ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ವರದಿ ಭಜಿಪೆ ನಮ್ಮ ಗುರುಪಾದಾಂಬುಜ ಕೆರಗುತಲನುದಿನ ಭಕುತಿಯಲಿ ಪ ನೆರೆನಂಬಿದವರ ಬಿಡದೆ ಪೊರೆವರೆಂಬ ಉರುತರ ಕೀರ್ತಿಯ ಸ್ಮರಿಸುತಲಿ ಅ.ಪ ಭವ ಬಂಧನದಿ ಬಳಲುವ ಮಂದಿಗಳನು ಉದ್ಧರಿಸುವರ ಮಂದಮತಿಗಳಾದರು ನಿಂದಿಸದಲೆ ಮುಂದಕೆ ಕರೆದಾದರಿಸುವರ ಬಂಧು ಬಳಗ ಸರ್ವಬಾಂಧವರಿವರೆಂದು ಒಂದೆ ಮನದಿ ಸ್ಮರಿಸುವ ಜನರ ಕುಂದುಗಳೆಣಿಸದೆ ಕಂದನ ತೆರದೊಳು ಮುಂದಕೆ ಕರೆದಾದರಿಸುವರ 1 ಗುಪ್ತದಿಂದ ಶ್ರೀಹರಿನಾಮಾಮೃತ ತೃಪ್ತಿಲಿ ಪಾನವ ಮಾಡಿಹರ ನೃತ್ಯಗಾಯನ ಕಲಾನರ್ತನದಿಂ ಪುರು- ಷೋತ್ತಮನನು ಮೆಚ್ಚಿಸುತಿಹರ ಸರ್ಪಶಯನ ಸರ್ವೋತ್ತಮನನು ಸರ್ವತ್ರದಲಿ ಧ್ಯಾನಿಸುತಿಹರ ಮತ್ತರಾದ ಮನುಜರ ಮನವರಿತು ಉ- ನ್ಮತ್ತತೆಯನು ಪರಿಹರಿಸುವರ2 ಕಮಲನಾಭ ವಿಠ್ಠಲನು ಪೂಜಿಸಿ ವಿಮಲಸುಕೀರ್ತಿಯ ಪಡೆದವರ ಶ್ರಮಜೀವಿಗಳಿಗೆ ದಣಿಸದೆ ಮುಂ- ದಣಘನ ಸನ್ಮಾರ್ಗವ ಬೋಧಿಪರ ನವನವ ಲೀಲೆಗಳಿಂದೊಪ್ಪುವ ಹರಿ ಗುಣಗಳನ್ನು ಕೊಂಡಾಡುವರ ನಮಿಸಿಬೇಡುವೆ ಉರುಗಾದ್ರಿವಾಸ ವಿ-ಠ್ಠಲದಾಸರು ಎಂದೆನಿಸುವರ 3
--------------
ನಿಡಗುರುಕಿ ಜೀವೂಬಾಯಿ
ನಂಬು ನಾರಾಯಣನ ನಂಬೋ ನರಹರಿಯನಂಬಿದಾ ಭಕ್ತರ ಕುಟುಂಬ ಸಾರಥಿಯ ಪ ಬಲಿ ನಂಬಿ ಪಾತಾಳಲೋಕಕರಸಾದನದೆಕುಲದ ಪ್ರಹ್ಲಾದನು ನಿಜವ ಕಂಡಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ1 ಅಂಬರೀಷನು ನಂಬಿ ವೈಕುಂಠವೇರಿದನುಹಂಬಲಿಸಿ ಶಶಿಧರನು ಉರಿಯ ಗೆದ್ದಕುಂಭಿನೀದೇವಿ ತಾ ಬಂಧನವ ಕಳೆದಳುಅಂಬುಜಾಕ್ಷಿ ದ್ರೌಪದಿಯು ಮಾನ ಉಳುಹಿಕೊಂಡಳು 2 ಅತಿ ಭಕುತರಿಗೆ ಮೆಚ್ಚಿ ಗತಿಮೋಕ್ಷವನಿತ್ತನುಮತಿಭ್ರಷ್ಟ ಅಜಮಿಳನ ಉದ್ಧರಿಸಿದನುಕ್ಷಿತಿಯೊಳಗೆ ಕಾಗಿನೆಲೆಯಾದಿಕೇಶವರಾಯಪತಿತ ಪಾವನ ಪರಮಪುರುಷೋತ್ತಮನನು 3
--------------
ಕನಕದಾಸ
ಬೆಳಗಾಯಿತು ಏಳಿ ಪಾದ ನಳಿನ ಸೇವಕರು ಪ ಉದಯ ಕಾಲದೊಳೆದ್ದು ಹೃದಯ ನಿರ್ಮಲರಾಗಿ ಮಧುಸೂದನನ ಪಾಡಿ ಸ್ತುತಿಸುತಲಿ ಮುದದಿಂದ ಮಾಧವನ ವಿಧವಿಧದಿ ಪೂಜಿಸಿ ಪದುಮನಾಭನ ಪಾಡಿ ಪೊಗಳುವ ಜನರು 1 ರಂಗನ ಮಹಾದ್ವಾರದ ಮುಂದೆ ಕಾಣುವ ಗಜ ಸಾಲುಗಳ ನೋಡುತ ಬಂಗಾರ ಕೋಡುಳ್ಳ ಗೋವ್ಗಳಿಗೆರಗುತ್ತ ಅಂಗಜ ಜನಕನ ಪಾಡಿ ಪೊಗಳುವರು2 ರಂಭೆ ಊರ್ವಶಿ ಮೇನಕೆಯರೆಲ್ಲರು ಕೂಡಿ ಸಂಭ್ರಮದಲಿ ನಾಟ್ಯವಾಡುತಿರೆ ಗಂಗೆ ಗೋದಾವರಿ ಕೃಷ್ಣ ತುಂಗಭದ್ರೆ ಯಮುನೆಯರು ಇಂಬಿಲ್ಲದೆ ಪಾಡುತಿಹರೊ ಶ್ರೀ ಹರಿಯ 3 ಅತ್ರಿ ವಸಿಷ್ಠ ಗೌತಮ ಭಾರದ್ವಾಜರು ಅರ್ಥಿಯಲ್ಲಿ ಜಮದಗ್ನಿ ಋಷಿಗಳೆಲ್ಲ ಸ್ತೋತ್ರಮಾಡುತ ಪುರುಷೋತ್ತಮನನು ಪಾಡಿ ವಿಶ್ವಾಮಿತ್ರರು ಬಹು ಭಕ್ತಿಯಲಿ 4 ಸುತ್ತ ಸನಕಾದಿ ನಾರದರೆಲ್ಲ ಪಾಡಲು ನೃತ್ಯಗಾಯನದಿಂದ ಶ್ರೀ ಕೃಷ್ಣನ ಅರ್ತಿಯಿಂದ ಅಜಭವ ಸುರರೆಲ್ಲ ಸ್ತುತಿಸಲು ಸ್ತೋತ್ರಮಾಡಲು ದುರ್ಗದೇವಿಯರು5 ಗಜರಾಜ ಗೋಮಾತೆ ಮೊದಲಾದವರು ಬಂದು ಮಧುಸೂದನನ ನೋಡೆ ನಿಂತಿಹರು ಮದಗಜಗÀಮನೇರು ಮುದದಿ ಕಲಶ ಕನ್ನಡಿಗಳ ಪಿಡಿದು ನಿಂತಿಹರು ಬೇಗದಲಿ 6 ಮುತ್ತಿನ ಕದಗಳು ತೆಗೆವ ವ್ಯಾಳ್ಯದಲಿ ನೌಬತ್ತು ನಗಾರಿ ವಾದ್ಯಗಳಾಗಲು ಸಪರ್Àನ್ಹಾಸಿಕೆಯಲ್ಲಿ ಮಲಗಿರುವ ದೇವನ ಅರ್ಥಿವೈಭವ ನೋಡೊ ವೇಳೆ ಮೀರುವದು7 ಗಂಗಾಜನಕನ ಚರಣಂಗಳು ನೋಡುವ ಬಂಗಾರ ಕಿರುಗಂಟೆಗಳ ನಡುವನು ನೋಡುವ ರಂಗು ಕೇಸರಿಯ ಪೀತಾಂಬರ ನೋಡುವ ಶೃಂಗಾರ ವೈಜಯಂತಿಯ ನೋಡುವ 8 ವಕ್ಷ ಸ್ಥಳದಲ್ಲಿ ಶ್ರೀ ಲಕ್ಷ್ಮಿಯ ನೋಡುವ ಹಸ್ತದ ಆಭರಣಂಗಳ ನೋಡುವ ಮುತ್ತಿನ ಭುಜ ಕೀರ್ತಿ ರತ್ನದ್ಹಾರಗಳಿಂದ ಒಪ್ಪುವ ಉರದಿ ಶ್ರೀವತ್ಸನ ಸ್ತುತಿಸೆ 9 ಕೋಟಿ ಸೂರ್ಯರ ಕಾಂತಿ ಸೋಲಿಪ ನಗುಮುಖ ಲಲಾಟದಿ ಕಸ್ತುರಿ ತಿಲಕ ಒಪ್ಪಿರಲು ಮಾಟದ ಕರ್ಣಕುಂಡಲಗಳು ಹೊಳೆಯುತ್ತ ನೋಟದಿ ಜಗವ ಮೋಹಿಪ ದೇವನನು ನೋಡೆ10 ಅಂದದ ಮುಗುಳು ನಗೆಯು ದಂತ ಪಂಙÉ್ತಯು ಪಾದ ಕದಪುಗಳಂದವು ಇಂದ್ರ ನೀಲದಮಣಿ ಖಚಿತ ಕಿರೀಟದ ಮಂದಹಾಸದ ನಗೆÀಮುಖ ನೋಡುವ 11 ಕಡೆಗಣ್ಣ ನೋಟದಿ ಜಗವ ಸೃಷ್ಟಿಪದೇವ ಖಗವಾಹನನು ಸಂರಕ್ಷಿಪ ಲೋಕವ ಅಗಣಿತ ಮಹಿಮ ಅತಿಶಯದಿ ಲಯವ ಮಾಳ್ಪ ಸುಗುಣ ಸುಂದರನ ಗುಣ ಪೊಗಳುವ ಜನರು12 ನಿಖಿಳ ವ್ಯಾಪಕ ಕೃಷ್ಣ ಶುಕಮುನಿ ವಂದಿತ ದಿವ್ಯ ಚರಣನ ರುಕುಮಿಣಿ ಅರಸನ ಭಕುತರ ಪೋಷನ ಸಖ್ಯದಿಂದ ಪ್ರಿಯನ ನೋಡುವ ಸುಜನರು13 ಅನಿರುದ್ಧ ದೇವ ಶ್ರೀ ಪ್ರದ್ಯುಮ್ನ ಮೂರ್ತಿಯ ಸಂಕರುಷಣ ವಾಸುದೇವೇಶನ ನವನೀತ ಚೋರನ ನಾರಾಯಣನ ನಾಮ ಸ್ಮರಿಸುವ ಸುಜನರು 14 ಕವಿಜನ ಪ್ರಿಯನ ಕಮನೀಯ ರೂಪನ ಕಮಲನಾಭವಿಠ್ಠಲನ ಪಾಡುವ ಕಮಲಸಖನ ಸೋಲಿಸುವ ಮುಖಕಾಂತಿಯಕಮಲಾಕ್ಷಿಯರಸನ ಪೊಗಳುವ ಸುಜನರು15
--------------
ನಿಡಗುರುಕಿ ಜೀವೂಬಾಯಿ
ಶರಣು ಶಿರೀಶ ಹರೇ ಪ ಭುವನದಲಿ ಶೃತಿ-ಯಡಗೇ| ಯವಿಗಳಾಡಿಸದೇ| ಜವದಲಿ ಬಂದು ನೀ ತಮನನು ಕೊಂದೇ| ಕಾವೋದೋ ಎನ್ನಾ ಮತ್ಸ್ಯರೂಪಾ 1 ಸುರಸುರರು ಕೊಡಿ| ಶರಧಿಯ ಮಥಿಸುದಕಿ| ಕರುಣದಿ ಬೆನ್ನವನಿತ್ತೆ ನೀನಗತಿ| ಕಾವೋದು ಎನ್ನ ಕಮಠೆ ರೂಪಾ 2 ಹಿರಣ್ಯಾಕ್ಷನ ಕೊಂದು| ಧರೆಯನು ದಂತದಲೆ| ಧರಿಸಿದೆ ನೀ ಅನವರತಗಳಿಂದಲೇ| ಕಾವುದೋ ಎನ್ನ ವರಹಾ ರೂಪ 3 ಛಲದಿ ಪ್ರಹ್ಲಾದ ಕರಿಯೇ| ಕುಲಿಶ ಸಮುಗುರುದಲೆ| ಮೆಳೆತನ ಸೀಳಿದೆ ಕರಳ್ಳೊನಮಾಲೆ| ಕಾವುದೋ ಎನ್ನ|ನರಹರಿ ರೂಪ 4 ಚಂಡ ಬಲಿವವರದನೇ| ದಂಡ ಕಾಷ್ಟಕರನೇ| ಕುಂಡಲ ಸುಕಮಂಡಲ ಭೂಷಿತನೇ| ಕಾವುದೋ ಎನ್ನ ವಾಮನ ರೂಪ 5 ಸುಜನರ ಪ್ರತಿ-ಪಾಲಾ ರಾಜಾಕುಲಾಂತಕನೇ| ರಾಜಿಸುತಿಹ ವರ ಪರಶುಧರನೇ| ಕಾವುದೋ ಎನ್ನಾ ಭಾರ್ಗವರೂಪಾ6 ಋಷಿಯ ಮಖ ಕಾಯಿದು ಶಶಿಧರಧನು ಮುರಿದೇ| ದಶಮುಖ ಕುಂಭಕರ್ಣರ ಮರ್ದಿಸಿದೆ| ಕಾವುದೋ ಎನ್ನಾ ರಾಘವ ರೂಪ7 ಎಣೆಗಾಣದ ಮಡುವಿನಲಿ| ಫಣಿವರ ಫಣಿಮ್ಯಾಲ| ಕುಣಿದೆ ಆನಂದದಿ ಕೊಳಲನೂದುತ್ತಲೇ| ಕಾವುದೋ ಎನ್ನಾ ಯಾದವ ರೂಪ8 ಮೂರೆನಿಪ ಪುರದಲಿ| ನಾರೇಶ ದೃತವಳಿದೇ| ಭೂರಿ ಸಜ್ಜನ ಹೃದ್ವ ನಜ್ಜದೊಳಾಡಿದೇ| ಕಾವುದೋ ಎನ್ನಾ ಬೌದ್ದ ಸ್ವರೂಪಾ9 ಸಲಹಬೇಕೆಂದು ಜಗವಾ| ಇಳೆಯಾ ಭಾರರ ತರಿದೇ| ಸುಲಲಿತ ಕುದುರೆಯ ಏರಿ ಮೆರೆದೆ| ಕಾವಿದೋ ಎನ್ನ ಕಲ್ಕಿಸ್ವರೂಪ 10 ಸಹಕಾರಿ ಭಕ್ತರಿಗೇ| ಮಹಿಮೆ ದೋರಿದೆ ಹೀಗೆ| ಮಹಿಪತಿ ಸುತ ಪ್ರಭು ಸಲಹು ನೀಯೆನಗೆ| ಕಾವುದೋ ಎನ್ನಾ ಅನಂತರೂಪ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು