ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಪಿಸದಿರು ಸ್ವಾಮಿ ಶ್ರೀ ನರಸಿಂಹ ಪ. ಕೋಪಿಸದಿರು ಕರುಣಾಪಯೋನಿಧಿಯೆ ಮ- ಹಾಪರಾಧಗಳನು ಲೇಪಗೊಳಿಸದಿರು ಅ.ಪ. ಮಧ್ವ ವಲ್ಲಭ ನಿನ್ನ ಸೇವೆಯ ನಡಸುವ ಮಧ್ಯ ಮಧ್ಯದೊಳೆದ್ದು ಹೋದ ತಪ್ಪು ಶುದ್ಧಿಯಿಲ್ಲದ ತಪ್ಪು ಸೂಕ್ತಿ ಪಾಠಗಳೊಳಾ- ಬದ್ಧ ಬರುವ ತಪ್ಪೆನಿದ್ದರು ಕ್ಷಮಿಸಿನ್ನು 1 ಸಂಸಾರ ಲಂಪಟನಾಗಿ ಬಳಲುವೆನು ಕಂಸಾರಿ ನಿನಗಿನ್ನು ಪೇಳ್ವದೇನು ಹಂಸವಾಹನ ಪೀಠ ಹಲಧರನನುಜನೆ ಸಂಶಯಿಸದೆ ಎನ್ನ ಕಾಯೊ ಕಮಲನಾಭ 2 ಪತಿತಜನರಿಗಧಿಪತಿಯಾಗಿರುವೆ ನಾನು ಮತಿಹೀನನೆಂಬುದ ಬಲ್ಲಿ ನೀನು ಪಾದ ಪದ್ಮವೆ ಇನ್ನು ಗತಿ ಎಂದು ನಂಬಿದನ ಮೇಲೆ ಮುನಿಸಿನ್ನೇನು 3 ಪಾತಕ ಕಡಲೊಳು ಪೊರಳುತ ನೆರಳುತ ಯಾತರಿಂದಲು ಏಳಲಾರದಿನ್ನು ಶ್ರೀ ತರುಣಿಯವರ ನಿನ್ನ ಸೇರಿದ ಜಗ ನ್ನಾಥ ದಾಸರ ಪಾದದವಲಂಬಗೊಂಡೆನು 4 ಶ್ರೀಶ ಶೇಷಗಿರೀಂದ್ರ ವಾಸ ನಿನ್ನನೆ ನಂಬಿ ದಾಸ ಕೂಟದಿ ಸೇರಿಕೊಂಡಿಹೆನು ಣಾ ಸಮುದ್ರನೆ ಎನ್ನ ಕಾವದುಚಿತವಿನ್ನು 5
--------------
ತುಪಾಕಿ ವೆಂಕಟರಮಣಾಚಾರ್ಯ
ನಾರಸಿಂಹನೆ ಎನ್ನ | ದುರಿತೌಘಗಳನು ದೂರಕೈದಿಸಿ ಘನ್ನ | ಕರುಣಾವಲೋಕನ ಭವ ಭಯವನ್ನ | ಬಿಡಿಸಯ್ಯ ಮುನ್ನ ಪ ಧೀರ ಸುಜನೋದ್ಧಾರ ದೈತ್ಯ ವಿ ದೂರ ಘನಗಂಭೀರ ಶೌರ್ಯೋ ಧಾರ ತ್ರಿಜಗಾಧಾರ ಎನ್ನಯ ಭಾರ ನಿನ್ನದೊ ಹೇ ರಮಾವರ ಅ.ಪ. ಏನು ಬಲ್ಲೆನೊ ನಾನು | ಸುಜ್ಞಾನ ಮೂರುತಿ ಮಾನಸಾಬ್ಜದಿ ನೀನು | ನೆಲೆಯಾಗಿ ನಿಂತು ಏನು ನುಡಿಸಲು ನಾನು | ಅದರಂತೆ ನುಡಿವೆನು ಜ್ಞಾನದಾತನೆ ಇನ್ನು | ತಪ್ಪೆನ್ನೊಳೇನು ಸ್ನಾನ ಜಪತಪ ಮೌನ ಮಂತ್ರ ಧ್ಯಾನಧಾರಣ ದಾನ ಧರ್ಮಗ- ಳೇನು ಮಾಡುವುದೆಲ್ಲ ನಿನ್ನಾ- ಧೀನವಲ್ಲವೆ ಶ್ರೀನಿವಾಸನೆ ದಾನವಾಂತಕ ದೀನರಕ್ಷಕ ಧ್ಯಾನಿಪರ ಸುರಧೇನುವೆನ್ನುವ ಮಾನವುಳ್ಳವರೆಂದು ನಂಬಿದೆ ಸಾನುರಾಗದಿ ಕಾಯೊ ಬಿಡದೆ 1 ತಂದೆತಾಯಿಯು ನೀನೆ | ಗೋವಿಂದ ಎನ್ನಯ ಬಂಧು ಬಳಗವು ನೀನೆ | ಮು- ಕುಂದ ಗುರುಸಖ ವಂದ್ಯದೈವವು ನೀನೆ ನೀನೆ | ಆನಂದ ನೀನೆ ಹಿಂದೆ ಮುಂದೆಡಬಲದಿ ಒಳಹೊರ- ಗೊಂದು ಕ್ಷಣವಗಲದಲೆ ತ್ರಿದಶರ ವೃಂದ ಸಹಿತದಿ ಬಂದು ನೆಲಸಿ ಬಂದ ಬಂದಘಗಳನು ಹರಿಸಿ ನಂದವೀಯುತಲಿರಲು ಎನಗಿ- ನ್ನೆಂದಿಗೂ ಭಯವಿಲ್ಲ ತ್ರಿಕರಣ- ಕರ್ಮ ನಿನ್ನರು ಎಂದು ಅರ್ಪಿಸುವೆನು ನಿರಂತರ 2 ಪ್ರೀಯ ನೀನೆನಗೆಂದು | ಮರೆಹೊಕ್ಕು ಬೇಡುವೆ- ನಯ್ಯ ಗುಣಗಣಸಿಂಧು | ಮೈಮರೆಸಿ ವಿಷಯದ ಹುಯ್ಲಿಗಿಕ್ಕದಿರೆಂದು | ಶರಣನ್ನ ಬಿನ್ನಪ ಇಂದು | ಕೈಬಿಡದಿರೆಂದು ತಾಯನಗಲಿದ ತನಯನಂದದಿ ಬಾಯ ಬಿಡಿಸುವರೇನೊ ಚಿನ್ಮಯ ನ್ಯಾಯ ಪೇಳುವರ್ಯಾರೊ ನೀನೊ ಸಾಯಗೊಲುತಿರೆ ಮಾಯಗಾರನೆ ತೋಯಜಾಸನ ಮುಖ್ಯ ಸುಮನಸ ಧ್ಯೇಯ ಶ್ರುತಿ ಸ್ಮøತಿ ಗೇಯ ಕವಿಜನ ಗೇಯ ಚತುರೋಪಾಯ ಭಕ್ತ ನಿ- ಕಾಯ ಪ್ರಿಯ ಶ್ರೀಕಾಂತ ಜಯ ಜಯ
--------------
ಲಕ್ಷ್ಮೀನಾರಯಣರಾಯರು
ಏನು ರಂಗ ದೂರ ನೋಡುವೆಪ್ರಾಣನಾಥ ದೂರ ನೋಡುವೆ ಪ.ಒಳ್ಳೆ ನಾರಿಯರೊಳು ಮನವಿಟ್ಟು ನೀನನ್ನಸಲ್ಲದವಳ ಕೈಯವಿಡಿದ್ಯೇಕೆ ಮೊದಲಿಗೆ 1ಏಸುಮನೆಯ ಹೊಕ್ಕು ದಣಿದೆ ಕಾಣದೆ ಕೃಷ್ಣಆಸು ಮನೆಯೊಳು ನೀನಿದ್ದು ಕಾಣಿಸಿಕೊಳ್ಳೆ 2ನಿನ್ನವಳೆನಿಸಿದ ಬಳಿಕ ಮಾತಾಡದೆಅನ್ಯಾಶ್ರಯ ನನಗಿದ್ದರೆ ಹೇಳು ನನ್ನಾಣೆ 3ನೀ ಪರಿಹರಿಸಲಾರದ ತಪ್ಪೆನ್ನಲ್ಲುಂಟೇನೊಈ ಪರಿಗಾಳ ಬಳಲಿಸಿ ಸುಮ್ಮನೆ 4ದೂರ ನೋಡಿದರೆ ನೀನೋಡುನಾ ಬಿಡೆನೆಂಬೆದೂರ ಸಾರಿ ನಿನ್ನ ಪೋಗಲಾರೆ ಪ್ರಸನ್ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು
ಮಾರಿತೋರೆ ನೀರೆ ಕರೆಯ ಬಾರೆ ಪ.ನಾಗವೇಣಿಯರು ನಿನ್ನ ಬಾಗಿಲಿಗೆ ಬಂದರೆಹ್ಯಾಂಗ ಮಾಡಲಿಯೆಂದುಹೋಗಿ ಕೋಣಿಯನ್ಹೊಕ್ಕೆ 1ಚದುರೆ ನಮ್ಮನೆಗೆ ಬಂದು ಒದರಿ ಆಣಿಯನಿಟ್ಟೆಒದರಿ ಆಣಿಯನಿಟ್ಟೆಕದನತೆಗೆದ್ಹೋಗಿ ಗದಗದ ನಡಗುವಿ2ವಾಸುದೇವರ ತಂಗಿ ಸೋಸಿಲಾಣಿಯನಿಟ್ಟುಸೋಸಿಲಾಣಿಯನಿಟ್ಟ ಶ್ರೀಶನಸತಿಯರು ದಾಸಿ ಎನಿಸುವರೇನ 3ಸರ್ಪಶಯನನ ತಂಗಿ ಒಪ್ಪಾಗಿ ಆಣಿಯನಿಟ್ಟುಒಪ್ಪಾಗಿ ಆಣಿಯನಿಟ್ಟು ಗಪ್ಪಾಗಿ ಕುಳಿತಿಯಾಕತಪ್ಪು ತಪ್ಪೆನ ಬಾರ 4ಉಲ್ಲಾಸದಿಂದ ಆಣೆಗುಲ್ಲು ಮಾಡುತ ಇಟ್ಟೆಗುಲ್ಲುಮಾಡುತಲಿಟ್ಟೆ ನಲ್ಲೆಯರು ಬರಲುಎದೆ ಝಲ್ಲು ಝಲ್ಲೆನುತಿರೆ 5ಚಿಕ್ಕ ಬುದ್ದಿಂದ ಆಣೆ ಇಕ್ಕಿ ಇಲ್ಲಿಗೆ ಬಂದೆಇಲ್ಲಿಗೆಬಂದ ಪುಟ್ಟ ಸುಭದ್ರಾಒಳಗೆ ಹೊಕ್ಕು ಹೊರಗೆ ಹೊರಡಲೊಲ್ಲೆ 6ಪೋರಬುದ್ದಿಯಿಂದ ಸಾರಿ ಆಣೆಯನಿಟ್ಟೆಸಾರಿ ಆಣಿಯನಿಟ್ಟೆನಾರಿರುಕ್ಮಿಣಿ ಬರಲು ಹಾರುತಿದೆ ಎದೆ 7ನಕ್ಕರೆಂಬೋ ಭೀತಿ ಇಕ್ಕಿ ಮೂಲೆಗೆ ಬಂದೆಇಕ್ಕಿ ಮೂಲೆಗೆ ಅಕ್ಕ ರುಕ್ಮಿಣಿಗೆಆಣಿಸೊಕ್ಕಿನಿಂದÀಲೆ ಇಟ್ಟೆ 8ರಮಿ ಅರಸನ ತಂಗಿ ಹೆಮ್ಮಿಲಾಣಿಯನಿಟ್ಟೆಆಣಿಯನಿಟ್ಟೆ ನಮ್ಮ ಕಾಣುತಒಳಗೆ ಗುಮ್ಮನಂತಡಗಿದಿ 9
--------------
ಗಲಗಲಿಅವ್ವನವರು