ಒಟ್ಟು 7 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳೀವಲ್ಲದಿದು ಎನಗೆ ತಿಳಿಸಯ್ಯ ಹರಿಯೆ ಬಲುಪಾಪಿಜೀವಿಯ ತಪ್ಪಾರಿಗಿಹ್ಯದೋ ಪ ಹುಟ್ಟಿಸಿದವನಿಗೋ ಹುಟ್ಟಿ ಬಂದವನಿಗೋ ಸೃಷ್ಟಿಗೊಳಿಸಿದಂಥ ಸೃಷ್ಟಿ ಕರ್ತನಿಗೋ ಗಟ್ಟ್ಯಾಗಿ ನನಗಿದರ ಗುಟ್ಟು ತಿಳಿಸೈ ತಂದೆ ಮುಟ್ಟಿಭಜಿಸುವೆ ನಿನ್ನ ಶ್ರೀಕೃಷ್ಣರಾಯ 1 ಗೋಡೆಯ ಡೊಂಕಿರಲು ಗೋಡೆಯ ತಪ್ಪಥವ ಗೋಡೆಯನು ಕಟ್ಟಿದ ಗೌಂಡಿಯ ತಪ್ಪೋ ಕೂಡಿಟ್ಟು ಹಣ ವೆಚ್ಚಮಾಡಿ ಕಟ್ಟಿಸಿದಂಥ ಗೋಡೆಯೊಡೆಯನ ತಪ್ಪೋ ತಿಳಿಹೇಳೆನಗೆ 2 ಬಂಡಿ ತಗ್ಗಿಗೆ ಬೀಳೆ ಬಂಡಿದೇ ತಪ್ಪಥವ ಬಂದಡರಿ ಕೂತುಕೊಂಡವರದೆ ತಪ್ಪೋ ಬಂಡಿಹೊಡೆಯುವಂಥ ದಿಂಡೆಗಾರನ ತಪ್ಪೋ ಕಂಡು ಇದ್ದಂತ್ಹೇಳೋ ಪಂಢರಿರಾಯ 3 ಜೀವಾಳ ಅಪಸ್ವರ ನುಡಿಯಲದರದೇ ತಪ್ಪೋ ಜೀವಾಳ ಬಾರಿಸುವಗೋ ಜೀವಾಳ ಕರ್ತನಿಗೋ ಆವಂಗೆ ತಪ್ಪು ಜಗಜೀವ ಜೀವೇಶನೆ ನ್ಯಾ ಯಾವಾಗ್ಹೇಳಯ್ಯ ಭಾವಜಪಿತನೆ 4 ಪ್ರಾಣೇಶ ಶ್ರೀರಾಮ ನೀನೆ ಬರೆದಿಹ್ಯ ಬರೆಹ ನೀನೆ ವ್ಯಾಪಕ ಸರ್ವ ನೀನೆ ರಕ್ಷಕನೋ ನೀನೆ ಸ್ವಾತಂತ್ರ್ಯಾಖಿಲ ಏನಿಲ್ಲ ಮನುಜನಾ ಧೀನ ತಪ್ಪ್ಯಾಕಿವಗೆ ನೀನೆ ಪೇಳಯ್ಯ 5
--------------
ರಾಮದಾಸರು
ನನ್ನಿಂದ ನಾನೇ ಜನಿಸಿ ಬಂದೆನೆ ದೇವಎನ್ನ ಸ್ವತಂತ್ರವು ಲೇಶವಿದ್ದರು ತೋರು ಪ ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆನಿನ್ನದು ತಪ್ಪೋ ನನ್ನದು ತಪ್ಪೋ ಪರಮಾತ್ಮಅ ಜನನಿಯ ಜಠರದಲಿ ನವಮಾಸ ಪರಿಯಂತಘನದಿ ನೀ ಪೋಷಿಸುತಿರೆ, ನಾನುಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದವನಜಾಕ್ಷ ನೂಕಿದವನು ನೀನಲ್ಲವೆ 1 ಎಲವುಗಳ ಜಂತೆ ಮಾಡಿ ನರಗಳ ಹುರಿಯಿಂಹೊಲಿದು ಚರ್ಮವ ಹೊದಿಸಿ ದೇಹದೊಳುಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿನೆಲಸಿ ಚೇತನವನಿತ್ತವ ನೀನಲ್ಲವೆ 2 ಜನಿಸಿದಾರಭ್ಯದಿಂದ ಇಂದಿನ ಪರಿಯಂತಘನಘನ ಪಾಪ ಸುಕರ್ಮಂಗಳನುಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲಅನುಭವಿಸುವುದು ಜೀವನೊ ನೀನೊ ದೇವ 3 ಅಂಧಕನ ಕೈಲಿ ಕೋಲಿತ್ತು ಕರೆದೊಯ್ಯುವಾಮುಂದಾಳು ತಪ್ಪಿ ಗುಂಡಿಗೆ ಕೆಡಹಲುಅಂಧಕನ ತಪ್ಪೊ ಅದು ಮುಂದಾಳಿನ ತಪ್ಪೊಹಿಂದಾಡಬೇಡ ಎನ್ನೊಳು ತಪ್ಪಿಲ್ಲವೊ 4 ಕಂದನ ತಾಯಿ ಆಡಿಸುವಾಗ ಅದು ಪೋಗಿಅಂದಿ ಬಾವಿಯ ನೋಡುವುದನು ಕಂಡುಬಂದು ಬೇಗನೆ ಬಾಚಿ ಎತ್ತಿಕೊಳ್ಳದಿದ್ದರದುಕಂದನ ತಪ್ಪೊ ಮಾತೆಯ ತಪ್ಪೊ ಪರಮಾತ್ಮ 5 ಭಾರ ನಿನ್ನದೊ ದೂರು ನಿನ್ನದೊ ಕೃಷ್ಣನಾರಿ ಮಕ್ಕಳು ತನುಮನ ನಿನ್ನದಯ್ಯಕ್ಷೀರದೊಳಗದ್ದು ನೀರೊಳಗದ್ದು ಗೋವಿಂದಹೇರನೊಪ್ಪಿಸಿದ ಮೇಲೆ ಸುಂಕವೆ ದೇವ 6 ನ್ಯಾಯವಾದರೆ ದುಡುಕು ನಿನ್ನದೊ, ರಂಗ, ಮತ್ತ-ನ್ಯಾಯವಾದರೆ ಪೇಳುವರಾರುಮಾಯಾರಹಿತ ಕಾಗಿನೆಲೆಯಾದಿಕೇಶವಕಾಯಯ್ಯ ತಪ್ಪನೆಣಿಸದೆ ದೇವ 7
--------------
ಕನಕದಾಸ