ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಾಹನಆವಾಹನೋಪಚಾರವು ನಿನಗೆ ವಿಭುವೆಆವರಣರಹಿತ ಪರಿಪೂರ್ಣ ಚಿತ್ಸುಖವೆ ಪಹೃದಯಕಮಲದಿ ನೆನೆದು ಪೂಜಿಸುವೆನೆಂದು ಮತ್ತೊದಗಿ ಬಿಂಬದೊಳಿಳುಹಿಯರ್ಚಿಸುವೆನೆಂದುಇದಿರಾಗಿ ನಿಲ್ಲು ಸ್ಥಾಪಿತನಾಗು ಹತ್ತಿರಿರುಹದುಳುನಾಗೆಂದೆನೀ ತಪ್ಪನೆಣಿಸದೆ ಸಲಹು 1ಅಣುಮಹತ್ಪರಿಪೂರ್ಣ ವಾಸುದೇವನೆ ನಿನ್ನಗಣಿಸಿ ನೆಲೆಗಾಣವೀ ಶ್ರುತಿಗಳೆಂಬುದನುಮನದೊಳೆಣಿಸುತಲಿಹೆನು ಸರ್ವರೊಳು ಸಮಬುದ್ಧಿಯನು ಪಾಲಿಸೆಂದು ಬೇಡುವೆನು ಜಗದೀಶಾ 2ಪರಿಪೂರ್ಣನೆಂಬ ಭಾವದಿ ಮನವು ನಿಲದಾಗಿ ಗುರಿಗೈದು ನಿನ್ನ ಮಂಗಳ ಮೂರುತಿಯನುಪರಿಪರಿಯಲುಪಚರಿಸಿ ಸ್ಥಿರಗೈವೆನೀ ಮನವತಿರುಪತಿಯೆ ಸ್ಥಿರವಾಸ ಶ್ರೀ ವೆಂಕಟೇಶಾ 3ಓಂ ಯಮುನಾವೇಗಸಂಹಾರಿಣೇ ನಮಃ
--------------
ತಿಮ್ಮಪ್ಪದಾಸರು
ಎಷ್ಟು ಕೂಗಲು ದಯ | ಪುಟ್ಟಲಿಲ್ಲವೊ ನಿನಗೆ ಬೆಟ್ಟದೊಡೆಯ ಹರಿಯೆ ಪ. ಸಿಟ್ಟೇಕೆ ಎನ್ನೊಳು ಕೃಷ್ಣಮೂರುತಿ ನಿನಗೆ ಬಿಟ್ಟರೆ ನೀ ಎನ್ನ ಸೃಷ್ಟಿಯೊಳಾರುಂಟೊ ಅ.ಪ. ಪರಮ ಪಾತಕಿಯೆಂದು | ತೊರೆದರೆ ನೀ ಎನ್ನ ಮೊರೆಬೀಳಲಿನ್ನಾರಿಗೆ ಕರುಣಾಮೂರುತಿ ಎಂಬೊ ಬಿರುದು ಪೊತ್ತಿಲ್ಲವೆ ಸರಿಯೆ ನಿನಗಿದು ಕೊರಗಿಸುವುದು ಜರಿದು ಬಳಲುವೆ ಧರೆಯೊಳೀಗ ನಾ ಸುರರ ರಕ್ಷಕ ಪರಮಪಾವನ ಕರವ ಮುಗಿವೆ ದರುಶನವ ನೀಡೊ 1 ನೀನಲ್ಲದೆ ಇನ್ನು | ನಾನಾರ ಭಜಿಸಲೊ ಗಾನವಿಲೋಲ ಹರಿ ಕಾನನದೊಳು ಕಣ್ಣು ಕಾಣದಂತಾಗಿದೆ ಧ್ಯಾನಕೆ ಸಿಲುಕದೆ ನೀನೆನ್ನ ಕಾಡುವೆ ಮಾನ ಪ್ರಾಣ ಶರೀರ ನಿನ್ನದೊ ನಾನು ಅನ್ಯರ ಭಜಿಸಲಾರೆನೊ ಹೀನಬುದ್ಧಿಯ ಬಿಡಿಸಿ ಗುರುಗಳ ಧ್ಯಾನವೆನಗಿತ್ತು ನೀನು ಕಾಯೊ 2 ಅನ್ನಪಾನವ ಬಿಟ್ಟು | ನಿನ್ನನು ಸ್ತುತಿಸಲು ಇನ್ನು ಕರುಣವಿಲ್ಲವೆ ಇನ್ನು ಸೈರಿಸಲಾರೆ ಘನ್ನ ಮಹಿಮನೆ ದುಃಖ ನಿನ್ನ ಮನಸು ಕರಗಲಿನ್ನೇನಗೈಯ್ಯಲೊ ಎನ್ನ ಯತ್ನವು ವ್ಯರ್ಥವಾಯಿತು ಇನ್ನು ನೀ ದಯೆಗೆಯ್ಯಬೇಕೊ ಮುನ್ನ ಮಾಡಿದ ತಪ್ಪನೆಣಿಸದೆ ಎನ್ನ ದೃಷ್ಟಿಗೆ ನಿನ್ನ ತೋರೊ 3 ಸುತನ ಮೊರೆಯನೆ ಕೇಳಿ | ಹಿತದಿ ವೇದವನಿತ್ತೆ ಶರಧಿ ಅಮೃತ ಸುರರಿಗಿತ್ತೆ ಕ್ಷಿತಿಯ ಬಾಧೆಯ ಬಿಡಿಸಿ ಸುತನ ಬಾಧಿಸೊವೊನ ಹತಮಾಡಿ ಇಂದ್ರಗೆ ಗತಿಸಿದ ಪದವಿತ್ತೆ ಕ್ಷಿತಿಯನಾಳ್ವರ ಹತವಗೈಸಿದೆ ಕ್ಷಿತಿಸುತೆಯ ಪ್ರೇಮದಲಿ ತಂದೆ ಹಿತದಿ ಪಾಂಡವ ಸುತರ ಕಾಯ್ದೆ ವ್ರತವ ಕೆಡಿಸಿ ಕಲಿಹತವಗೈದೆ 4 ಕಂತು ಜನಕನೆ ನಿನಗೆ ನ್ನಂತರ ತಿಳಿಯದೇನೋ ಸಂತತ ಗೋಪಾಲಕೃಷ್ಣವಿಠ್ಠಲ ನಿನ್ನ ಶಾಂತರೂಪವ ಎನ್ನ ಅಂತರಂಗದಿ ತೋರೊ ಚಿಂತಿತಾರ್ಥ ಪಂಥಗಾರನೆ ಎಂತು ದಿನಗಳು ಸಂದು ಹೋದುವೊ ಸಂತತಾನಂದನಂತಶಯನ 5
--------------
ಅಂಬಾಬಾಯಿ
ನನ್ನಿಂದ ನಾನೇ ಜನಿಸಿ ಬಂದೆನೆ ದೇವಎನ್ನ ಸ್ವತಂತ್ರವು ಲೇಶವಿದ್ದರು ತೋರು ಪ ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆನಿನ್ನದು ತಪ್ಪೋ ನನ್ನದು ತಪ್ಪೋ ಪರಮಾತ್ಮಅ ಜನನಿಯ ಜಠರದಲಿ ನವಮಾಸ ಪರಿಯಂತಘನದಿ ನೀ ಪೋಷಿಸುತಿರೆ, ನಾನುಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದವನಜಾಕ್ಷ ನೂಕಿದವನು ನೀನಲ್ಲವೆ 1 ಎಲವುಗಳ ಜಂತೆ ಮಾಡಿ ನರಗಳ ಹುರಿಯಿಂಹೊಲಿದು ಚರ್ಮವ ಹೊದಿಸಿ ದೇಹದೊಳುಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿನೆಲಸಿ ಚೇತನವನಿತ್ತವ ನೀನಲ್ಲವೆ 2 ಜನಿಸಿದಾರಭ್ಯದಿಂದ ಇಂದಿನ ಪರಿಯಂತಘನಘನ ಪಾಪ ಸುಕರ್ಮಂಗಳನುಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲಅನುಭವಿಸುವುದು ಜೀವನೊ ನೀನೊ ದೇವ 3 ಅಂಧಕನ ಕೈಲಿ ಕೋಲಿತ್ತು ಕರೆದೊಯ್ಯುವಾಮುಂದಾಳು ತಪ್ಪಿ ಗುಂಡಿಗೆ ಕೆಡಹಲುಅಂಧಕನ ತಪ್ಪೊ ಅದು ಮುಂದಾಳಿನ ತಪ್ಪೊಹಿಂದಾಡಬೇಡ ಎನ್ನೊಳು ತಪ್ಪಿಲ್ಲವೊ 4 ಕಂದನ ತಾಯಿ ಆಡಿಸುವಾಗ ಅದು ಪೋಗಿಅಂದಿ ಬಾವಿಯ ನೋಡುವುದನು ಕಂಡುಬಂದು ಬೇಗನೆ ಬಾಚಿ ಎತ್ತಿಕೊಳ್ಳದಿದ್ದರದುಕಂದನ ತಪ್ಪೊ ಮಾತೆಯ ತಪ್ಪೊ ಪರಮಾತ್ಮ 5 ಭಾರ ನಿನ್ನದೊ ದೂರು ನಿನ್ನದೊ ಕೃಷ್ಣನಾರಿ ಮಕ್ಕಳು ತನುಮನ ನಿನ್ನದಯ್ಯಕ್ಷೀರದೊಳಗದ್ದು ನೀರೊಳಗದ್ದು ಗೋವಿಂದಹೇರನೊಪ್ಪಿಸಿದ ಮೇಲೆ ಸುಂಕವೆ ದೇವ 6 ನ್ಯಾಯವಾದರೆ ದುಡುಕು ನಿನ್ನದೊ, ರಂಗ, ಮತ್ತ-ನ್ಯಾಯವಾದರೆ ಪೇಳುವರಾರುಮಾಯಾರಹಿತ ಕಾಗಿನೆಲೆಯಾದಿಕೇಶವಕಾಯಯ್ಯ ತಪ್ಪನೆಣಿಸದೆ ದೇವ 7
--------------
ಕನಕದಾಸ
ನಾನೇನ ಮಾಡಿದೆ ತಪ್ಪುಗಳನ್ನ ನಾನೇನ ಮಾಡಿದೆ ದೇವರದೇವ ಪ ನಿನ್ನ ದಾಸರ ತಪ್ಪನೆಣಿಸದೆ ಪೊರೆಯುವೆ ನಾನೊಬ್ಬ ದಾಸನೆಂದರಿದು ನೀ ಪೊರೆಯೊ 1 ಭೃಗುವಂತೆ ನಿನ್ನಯ ಎದೆಗೆ ತುಳಿಯಲಿಲ್ಲ ನಗವೈರಿಯಂತೆ ಯುದ್ಧವ ಮಾಡಲಿಲ್ಲ 2 ಅಂಗಾಧಿಪತಿಯಂತೆ ಕೊಂದೆನೆಂದರಿತಿಲ್ಲ ಗಂಗೆಯ ಸುತನಂತೆ ಫಣಿಗೆ ಹೊಡೆಯಲಿಲ್ಲ 3 ನಿನ್ನ ಬಿಟ್ಟನ್ಯ ದೇಶಕೆ ಪೋಗಲಿಲ್ಲಾ 4 ಭಾವದಿ ನುಡಿದಂತೆ ನಿನಗೇನು ಪೇಳಿಲ್ಲ 5 ನಿನ್ನಾ ಕುವರರು ಸುಭದ್ರೆಯ ಮದುವೆಯ ಚೆನ್ನಾಗಿ ತಡೆದಂತೆ ತಡೆಯಲಿಲ್ಲವೊ ನಾನು6 ವಸುದೇವ ದೇವಕಿ ಮುಖ್ಯರಂತೆ ನಿನ್ನ ಮಾ- ನುಷನೆಂದು ನಾನೇನು ತಿಳಿದುಕೊಂಡಿಲ್ಲ 7 ಮೌಲಿಯ ಕದ್ದಂತೆ ಕದ್ದುಕೊಂಡಿಲ್ಲ8 ರಾಜೇಶಹಯಮುಖ ಭಜಕರೊಳಗೆ ಮತ್ತೆ ನಿತ್ಯ ಭಕ್ತರಾರಿಹರು 9
--------------
ವಿಶ್ವೇಂದ್ರತೀರ್ಥ
ಪಾಮರ ಜನರಿಗೆಲ್ಲ ಪ ಕಾಮಮದ ಮತ್ಸರಗಳಿಂದಲಿ ತಾಮಸೌಘಕೆಅ.ಪ ಸ್ನಾನ ಮೌನ ಜಪತಪಗಳನರಿಯದೆ ಸ್ವಾಮಿ ನಿನ್ನನು ಮುಟ್ಟಿ ಪೂಜಿಸದೆ ಸೀಮೆಯರಿಯದ ಕಾಮಕರ್ಮದಿ ನೇಮವಿಲ್ಲದ ಕ್ಷುದ್ರಸ್ವಾರ್ಥದಿ ತಾಮಸರ ಸಂಸರ್ಗದಿಂದ ವಿ ರಾಮವರಿಯದ ಜನರ ಪಾಲಿಗೆ 1 ಜ್ಞಾನ ಭಕ್ತಿ ವೈರಾಗ್ಯಗಳರಿಯದೆ ಜ್ಞಾನಿಜನರ ಸಂಗವ ಬಯಸದೆ ಹೀನದುಷ್ಕರ್ಮಗಳ ಮಾಡುತ ನಾನು ತಾನೆಂಬ ಕೊಬ್ಬಿಲಿ ಜಾನಕೀಪತಿ ನಿನ್ನ ಮಹಿಮೆಯ ಕಾಣದಿಹ ದುಷ್ಕರ್ಮಿಜನರಿಗೆ 2 ಶ್ರೀನಿಧಿ ನೀ ಕರುಣಿಸಿ ರಕ್ಷಿಸದಿರೆ ದೀನಜನರ ಪಾಲಿಪರಾರೋ ಸಾನುರಾಗದಿ ಬೇಡಲರಿಯದ ಜ್ಞಾನಹೀನರ ತಪ್ಪನೆಣಿಸದೆ ನೀನೆ ಕೈಪಿಡಿದೆತ್ತಿ ರಕ್ಷಿಸು ಮಾನನಿಧಿ ರಘುರಾಮವಿಠಲ 3
--------------
ರಘುರಾಮವಿಠಲದಾಸರು
ಶ್ರೀ ಮದಾಚಾರ್ಯ ಮುನಿ ಪ್ರೇಮದಲಿ ಸಲಹೊ ಪ. ಕಾಮಪೂರ್ಣನೆ ಎನ್ನ ಕಾಮಿತವನೀಯೊ ಅ.ಪ. ದ್ವಿತೀಯಯುಗದಲಿ ವಾಯುಸುತನಾಗಿ ಅವತರಿಸಿ ಕ್ಷಿತಿಸುತೆಗೆ ಉಂಗುರವ ಹಿತದಿಂದಲಿತ್ತೆ ತೃತಿಯುಗದಲಿ ಕುಂತಿಸುತನಾಗಿ ಕೌರವರ ಹತಗೊಳಿಸಿ ಹರಿಯಪದ ಹಿತದಿ ಧ್ಯಾನಿಸಿದೆ 1 ಕಲಿಯುಗದೊಳವತರಿಸಿ ಕಲಿಕಲ್ಮಷವ ಕಳೆದು ಒಲಿಸಿ ಹರಿಯನು ತುರಿಯ ಆಶ್ರಮದಲಿ ಸುಲಭಮಾರ್ಗವ ತೋರಿ ಸುಜನರನು ರಕ್ಷಿಸಿದೆ ಕಲಿಕಾಲ ಸಲಹೆನ್ನ ನೆಲಸಿ ಹೃದಯದಲಿ 2 ಆಚಾರ್ಯರೂಪದಲಿ ಗೋಚರಿಸಿ ಸ್ವಪ್ನದಲಿ ಸೂಚಿಸಿದೆ ದಾಸತ್ವ ಸಿದ್ಧಿಸಲಿ ಎಂದು ಯಾಚಿಸೆನೊ ಅನ್ಯರನು ನಾಚಿಕೆಯ ತೊರೆದಿನ್ನು ನೀಚತನವನೆ ಬಿಡಿಸಿ ಗೋಚರಿಸೊ ಸತತ 3 ಉಪದೇಶವನೆ ಇತ್ತೆ ಗುಪಿತದಿಂ ಸ್ವಪ್ನದಲಿ ಚಪಲತನದಲಿ ನಾನು ಅರಿಯಲಿಲ್ಲ ಅಪರಿಮಿತ ಮಹಿಮ ಶ್ರೀ ಗುರುಗಳಲಿ ನೀ ನಿಂತು ತಪ್ಪನೆಣಿಸದೆ ಎನ್ನ ನಮನ ಸ್ವೀಕರಿಸೊ 4 ವೇದವ್ಯಾಸರ ಪ್ರಿಯನೆ ಮೋದದಲಿ ಶಿಶುವಾದೆ ಶ್ರೀ ದುರ್ಗೆ ತಾ ಬಂದು ಎತ್ತಿದಳೊ ನಿನ್ನ ವಾದಿಗಳ ಗೆದ್ದ ಅನಾದಿ ಮುನಿ ನಮಿಸುವೆನೊ ಶ್ರೀದ ಗೋಪಾಲಕೃಷ್ಣವಿಠ್ಠಲನ ತೋರೊ 5
--------------
ಅಂಬಾಬಾಯಿ