ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯವದೋರೋ ದೇವ ಭಕುತ ಭಯನಿವಾರ ಅಭವ ಪ ದಯವದೋರೋ ನಿನ್ನ ಪಾವನಪಾದ ಸು ಸೇವಕ ಜನಮಹಜೀವ ಜಾನಕೀಧವ ಅ.ಪ ಪಾಪಗೆಲಿಯ ಬಂದೆ ಸಂಸಾರ ಕೂಪದೊಳಗೆ ನಿಂದೆ ಕೋಪಜ್ವಾಲದಿ ಬೆಂದೆ ವಿಷಯ ತಾಪತ್ರಯದಿನೊಂದೆ ಆ ಪರಲೋಕದ ವ್ಯಾಪಾರ ಮರೆದಿಹ್ಯ ದ್ವ್ಯಾಪಕನಾಗಿ ಬಲುತಾಪಬಡುವೆ ತಂದೆ 1 ಅಂಗಮೋಹವ ಬಿಡಿಸೋ ನಿನ್ನವರ ಸಂಗವ ಕರುಣಿಸೊ ಭಂಗವ ಪರಹರಿಸೊ ಜಗದವ ರ್ಹಂಗಹನು ತಪ್ಪಿಸೊ ಮಂಗಳಾತ್ಮ ನಿನ್ನ ಮಂಗಳಾಮೂರ್ತಿ ಎನ್ನ ಕಂಗಳೋಳ್ನಿಲ್ಲಿಸಿ ಹಿಂಗದಾನಂದ ನೀಡು 2 ದೋಷದಾರಿದ್ರ್ಯ ಹರಿಸೊ ಮನದ ಅಶಾಪಾಶ ಬಿಡಿಸೊ ಹೇಸಿಪ್ರಪಂಚ ಗೆಲಿಸೊ ಸುಜನರಾ ವಾಸ ತೀವ್ರ ಪಾಲಿಸೊ ದೋಷನಾಶ ಜಗದೀಶ ಶ್ರೀರಾಮ ನಿನ್ನ ದಾಸಾನುದಾಸೆನಿಸಿ ಪೋಷಿಸು ಸತತ 3
--------------
ರಾಮದಾಸರು
ಪಾಲಿಸೋ ಶ್ರೀ ಗುರುರಾಯಾ ಪ ಕಾಯ - ಭವ ಜಾಲ ತಪ್ಪಿಸೊ ಮಹರಾಯ - ಆಹಾ ಪಾಲಗು ಜನರ ಸು - ಪಾಲಕ ಹರಿಪಾದ ಭವ - ತೂಲಕಾನಲನೆ ಅ.ಪ ಶೇಷಾಂಶ ಪ್ರಹ್ಲಾದ ವ್ಯಾಸಾ - ಮುನಿ ವೇಷ ತಾಳಿದೆಯೊ ಯತೀಶಾ - ಜಾಗು ಪೋಷಣೆ ಗೈಯ್ಯೊ ಮನೀಷಾ - ಎನ್ನಾ - ಶೇಷ ಕ್ಲೇಶವಳಿದೀಶಾ - ಆಹಾ ಭವ ನಿ - ಸ್ಸೇಷ ಮಾಡಿ ಎನ್ನ ಪೋಷಿಸೊ ನಿರುತ ಧೃ - ತಾಷಾಢ ಗುರುವರ 1 ಕಾಮಧೇನು ಕಲ್ಪವೃಕ್ಷಾ - ನಿನ್ನ ಈ ಮಹಮಹಿಮೆ ನಿರೀಕ್ಷಾ - ಮಾಡಿ ಈ ಮಹಿ ಯಾಕೆಂದುಪೇಕ್ಷಾ - ಮಾಡಿ ಧಾಮ ಸೇರಿದವೊ ಭಕ್ತಪಕ್ಷಾ - ಆಹಾ ಸಾಮಜನಾಥನ ಪ್ರೇಮ ಪಾತ್ರನೆ ನಿನ್ನ ಈ ಮಹ ಮಹಿಮೆಗೆ ನಾಮಾಳ್ಪೆ ನಮೊ ನಮೊ 2 ಆಸೇತು ಹಿಮಾದ್ರಿ ತನಕಾ - ನಿನ್ನ ಆಸೆಯ ಮಾಳ್ಪರನೇಕಾ - ಅಂಥ ದಾಸಜನರಿಗೆ ಅನೇಕಾ - ಫಲ ರಾಶಿಯ ಕೊಡುವಿ ಮಜ್ಜನಕಾ - ಆಹಾ ಮಾನವ ಜನ್ಮ ಈಸೆ ಸಾಕೆಲೊ ಸ್ವಾಮಿ ಎಸು ಪೇಳಲಿ ನಿನ್ನ ದಾಸರ ದಾಸನೋ 3 ಎಲ್ಲಿ ಪೋದರು ಕಾಯ್ವರಿಲ್ಲ - ಜಗ - ದ್ವಲ್ಲಭ ಬಲ್ಲಿ ನಿನೆಲ್ಲಾ - ಬಹು ಬಲ್ಲಿದನೆಂಬುವರೆಲ್ಲಾ - ಜನ ಸೊಲ್ಲು ಕೇಳಿಬಂದೆನಲ್ಲಾ - ಆಹಾ ಪುಲ್ಲಲೋಚನ ನೀ - ನಲ್ಲದೆ ಎನ ಭವ ಣೆಲ್ಲ ಮಾತ್ರವು ಕಳೆಯೊ - ರಿಲ್ಲವೊ ಎನ್ನಜೀಯಾ 4 ನಾಥ ನಿನ್ನೊಳು ಜಗಕೆಲ್ಲ - ಮಹ ಪ್ರೀತಿಯು ಇರುತಿಹುದಲ್ಲ - ಸದ - ತಾತ ನೀನಾಗಿ ಜಗಕೆಲ್ಲಾ - ಮತ್ತೆ ಪೂತ ಫಲ ಕೊಡುವಿಯಲ್ಲಾ - ಆಹಾ ದಾತ ಗುರುಜಗ - ನ್ನಾಥವಿಠಲ ಸದಾ ಪ್ರೀತಿಂದ ಇರುವೊನು5
--------------
ಗುರುಜಗನ್ನಾಥದಾಸರು
ಕಾಯೊ ಗೋವಿಂದ ಕಾಯೊ ಮುಕುಂದಮಾಯದ ತಡಿಯ ತಪ್ಪಿಸೊ ನಿತ್ಯಾನಂದ ಪ.ನಾನಾ ಯೋನಿಯ ಸುತ್ತಿ ನೆಲೆಗಾಣದಂತಾದೆನೀನೊಲಿದಿಂದೀ ಜನ್ಮವ ಪಡೆದೆಜ್ಞಾನ ಹೊಂದಲಿಲ್ಲ ಧರ್ಮದಾಚರಣಿಲ್ಲಏನು ಗತಿಯೊ ಎನಗೆ ಮುಂದೆಸಿರಿನಲ್ಲ1ಮರ್ಕಟಗೆ ಹೊನ್ನಕೊಡ ದೊರೆತಂತಾಯಿತುಮೂರ್ಖವೃತ್ತಿಯಲಿ ಆಯುಷ್ಯ ಹೋಯಿತುನರ್ಕಸಾಧನ ಘನವಾಗಿದೆ ಪುಣ್ಯ ಸಂಪರ್ಕವ ಕಾಣೆನೈ ಕರುಣಿಗಳರಸ 2ಎನ್ನ ತಪ್ಪಿನ ಹೊಳೆ ಒಳಗೊಂಬುದು ಒಂದೆನಿನ್ನ ದಯದ ಶರಧಿಯಲ್ಲದೆಇನ್ನೇನು ಮಾರ್ಗವು ಸಿಲುಕದು ತಂದೆ ಪ್ರಸನ್ನವೆಂಕಟಪತಿಹರಿದೀನಬಂಧು3
--------------
ಪ್ರಸನ್ನವೆಂಕಟದಾಸರು