ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಪ್ಪು ನೋಡುವರೇನೋ ಕೃಪಾಸಿಂಧು ಶ್ರೀಗುರು ಒಪ್ಪಿಸಿಕೊಂಡರೆ ತಪ್ಪಾರಿಸುವರೆ ಧ್ರುವ ಒಡಲಹೊಕ್ಕವರವಗುಣವ ನೋಡುವರೇನೊ ಒಡಿಯನೆಂದವರ ತಾ ಕೈಯ್ಯ ಬಿಡುವರೆ ಮಡದಿ ಮಕ್ಕಳೆನಿಸಿ ಕಡೆಗಣ್ಣ ನೋಡುವರೆ ಒಡುಹುಟ್ಟಿದವರಿಗೆರಡ ಬಗೆವರೇನಯ್ಯ 1 ಬಡವರ ಮಕ್ಕಳ ಮಡುವಿನೊಳು ಧುಮುಕಿಸಿ ಕುಡಗೋಲ ಕುಂಬಳ ಕೊಟ್ಟವರ ಕೈಯ್ಯ ಒಡನೆ ಹೋಳುವದುಚಿತವೇನಯ್ಯ 2 ಬಡವನಾಧಾರಿ ಎಂದು ನಾ ನಿಮ್ಮ ಪೊಡವಿಯೊಳು ಶ್ರೀಪಾದ ದೃಢದಲಿ ನೋಡು ಕರುಣಾಲೆನ್ನ ನೀಡಿ ಅಭಯ ಹಸ್ತದಿ ಮೂಢ ಮಹಿಪತಿಗೆ ಕಡೆಗಾಣಿಸುವುದೈಯ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ತಪ್ಪಾರಿಸುವರೆ ನೀ ನಮ್ಮ ಸುಮ್ಮನುಂಡಾಡುವ ಬಾಲಕ ನಿಮ್ಮ ಅಮ್ಮ ಅಪ್ಪನೆಂದಾಡುದೆ ನಾ ತಮ್ಮ ಕಂ ಕಿಮೆಂದಾಡಕರಿಯೆ ನಾವಮ್ಮ 1 ಓದಿ ತಿಳಿಯಲರಿಯೆ ಶಾಸ್ತ್ರವೇದ ಭೇದಿಸಲರಿಯೆ ನಾ ನಿಮ್ಮ ಬೋಧ ಹಾದಿ ತಿಳಿಯುದೆ ಬಲು ತಾ ಅಗಾಧ ಇದೆ ಪಾಲಿಸಬೇಕಯ್ಯ ಸುಪ್ರಸಾದ2 ಭಕ್ತಿ ಮಾಡಲರಿಯೆ ನಿಮ್ಮ ದೃಢ ಯುಕ್ತಿ ತಿಳಿಯಲರಿಯದೆ ನಾ ಮೂಢ ಶಕ್ತಿ ಸಾಮಥ್ರ್ಯನ್ನೊಳು ನೋಡಬ್ಯಾಡ ಯುಕ್ತಾಯುಕ್ತ ನೋಡದಿರು ಎನ್ನ ಕೂಡ3 ಪತಿತಪಾವನನೆಂಬ ನಿನ್ನ ಬಿರುದು ಎತ್ತ ಓಡಿಹೋಗಬಲ್ಲದದು ಚಿತ್ತ ನೆಲೆಗೊಂಡು ಬಂದು ನಿಮ್ಮ ಬೆರೆದು ಮತ್ತ ಒರೆದು ನೋಡುವದಿದೆ ಅರೆದು 4 ಶರಣ ಹೊಕ್ಕ ಮ್ಯಾಲೆಲ್ಲಿಹುದೈಯ ಮರಣ ಚರಣಕಮಲಕ್ಕೊಪ್ಪಿಸಿಹೆ ನಾ ಹರುಣ ಅರಿತು ಮಾಡುವ ನಿಮ್ಮ ದಯ ಕರುಣ ತರಳ ಮಹಿಪತಿ ನಿಮ್ಮಣುಗ ಪೂರ್ಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು