ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರಣಿಜಾ ಪ್ರಿಯರಾಮಾ ಮರುತಾನಂದನ ಪ್ರೇಮಾ ಸುರಮುನಿಮನಧಾಮಾ ರತನರಾಮಾ ಪ ದುರುಳ ರಕ್ಕಸ ಭೀಮಾ ತರಣಿವಂಶಲಲಾಮಾ ಪರಮ ಸುಂದರ ನಾಮಾ ಲೋಕಾಭಿರಾಮಾ ಅ.ಪ ಎನ್ನಕಾಯುವರಾರು ನೀನಲ್ಲದಿನ್ನಾರು ನಿನ್ನಪಾದವತೋರು ಕರುಣವ ಬೀರು ಎನ್ನ ಪಾತಕಭಂಗ ನಿನ್ನಿಂದ ನೀಲಾಂಗ ನಿನ್ನ ಭಕ್ತರಸಂಗವೀಯೋ ಮಾಂಗಿರಿರಂಗ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರಮಪಾವನ್ನನಾಮ ಭಳಿರೆ ಸಂಗರ ಭೀಮ ಸರಸಗುಣಾಭಿರಾಮ ತರಣಿವಂಶ ಲಲಾಮ ತಾರಾನಂದನ ಪ್ರೇಮ ಪರಿಪೂರ್ಣಧಾಮ ಪಟ್ಟಾಭಿರಾಮ ಪ. ಚಿಕ್ಕಪ್ರಾಯದಲಿ ಬಲುರಕ್ಕಸಿಯನು ಸೀಳಿ ತಾಕಲದೆ ಕಾಲ್ಪೆಣ್ಗೈದು ರಾಜಮೌಳಿಯ ಬಿಲ್ಲ ಗಕ್ಕನೆ ಖಂಡ್ರಿಸಿ ಕೈವಿಡಿದು ಸೊಬಗನುಕ್ಕುವ ಜಾನಕಿಯ ಧಿಕ್ಕರಿಸುತ ಪೋಗಿ ದಿತಿಯ ಕೈಕೆಯ ಮಾತು ದಕ್ಕಲೆನುತ ಪೋಗಿ ದಂಡಕಾರಣ್ಯವ ಭೂರಿ ದಾನವಹಿಂಡ ಚಕ್ಕಂದದಲಿ ಕೊಂದ ಜಾಣ ನೀನಹುದೊ 1 ಭುವನೇಶ ಶಬರಿಯ ಪೂಜೆಯ ಕೈಕೊಂಡು ಪವನಾತ್ಮಜನ ಕಂಡು ಬರಹೇಳಿ ರವಿಯ ಸೂನನ ಕಾಣಿಸಿಕೊಂಡು ತವಕದಿಂ ವಾಲಿಯ ಹವಣರಿಯದಸುವ ಕೊಂದು ಪ್ಲವಗ ಬಲವನು ಕೂಡಿ ಬಲು ಸಮುದ್ರವ ಬಂಧ- ನವ ಮಾಡಿ ಕುಂಭಕರ್ಣ ರಾವಣನ ಸಂಹಾರ ಮಾಡಿ ಲಂಕಾರಾ ಜ್ಯ ವಿಭೀಷಣಗಿತ್ತು ಅವನಿಜೆಸಹ ಪುಷ್ಪಕವನೇರಿ ನಡೆದೆ 2 ಸುರರೆಲ್ಲ ಪೂಮಳೆಗರೆಯೆ ಸುಗ್ರೀವಾದಿ ವರರಾವಣರ ಸೇನೆ ಬೈಲಾಗಿ ನೀ ನಡೆಯೆ ಶೃಂ- ಗಾರವಾದ ಸಾಕೇತಪುರಕೆ ಭರದಿ ಬಂದು ನಿರುತ ಸೌಖ್ಯದಲಿ ನಿಂದು ಸಿರನೆಲೆವಿನಯದಿ ಚಿನ್ಮಯನಾ ಗಿರಿಯ ಶುಭಕರ್ಣವೊ(?) ಸೀತಾಲಕ್ಷ್ಮಣ ಭರತಶತ್ರುಘ್ನಯಿರೆ ಹನುಮನ ಸೇವೆ ದಿವ್ಯಸಿಂಹಾಸನವೇರಿ ಧರೆ ಆಳಿದ ಪರಿಣಾಮದಿ ಹಯವದನ ರಾಮ3
--------------
ವಾದಿರಾಜ
ಭಜಿಸು ಮಾನಸ ತ್ರಿಜಗದರಸ ಪ. ನಿಜಭಜಕ ಜನಾಶ್ರಯ ಸುಜನಬಾಂಧವ ಅಜಮುಖಾರ್ಚಿತ ಪಾದಪಂಕಜ ಅಜಾಮಿಳವರದನಂಘ್ರಿಯ ಅ.ಪ. ಪವನನಂದನ ಸೇವ್ಯನ ಪದ್ಮಾಕ್ಷನ ಪಾವನಗುಣಶೀಲನ ಪರಮಾತ್ಮನ ಪತಿತಪಾವನ ನಾಮನ ಅಪಾರ ಮಹಿಮನ ಸುರನರೋರುಗ ನಮಿತ ಚರಣನ ತರಣಿವಂಶಾಬ್ಧಿ ಚಂದ್ರಮನ ಪುರವೈರಿ ಪ್ರಿಯಸಖನ ಪರಂತಪ ರಾಘವೇಂದ್ರನ 1 ವಿಕ್ರಮನ ಭಯನಾಶನ ಕಾಕುತ್ಸ್ಧಕುಲದೀಪನ ಸುಗುಣಾ ರಾಮನ ಪಾಕಾರಿವಿನುತ ಸಾಕೇತನಿಲಯನ ರಾಕೇಂದುನಿಭಾಸ್ಯ ಶ್ರೀ ವರನ ಲೋಕಮೋಹನ ಮೇಘ ಶ್ಯಾಮನ ವೈಕುಂಠಪತಿ ಲಕ್ಷ್ಮೀಶ ಕೇಶವನ2 ಪಾಲಲೋಚನನ ಪಂಕಜಾಸನ ಪಾಕಾರಿಮುಖ ನಮಿತ ಚರಣನ ಶ್ರೀಲೋಲ ಶೇಷಾಚಲನಿಲಯ ಶ್ರೀವೇಂಕಟನ3
--------------
ನಂಜನಗೂಡು ತಿರುಮಲಾಂಬಾ