ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಕುಲವೊ ರಂಗ ಅರಿಯಬಾರದು ಪ. ಆವ ಕುಲವೆಂದರಿಯಬಾರದು ಗೋವುಕಾವ ಗೊಲ್ಲನಂತೆಪಾರಿಜಾತದ ವೃಕ್ಷÀವ ಸತ್ಯಭಾಮೆಗೆ ತಂದಿತ್ತನಂತೆ ಅ.ಪ. ಗೋಕುಲದಲ್ಲಿ ಪುಟ್ಟಿದನಂತೆ ಗೋವಳರೊಡನೆ ಆಡಿದನಂತೆತಾ ಕೊಳಲನೂದಿ ಮೃಗಪಕ್ಷ್ಷಿಗಳ ಮರುಳುಮಾಡಿದ ದೇವನಂತೆ 1 ಕಾಲಲ್ಲಿ ಶಕಟನ ಒದ್ದನಂತೆ ಗೂಳಿಯ ಕೊಂಬ ಕಿತ್ತನಂತೆಕಾಳಿಂಗನ ಹೆಡೆಯ ತುಳಿದು ಬಾಲೇರಿಗೊಲಿದ ದೇವನಂತೆ2 ಗೊಲ್ಲತೇರ ಮನೆಗಳಲ್ಲಿ ಕಳ್ಳತನವ ಮಾಡಿದನಂತೆಮೆಲ್ಲನೆ ಪೂತನಿ ಅಸುವ ಹೀರಿ ಬಲ್ಲಿದ ಕಂಸನ ಕೊಂದನಂತೆ 3 ಸರ್ಪ ತನ್ನ ಹಾಸಿಗೆಯಂತೆ ಪಕ್ಷಿ ತನ್ನ ವಾಹನವಂತೆÀರ್ಪಭೂಷಣ ಮೊಮ್ಮಗನಂತೆ ಮುದ್ದುಮುಖದ ದೇವನಂತೆ4 ತರಳತನದಿ ಒರಳನೆಳೆದು ಮರನ ಕೆಡಹಿ ಮತ್ತವರ ಸಲಹಿದುರುಳ ರಕ್ಕಸರನು ಕೊಂದ ಚೆಲುವ ಹಯವದನನಂತೆ 5
--------------
ವಾದಿರಾಜ
ಕರುಣಿಸೆನ್ನ ಗುರು ಮಂತ್ರಾಲಯ ನಿಲಯಾ ಶ್ರೀ ನರಹರಿ ಗತಿ ಪ್ರೀಯಾ ಪ. ಹರಿಶಯ ಮರುತರ ಆವೇಶಕೆ ನಿಲಯಾ ನಂಬಿದೆ ಶುಭಕಾಯಾ ಅ.ಪ. ತರಳತನದಿ ಶ್ರೀ ನೃಹರಿ ಶಾಂತನಾಗೇ ಸುರರೆಲ್ಲರು ನಿಮಗೇ ಎರದÀು ಕೀರ್ತಿ ಹಿರೆತನವಹಿಸಿದ ರಾಗೇ ಅದರಂದದಿ ಈಗೇ ವರ ಯತಿಗಳು ಹರಿದಾಸರು ವಂದಾಗೇ ಅಘ ನೀಗೇ ಧರೆ ಕಲ್ಪ ಧ್ರುಮವೆಂದು ನಿಮ್ಮ ಬಳಿಗೇ ವಪ್ಪಿಸುವರು ಅಡಿಗೇ 1 ಎಮ್ಮ ಗುರುಗಳಿಂದ್ಹೇಳಿದ ನುಡಿ ಮರೆದೇ ನಿಮ್ಮಡಿಗೆರವಾದೇ ಸಮ್ಮತದಲಿ ಮೃತ್ತಿಕೆಯನು ಸೇವಿಸದೇ ಹಮ್ಮಿನಲಿ ಮೈಮರೆದೇ ನಿಮ್ಮ ಸುಕೀರ್ತಿಯ ತಿಳಿಸು ತಿಳಿಯದಾದೇ ಅತಿ ಭಕ್ತಿಯ ಜರಿದೇ ನಿಮ್ಮ ಕರುಣವಿರಲದರಿಂದೀಗರಿದೇ ತನುಮನವಪ್ಪಿಸಿದೇ 2 ಕೃತಿ ದ್ವಿದಳಾತ್ಮಕದಪರಾಧ ಪಡಿಸಿತು ಬಹು ಬಾಧ ಸಂದಿತು ಕಾಲವು ಮುಂದರಿಯುವ ಮೋದ ಸಂದಿಸಿತುತ್ಸಹದಾ ನಂದಕೆ ಕಲಿ ಮಲ ತೊಳೆಯಲು ಮೌನದಾ ಪರಿ ಅರಿತೆ ಸುಭೋಧಾ ಕುಂದೆಣಿಸದೆ ಪೊರೆದೆನ್ನ ನಿಮ್ಮಗಾಧಾ ಕೃಪೆತೋರಲು ಬಹು ಮೋದಾ 3 ಎಲ್ಲಿ ನೋಡಲಲ್ಲಲ್ಲಿ ನಿಮ್ಮ ವಾಸಾ ಪುರಗಳು ಜನ ತೋಷಾ ಸೊಲ್ಲು ಸೊಲ್ಲಿಗೇ ನುತಿಪ ಗಾನ ಘೋಷಾ ಮಹಿಮೆಗಳ ಪ್ರಕಾಶ ವಲ್ಲದಾಯಿತ್ಯಾತಕೊ ಎನಗಭಿಲಾಷಾ ಬಲ್ಲವರೀಪರಿ ಮಾಡುವರೇ ಮೋಸಾ ಸದ್ಭಕ್ತರಲಾಭಾಸಾ 4 ಒಂದು ದಿನದ ಮೃತ್ತಿಕೆ ಜಲ ಸೇವಿಂದ ಪೊಂದಿದೆ ನಿಮ್ಮ ಪದಾ ಒಂದಾಗಲಿ ಗುರುವೆನಿಸಿದರೆಲ್ಲರದಾ ಮನವಮ್ಮನ ವಾದಾ ನಂದವು ಶ್ರೀ ನರಹರಿ ತಾ ಪರಿಕಿಸಿದಾ ನಂದವು ಬಹು ಮೋದಾ ಸಂದಲಿ ಗೋಪಾಲಕೃಷ್ಣವಿಠಲನಿಂದಾ ಎಣಿಸದೆ ಬಹು ಕುಂದಾ 5
--------------
ಅಂಬಾಬಾಯಿ
ತೆರಳೆ ನೀ ಮಧುರೆಗೆ ಗೋಕುಲದಲಿ ನಾವುಇರಲಾರೆ ಇರಲಾರೆವೋ ಗೋಪಾಲ ಪ ತರಳತನದಿ ನೀ ಆಡಿದ ಆಟಗಳ ಸ್ಮರಿಸಿಸ್ಮರಿಸಿ ನಾವು ಮರುಗುವುದೆಲೋ ದೇವಅ.ಪ. ವ್ರಜದ ಒಳಗೆ ನೀನು ಇದ್ದದ್ದು ಕೇಳಿಭರದಿ ಪೂತನಿಯ ಕಳುಹಿ ಕೊಟ್ಟರೆತೊಡೆಯ ಒಳಗೆ ಇಟ್ಟು ಸ್ತನಕೊಡುತಿರಲವಳಹುಲಿಯಂತೆ ಹೀರಿ ಹಿಪ್ಪೆಯಮಾಡಿದೆಯೊ ದೇವ ತೃಣದ ಅಸುರನ ಕೊರಳಮಿಸುಗುತ್ತ ಅವನ ಕೆಡಹಿದಿಭರದಿ ಬಂಡಿಯ ಒದ್ದು ಶಕಟನ ಪುಡಿಯಮಾಡಿದ ಪರಮ ಪುರುಷನೆ 1 ಕೊಲ್ಲಕಂಸನು ಭಾಳ ಯೋಚಿಸಿ ಮನದಿಕೊಲ್ಲಬೇಕೆಂದೆನುತ ಸೂಚಿಸೆಬಿಲ್ಲನೆ ಮುರಿದು ಆ ನಲ್ಲೆಯ ಕರಪಿಡಿದುಒಳ್ಳೆ ಪುರಕೆ ಹೋಗಿ ಎಲ್ಲ ಕಾರ್ಯವ ನಡೆಸಿಮೆಲ್ಲನೆ ಏಕಾಂತ ಗೃಹದಲ್ಲಿಸೊಲ್ಲ ಕೇಳುತ ಅವನನು ಕೋಪಿಸೆಅಲ್ಲಿಯನುಜನ ತರಿದು ಅವನಕೊಲ್ಲ ಕಳುಹಿದ ಕಠಿನ ಹೃದಯನೆ2 ಎಲ್ಲ ಹಿಂದಿನ ಸುದ್ದಿ ಬಲ್ಲೆವೊ ನಾವುಇಲ್ಲಿ ಮರೆತೀಯೆಂದು ತಿಳಿದೆವೋಬಲ್ಲ ಅಕ್ರೂರನು ಬಂದು ಇಲ್ಲಿಗೆ ನಮ್ಮಇಲ್ಲದ ಮಾತ ಕೇಳಿ ಮೆಲ್ಲನೆ ಕರೆದೊಯ್ದಅಲ್ಲಿ ರಥವನೆ ಕಾಣುತ ಎದೆಝಲ್ಲೆನಿಸಿ ನಡುಗಿದೆವೊಪುಲ್ಲನಾಭನೆ ಜ್ಞಾನ ಭಕುತಿ ನ-ಮ್ಮೆಲ್ಲರಿಗೆ ನೀನಿತ್ತು ಪೋಗೆಲೊ 3 ಹೆಂಡತಿಯ ಕೂಡಿ ಕದನ ಮಾಡಿಮುಂದೆ ಮೂವರು ತೆರಳಿದಿರಿಬಂದು ಋಷಿಯಾಶ್ರಮದಿ ನಿಂತು ಗ್ರಾಸವ ಬೇಡೆಮಂದಗಮನೆ ನೋಡಿ ಚೆಂದಾಯಿ -ತೆಂದೆ ತಂದು ಕಲಶೋದಕವ ಚೆಲ್ಲಲುಕಂದರುಗಳು ನೀವಾದಿರೊ ತಂದ ಹಲಸಿನ ದೊನ್ನೆ ಪಾಲನುಚೆಂದದಿಂದಲಿ ಕುಡಿದ ದೇವನೆ4 ಮಂದಗಮನೇರಿಂದ ನಿಮಗೆ ಮತ್ತೆಒಂದುಪಕಾರವ ಕಾಣೆವೊಚೆಂದಾಗಿ ಮಾನದಿ ಮಂದಿರದಲಿ ಇರದೆಗಂಡರ ಬಿಟ್ಟು ನಿಮ್ಹಿಂದೆ ತಿರುಗಿದೆವೊಇಂದಿರೆಯು ಕಾರಣಗಳಲ್ಲವೊನಿಂಗೆ ನೀನೆ ಸ್ವರಮಣನಂಮಂಗಳಾಂಗನೆ ಮಾರಜನಕನೆರಂಗವಿಠಲನೆ ರಾಜೀವಾಕ್ಷನೆ5
--------------
ಶ್ರೀಪಾದರಾಜರು
ನಾಗವೇಣಿಯೆ ಕರೆದು ತಾರೆ ನಾಗಶಯನನಾ ಪ ನಗಧರ ಪ್ರಿಯನೆನಿಪ ನಾಗವರದನಾ ಅ.ಪ ಜಲವಪೊಕ್ಕು ತಮ ನಲಿದ ಜಲರುಹಾಕ್ಷನಾ ಜಲಧಿ ಮಥನವನ್ನು ಗೈದ ಚೆಲುವರರಸನಾ 1 ಧರಣಿಪೊಯ್ದ ಖಳನ ಸೀಳ್ದ ನಳಿನನಾಭನಾ ಭರದಿ ಹೊಳೆವ ಕಂಬದಲ್ಲಿ ತರಳಗೊಲಿದನಾ 2 ಧರಣಿ ಈರಡಿಯ ಮಾಡಿ ಸುರರ ಪೊರೆದನಾ ಧರಣಿಪಾಲಕುಲವ ತರಿದ ಪರಶುರಾಮನಾ 3 ಧರಣಿಸುತೆಯನೊಯ್ದ ಖಳನ ಶಿರವನರಿದನಾ ತರಳತನದಿ ವೊರಳನೆಳೆದ ತರಳ ಕೃಷ್ಣನಾ 4 ತರುಣಿಯರ ವ್ರತವನಳಿದು ಪುರವಗೆಲಿದನಾ ಹರುಷದಿಂದ ತುರಗವೇರಿ ನಲಿವ ಸುಗುಣನಾ 5 ಸುರಪುರದಿ ನಲಿವಿನಿಂದ ನೆರೆದು ನಿಂದನಾ ಶರಣರಕ್ಷ ಲಕ್ಷ್ಮಿಯರಸ ಪರಮಪುರುಷನಾ 6
--------------
ಕವಿ ಲಕ್ಷ್ಮೀಶ
ಸ್ವಾಗತ ಸುಗುಣಗೆ ಸ್ವಾಗತ ಕರುಣಿಗೆ ಸ್ವಾಗತವು ನವಸಚಿವರಿಗೆ | ಸ್ವಾಗತ ಸ್ವಾರ್ಥ ವಿದೂರರಾದ ಜಗನ್ನಾಯಕ ನಾಮ ರಾಯರಿಗೆ || ತರಳತನದಿ ಇವರು ಸರಳ ಮನಸ್ಸಿನಲ್ಲಿ ಸರಸ್ವತಿದೇವಿಯನೊಲಿಸಿದರು | ಪರಮಪೂಜ್ಯ ಮಹತ್ವರ ತತ್ವ ತಿರುಳು ತಿಳಿದು ಆಚರಿಸಿದರು 1 ಪ್ರಾಂತದ ಬಡವರ ಚಿಂತೆಕಡಿಯಲು ಸ್ವಾಂತದಿ ಪಂಥವ ಗೈದವರೋ || ಕ್ರಾಂತಿಯ ಹೂಡುತ ಶಾಂತಿ ಸಂಗರದಿ ನಿಂತು ಹೋರಾಡಿದ ಯೋಧರು 2 ದುರುಳರಾಳಿಕೆಯಲಿ ಜರಿದು ಧಿಃಕರಿಸಿ ಸೆರೆಮನೆ ಕಷ್ಟವ ಸಹಿಸಿದರು | ದೊರೆಯ ಸ್ವತಂತ್ರವು ಬಹುಮತದಲಿ ಸ್ವೀಕರಿಸಿದರು ಮಂತ್ರಿಪದವಿಯನು 3 ಉಚ್ಚನೀಚವೆಂಬ ಕುತ್ಸಿತ ಭಾವವ | ಕೊಚ್ಚಿ ಬೀಸಾಡಿದ ಜಾಣರು | ಅಚ್ಚಗನ್ನಡದ ವೀರ ಜನನಿಗೆ ಅಚ್ಭದ ಪ್ರೀಯ ಸುಕುಮಾರರು 4 ಈ ಮಹಾಚತುರನ ಪಡೆದ ಚಂಡ್ರಿಕಿ ಗ್ರಾಮದೇವಿ ಬಹುಪುಣ್ಯವತಿ | ಪ್ರೇಮ ದಿಂದಿವರ ನೇಮವ ನಡೆಸುವ ಶಾಮಸುಂದರನು ದಿನಂಪ್ರತಿ5
--------------
ಶಾಮಸುಂದರ ವಿಠಲ
ಹರಿನಾಮಾಮೃತವನು ಸುರಿದು ಪರಿಪಕ್ವರಾಗಿ ಜರೆಮರಣೆಂದೆಂಬ ಉರುಲನು ಗೆಲ್ಲಿರೊ ಪ ತರಳತನದಿ ಸುರಿದು ಪರಮ ಪ್ರಹ್ಲಾದನು ಪರಮಕಂಟಕ ಗೆಲಿದು ವರಮೋಕ್ಷಕೈದಿದ ನಿರುತದಿಂ ವಿಭೀಷಣ ಸುರಿದು ಈ ಅಮೃತ ಸ್ಥಿರಪಟ್ಟವೇರಿದ್ದು ಅರಿವಿಟ್ಟು ನೋಡಿ 1 ಅಮೃತ ಕರಿ ತನ್ನ ಭಾವದಿ ಪರಮಾಪತ್ತು ಗೆಲಿದದ್ದರಿದು ಸ್ಮøತಿಯಿಂದ ಅಮೃತ ನರನು ಧರೆಯನೆಲ್ಲ ತಿರುಗುತ ಪರತರಧುರವ ಜೈಸಿದರಿದು 2 ಸೇವಿಸಿಅಮೃತ ಪಾವನೆನಿಸಿ ಯುವತಿ ಕೇವಲಮಾನದಿಂ ಬುವಿಯೊಳ್ಬಾಳಿದಳು ದೇವ ಶ್ರೀರಾಮನ ಪಾವನ ನಾಮಾಮೃತ ಭಾವದೊಳ್ಸವಿಯುತ ಕೇವಲರೆನಿಸಿರೊ 3
--------------
ರಾಮದಾಸರು
ಹರಿಯೇ ಎನ್ನ | ಮರೆತಿರುವರೆ ಇದು ಸರಿಯೇ ಪಾಲಿಸು ನೀ ದೊರೆಯೇ | ತರಳತನದಿ ನಾ ಮರೆತೆನೆಂದು ನೀ ಜರೆದು ಬಿಟ್ಟರೆ ಮುಂದೆ ಪೊರೆವರಾರೈ ಶ್ರೀ ಪ ಒಡೆಯ ನೀನಾಗಿ ಸಲಹುವುದೀಗ ನಿನ್ನಯ ಪದ ಜಡಜಕೆರಗುವೆ ನಾ ಬೇಗ ಕಡು ದಾರಿದ್ರ್ಯದ ಕಡಲೊಳು ಮುಳುಗಿದೆ ತಡಿಯ ಕಾಣಿಸೋ ಜಗದೊಡೆಯ ದಯದಿ ಶ್ರೀ 1 ದುರುಳ ಬಾಧಿಸುತಿರೆ ಭರದೊಳಕ್ಷಯವಿತ್ತುದ್ಧರಿಸಲಿಲ್ಲವೆ ಶ್ರೀ 2 ಪರಮೇಷ್ಠಿ ಜನಕ ಶ್ರೀ 3 ತಂದೆ ನೀನಲ್ಲವೆ ಜಗದೀಶ ಪಾಲಿಸು ನಿನ್ನ ಕಂದನಲ್ಲವೆ ಸರ್ವೇಶ ಹಿಂದ ಮುಂದನಾನೊಂದನರಿಯೆ ದಯ ದಿಂದ ಕಾಯೋ ಮುಚುಕುಂದವರದ ಶ್ರೀ 4 ಮಂಗಲ ಪುರವಾಸ ಶ್ರೀ ವೆಂಕಟೇಶ | ಅಂಗಜ ಜನಕ ರಮೇಶ | ಮಂಗಲಾಂಗ ನಿನ್ನಂಘ್ರಿ ಸೇವಕರ ಸು-ಸಂಗವ ಪಾಲಿಸು ಗಂಗಾಜನಕ ಶ್ರೀ 5
--------------
ಅನ್ಯದಾಸರು