ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಪರಿಪೂರ್ಣ ಕಾಮ ಪಟ್ಟಾಭಿರಾಮ ತನ್ನ ಸ್ಮರಿಸುವ ಜನಕೀವನು ಕ್ಷೇಮ ಪ ಭಾಸ್ಕರವಂಶ ಭೂಷಣ ತರಣಿಜಮಿತ್ರ ಭವ್ಯ ಚರಿತ್ರ | ದಾಶರಥಿ ಕರುಣಾಳು ಸರೋಜನೇತ್ರ ಅ.ಪ ಜಡಮತಿಯಾದರೂ ಇವನ | ಮರೆಯಾ ಇನ್ನು ಧೃಢಮತಿಗೆ ತನ್ನನೇ ಕೊಡುವೆನೈಯ್ಯಾ 1 ತಮ್ಮೋಳು ತಾವು ತಿಳಿದು | ಭಜಿಸುವರು ಇನ್ನು ಹೆಮ್ಮೆಯ ಮಾತುಗಳು ಬಿಡಿರಿ ಜನರು 2 ರಾಮನು ನರನೆಂಬ ಪಾಮರನ ಬಾಯಲಿ ಮಣ್ಣು ಸೋಮಶೇಖರ ತನ್ನ ಸತಿಗೆ | ಪೇಳಿದ ಇವನ ನಾಮದ ಮಹಿಮೆ ಕುಣಿಕುಣಿದು 3 ನಿರುತಾ ಪೊಗಳುವವಿವನ ವೇದ | ಇವನಾ ಚರಣೆ ಸಜ್ಜನರಿಗೆ ಬಲುಸ್ವಾದ 4 ಸೇತುವೆ ಕಟ್ಟುವುದುಂಟೆ ಕೋತಿದಂಡುಗಳೆಲ್ಲಾ ವ್ರಾತ ರಹಸ್ಯವೇತಕೆ ಚಿಂತೆ 5 ಹೊರಗಿನ ಕಣ್ಣಿಂದ ಅರಿಯಲು ಸಾಧ್ಯವಲ್ಲಾ ನೆರೆ ಒಳಗಣ್ಣಲಿ ನೋಡಬೇಕು | ಸ ದ್ಗುರು ಕಟಾಕ್ಷವಾದವಗೆ ಜೋಕು 6 ಪ್ರತ್ಯಕ್ಷವಾದಿಗಳಿಗೆ ಮೃತ್ಯುವಿನ ಬಾಯೊಳು ಸತ್ತು ಹುಟ್ಟುವುದು ತಪ್ಪುವುದಿಲ್ಲಾ | ಆ ಪತ್ತು ಇದೇ ದುರ್ಜನಿರಿಗೆಲ್ಲಾ 7 ಮಗನು ಬ್ರಹ್ಮನು ಮೊಮ್ಮಗನು ರುದ್ರನು ಮೂ ಜಗವನಾಳುವ ನಾರಾಯಣನಿವನು | ತಾನು ಮಗುವಾಗಿ ದಶರಥಗುದಿಸಿದನು 8 ಮುನಿ ಯಾಗವ ಪಾಲಿಸಿ ವನಿತೆಯ ಶಾಪ ಬಿಡಿಸಿ ತನ್ನೊಳಗಿಟ್ಟು ತಾ ಹುಡುಕಿದನು 9 ನರನಾಗಿ ದೈತ್ಯರ ಮುರಿದು ದೇವತೆಗಳಿಗೆ ಗರಸನಾಗಿ ಸಾಕೇತಪುರದಿ ಪೊಳೆದ 10 ನರನು ಪಾಮರನು ಹ್ಯಾಗೆ ತಿಳಿಯುವನು | ಸಂಸೃತಿ ಶರಧಿಯೊಳು ಬಿದ್ದು ಬಳಲುವನು11
--------------
ಗುರುರಾಮವಿಠಲ
ಮರುಳು ಜೀವ ಏನು ಕಾಣುವೆ ಕೊನೆಗೆ ಪ ಸರ್ವಸಮರ್ಪಣೆ ಮಾಡದೆ ಇದರೊಳು ಅ.ಪ ಯಮನವರೆಳೆಯದೆ ಬಿಡುವರೆ ಛೀ ಹುಚ್ಚಾ 1 ಇಂದ್ರಿಯಂಗಳು ನಿನ್ನಾಧೀನವಲ್ಲ ಬಂದಮಾರ್ಗ ಸುಖ ಮರೆತು ಹೋದೆಯಲ್ಲ ಮುಂದಿನ ಗತಿ ಗೋತ್ರ ಮೊದಲಿಗೆ ಇಲ್ಲ ಮುಪ್ಪುತನವು ಹತ್ತಿರೇ ಬಂದಿತಲ್ಲ 2 ಕರ್ಮವೆಂಬುವುದೊಂದು ಅನಾದಿಯಾಗಿ ಧರ್ಮವ ಗಳಿಸುವವನೆ ಪರಮತ್ಯಾಗಿ ನಿರ್ಮಲ ಮನದಿ ದುರಾಶೆಯ ನೀಗಿ ಮರ್ಮವನರಿತುಕೊಂಡವನೇ ಮಹಾಯೋಗಿ3 ಭೋಗದಾಸೆಯ ಬಿಡು ಮೂರುದಿನದ ಬಾಳು ಕೂಗುತಿಹವು ಶೃತಿ ಸ್ಮøತಿಪುರಾಣಗಳು 4 ಸತಿಸುತರನು ನಾನೆ ಸಾಕುವೆನೆಂದು ಮತಿಗೆಟ್ಟು ಭ್ರಾಂತಿ ಹೊಂದುವೆ ನೀ ಮುಂದು ಮಿತಿಯ ಬರಹ ತಪ್ಪುವುದಿಲ್ಲ ಎಂದು ಪತಿ ಗುಣಸಿಂಧು 5 ಆಹಾರ ನಿದ್ರೆಯಲ್ಲವೆ ನಿನ್ನ ಆಟ ಸಾಹಸ ನೋಡೆ ಮಾಳಿಗೆಯ ಓಡ್ಯಾಟ ಮೋಹದಿಂದಲಿ ಮುಂದೆ ಬರುವುದು ಗೂಟ ಮೂಜಗದೊಳಗೆಲ್ಲಾ ಇದು ಗೊಂಬೆ ಆಟ 6 ಕಾಮಕ್ರೋಧಗಳು ಬಿಡಲಾರೆಯೇನೊ ಪಾಮರ ಜೀವ ಅಸ್ವಾತಂತ್ರಾ ನೀನೊ ಯಾಮಯಾಮಕೆ ಗುರುರಾಮವಿಠಲನಂಘ್ರಿ ನೇಮದಿಂದಲಿ ಭಜಿಸಿ ಸುಖವಾಗುವುದು ಕಾಣೊ7
--------------
ಗುರುರಾಮವಿಠಲ
ಎಚ್ಚರದಲಿ ನಡೆ ಮನವೆ - ನಡೆಮನವೆ - ಮುದ್ದುಅಚ್ಯುತನ ದಾಸರ ಒಡಗೂಡಿ ಬರುವೆ ಪ.ಧರ್ಮವ ಮಾಡುವುದಿಲ್ಲಿ - ಇನ್ನುಬ್ರಹ್ಮನ ಸಭೆಯ ತೋರುವರು ಮುಂದಲ್ಲಿಕರ್ಮಯೋಜನೆಗಳು ಇಲ್ಲಿ - ಬೆನ್ನಚರ್ಮವ ಸುಲಿಸಿ ತಿನ್ನಿಸುವರು ಅಲ್ಲಿ 1ಅನ್ನದಾನವ ಮಾಳ್ಪುದಿಲ್ಲಿ - ಮೃಷ್ಟಾನ್ನವ ತಂದು ಮುಂದಿಡುವರು ಅಲ್ಲಿಅನ್ಯಾಯ ನುಡಿಯುವುದಿಲ್ಲಿ - ಭಿನ್ನಭಿನ್ನವ ಮಾಡಿ ತಿನ್ನಿಸುವರು ಅಲ್ಲಿ 2ಮೋಸವ ಮಾಡುವದಿಲ್ಲಿ - ಸೀಸಕಾಸಿ ಬಾಯೊಳಗೆ ಹೊಯ್ಯುವರಲ್ಲಿದಾಸರ ಪೂಜಿಪುದಿಲ್ಲಿ - ಉರ್ವೀಶಾಧಿಪತಿ ಬಂದನೆಂಬರು ಅಲ್ಲಿ 3ವಂಚನೆ ಮಾಡುವದಿಲ್ಲಿ - ಕಾದಹಂಚಿನ ಪುಡಿಯ ತಿನ್ನಿಸುವರು ಅಲ್ಲಿಪಂಚಾಮೃತದ ಪೂಜೆ ಇಲ್ಲಿ ನಿನಗೆಕಂಚು - ಕಾಳಾಂಜಿಯ ಪಿಡಿದಿಹರಲ್ಲಿ 4ಚಾಡಿಯ ನುಕಿವುದು ಇಲ್ಲಿ ಅದ -ನಾಡಿದ ನಾಲಗೆ ಸೀಳುವರಲ್ಲಿಬೇಡಬಂದರೆ ಬಯ್ವುದಿಲ್ಲಿ ನಿನ್ನ -ಓಡಾಡುವ ಕಾಲು ಕತ್ತರಿಪರಲ್ಲಿ 5ಮದ್ದಿಕ್ಕಿ ಕೊಲ್ಲುವುದಿಲ್ಲಿ ಒದ್ದು -ಹದ್ದು ಕಾಗೆಗಳಿಗೆ ಈಯುವರಲ್ಲಿಕ್ಷುದ್ರ ಬುದ್ಧಿಯ ನಡೆಪುದಿಲ್ಲಿ ದೊಡ್ಡ -ಗುದ್ದಲಿ ಬೆನ್ನೊಳು ಎಳೆಯುವರಲ್ಲಿ 6ಕೊಟ್ಟಭಾಷೆಗೆ ತಪ್ಪುವುದಿಲ್ಲಿ ಕೈಯ -ಕಟ್ಟಿ ಈಟಿಯಿಂದ ಇರಿಯುವರಲ್ಲಿಕೊಟ್ಟ ಧರ್ಮವ ನಡೆಸುವುದಿಲ್ಲಿ ಬಲುಶ್ರೇಷ್ಠ ನೀನೆಂದು ಕೊಂಡಾಡುವರಲ್ಲಿ 7ಆಲಯದಾನವು ಇಲ್ಲಿ ವಿ -ಶಾಲ ವೈಕುಂಠನ ಮಂದಿರವಲ್ಲಿಆಲಯ ಮುರಿಯುವುದಿಲ್ಲಿ ನಿನ್ನ -ಶೂಲದ ಮೇಲೇರಿಸಿ ಕೊಲುವರಲ್ಲಿ 8ತಂದೆ ಮಾತನು ಮೀರುವುದಿಲ್ಲಿ ಹುಲ್ಲು -ದೊಂದೆಯಕಟ್ಟಿ ಸುಡಿಸುವರಲ್ಲಿತಂದೆ ತಾಯ್ಗಳ ಪೂಜೆ ಇಲ್ಲಿ ದೇ -ವೇಂದ್ರನ ಸಭೆಯ ತೋರುವರು ಮುಂದಲ್ಲಿ 9ಗಂಡನ ಬೈಯ್ಯುವುದಿಲ್ಲಿ ಬೆಂಕೆಕೆಂಡವ ತಂದು ಬಾಯಲಿ ತುಂಬುವರಲ್ಲಿಕೊಂಡೆಯ ನಡಿಸುವುದಿಲ್ಲಿ ಬೆಂಕೆಕುಂಡವ ತಂದು ತಲೆಯಲಿಡುವರಲ್ಲಿ 10ಹೊನ್ನು ಹೆಣ್ಣನು ಬಯಸುವುದಿಲ್ಲಿ ನಿನ್ನಕಣ್ಣಿಗೆ ಸುಣ್ಣವ ತುಂಬುವರಲ್ಲಿಕನ್ಯಾದಾನವ ಮಾಳ್ಪುದಿಲ್ಲಿ ನಮ್ಮಚಿನ್ನಪುರಂದರವಿಠಲನೊಲಿವನು ಅಲ್ಲಿ11
--------------
ಪುರಂದರದಾಸರು