ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ರಾಗವ ಮಾಡಲ್ಯಾ ನಾನು ಬ್ಯಾಗನೆ ಸಾನುರಾಗದಿ ಹರಿಯು ತಾನೇ ಮಾಡಿಸುವಾ ಪ ದಾನವ ದ್ವಿಪ ವೃಂದ ಮಾನನದಿ ಕರ್ಚಿದ ಮಾನನಿಧಿ ಕೇಸರಿಯೋ ಶ್ರೀಹರಿಯೋ ಅ.ಪ. ಅಜ್ಞಾನ ತಮದೊಳಗೆ ಸುಜ್ಞಾನಿಗಳು ಬಳಲೆ ತಜ್ಞಾನಪೂರ್ಣ ಸರ್ವಜ್ಞರವತರಿಸಿ ಅಜ್ಞಾನದಿಂದ ಗತಿಯಕ್ಕುದೆಂದರುಹಿಸಿದ ಸುಜ್ಞಾನ ದರ್ಪಣವೋ ಶ್ರೀ ಧನವೊ 1 ಕರ್ಮದಿಂದಲೆ ಭಕ್ತಿ ವೈರಾಗ್ಯ ವಿಜ್ಞಾನ ಧರ್ಮವರಿಯಲು ಮುಕ್ತಿಪಥಕೆ ಸೋಪಾನ ಮರ್ಮವರಿಯದೆ ವಿಷಯ ಕಾನನದಿ ಚರಿಸುವ ನರರಿಗೆ.... ಶ್ರೀವರನೊ 2 ವನರುಹಭವಾಂಡದೊಳು ಕುನರ ಸಸಿಗಳು ಬೆಳೆದು ಸುನರ ಕಮಲವು ತೋರದಂತೆ ಮುಸುಕೆ ವನಜದಂದವ ತೋರೆ ನರಸಿಂಹವಿಠಲಾಖ್ಯ ಮುನಿದು ಸದೆ ಬಡೆÉದಗದವೋ ಶ್ರೀ ಮುದವೊ 3
--------------
ನರಸಿಂಹವಿಠಲರು
ಮರೆಯದಿರು ಶ್ರೀ ಹರಿಯನು ಪ.ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನಕರೆದವಗೆ ಸಾಯುಜ್ಯವಿತ್ತ ನಾರಾಯಣನಸ್ಮರಣೆಯನು ಮಾಡುವರಚರಣ ಸೇವಕರಿಂಗೆಪರಮಪದವೀವ ಹರಿಯಅಪದೇವಕಿಯ ಬಂಧುವನು ಪರಿದವನ ಪೂತನಿಯಜೀವರಸವೀಂಟಿದನ ಮಾವನನು ಮಡುಹಿದನಪಾವನ ತರಂಗಿಣಿಯ ಪದನಖದಿ ಪಡೆದವನಗೋವರ್ಧನೋದ್ಧಾರನ ||ದಾವಾನಲನ ಪಿಡಿದು ನುಂಗಿದನ ಲೀಲೆಯಲಿಗೋವತ್ಸ ಗೋಪಾಲ ರೂಪವನು ತಾಳ್ದವನದೇವಮುನಿ ಮುಖ್ಯ ಸುರರಾರಾಧಿಸುವನ ಶ್ರೀ ಪಾದವನುಭಜಿಸು ಮನವೆ 1ಕಂಜಸಂಭವಪಿತನ ಕರುಣಾಪಯೋನಿಧಿಯಕುಂಜರನ ನುಡಿಕೇಳಿ ಒದಗಿದನ ರಣದೊಳು ಧ-ನಂಜಯನ ಜೀವವಂ ಕೃಪೆಯಿಂದ ಕಾಯ್ದವನಆಂಜನೇಯನ ನಾಳ್ದನ ||ರಂಜಿಸುವ ಕೌಸ್ತುಭವಿಭೂಷಣನ ಜಲಧಿಯಲಿನಂಜಿನೊಡೆಯನ ಮೇಲೆ ಮಲಗಿದನ ತಮದೊಳಗೆ ಪ -ರಂಜ್ಯೋತಿಮಯನಾಗಿ ಬೆಳಗುವನಶ್ರೀ ಚರಣಕಂಜವಂ ಭಜಿಸು ಮನವೆ 2ವಾರಿಧಿಯೊಳಾಡಿದನ ವರಗಿರಿಯ ತಾಳಿದನಧಾರಿಣಿಯ ತಂದವನ ದೈತ್ಯನನು ಕೊಂದವನಮೂರಡಿಯಲಳೆದವನ ಮೊನೆಗೊಡಲಿ ಪಿಡಿದವನ ನೀರಧಿಯಬಂಧಿಸಿದನ||ದ್ವಾರಕೆಯನಾಳ್ದವನ ತ್ರಿಪುರಗಳ ಜಗುಳ್ದವನಚಾರುಹಯವೇರಿದನ ಸಕಲ ಸುಜನರ ಪೊರೆವಧೀರ ಪುರಂದರವಿಠಲನ ಚರಣಕಮಲವನುನಂಬಿ ನೀ ಭಜಿಸು ಮನವೇ 3
--------------
ಪುರಂದರದಾಸರು