ನಿನ್ನನಲ್ಲದೆ ಯಾರ ಸನ್ನುತಿಸಿ ಫಲವೇನೋ
ಪನ್ನಗಾದ್ರಿನಿವಾಸ ಶ್ರೀವೆಂಕಟೇಶ ಪ
ಮನ್ನಣೆಯು ಬೇಡಯ್ಯ ಎನ್ನ ತಪ್ಪುಗಳನ್ನು
ಮನ್ನಿಸೆಂದೊರಲುವೆನು ಶ್ರೀವೆಂಕಟೇಶ ಅ.ಪ
ತಪ್ಪುಹಾದಿಯ ಹಿಡಿದು ಬೆಪ್ಪನಾಗಿರುವೆನ್ನ
ಒಪ್ಪಿ ಪರಿಪಾಲಿಸುವ ಅಪ್ಪ ನೀನೋ
ತಪ್ಪೊಪ್ಪುಗಳನೆಲ್ಲಾ ಒಪ್ಪಿಸಿದೆ ನಿನಗೆ
ತಿಮ್ಮಪ್ಪ ಮಾಂಗಿರಿವಾಸ ಕೈಹಿಡಿದು ಕಾಯೋ 1