ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ರುದ್ರದೇವರಿಗೆ ಮೊರೆ) ನೀಗಿದೆನು ಸಂಸಾರ ಧನ್ಯಾಳಾದೆ ಮೂಗಣ್ಣ ತಾನೆ ಎನ್ನ ಕೈಯ ಪಿಡಿದಾ ಪ ರೋಗ ಪರಿದಿತು ಎನಗೆ ಈಗ್ಯಾಕೆ ಔಷಧವು ಜಾಗು ಮಾಡದೆ ಕಾವೋ ದೇವನಿರಲು ಭವ ಸಾಗರವ ದಾಟಿಸಿ ಈಗಲಿಯ ಭೂಮಿಗೆನ್ನಾಮ ಹಮನ [?] ತಪ್ಪಿಸಲಿ 1 ಬಳಲಿದೆನು ಸಂಸಾರದಳವು ಕಾಣದೆ ನಾನು ಭವ ದುಃಖ ಶರಧಿಯೊಳಗೆ ಉಳುಹುವರ ದಾರಿಗಣದೆ ಹರನ ಮೊರೆಯಾಗಲು ನೆಲಸಿದನು ಕರುಣಾಳು ಎನ್ನಯ ಮನದೀ 2 ನೀಲಕಂಠಗೆ ಜಯ ಫಾಲನೇತ್ರನೆ ಜಯ ಮಾಲತೀಧವ ಜಯ ವಂದಿಸುವೆ ಶಿರವಾ ಮೇಲು ನರಸಿಂಹವಿಠಲನಾಣೆ ಬೇಡುವೆ ವ್ಯಾಲ ಭೂಷಣ ಮನ್ಮನಾಲಯದಿ ನಿ ನೆಲಸು 3
--------------
ನರಸಿಂಹವಿಠಲರು
ದಾಸಜನಕೆ ಸಹಯನಾಗಬಾರದೆ ಪಾದ ಪ ಕಾಸಿನ ಋಣಕಂಜಿ ಆಶಿಸಿ ಪರರಿಂದಾ ಯಾಸದಿ ಬೇಡುವ ಭೋಗ ತಪ್ಪಿಸಲಿಕ್ಕೆ 1 ಎಂದಿಗಾದರಿದು ಒಂದಿನ ನಿಜವಾಗಿ ಕುಂದುವ ಈ ಭವಬಂಧ ತಪ್ಪಿಸಲಿಕ್ಕೆ 2 ಜ್ಞಾನಿಗಳಾಸ್ಪದ ಜ್ಞಾನಮೂರುತಿ ಮಮ ಪ್ರಾಣ ಶ್ರೀರಾಮ ನಿನ್ನ ಧ್ಯಾನ ನಿಲ್ಲಿಸಲಿಕ್ಕೆ 3
--------------
ರಾಮದಾಸರು
ಭಕುತರ ಸಂರಕ್ಷಣಾ ನಾರಾಯಣ ಪ ಖಗಪನ ಸ್ಕಂದರೋಹ ಅಘದೂರ ಅಭಯಹಸ್ತ ಸ್ವಗತಭೇದಶೂನ್ಯ ಸರ್ವಾವಸ್ಥೆಯೊಳೆನ್ನ ವಿಗತಕ್ಲೇಶನ ಮಾಡಿ ಸತತಕಾಪಾಡಲಿ ನಿಗಮವಿನುತ ಜಗದಾದಿ ವಂದ್ಯನೆ ದೇವಾ 1 ವರುಣಪಾಶಗಳಿಂ ಜಲಚರಜಂತುಗಳಿಂ ಮತ್ಸ್ಯ ಮೂರುತಿ ತಾ ರಕ್ಷಕನಾಗಿರಲಿ ಧಾರುಣಿ ನೆಲದೊಳು ಶ್ರೀ ವಾಮನ ಕಾಯಲಿ ಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ2 ದುರ್ಗರಣಾಗ್ರವನ ಅರಿವರ್ಗಗಳಲಿ ನರಹರಿದೇವ ಸಂರಕ್ಷಕನಾಗಿರಲಿ ಮಾರ್ಗಗಳಲ್ಲಿ ಹಿರಣ್ಯಾಕ್ಷ ವೈರಿಯು ಕಾಯಲಿ ದುರ್ಗಮಶೈಲದೊಳು ಶ್ರೀ ಭಾರ್ಗವ ರಕ್ಷಿಸಲಿ 3 ದಾಶರಥಿ ಪ್ರವಾಸದಲಿ ನಿತ್ಯ ದೇಶಾಂತರಗಳಲ್ಲಿದ್ದರು ಕಾಯಲಿ ಈಶ ಶ್ರೀಮನ್ನಾರಾಯಣ ಎನ್ನ ಕ್ರೂರ ಕರ್ಮಗಳಿಂದ ರಕ್ಷಿಸಲನುದಿನ ನರಾವತಾರ ಎನ್ನ ಗರುವಿನಿಂ ರಕ್ಷಿಸಲಿ 4 ವಿರೋಧಿವರ್ಗದಿ ದತ್ತಾತ್ರೇಯ ಕಾಯಲಿ ಸರ್ವಕರ್ಮಬಂಧಜ್ಞಾನದಿಂದ ಕಪಿಲಾ ಮೂರುತಿ ರಕ್ಷಿಸಲಿ ಅನುದಿನದಲಿ ಎನ್ನ ಸನತ್ಕೂ- ಮಾರನು ಎನ್ನ ಕಾಯಲಿ ಕಾಮದಲ್ಲಿ 5 ದಾನವ ಮಧುಕೈಟಭ ಹರೆ ಹಯವದನ ಘನ್ನಪರಾಧದಿ ರಕ್ಷಕನಾಗಿರಲಿ ಮನ್ನಿಸಿ ದೇವತೆಗಳು ಸಾಧನವೀಯಲಿ ಸನ್ನುತಾಂಗ ಧನ್ವಂತ್ರಿಮೂರುತಿ ಹರಿ ಎನ್ನ ರಕ್ಷಕನಾಗಿರಲಿ ರುಜೆಯೊಳು6 ಜ್ಞಾನರೂಪಿ ವೃಷಭ ಸೀತಾತಪದಿಂದ ಎ- ನ್ನನುದಿನ ಈ ದ್ವಂದ್ವÀದಿ ಕಾಯಲಿ ಯಜ್ಞಮೂರುತಿ ಲೋಕಾಪವಾದದಿ ಕಾಯಲಿ ಸುಜ್ಞಬಲರಾಮನು ದುರ್ಜನರ ಭಯದಿಂ ಅನುದಿನ ರಕ್ಷಿಸಲಿ 7 ಘನ್ನಮಹಿಮ ಶೇಷ ಸರ್ಪಬಾಧೆಗಳಿಂದ ಜ್ಞಾನದಾತೃ ಹರಿಸೇವೆಗೆ ಬರುತಿಹ ನಾನಾ ವಿಘ್ನಗಳಿಂದ ರಕ್ಷಿಸುತಿರಲಿ ಘನ್ನ ಮ- ಹಾ ನರಕ ಬಾಧೆಯಿಂ ತಪ್ಪಿಸಲಿ ಕೂರ್ಮಮೂರುತಿ ಕಾಪಾಡಲಿ ನಿತ್ಯದಿ 8 ವೇದವ್ಯಾಸನು ಶುಧ್ಧಜ್ಞಾನವನೀಯಲಿ ಬುದ್ಧಿಮೋಹದಿಂದ ಬುದ್ಧನುದ್ಧÀ್ದರಿಸಲಿ ಹೃದಯದ ಕಲಿಭಾಧೆ ಕಲ್ಕಿ ತಾ ಹರಿಸಲಿ 9 ಉದಯಕಾಲದಿ ಶ್ರೀ ಕೇಶವ ರಕ್ಷಿಸಲಿ ವೇಣು ಹಸ್ತ ಗೋವಿಂದ ಸಂಗಮದಲ್ಲಿ ಪೂರ್ಣಕರುಣೆ ಯಿಂದ ಎನ್ನ ಕಾಪಾಡಲಿ ಪೂರ್ವಾಹ್ನದಲಿ ನಾರಾಯಣ ರಕ್ಷಿಸಲಿ10 ಮಾಧವ ಅಪ ರಾಹ್ನದಲೆನ್ನ ರಕ್ಷಿಸಲಿ ಬಾಧೆಯಿಂ ಸಾಯಂಕಾಲದಿ ರಕ್ಷಿಸಲಿ 11 ಪ್ರದೋಷದಲಿ ಹೃಷೀಕೇಶ ರಕ್ಷಿಸಲೆನ್ನ ಪದುಮನಾಭ ಅರ್ಧರಾತ್ರಿಯಲಿ ಸಲಹಲಿ ಶ್ರೀಧರನೆನ್ನಪರಾತ್ರಿಯಲಿ ಸಲಹಲಿ12 ಜನಾದರ್Àನನು ಎನ್ನನು ಉಷಃಕಾಲದಲಿ ಸಂಧ್ಯಾಕಾಲದಿ ದಾಮೋದರ ರಕ್ಷಿಸಲಿ ಕಾಲನಾಮಕ ಬೆಳಗಿನಝಾವದಿ ಕಾಯಲಿ 13 ನಕ್ರನ ಹರಿಸಿದ ಚಕ್ರಾಯುಧವು ಎನ್ನ ಶತ್ರುಬಾಧೆಗಳಿಂದ ರಕ್ಷಿಸುತಿರಲಿ ವಿಕ್ರಮಗದೆಯು ಆಶ್ರಿತರುಪದ್ರದು- ಅನುದಿನ 14 ಪ್ರಮಥ ಭೂತ ಪಿಶಾಚ ಪ್ರೇತ ಭಯದಿ ಪಾಂಚಜನ್ಯ ಶಂಖರಾಜ ರಕ್ಷಿಸಲಿ ದುಮ್ಮನ ಶತ್ರು ಬಾಧೆಗಳಿಂದ ಖಡ್ಗವು ಖೇಟವು ಸರ್ವ ಅನಿಷ್ಟದಿಂ ರಕ್ಷಿಸಲಿ 15 ಅವನ ನಾಮರೂಪ ದಿವ್ಯಾಯುಧದ ಸ್ಮರಣೆ ಸರ್ವ ಬಂಧಗಳೆಲ್ಲ ತಕ್ಷಣದಲ್ಲಿ ನಿವಾರಣೆಯಾಗಿ ನಿವೃತ್ತಿಮಾರ್ಗಕ್ಕೆ ಶುಧ್ಧಭಾವ ಭಕುತಿಗೆ ಕಾರಣವು ಸತ್ಯ ಗರುಡ ವಿಷ್ಟಕ್ಸೇನ ಕಷ್ಟದಿಂದ ರಕ್ಷಿಸಲಿ 16 ಹರಿಯ ವಾಹನಾದಿಗಳು ವಿಪತ್ತುಗಳ ಹರಿಸಲಿ ಸರ್ವರಂತರ್ಯಾಮಿ ನಿನ್ನ ನಂಬಿರಲು ಸರ್ವಭಾಧೆಗಳಲ್ಲ ಪರಿಹಾರವಾಗಲಿ 17 ಕಾಲ ಸರ್ವಾವಸ್ಥೆಯೊಳೆನ್ನ ಸರ್ವೋತ್ತಮ ದೇವ ಸರ್ವದಾ ರಕ್ಷಿಸಲಿ ಸರ್ವರೊಡೆಯ ಶ್ರೀಮನ್ನಾರಾಯಣ ನಿನ್ನ ಕರುಣ ಕವಚವು ಎನಗಿರಲನುದಿನ 18 ಬಹಿರಾಂತರದಿ ಮೇಲ್ ಕೆಳಗು ಮಧ್ಯದಲ್ಲಿ ದಿಕ್ಕುವಿದಿಕ್ಕಿನೊಳು ಉರಗಾದ್ರಿವಾಸವಿಠಲ ಸ್ವಾಮಿ 19
--------------
ಉರಗಾದ್ರಿವಾಸವಿಠಲದಾಸರು
ವಂದಿಸಿ ಬೇಡುವೆ ನವಗ್ರಹರ ಕುಂದುಗಳೆಣಿಸದೆ ಬಂದು ರಕ್ಷಿಸಲೆಂದು ಪ ಭಾಸುರ ಸೂರ್ಯನು ಭಾಸಿಸಲಿ ತತ್ವವನು ಶ್ರೀ ಸಹೋದರ ಚಂದ್ರ ತೋಷವನು ಸೂಸಿ ಕೊಡಲಿ ಮಂಗಳವನು ಮಂಗಳ ಲೇಸಾದ ಪಾಂಡಿತ್ಯ ಪಂಡಿತನೀಯಲಿ 1 ಹಿಂಗದ ಗೌರವ ತುಂಗ ಶ್ರೀಗುರು ಕೊಡಲಿ ಕವಿ ಕೊಡಲಿ ಭಂಗವಿಲ್ಲದ ಸುಖಸಂಪತ್ತು ಶನಿ ಕೊಡಲಿ ಕಂಗೆಡಿಸುವ ರುಜೆ ರಾಹು ತಪ್ಪಿಸಲಿ 2 ಹಿಡಿದ ಕೆಲಸದಲ್ಲಿ ಹಿಡಿಸಲಿ ಜಯಧ್ವಜವ ಬಿಡದಲೆ ಧ್ವಜಿಯು ಸಡಗರದಿ ಕಡು ನವಗ್ರಹಗಳು ಪಿಡಿಗ್ರಹವಾಗಲಿ ಸಿರಿ ದೃಢದಿ ದಿನದಿನದಿ 3 ತರಣಿ ಕುಮಾರ ಮಣಿ ಹಾರ ದಾರಿದ್ರ್ಯದೂರ ಹರಿಸು ಅರಿಷ್ಟವ ಸುರಿಸು ಮನೇಷ್ಟವ ಎರಗುವೆ ಸಂಕಟಗೊಳಿಸದಿರುತ್ಕಟ 4 ಸಿರಿ ವಾದಿರಾಜರು ಒರೆದ ಗ್ರಹಸ್ತ್ರೋತ್ರವ ನಿರುತದಿ ಪಠಿಸಲು ಗ್ರಹ ಪೀಡೆಯು ಸರಿದು ತಾಂ ಪೋಪುದು ಅರಿಯ ನಿಗ್ರಹವಹುದು ತುರುಗಗ್ರೀವನ ದಯದಿ ಸರ್ವ ಸಂಪದಬಹುದು 5 ಗೀರ್ವಾಣ ಭಾಷೆಯಲಿರುವ ಈ ಸ್ತುತಿಯನ್ನು ಚಾರು ಕನ್ನಡ ಗೀತ ರೂಪದಿಂದ ಸಾರಿದ ಲಕ್ಷ್ಮೀನಾರಾಯಣ ಶರ್ಮನು ಕೋರುವ ಕೃಪೆಯನ್ನು ಸಾಧು ಸಜ್ಜನರನ್ನು 6 ನಮೋ ರವಿ ಸೋಮನೆ ನಮೋ ಕುಜಸೌಮ್ಯನೆ ನಮೋ ಗುರು ಭಾರ್ಗವ ನಮೋ ಶನೈಶ್ಚರನೇ ನಮೋ ರಾಹು ಕೇತುವೇ ನಮೋ ಮೃತ್ಯುದೈವವೇ ನಮೋ ಭೂತಗಣನಾಥ ನಮೋ ಲಕ್ಷ್ಮೀಕಾಂತ 7
--------------
ಲಕ್ಷ್ಮೀನಾರಯಣರಾಯರು