ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮ್ಮಾ ಬಾ ನಮ್ಮಮ್ಮನೆ ಅಮ್ಮೆ ನೀಡಮ್ಮನೆ ಬೊಮ್ಮನಾ ಪಡೆದ ಶ್ರೀ ಹರಿ ಪರಬ್ರಹ್ಮನೆ ಧ್ರುವ ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ ಓಡ್ಯಾಡಿ ಬಂದು ಅಂಡಲಿವೆ ನಾ ತಮ್ಮನೆ 1 ಬಯಸಿ ಬಂದೊಡೆ ನಾ ಕಾಯಬೇಕೆನ್ನನಾ ತಾಯಿ ತಂದ್ಯೊಬ್ಬಳೆ ನೀನೆ ಸನಾತನಾ 2 ಉಣಿಸೆ ನಾಮಮೃತ ದಣಿಸೆ ಮನೋರಥಾ ದೀನಮಹಿಪತಿ ಜೀವ ಪ್ರಾಣಕ ಸನಾಥಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವಿಗೆ ಒಂದು ಶರಣಾರ್ಥಿ ಗುರು ಭಕ್ತರಿಗೊಂದು ಶರಣಾರ್ಥಿ ಪ ಸಾಧನ ನಾಲ್ಕನು ಸಾಧಿಸುತಿರುತಿಹ ಸಾಧಕರಿಗೆ ಒಂದು ಶರಣಾರ್ಥಿವಾದವ ವರ್ಜಿಸಿ ವಸ್ತುವ ಧ್ಯಾನಿಪ ಉತ್ತಮರಿಗೆ ಒಂದು ಶರಣಾರ್ಥಿ1 ಯೋಗಗಳಿಂದಲೆ ಯೋಗ್ಯರಾಗಿಹ ಯೋಗೀಶರಿಗೊಂದು ಶರಣಾರ್ಥಿರಾಗ ಪೋಗಿ ರಂಜಿಸುತಿರುತಿಹ ರಂಜಕರಿಗೆ ಒಂದು ಶರಣಾರ್ಥಿ 2 ದೂಷಣ ಭೂಷಣ ದೂರ ಮಾಡಿಹ ದೃಢವಂತರಿಗೆ ಒಂದು ಶರಣಾರ್ಥಿಆಸೆಗಳೆಂಬ ಅಳಿದು ಇರುತಿಹ ಆನಂದರಿಗೊಂದು ಶರಣಾರ್ಥಿ3 ಪ್ರಪಂಚವೆಲ್ಲವ ಪರಮಾರ್ಥ ಮಾಡಿಹ ಪಂಡಿತರಿಗೆ ಒಂದು ಶರಣಾರ್ಥಿತಾಪವನೀಗಿ ತಮ್ಮನೆ ಮರೆತಿಹ ತಾಪಸರಿಗೆ ಒಂದು ಶರಣಾರ್ಥಿ4 ಜನನ ಮರಣಗಳ ಜಡರನೆ ಕಳೆದಿಹ ಜನಪತಿಗಳಿಗೊಂದು ಶರಣಾರ್ಥಿಚಿನುಮಯಾತ್ಮಕ ಚಿದಾನಂದನ ಬೆರೆದಿಹ ಚಿದ್ರೂಪರಿಗೆ ಒಂದು ಶರಣಾರ್ಥಿ 5
--------------
ಚಿದಾನಂದ ಅವಧೂತರು
ಜೋ ಜೋ ಜೋ ಬಾಲಾ ಸುಂದರ ಲೀಲಾ ಪ ತೊಟ್ಟಿಲೊಳಗೆ ನಿನ್ನ ಇಟ್ಟು ತೂಗುವೆ ರನ್ನಗಟ್ಟಿ ಮುಚ್ಚುತ ಕಣ್ಣ ಪುಟ್ಟನೆ ಮಲಗಿನ್ನ 1 ಗುಮ್ಮನು ಬಂದದ ಸುಮ್ಮನ ಮಲಗೆಂದುತಮ್ಮ ನಿನಗಿಂತೆಂದು ತಮ್ಮನೆಗ್ಹೋಗೆದ 2 ಇಂದಿರೇಶನೀತಾ ನಂದಗೋಪನ ಪೋತಸಿಂಧುರ ವರದಾತ ವೃಂದಕರಾರ್ಚಿತ 3
--------------
ಇಂದಿರೇಶರು
ತವರು ಮನೆಯು ನನ್ನ ಸುವಿದ್ಯಪುರಲ್ಯದೆ ಸಾವಿರಕೊಬ್ಬಗೆ ದೋರುತದೆ ಧ್ರುವ ಸಾವಿರಕೊಬ್ಬನೆ ತಾ ಸುದೇವನೆ ಬಲ್ಲ ಭಾವಿಸದಲ್ಲದೆ ತಿಳಿಯುವದಲ್ಲ ಅವಿದ್ಯಪುರ ದಾಟ, ಮಂದಾಕ್ಕಾಗಲು ಎಲ್ಲ ಆವಾಗ ತಿಳಿವುದು ಹೇಳಿದ ಸೊಲ್ಲ 1 ಸಾವಿರ ತೆನೆಯಲೊಪ್ಪುತದೆ ಒಳಕೋಟ ಠವಿಠವಿಸುತದೆ ನೋಡಿ ಮನಮುಟ್ಟಿ ಅವ್ವ ಅಪ್ಪನೇ ನಮ್ಮ ಇಹಸ್ಥಾನವು ಘಟ್ಟಿ ದೇವಾಧಿ ದೇವನೊಬ್ಬನೆ ಜಗಜಟ್ಟಿ 2 ಬಲು ಅಭೇದ್ಯಸ್ಥಳ ತಿಳಿಯದಿನ್ನೊಬ್ಬರಿಗೆ ನೆಲೆವಂತರಿಗೆ ತಾನು ತಿಳಿವದು ಬ್ಯಾಗೆ ತುಂಬಿ ಥಳಗುಟ್ಟಿ ಹೊಳವ್ಹಾಂಗೆ ಬಲಗೊಂಡು ಕೇಳಿ ಶ್ರೀಸದ್ಗುರುವಿಗೆ 3 ಅಣ್ಣನೆಂಬಾತ್ಹಾನೆ ಅನಂದದಲ್ಹಾನೆ ನೆನೆಪಿಗೊಮ್ಮೆ ಬಂದು ಸುಳವುತ್ಹಾನೆ ಕಣ್ಣೆಲಿ ಕಟ್ಯಾನೆ ತಮ್ಮನೆಂಬತ್ಹಾನೆ ಕ್ಷಣಕೊಮ್ಮೆ ಹೊಳೆವುವಾನೆ4 ಅಕ್ಕನೆಂಬಾಕಿ ತಾ ಸಖರಿ ಅಗ್ಹಾಳೆ ಅಖರದಲೆವ್ವ ಈ ಮಾತು ಕೇಳೆ ಪ್ರಖ್ಯಾತದಲಿ ಪ್ರೀತಿಮಾಡುವ ತಂಗ್ಹ್ಯಾಳೆ ಸುಖ ಸುರುತ್ಹಾಳೆ ಇರುಳು ಹಗಲು 5 ಅತ್ತಿಗೆ ನಾದುನಿ ಭಾವ ಮೈದುನರೆಲ್ಲ ಅಂತ್ಯಕವಾಗ್ಹ್ಯಾರೆ ಮನಿಯೊಳಗೆಲ್ಲ ಸುತ್ತೇಳುವ ಬಳಗ ಉತ್ತುಮರೆನಗೆಲ್ಲ ಹಿತದೋರುತಾರವ್ವ ಸರ್ವಾಪ್ತರೆಲ್ಲ 6 ಸರ್ವಾಪ್ತವೆಂಬುದು ಸರ್ವೇಶನೆ ತಾನು ಸರ್ವದಾ ಎನ್ನೊಳು ತಾ ಕಾಮಧೇನು ಪರ್ವಕಾಲದ ಬಹಳ ಏನೆಂದ್ದೇಳಲಿ ನಾನು ಸರ್ವಾರ್ಥ ಕೊಡುತ್ಹಾನೆ ಸರ್ವಾತ್ಮ ತಾನು 7 ಅವ್ವ ನಮ್ಮಪ್ಪಗೆ ಸರಿ ಇಲ್ಲ ಜಗದೊಳು ಆವ ಕಾಲಕೆ ತಾ ಇವರ ಮೇಲು ಇವರೆಂಬುದು ಒಂದೆ ಮಾತಿನ ಸ್ವಕೀಲು ಸವಿಸುಖಬಲ್ಲರು ಅನುಭವಿಗಳು 8 ತೌರಮನೆಂಬುದು ಪ್ರತ್ಯೇಕಾ ತಾನಿಲ್ಲ ಭಾವಾರ್ಥದ ಮಾತು ಕೇಳಿರೆಲ್ಲ ಅವಗುಣನೆ ಬಿಟ್ಟು ಕೇಳಿ ಸವಿಯ ಸೊಲ್ಲ ಪೂರ್ವಿಕರಿಗಿದೆ ಸಾರವೆಲ್ಲ 9 ಸುದ್ದಿ ಹೇಳಿ ಕಳುಹುಲಿಕ್ಕೆ ಈ ಸಾಧನ ಇದುವೆ ಅಯಿತು ತವರ ಮನಿ ಬುದ್ಧಿವಂತನೆಬಲ್ಲ ಲಕ್ಷಕೊಬ್ಬ ಜ್ಞಾನಿ ಸಿದ್ಧಿದರಿಡುವದು ಸದ್ಗುರು ಪ್ರಾರ್ಥನಿ 10 ಬಳಗದೊಳು ಕೂಡಿ ಒಳಿಥಾಗ್ಯಾಯಿತು ಎನಗೆ ಒಳ ಹೊರಗೆ ಸುಖ ಎದುರಿಟ್ಟತೀಗ ಕುಲಕೋಟಿ ಬಳಗ ಸದ್ಗುರು ಪಾದವ್ಯನಗೆ ಸಲಹುತಾನೆ ಸ್ವಾಮಿ ಮಹಿಪತಿಗೆ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪುಟ್ಟ ಬಾಲನೆ ಮನೆ ಕಟ್ಟೀಲಾಡೋಕೆಟ್ಟ ಗೋಪರ ಮನೀಗ್ಹೋಗಬ್ಯಾಡಾ ಪ ನಿನ್ನ ಮಗನು ಮೆದ್ದು ಬೆಣ್ಣೆ ಪಾಲ್ ಮೊಸರನೆಉಣ್ಣೀಸುತಲೆ ಬೆಕ್ಕಿಗುಂಡನಮ್ಮಸಣ್ಣ ಮಕ್ಕಳ ಕೈಯ್ಯ ಕಣ್ಣಿನಿಂದಲೆ ಕಟ್ಟಿಓಡುತಲಿಹರಮ್ಮಾ ನೋಡೆಂಬರೋ 1 ಕಂದಯ್ಯಾ ಗೋಪೆಯರ ಮಂದಿರಕ್ಹೋಗದೆಇಂದು ಹುಟ್ಟಿದ ದಿನಾ ಎರಕೋ ಕೂಸಮಂದಿರದೊಳು ವಿಪ್ರವೃಂದವ ಪೂಜಿಸಿಛಂದಛಂದದ ವಸ್ತ ತಂದಿಡುವೆ 2 ಮಂದಿ ಮಕ್ಕಳು ನೋಡು ಛಂದದಿ ತಮ್ಮನೆಮುಂದಲೆ ಊರೊಳಗಾಡೆಂಬರೊನಿಂದ ಧಾಂಧಲೆ ಭಾಳ ಬಂದು ಹೇಳುವರಲ್ಲೋಇಂದೆಲ್ಲಿ ಪೋಗದಿರಿಂದಿರೇಶಾ 3
--------------
ಇಂದಿರೇಶರು
ರಕ್ಷಿಸೊ ಸ್ವಾಮಿ ನೀ ಪಕ್ಷಿ ಸುವಾಹನ ಭಿಕ್ಷೆ ಸುನೀಡೊ ನೀ ಲಕ್ಷ ಸುಸಾಧನ ಅಕ್ಷಯಾನಂದ ನೀ ಲಕ್ಷುಮಿ ಜೀವನ ಪಕ್ಷ ನೀ ಪ್ರಾಣಕ ಈಕ್ಷಿಸಿದವನ 1 ಸೃಷ್ಟಿಗಧಿಕ ನೀ ವಿಷ್ಣು ಜನಾರ್ಧನ ಕಷ್ಟ ನೀ ಹಿಂಗಿಸೊ ದುಷ್ಟರ ಮರ್ದನ ಶಿಷ್ಟರ ಪಾಲಕ ಶ್ರೇಷ್ಠ ನಾರಾಯಣ ದೃಷ್ಟಿಸಿ ನೋಡೊ ನೀ ಕೃಷ್ಣ ಕೃಪಾಘನ2 ಈಶನೆಂದರಿಯದೆ ದೋಷದ ರಾಶಿ ನಾ ವಾಸನೆ ಪೂರಿಸೊ ದಾಸರ ದಾಸ ನಾ ಏಸು ತಾ ಜನ್ಮಕೆ ಬಂದು ಸೂಸಿದೆನೊ ಹೇಸಿತು ಜೀವನ ಸ್ಮರಿಸಬೇಕೆಂದು ನಾ 3 ನಿಮ್ಮನೆ ನೋಡಬೇಕೆಂದು ಬಂದೆ ನಾ ಘಮ್ಮನೆ ಪೂರಿಸೊ ಭಾವನೆ ಕಂದನ ತಮ್ಮನೆ ಬೇಡಿಕೊಂಬುದು ತಾ ವಂದನ ಅಮ್ಮ ನಮ್ಮಪ್ಪನೆ ಬಂಧು ನೀ ಎಂದೆ ನಾ 4 ಕಾಣದ ಪಾಮರ ಹೀನ ಸೂಕರ ಏನು ತಾ ಬಲ್ಲದು ಲೂನದ ಸೂಕರ ನೀನೆ ದಯಾನಿಧೆ ಜ್ಞಾನದ ಸಾಗರ ನ್ಯೂನ ನೋಡದೆ ತಾರಿಸೊ ಶ್ರೀಧರ 5 ಪಾರ ನೀ ಗೆಲಿಸೊ ದ್ವಾರಕಿನಾಥನೆ ಸಾರಿ ನೀ ಬೋಧವ ತಾರಿಸೊ ದಾತನೆ ತೋರಿ ನೀ ಪಾದವ ಬೀರು ಸ್ವಹಿತನೆ ಸಿರಿ ಲೋಲನೆ ನೀಕರುಣಿಸಿ ಮಾತನೆ 6 ಪಾಲಿಸೊ ಪ್ರಾಣವ ಬಾಲಮುಕುಂದನೆ ಲಾಲನೆ ನೋಡು ಗೋಪಾಲ ಗೋವಿಂದನೆ ತ್ಯಕ್ತ ನಾ ತಾಳು ನೀ ಸಚ್ಚಿದಾನಂದನೆ ಕೀಲನೆ ಹೇಳು ನೀ ಭಕ್ತಿಯ ವಂದನೆ 7 ದೇವರ ದೇವನೆ ಕಾವ ಕರುಣನೆ ಜೀವದ ಜೀವ ನೀ ಸ್ವಾಮಿ ಸರ್ವೇಶನೆ ಭಾವದ ಭಾವ ನೀ ಸಾವಿರ ನಾಮನೆ ಸೇವೆಗೆ ಯೋಗ್ಯನ ಮಾಡು ಸರ್ವೋತ್ಮನೆ 8 ಹಿಂಡ ದೈವಕೆ ಪ್ರಚಂಡ ಪರೇಶನೆ ಗಂಡು ಹೆಣ್ಣಿಗೆ ತಾ ಒಬ್ಬ ಸರ್ವೇಶನೆ ಮಂಡಿ ಮರೆಯಲಿಹನೆ ಮಹೇಶನೆ ಕಂಡುಕಾಂಬ ಸುಖದೋರು ದೇವನೆ 9 ವೇದಕ ನಿಲ್ಕದಾಭೇದ್ಯ ಪುರುಷನೆ ಸಾರ ಸುರಸನೆ ಅದಿಗಿಂದತ್ತಲ್ಯಾನಾದಿ ನಿರ್ವಿಶೇಷನೆ ಹಾದಿದೋರಿಕೊಡೊ ಭಕ್ತಿಗೊಂದೀಶನೆ 10 ಮಹಿಪತಿಗೆ ನೀ ಸ್ವಾಮಿ ಶ್ರೀನಾಥನೆ ಬಾಹ್ಯ ಅಂತ್ರಕೆ ನೀನೆವೆ ಸುದಾತನೆ ಸೋಹ್ಯದೋರಿಕೊಡೊ ಸಾಹ್ಯವುಳ್ಳಾತನೆ ತ್ರಾಹಿಯಂದವನ ಮಾಡು ಸನಾಥನೆ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏಕೆ ನಿರ್ದಯನಾದೆ ಎಲೋ ದೇವನೇಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ ಪಕಂಗೆಟ್ಟು ಕಂಬವನು ಒಡೆದು ಬಯಲಿಗೆ ಬಂದುಹಿಂಗದೆ ಪ್ರಹ್ಲಾದನಪ್ಪಿಕೊಂಡೆ ||ಮಂಗಳ ಪದವಿತ್ತು ಮನ್ನಿಸಿದೆ ಅವ ನಿನಗೆಬಂಗಾರವೆಷ್ಟು ಕೊಟ್ಟನು ಹೇಳೋ ಹರಿಯೇ 1ಸಿರಿಗೆ ಪೇಳದೆ ಮುನ್ನ ಸೆರಗ ಸಂವರಿಸದೆಗರುಡನ ಮೇಲೆ ಗಮನವಾಗದೆ ||ಭರದಿಂದ ನೀ ಬಂದು ಕರಿಯನುದ್ದರಿಸಿದೆಕರಿರಾಜನೇನು ಕೊಟ್ಟನು ಹೇಳು ಹರಿಯೇ 2ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆನಿಜದಿ ರುಕ್ಮಾಂಗದ ಮೊಮ್ಮಗನೆ ||ಭಜನೆಗೈವರೆ ಹಿತರೆ ನಾ ನಿನಗನ್ಯನೆತ್ರಿಜಗಪತಿ ಸಲಹೆನ್ನಪುರಂದರವಿಠಲ3
--------------
ಪುರಂದರದಾಸರು
ಚಿಣ್ಣರೊಡನಾಡನಡೆದ ಮುದ್ದುರಂಗ ಮುದ್ದು ಕೃಷ್ಣ ಪ.ಇಟ್ಟು ಹಣೆಯೊಳು ಉಗುರು ನಾಮವ ಗೋವಗಟ್ಟಿಗೆಯನು ಕರದೊಳು ಪಿಡಿದುಪುಟ್ಟ ಕಂಬಳಿ ಹೊದ್ದು ಪದಕೆ ಪಾದುಕೆಮೆಟ್ಟಿ ಅಣ್ಣ ಬಲರಾಮ ನಡೆಯೆಂದು 1ಆಡಲೊಲ್ಲೆನೆಂಬ ಮಕ್ಕಳ ಮನ್ನಿಸಿಕೂಡಿಕೊಂಡು ಅಣ್ಣ ತಮ್ಮನೆಂದುಹಾಡುತ ಕುಣಿದು ಚಪ್ಪಾಳೆ ಹೊಯಿದಾಡುತಓಡ್ಯಾಡಿ ಅಮ್ಮನ ಮಾತ ಕೇಳದೆ ಕೃಷ್ಣ 2ಚಿಣ್ಣಿ ಪೊಂಬಗರ್ಚೆಂಡು ಗುಮ್ಮ ಗುಸಕು ಹಬ್ಬೆಅಣ್ಣೆಕಲ್ಲು ಹÀಲ್ಲೆ ಗಜಗ ಗೋಲಿಕಣ್ಣುಮುಚ್ಚಾಲೆ ಮರನೇರಾಟ ನೀರಾಟಸಣ್ಣರೊಳಾಡಿ ಸೋಲಿಪೆನೆಂಬ ತವಕದಿ 3ರಾಜಿಪ ರಾಜಬೀದಿಲಿನಿಂದುನೋಡುವರಾಜಮುಖಿಯರೊಳು ಸೆಣಸ್ಯಾಡುತರಾಜಕುಲಾಗ್ರಣಿ ಸರ್ವಭೂಷಣದಿ ವಿರಾಜಿತನಾಗಿ ಗೋಳಿಡುತ ಮುರಾರಿ 4ಜಗವ ಪುಟ್ಟಿಸಿ ನಲಿದಾಡುವಾಟವು ತನಗೆ ಸಾಲದೆಂದು ಆವಹಳ್ಳಿಲಿಬಗೆ ಬಗೆ ಲೀಲೆಯ ತೋರಿ ಗೋಗಾವರ್ಗೆಸುಗತಿನೀವೆನೆಂದು ಪ್ರಸನ್ವೆಂಕಟ ಕೃಷ್ಣ 5
--------------
ಪ್ರಸನ್ನವೆಂಕಟದಾಸರು