ 63ಸವತೇರು ಬಹಳುಂಟು ನೆಂಟರ ಜಾಣೆ ಎಲೆ ಬೀಗರ ಸುಗುಣೆಯುವತಿ ಪ್ರಸನ್ವೆಂಕಟ ಕೃಷ್ಣ ನಿನ್ನ ಪ್ರಾಣ 6421ಕಣಿ ಕೇಳೆ ಕಣಿ ಕೇಳೆ ಕಣಿ ಕೇಳೆ ಚೆಲ್ವೆಕಣಿ ಕೇಳೆ ನಿನ್ನ ಮನದಾ ಮಾತ್ಹೇಳ್ವೆಎಣಿಕೆಗೊಳ್ಳದಿರಮ್ಮಇಂದುನಾಳೆಂದುಗುಣನಿಧಿ ಗೋಪಾಲ ಬಹ ದಯಾಸಿಂಧು 65ತ್ರುಟಿಯುಗವಾಗಿದೆ ನಿನಗೀಗ ಮುಗ್ಧೆಕುಟಿಲಮಾಗಧಸಾಲ್ವ ನೆನೆವ ದುರ್ಬುದ್ಧೆಘಟಿಸದೆಂದಿಗೆ ಖಳರ ಮನೋರಥ ಸಿದ್ಧೆದಿಟವೆನ್ನವಾಕುಸುರಲೋಕ ಪ್ರಸಿದ್ಧೆ66ಹಿಂದೊಮ್ಮೆ ಖಳರು ಗೋವಿಂದ ಬಂದಾಗಮಂದಮತಿಯಲಿ ಮನ್ನಿಸದಿರಲಾಗಇಂದ್ರ ಸಿಂಹಾಸನವ ಹರಿಗೆ ಕಳುಹಿಸಿದವೃಂದ ದೈತ್ಯರಿಗೆಲ್ಲ ಭಯವ ಸೂಚಿಸಿದ 67ಜಂಭಾರಿಕುಲಿಶಕಂಜುತ ಪೋಕರೆಲ್ಲಥಂಬಿಸಿದರು ವಾಗಾಡಂಬರವೆಲ್ಲಅಂಬುಜಾಕ್ಷಗೆ ನಿನ್ನತಾತಪೂಜಿಸಿದಅಂಬುಜನಾಭ ತನ್ನೊಳುವಿಶ್ವತೋರ್ದ68ಅದನೆಲ್ಲ ಬಲ್ಲ್ಯವ್ವ ಹರಿಯ ನಿಜನಲ್ಲೆಬೆದರಿದೊಲ್ಲೋರ್ವ ನಿನ್ನ ಮಾಯವ ಬಲ್ಲೆಪದುಮಜ ಭವರ ಹೃದಯಾಬ್ಜ ನಿಯಂತ್ರೆಉದಧೀಶನಾಜÕದಿ ಸರ್ವಸ್ವತಂತ್ರೆ 69ಕೇಳಮ್ಮ ನಿನ್ನ ಹೆತ್ತವರಿಗೆ ನಿನ್ನಮೇಲೆ ಹಂಬಲ ಬಹಳ ಪಾಪಿ ನಿಮ್ಮಣ್ಣಆಲೋಚನೆಯಿಲ್ಲದೆ ನಿಶ್ಚೈಸಿದ್ದಾನೆ ಶಿಶುಪಾಲಗೆ ನಿನ್ನ ಕೊಡುತೇನಂತೈದಾನೆ 70ಆಗಲ್ಯಾಕವನಿಂದಲೀಕಜ್ಜ ಬುರ್ರಾಬೇಗ ಭೀಷ್ಮಕನಂತರ ಬಲ್ಲ ಶ್ರೀಧರ್ರಾಸಾಗರಶಯನ ತಾ ಸಮಯಕೈತರುವನೇಗಿಲಧರನು ಕೃಷ್ಣನ ಕೂಡ ಬರುವ 71ಆ ಗೌರಿ ಮೌನಿಯೆಂಬುವಳ ಪೂಜೆಯಲಿಯೋಗವಾಗಿದ್ರ್ದಾ ಕಾಪುರುಷ ಸಭೆಯಲ್ಲಿಮೇಘಮುಸುಕಿರ್ದ ಚಂದಿರನಂತೆ ನಿನ್ನಯೋಗೇಶ ಪ್ರಸನ್ವೆಂಕಟ ಕೃಷ್ಣ ನೊಯ್ವ ಚೆನ್ನ 7222ಇನಿತೆಲ್ಲ ಕೊರವಂಜಿಕರವಪಿಡಿದು ಹೇಳಿಕ್ಷಣ ಕ್ಷಣಕೊಡೆಯನ ಹೊಗಳಿನೆನಪಿಗೆ ಬೆಸಗೊಂಬೆ ಕಾಲಜ್ಞಾನದ ವಾರ್ತೆಎನಗೆ ತಿಮ್ಮಯ್ಯ ಹೇಳೆಂದು 73ಶ್ರೀ ರುಕ್ಮಿಣಿಯ ಮನದುಲ್ಲಾಸವನೆಲ್ಲಪೂರೈಸುವೆನೆಂಬ ನುಡಿಯತೋರು ಎನ್ನಯ ನಾಲಿಗೆಯಿಂದಲುಸುರುವೆವೀರ ದ್ರಾವಿಡ ವೆಂಕಟಯ್ಯ 74ಶರಣ್ಯೆಲೆ ಸತ್ಯನೆ ಶರಣ್ಯೆಲೆ ನಿತ್ಯನೆಶರಣು ಶರಣು ನಿತ್ಯಮುಕ್ತಶರಣು ಪರೇಶನೆ ಶರಣು ಅವಿನಾಶನೆಶರಣು ಪ್ರಸನ್ವೆಂಕಟ ಕೃಷ್ಣ 7523ವಚನಓ ರುಕ್ಮಿಣಿ ತಾಯಾರೆಉನ್ನ ಮನಸಿಲೆ ನಿನೈಚ್ಚ ಕಾರ್ಯಂ ಕೈಕ್ಕೂಡಿನಾಲ್ಎನಕ್ಕೆ ಎನ್ನ ಸಂತೋಷಂ ಪಣ್ಣಿರಾಯ್ಓಯಮ್ಮ ಉನ್ ಪ್ರಾಣನಾಯಗನ್ ಶ್ರೀಕೃಷ್ಣನ್ ವಂದುಪೊಟ್ಟಣೆ ಕೈ ಪಿಡಿಚ್ಚಿ ಕಲ್ಯಾಣಂ ಪಣ್ಣಿಕೊಳ್ಳರಾಂಇಂದ ವಾರ್ತೆ ತಪ್ಪಿನಾಲ್ ನಾಂ ಕೊರ್ತಿಯೇ ಅಲ್ಲೆಉನ್ ತಮಯನ್ ರುಗ್ಮಂ ವೇಕ್ಕತ್ತೆ ಕೊಲ್ಲರಂ ವರಾನುಓಯಮ್ಮ ಇಂದ ವಾರ್ತೆಯೈ ಪಣ್ಣಿಕೋ ಅª, À್ಮು 7624ಮದ್ಯಪಾನಿತಾಮಸಯವನನ ಕೊಲಿಸಿದನೆನಿದ್ರೆಗೈವ ರಾಯನಿಂದಲಿಸದ್ದಿಲ್ಲದೆ ಮಧುರೆ ಜನರ ಸಾಗರದಮಧ್ಯ ದ್ವಾರಕೆಯಲ್ಲಿಟ್ಟನೆ 77ಯವನ ಸೈನ್ಯಜಲಧಿಬತ್ತಿಸಿ ಸಾಲ್ವಾದ್ಯರಹವಣಮುರಿದು ನಿಜರ ಹೊರೆವನು ನಿನ್ನವಿವಹ ಮಾಳ್ಪೆನೆಂಬ ಮಾಗಧನು ಚೈದ್ಯ ತನ್ನಕುವರನೆಂದು ಮಾನವಿಡಿದಿಹ 78ಇನಿತರೊಳು ರಂಗರಾಯನು ಮೋಹರದಿಮಣಿರಥವನೇರಿ ಬಹನುವನಿತೆ ನಿನ್ನಂದಣವ ನೋಡುತ ಜಿಗಿವನಲ್ಲಿಂದ ಘನತರ ಮೃಗೇಂದ್ರನಂದದಿ 79ನರಿಯ ಹಿಂಡಿನೊಳಗಿನಾನೆಯ ಒಯ್ವ ತೆರದಿಹರಿನಿನ್ನಪ್ಪಿಕೊಂಡುಹಾರುವಗರುಡನಮೃತ ಕಲಶವ ಸುರರ ಗೆದ್ದುಹರುಷದಿಂದೊಯ್ಯುವಂತೆ ಒಯ್ವನು 80ಸರಸಿಯಾಬ್ಜ ಹಂಸ ಒಯ್ವವೋಲ್ ಪರಮಪುರುಷತ್ವ, ರಿಯ ತನ್ನ ರಥಕೆ ಒಯ್ವನೆಬರಿಯ ದುಗುಡವ್ಯಾಕೆ ಬಾಲಕಿಪ್ರಸನ್ವೆಂಕಟ ಕೃಷ್ಣ ನಿನ್ನ ಮೆಚ್ಚುಗಾರನೆ 81ಬಂದನೆಂಬ ನುಡಿಯು ಬರುತಿದೆಜವದಿಕೃಷ್ಣಬಹನೆಂಬ ನುಡಿಯು ಬರುತಿದೆ 8225ಚೂರ್ಣಿಕೆನೀಡೆಯವ್ವ ಎನ್ನ ಮನೆ ಗಂಡನ ಕಾಟ ಘನ್ನವವ್ವಕ್ಷಣಕೈದು ನಡೆಯವನವ್ವಒಮ್ಮಾನ ತಿರಿತಂದರೆ ಇಮ್ಮಾನ ಬೇಡುವನವ್ವಚೆಂಬಣ್ಣ ಕರಿಬಿಳಿಯಬಟ್ಟೆನಮ್ಮತ್ತೆಗಳವ್ವಆರು ಮಂದಿ ಗಂಡನ ಗೆಳೆಯರವ್ವಏಳು ಪದರು ಮೂರು ತ್ಯಾಪೆ ಗುಡಲುಂಟವ್ವಎಪ್ಪತ್ತೆರಡು ಸಾವಿರ ನುಲಿಯ ಸಿಂಬಿಗಳವ್ವಗುಡಲೊಳು ಮೂರು ಒಲೆಯುಂಟವ್ವಗುಡಲು ಬಿದ್ದರೆ ನುಲಿಗೆ ಮಾರ್ಯೆವ್ವಒಂಬತ್ತು ಗುದ್ದಿನೊಳಗೆ ಹತ್ತು ಹೆಗ್ಗಣದೋಡ್ಯಾಟವವ್ವಕೊರವನ ಕೈಯಿಚ್ಛೆ ಮೂರು ನಾಯಿಗಳವ್ವಎಣಿಕಿಲ್ಲದ ಕುತ್ತಗಳುಂಟವ್ವಕೊಬ್ಬಿನ ಸವತೇರೆಂಟು ಮಂದಿ ಕೊರವಗೆ ಮಚ್ಚೂಡುವರವ್ವಸಂಸಾರದಲೆಳ್ಳನಿತು ಸುಖವಿಲ್ಲವ್ವಅತ್ತೆಗಳಾಟ ಗಂಡನ ಬ್ಯಾಟ ಸವತಿಯರ ಕಾಟನೆರೆಹೊರೆಯವರ ನೋಟ ಮನೆಯ ಮಾಟಗತರಸದೂಟಕಂಜಿ ನಡುನಡುಗಿಮೂರೂರ ಹಾದಿ ಮೆಟ್ಟಿ ಬಂದುಆರೂರರಸಿನ ಮೊರೆ ಹೊಕ್ಕೆನೆಯವ್ವವಿದರ್ಭದೇಶದ ಕುಂಡಿನಾಪುರದೊಳು ನಿನ್ನ ಗುರುತಕೇಳಿಉಪವನದ ಪ್ರದ್ಯೋತನಾಳ್ವ ಎರಡು ಬಾವಿಯ ಮ್ಯಾಗಣಹೂವಿನ ತೋಟದ ನಡುವೆ ಬುತ್ತಿಯನುಂಡು ನಿನ್ನ ಕಂಡುಕುಂತಳಾಪುರದಲ್ಲಿ ಕುಳಿತುಂಬಬ್ರಹ್ಮಾನಂದದವರ ಭಾಗ್ಯವ ಬೇಡ ಬಂದೆನೆ ಅವ್ವಅಸುವಿಗೆ ಹಾಲನೆರೆಯವ್ವಶಿಶುವಿಗೆನವನೀತನೀಡೆಯವ್ವಬಂಗಾರೆವ್ವ ಸಿಂಗಾರೆವ್ವ ಸೋರ್ಮುಡಿಯವ್ವಮಲ್ಲಿಗೆದುರುಬು ಸಂಪಿಗೆದುರುಬುಪಚ್ಚೆ ಮರುಗ ಮುಡಿವಾಳ ಶಾವಂತಿಗೆ ತುರಬಿನವ್ವಪ್ರಸನ್ವೆಂಕಟಕೃಷ್ಣನ ತೋಳ್ತಲೆಗಿಂಬಿನವ್ವ ನೀಡೆಯವ್ವ 8326ವಚನಇಂತಾಧ್ಯಾತ್ಮವಂ ಪೇಳಿಕಂತುವಿನಯ್ಯನ ಕಾಂತೆಯಂ ಸಂತಸಪಡಿಸಿಅಂತರಂಗದಿ ಚಿಂತಾಯಕನಂ ನೆನೆನೆನೆದುಭ್ರಾಂತಿ ಪರವಶಾದಂತೆ ಕೆಂಜೆಡೆಯಂ ತೂಗಿ ತೂಗಿಅಂತದತ್ಯಂತ ತೂಳಂತುಂಬಿಇಂತೆಂದಳಾ ಕೊರವಂಜಿ 8427ಬರುತಾನೆ ಜಾಣೆ ಬರುತಾನೆಬರುತಾನೆ ಚೆಲ್ವೆ ಬರುತಾನೆ 85ಹಿಂಡುಭಂಡರೆಲ್ಲ ಕೂಡಿ ನಿನ್ನ ಮುಚ್ಚಲು ಎತ್ತಿಕೊಂಡು ಒಯ್ವ ಜಾಣ ಬರುತಾನೆಪುಂಡರೀಕಸುರಗಿ ಖಡ್ಗ ಭಿಂಡಿವಾಲ ನುಗ್ಗುಮಾಡಿದಂಡಿಸುವ ಜಾಣ ಬರುತಾನೆ 86ಕುಂಡಿನಾಪುರದಿ ನೆರೆದ ಕೊಂಡಿ ಕುಹಕರ ತಲೆಯಚಂಡನಾಡ್ವ ಜಾಣ ಬರುತಾನೆಮಂಡೆಯಲ್ಲಿ ಪಚ್ಚಚೂಡವಿಟ್ಟು ರುಕ್ಮನಭಿಮಾನಕೊಂಡೇನೆಂಬ ಜಾಣ ಬರುತಾನೆ 87ತಂಡ ತಂಡದಲ್ಲಿ ನಿನ್ನಯ್ಯನ ಸದ್ವಾಸನನ್ನಉಂಡೇನೆಂಬ ಜಾಣ ಬರುತಾನೆಲೆಂಡದಾನವಾರಿ ಪ್ರಸನ್ನವೆಂಕಟಕೃಷ್ಣ ಬೊಮ್ಮಾಂಡಪತಿ ಜಾಣ ಬರುತಾನೆ 8828ಚೆನ್ನೆ ಕೊರವಂಜಿ ಮಾತು ಶ್ರೀಕನ್ಯೆಕೇಳಿನಲಿವಾಂತುಮನ್ನಿಸಿ ಗುಣವ ಕೊಂಡಾಡಿ ಮುಕ್ತಿರನ್ನಗಾಣಿಕೆಯನು ನೀಡಿ 89ಎಲೆ ಸತ್ಯಲೋಕದ ಕೊರವೆ ನೀಬಲು ಸತ್ಯ ನುಡಿದೆ ನಾನರಿವೆಛಲದಂಕ ದೇವರದೇವ ಈಖಳರೊಳು ಒಯ್ವುದರಿದವ್ವ 90ಹರಿರಥವೇರಿ ಬಾಹೋಣ ಕಾಪುರುಷರ ಮತ ಕೆಡಿಸೋಣಗುರುಪ್ರಸನ್ವೆಂಕಟ ಕೃಷ್ಣ ಬಂದುಹೊರೆವುದುಂಟೇನವ್ವ ರಮಣಿ 9129ನಂಬಲೇನೆ ನಿನ್ನ ಮಾತು ಕೆಳದಿ ಕೊರವಮ್ಮ ನಮ್ಮಂಬುಜಾಕ್ಷ ಬಾಹನೇನೆ ದೇವಿ ಕೊರವಮ್ಮ 92ಉಡಿಯ ಕಂದನಾಣೆ ಇಡುವೆ ನಂಬೆ ರುಕ್ಮಿಣಿ ನಾನುಡಿವ ನಾಮದಾಣೆ ಇಡುವೆ ನಂಬು ರುಕ್ಮಿಣಿ 93ಎಡದ ತೋಳು ತೊಡೆಕಂಗಳುಹಾರಲೊಳಿತೇನೆ ಚಿಲಿಪಿಲಿನುಡಿವಶಕುನಎಡದ ಗೌಳಿಯ ನುಡಿಯು ಒಳಿತೇನೆ94ಕಡಲಶಯನ ನಿನ್ನ ಪ್ರಾಣದೊಡೆಯ ಬಪ್ಪನೌ ಎನ್ನಪಡೆದನಯ್ಯ ಪ್ರಸನ್ನವೆಂಕಟಕೃಷ್ಣ ತಪ್ಪನೌ 9530ನಿನ್ನಗಂಡಬೆಣ್ಣೆಗಳ್ಳ ಕನ್ನೆಗೊಲ್ಲತಿಯರ ನಲ್ಲಕಣ್ಣೆವೆ ಸನ್ನೆಗಾರ ನಂದಗೋಪ ಕುಮಾರ 96ಚಿನ್ನತನದಿ ದಶಲಕ್ಷ ಚಿನ್ನರ ಪಡೆದನು ದಕ್ಷಪೊನ್ನ ಕೊಳಲನೂದಿ ಮೂಜಗವ ಮೋಹಿಸುವ 97ಉನ್ಮತ್ತಮಾತುಳನ್ನ ತುಳಿದ ತನ್ನ ಪೆತ್ತವರೆಡರ್ಗಳೆದಮನ್ನಿಸಿ ಪಾಂಡವರÀ ಪೊರೆದ ಚಿನ್ಮಯ ಸುಖದ 98ಪೆಣ್ಗಳ್ ಹದಿನಾರುಸಾವಿರದ ನೂರೆಂಟನಾಳ್ವ ಚದುರನಿನ್ನ ಪ್ರಾಣ ಪ್ರಿಯ ಬಂದ ಪ್ರಸನ್ನವೆಂಕಟ ಕೃಷ್ಣ ಮುಕುಂದ 9931ನುಡಿ ನುಡಿಯೆಲೆ ಬಡನಡುವಿನ ಮಡದಿ ನಿನ್ನುಡಿಗುಚಿತವಕೊಡುವೆನಡಿವಿಡಿವೆ ಮನವಿಡುವನೆ ಕಡಲೊಡೆಯ ಕೈವಿಡಿವನೆ ಎನ್ನ ಕಡೆಯ ನೋಡಿ ನುಡಿವನೆ ಸವಿನುಡಿಯಕಡು ಬಲಿಭುಜ ಗಡಣಂಗಳ ನಡುವ್ಹಂಸನಪಡಿಮಿಡುಕುವೆನುಡಿ ಬೇಗೆಂದು ಪಡೆಗೂಡಿ ಹಲಿಯೊಡನಾಗಮ ನುಡಿಯೇ ನಿನ್ನುಡಿಗಮೃತವ ಪಡೆಯೇ ಮತ್ತೀಜಡಜಡಿ ಲೋಕೊಡೆಯೆ ಪ್ರಸನ್ನವೆಂಕಟ ಕೃಷ್ಣರಾಯನನುಡಿಯೆಲೆ ನುಡಿನುಡಿಯೆ ನುಡಿನುಡಿಯೆ 10032ಹರಿಬರುತಾನೆ ಗುರುತು ಗಂಟ ಕಟ್ಟೆಪಕೇಳೆ ನರಸಿಂಗನಂಗನೆಯನೊಯಿದು ಕೆಟ್ಟನರಿಗಳಾಳಬಲ್ಲವೇನೆ ನಲಿದು ನೀನುದುರುಳರಿಗೆ ದಕ್ಕಬಲ್ಲ್ಯೇನಮ್ಮ ನಿನ್ನಾಚರಣೆಯೆಲ್ಲ ಜಗದ್ವಿಡಂಬನಮ್ಮ 101ನನ್ನ ತರಳನಾಣೆ ಸಟೆಯನಾಡೆನಮ್ಮ ನಾನೊರೆದವಾಕುಸಾಕ್ಷಿ ಬರುತಾವಮ್ಮ ಮ್ಯಾಲರಕೆಯುಳ್ಳ ತಾಯಿಯಾದರೆ ನೀ ನನ್ನಕರೆಸಿ ಕೇಳೆ ನಿನ್ನ ಮನೆಗೆ ಜಾಣೆ 102ನಿನ್ನ ಹೆಸರ ತಕ್ಕ ಊಟವ ನೀಡೀಗ ನಾಹಸಿದೆನೆಂದು ಉಂಡುಕೊರವಿಬೇಗಪ್ರಸನ್ನವೆಂಕಟ ಕೃಷ್ಣನ ರಾಣಿಗೆÉ ಹಾರೈಸಿದಳು ಬಸುರು ಬುಡುಕೆಂದು 10333ಚಕ್ಕನೆ ನಿಂತಳು ಕೊರವ್ಯಮ್ಮ ಕಂಡುಫಕ್ಕನೆ ನಿಂತಳು ರುಕ್ಮಿಣಮ್ಮ ಪ್ರಾಣದಕ್ಕರ ಬಿಡಲಾರೆ ನಿನ್ನ ಗೆಳತಿ ಪ್ರೇಮಉಕ್ಕುತಿದೆ ನೀ ಹೋಗುವುದೊಳಿತೆ ಎನಲು ನಕ್ಕು 104ಶ್ರೀ ಗೋಪಾಲ ಬಾಹನಕ ನಿಲ್ಲೆ ವಿಯೋಗ ತಾಳಲಾರೆ ನೀ ಬಲ್ಲೆಹೀಗೆನೆÀ್ನ ಬೇಡಿಕೊಂಡಳು ಮರುಳೆ ನೆನೆದಾಗೆ ಬಹೆನೆಂದ್ಹೇಳಿ ತೆರಳೆ ಅನುರಾಗದಿಂದ 105ಆವ ಪರಿಂದಾರೆ ಹರಿಸೇವೆ ಮಾಡಿದೇವಋಷಿ ನಿಜಾನಂದ ತೀವಿಶ್ರೀವರ ಪ್ರಸನ್ವೆಂಕಟ ಕೃಷ್ಣನ ಮಹತೇವಿಡಿದು ಹೊಗಳುತ ಮುನಿರನ್ನ ರಾಮೆಯಾಜÕದಿ 10634ಸುರಋಷಿಪೇಳ್ದ ಒಕ್ಕಣೆಯಹರುಷದಿ ಕೇಳ್ದ ರುಕ್ಮಿಣಿಯಅರಸ ಪ್ರಸನ್ನವೆಂಕಟ ಕೃಷ್ಣನಿರುತದಿ ಜಯ ನಮಗೀವ 107ಜಯ ಜಯ ಚಿನ್ಮಯಮೂರ್ತಿಜಯ ಜಗನ್ಮಯ ಸ್ವಚ್ಛಕೀರ್ತಿಜಯ ಜಯ ಪ್ರಸನ್ವೆಂಕಟ ಕೃಷ್ಣಜಯಮೂರ್ತಿನಿನಗೆ ಶರಣು108
--------------
ಪ್ರಸನ್ನವೆಂಕಟದಾಸರು