ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯದಿರು ಮರೆಯದಿರು ಮನುಜಾನಾರಾಯಣನ ಸ್ಮರಣೆಯನು ಮಾಡು ಮನುಜಾ ಪ ಸತಿ ಬಣಗು ಹೆಣ್ಣುಗಳೇಕೆಮಂಗಳಾತ್ಮಕನಿರಲಿಕ್ಕೆ ಪರದೈವವೇಕೆ 1 ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆಮೇಲು ನಾಮವಿರಲಿಕ್ಕೆ ಕಟುಕು ಇನ್ನೇಕೆಬಾಲ ಹನುಮನಿರಲಿಕ್ಕೆ ಹುಲು ಕಪಿಗಳೇಕೆಒಳ್ಳೆ ತುಳಸಿ ಇರಲಿಕ್ಕೆ ಕಗ್ಗೊರಲೆಯೇಕೆ 2 ಚಿನ್ನದ ಗಿರಿಯಿರಲಿಕ್ಕೆ ಕಬ್ಬಿಣದ ಮೊರಡಿಯೇಕೆರನ್ನ ಮಾಣಿಕವಿರಲಿಕ್ಕೆ ಕಾಜಿನ ಹರಳೇಕೆಅನ್ನ ತುಪ್ಪವಿರಲಿಕ್ಕೆ ಮದ್ಯಪಾನಗಳೇಕೆಚೆನ್ನಾದಿಕೇಶವನಿರೆ ಬಿನುಗು ದೈವಗಳೇಕೆ3
--------------
ಕನಕದಾಸ
ಶಿಶುಗಳಪರಾಧಕೆ ಶಿಕ್ಷೆ ಕಣ್ಣೀಲಲ್ಲದೇ ಯಶವ ಬಡಿಗೋಲವನು ಎತ್ತುವರೇ ರಂಗಾ ಪ ಇಲಿಗೆ ಹೆಬ್ಬುಲಿಯಾಕೆ|ಮೊಲಕೆ ಮದಗಜವ್ಯಾಕೆ| ಕಳೆತ ಹಣ್ಣಿಗೆ ಮತ್ತೆ ಕರಗಸ್ಯಾಕೆ| ಕಲೆ ಬಿದ್ದ ಕನ್ನಡಿಗೆ ಗುದ್ದಲಿಯ ತರಲೇಕೆ| ಗುಳಲಿ ಕಾಯಿಗೆ ಹೊತ್ತಗಲ್ಲ ವ್ಯಾಕೆ 1 ಹಳ್ಳಗೆ ಹಡಗವ್ಯಾಕೆ|ಕೊಳ್ಳಿಗೆ ಕೊಡ ಜಲವ್ಯಾಕೆ| ಮುಳ್ಳು ಮುರಿದುದಕ ಮೊನೆ ಹಾರಿ ಯಾಕೆ| ಮಲ್ಲಿಗೆ ಹೋವಿಗೆ ಬಂಧ ಹಗ್ಗದಲ್ಯಾಕೆ| ಹಲ್ಲಿ ಬೆದರಿಸೆ ಹೊಡೆವ ಭೇರಿಯಾಕೆ 2 ಜ್ಞಾನಹೀನರ ನಮ್ಮ ತಪ್ಪನೆಣಿಸಿದುರಿತ| ಮೊನೆಗಾಣಿಸುತ ಬನ್ನಿ ಬಡಿಸುವುದುಚಿತವೇ| ದೀನವತ್ಸಲ ತಂದೆ ಮಹಿಪತಿ ಸುತ ಪ್ರಭುವೇ| ನ್ಯೂನಾರಿಸದೇ ನಿನ್ನವನೆಂದು ಸಲಹೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು