ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಬಾ ತ್ರಿಪುರ ಸುಂದರೀ ಅದ್ವೈತಕಾರೀ ಸಾಂಬೆ ಪರಬ್ರಹ್ಮಣಿ ಪ ಶುಂಭಾಸುರ ಮರ್ದಿನೀ ಸಹಜಾನಂದೆಕ್ಯವಾಣಿ ತುಂಬುರಗಾನ ಪ್ರಿಯೆ ಮಹಾಮಾಯೆ ಸುಖದಾಯೆ ಸರಸಿಜದಳಾಯೆ ಅ.ಪ. ತ್ರಿದಶ ವಂದಿತೆ ತ್ರಿಮೂರ್ತಿ ತ್ರೈಲೋಕ್ಯಗಾತ್ರಿ ತ್ರಿಗುಣರಹಿತೆ ಪಾರ್ವತಿ ತ್ರಿಪುರ ಪ್ರಹಾರೆ ದೇವೀ ತ್ರಿಶೂಲಧರ ಸಂಜೀವಿ ತ್ರಿಗುಣ ಸೋಮ ಸೂರ್ಯಗ್ನಿ ನೇತ್ರೆ ಶುಭಗಾತ್ರೆ ಸುಚರಿತ್ರೆ ಸನ್ಮುನಿಸ್ತೋತ್ರೆ 1 ಪರತರದೇವಿ ಪರಮಪಾವನ ಪ್ರಭಾವಿ ಪರಮಾತ್ಮ ಸ್ವರೂಪಿಣಿ ಪರಮಾನಂದೆಕ್ಯವಾಣಿ ಪರಿಪೂರ್ಣಭರಿತೆ ಶರ್ವಾಣಿ ಶಿವರಾಣಿ ಫಣಿವೇಣಿ ನಿತ್ಯಕಲ್ಯಾಣಿ 2 ವರಕೊಡಶಾದ್ರಿ ನಿವಾಸೆ ವರÀಸುಪ್ರಕಾಶೆ ವರ ಸಿಂಹಾ ರೂಢೆ ಮಹೇಶೇ ವರದೇ ಶ್ರೀ ಮೂಕಾಂಬಿಕೇ ವಿನುತಾನಂದೈಕ್ಯರೂಪಿ ಗುರುವಿಮಲಾನಂದ ಸ್ವರೂಪಿ ಸುಪ್ರತಾಪಿ ಸ್ತುತಿ ದೀಪಿ ಮಂತ್ರಕಲಾಪಿ 3
--------------
ಭಟಕಳ ಅಪ್ಪಯ್ಯ
ಭಗವಂತನ ಸಂಕೀರ್ತನೆÀ ಇಂದಿರಾರಮಣ ಆನಂದಮೂರುತಿ ನಿನ್ನ ವಂದಿಸಿ ಕರಗಳ ಬಂಧಿಸಿ ಬೇಡುವೆ ಪ ಎಂದಿಗೂ ಎನ್ನ ಹೃದಯಮಂದಿರ ಬಿಡದಿರೊ ನಂದಮುನ್ನೀಶ್ವರ ವಂದಿತ ಚರಣನೆ ಅ.ಪ ಕೃತಿರಮಣನೇ ಮುನಿಸತಿಯು ಶಾಪದಿ ಶಿಲಾ ಕೃತಿಯಾಗಿರಲು ಶ್ರೀಪತಿಯೇ ನೀ ಬಂದು ರತಿಪತಿಪಿತನೆ ಯುವತಿಯನ್ನೆ ಮಾಡಿದ ಪತಿತಪಾವನ ನೀನಲ್ಲವೇನೊ ಹರಿಯೆ 1 ನಾಕರಾಜನ ಸುತನು ಕಾಕರೂಪದಿ ಬಂದು ಏಕಾಂತದೊಳು ಅವಿವೇಕವ ಮಾಡಲು ಶ್ರೀಕಾಂತ ತೃಣದಿಂದ ಭೀಕರಿಸಿ ಮೂರು ಲೋಕ ಸುತ್ತಿಸಿ ಅವನ ನೀ ಕಾಡಿದೆ ಹರಿಯೆ 2 ಮತ್ತು ಗಜೇಂದ್ರನಾಪತ್ತು ಪರಿಹರಿಸಿ ಉತ್ತಮ ಪದವವಗಿತ್ತು ರಕ್ಷಿಸಿದೆ ಭಕ್ತವತ್ಸಲ ಎನ್ನ ಕುತ್ತುಗಳನು ನೀ ಚಿತ್ತಕೆ ತರದೇ ಸದ್ವøತ್ತನೆಂದೆನಿಸೈ 3 ನೇತ್ರವೆಂಬುದು ನಾರಿಗಾತ್ರದೊಳಿರುವುದು ಶ್ರೋತ್ರವು ಗೀತವ್ರಾತದೊಳಿಹುದು ಚಿತ್ತ ವಿಷಯ ಭೋಗಾಸಕ್ತವು ಗೋಪಿಕಾ ಮಿತ್ರನೇ ಅಂಜಲಿಮಾತ್ರ ನೀನೊಪ್ಪಿಕೋ 4 ವರನಾಮಗಿರಿಲಕ್ಷ್ಮೀನರಸಿಂಹ ಮೂರುತೆ ಚರಣಕಮಲಯುಗ ಸ್ಮರಣೆಯ ಎನಗೆ ಸ್ಥಿರವಾಗಿರುವಂತೆ ವರವಿತ್ತು ಸಲಹೆಲೊ ಪರಮಪುರುಷ ದಿನಕರಕುಲತಿಲಕನೆ 5
--------------
ವಿದ್ಯಾರತ್ನಾಕರತೀರ್ಥರು