ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಲಿಂಗಸುಗೂರಿನ ಹತ್ತಿರ ಇರುವ ಬಾಗಿಸೋಪಿನ ಗ್ರಾಮದ ಶ್ರೀ ಪ್ರಾಣೇಶನ ಸ್ತೋತ್ರ) ಬಾಗಿ ಸೋಪಿಲಿ ವಾಸವಾಗಿಹ |ಯೋಗಿ ಪ್ರಾಣರಾಯಾ ||ಚಾಗುಮಾಡದೆ ಭಕ್ತರ ದುರಿತವ |ನೀಗಿ ಸಲಹಯ್ಯಾ ಪ ಕಪಿಗಳೆಲ್ಲಾ ಸುಗ್ರೀವನ ಭಯದಿಂ |ತಪಿಸುತಲಿರೆ ಅವರಾ ||ಲಪನ ಕಾಣುತಲೆ ಅಭಯವನಿತ್ತು |ನಿಪೊರೆದೆ ಕಪಿವರಾ 1 ಹಿಂದೆ ಭೂಸುರನು ಚಿಂತಿಸುತಿರಲಾ |ನಂದದಿಂದ ಏನಾ ||ಬಂಧನಾ ಬಿಡಿಸಿದೆ ಬಕನನು ಕೊಂದು |ತಂದೇ ಶ್ರೀಪವನಾ 2 ಈಶನೆ ತಾನೆಂತೆಬುವ ಖಳರಾ ಸೋಸಿನಲ್ಲಿ ಮುರಿದೇ ||ಶ್ರೀಶ ಪ್ರಾಣೇಶ ವಿಠಲರಾಯನೇ |ಪರದೈವವೆಂದೊರದೇ 3
--------------
ಶ್ರೀಶಪ್ರಾಣೇಶವಿಠಲರು
6. ತಾತ್ವಿಕ ಪದಗಳು ಇಲ್ಲವಲ್ಲಾ ಏ ಹರಿಯೆ ಪ ಗಂಧಾರದೊಳು ---ಕೊದ ಪಶುವಂತೆ ಹಿಂದೂ ಮುಂದು ತಿರುಗಿ ತಿರುಗಿ ಬಳಲುವದೊಂದೆ ಅ.ಪ ಕೆಲವು ದಿನವು ಮೇಘದೊಳು ಕೂಡಿ ಅಲ್ಲಿ ಜಾರಿಬೀಳುತಾ ಪರಿಪರಿಯಲ್ಲಿ ಇನ್ನೂ ಚಲನೆಯಿಂದ ಮೇಘ ಜಲದಾರಿಗಳಿಂದ ನೆಲದೊಳಗೆ ಹೊಕ್ಕು ನರಳಾಡುತಾ ಒಲಿದು ಔಷಧಿಗಳ ವಶವಾಗಿ ಧಾನ್ಯದೊಳು ಕಲೆತು ಪಚನೆಯಿಂದ ಬಳಲುತ ನೀ ಅಲ್ಲಿ ಪಕ್ವಾನ್ನಗಳಿಂದ ಪುರುಷನುದರ ಸೇರಿ ನಲಿದಾಡುತಲಿ ಹೋಗೆ ಕೆಲವು ಕಾಲಾದಲ್ಲಿ 1 ಸ್ತ್ರೀ ಪುರುಷ ಸಂಯೋಗದಿಂದ ಸ್ತ್ರೀ ಗರ್ಭದಲಿ ವ್ಯಾಪಿಸಿ ಕೊಂಡಿಯ ರೂಪತೋರುತ ನೀ ತಾಪವು ಬಡುತಾಲಿ ತಾಯಿ ಉದರದಲ್ಲಿ ಪರಿ ನವಮಾಸ ಪರಿಯಂತರದಲಿ ಪರಿ ಮಾಡಿದ ಹಿಂದಿನ ದೋಷಗಳಿಂದ ತನ್ನೊಳು ತನು ತಪಿಸುತಲಿ ದೀಪವಿಲ್ಲದೆ ಗುಡಿಯೊಳಗಿನ ದೇವರಂತೆ ಕೂಪದೊಳಗೆ ಬಿದ್ದು ಕಷ್ಟವ ಪಡುತಲಿ 2 ಎಂದೆಂದು ಬಯಲಿಗೆ ಹೊರಡುವೆಯೆನುತಾಲಿ ಸಂದೇಹ ಪಡುತಾಲಿ ಸರ್ವದಲಿ ಸಂಧಿಸಿಕಾಲದಿ ತಂದೆ ತಾಯಿಗಳಿಗೆ ತನಯನಾಗಿ ಹುಟ್ಟಿ ತೋರುತಲಿ ಕಂದನಾಗಿ ಅತಿ ಕಡುಮೋಹ ತೋರುತ ಸಂದುಹೋಯಿತು ಕಾಲಸ----ದಿನವೂ ಮುಂದು ಗಾಣದೆ ಬಾಲಪ್ರಾಯದ ಹಮ್ಮಿಲಿ ಅಂದದಿ ಆಟಪಾಟಗಳಿಂದ -------ದಿನಾ 3 ವಾರಕಾಂತೇರ ಸಂಗವುದ್ಯೋಗ ವ್ಯವ- ಹಾರ ದೈನಂದಿನ ಕೆಲವು ಕಾಲಾಯಿತು ಕ್ರೂರ ಚೋರ ದುಷ್ಟ ವ್ಯಾಪಾರಗಳ ಕೂಡಿ ಮೀರಿ ಗರ್ವದಲಿನ್ನೂ ಮೈಯ ಸ್ಮರಣೆದಪ್ಪಿ ಕಾಲ ಕೆಲವಾಯಿತು ಪಾರಗಾಣದೆ ಪ್ರಪಂಚದೊಳಗೆ ಬಿದ್ದು ಹೊರಟು ಬಿಡುತಾಲಿ ಹೋಯಿತು ಕೆಲವು ಕಾಲ4 ಸತಿಸುತರ ಸಂಪತ್ತು ಅತಿಮೋಹ ವ್ಯಾಸಂಗ ಕಾಲ ಸಂದು ಹೋಯಿತು ಮಂದ ಬುದ್ಧಿಲಿ ವಾರ್ಧಿಕದಿ ಹಿತಗಳು ತಪ್ಪಿ ಮಾನ ಹೀನನಾಗಿ ಗತಿಯು ಕಾಣದೆ ಘೋರ ಕಷ್ಟಕ್ಕೊಳಗಾಗಿ ಮತಿಯಲ್ಲಿ ಹರಿನಾಮ ಮರೆದು ಹೋಗಿ ಪತಿ ಹೆನ್ನೆ ವಿಠ್ಠಲನ ಪ್ರೀತಿಯ ಪಡೆಯದೆ ಅತಿ ಘೋರತಮಸಿ ಗರ್ಹಾನು ಆಗೊ ಕಾಲಾಯಿತು 5
--------------
ಹೆನ್ನೆರಂಗದಾಸರು
ಎಂಥ ಸೂಕ್ಷ್ಮವ ನೋಡಿರಿವನ ನಮ್ಮ ಕಾಂತೆ ದ್ರೌಪತಿದೇವಿಗೆ ವರಹೀನ ಪ. ಸಣ್ಣ ಕೂಸಿದ್ದಾಗ ಇವನು ಸೂರ್ಯಗೆ ಹಣ್ಣೆಂದುಹಾರಿದ ಗಗನಕ್ಕೆ ತಾನು ಉಡ್ಡೀನ ಗೈದುನೀರಧಿಯ ದಾಟಿದನುಇವನ ಅಂಗದ ಕೋಮಲ ಬಣ್ಣ ವರ್ಣಿಸಲೇನು 1 ಗಂಧಮಾದನ ಗಿರಿ ತಂದು ನೋಡಿ ಗಿರಿ ನಿಂದಲ್ಲೆ ಹಿಂದಕ್ಕೆ ಒಗೆದ ಈಡ್ಯಾಡಿಒಂದೊಂದು ಬೆಡಗವ ನೋಡಿನಮ್ಮ ಇಂದಿರೇಶನು ನಕ್ಕ ಕೌತುಕ ಮಾಡಿ 2 ಹುಟ್ಟಿದಾಗ ಭೀಮ ಒಂದಿಷ್ಟು ಎತ್ತಿಪಟ್ಟನೆ ಬಿದ್ದು ಕೌತುಕ ಮಾಡಿದನೆಷ್ಟುಬೆಟ್ಟಗಳ ಒಡೆದು ಹಿಟ್ಟೆಟ್ಟುಇವನ ಅಂಗದ ಕೋಮಲ ವರ್ಣಿಸಲೆಷ್ಟು3 ಭಿಕ್ಷೆ ಬೇಡಿದನಂತೆ ಕಂಡು ತಾನರಿಯಳು ಕಾಂತೆ ಇಂಥ ದಿಂಡ ಪುರುಷನ ಬೆರೆದಳು ಕಾಂತೆ4 ಘನ್ನಗರಳ ಕುಡಿದನಂತೆ ಅದು ತನ್ನ ದೇಹವ ತಪಿಸುತಲಿದ್ದವರಂತೆಸನ್ಯಾಸ ಇವಗ್ಯಾಕೆ ಕಾಂತೆನಮ್ಮ ಚೆನ್ನ ರಾಮೇಶ ನೋಡಿನಕ್ಕನಂತೆ 5
--------------
ಗಲಗಲಿಅವ್ವನವರು
ಹಸಿವಾಗುತಿದೆಯೆನೆಗೆ ಬಸವಳಿದೆನೆ ಹೀಗೆ ಪ. ಹಸಿವು ಹೆಚ್ಚಿತು ಅಕಟಾ ತೃಷೆಯಿಂದೆನಗತಿಕಾಟ ಪುಸಿಯಲ್ಲಿದು ಒಣಗಿದ ಕಾಷ್ಟಂ ಅ.ಪ. ಅಂಗಜ ಜನಕ ಶ್ರೀರಂಗನಾಯಕ ನಿಮ್ಮ ಸಂಗತಾಪದಿಂ ತಪಿಸುತಲಿ 1 ವಾಸುದೇವನೆ ನಿಮ್ಮ ಸಾಸಿರ ನಾಮಾಮೃತವ ಲೇಸಾಗಿ ಕುಡಿಯದೆ ಆಸೆಗೆ ಸಿಲುಕುತ ಮೋಸವೋದೆನೋ ಮರುಳನಂದದಿ 2 [ಬಂದ] ಅರಿಯದ ಈ ಪಸುಳೆಯನು ಪರಿಭಾವಿಸಿ ನೋಡಿನ್ನು ವರಶೇಷಗಿರಿದೊರೆ ವರದ ನಿನ್ನಡಿದಾವರೆಗಾರಡಿಯಂತಿರಿಸೆನ್ನಂ3
--------------
ನಂಜನಗೂಡು ತಿರುಮಲಾಂಬಾ
ತಾರಕತಾರಕತಾರಕತಾರಕವೆಂಬತವನಿಧಿಯನು ತಪಿಸುತಲಿದೆ ನೋಡಾಪಮುಗಿಲಾಕಾರದಿ ಮೋಹರಿಸುತಲಿಹ ಮಿಂಚುಗಳನೆಭುಗಿಲು ಭುಗಿಲು ಎನಿಸುವ ಕಳೆಗಳಬುದು ಬದಗಳ ನೋಡ1ಥಳಕು ಥಳಕು ಥಳಥಳನೆಂದೆಂಬ ಥರಗಳನದ ನೋಡಬೆಳಕುಗಳಹ ಬಲು ಬೆಳಗನೆ ಬೆಳಗುವ ಭೇದಗಳನೆ ನೊಡ2ತೋರುತಡುಗುವ ತೋರು ಕಿಡಿಗಳ ಕೋಟಿಗಳನೆ ನೋಡಮೀರಿಯೆ ಮಿಣಿ ಮಿಣಿ ಮಿಣಿಕಿಪ ವಿಸರದ ಮಿಶ್ರಿಗಳನೆ ನೋಡ3ಝಣಝಣರೆಂಬ ಝಾಗಟೆ ಮೊಳಗಿನ ಝೇಂಕಾರವ ನೋಡಎಣಿಸಲು ಬಾರದ ಎಡೆದೆರಪಿಲ್ಲದ ಏಕಾರವ ನೋಡ4ಸಾಗರ ಸುಖವನು ಸವಿಸವಿದುಣ್ಣುವ ಸಾಕಾರವೇ ನೋಡಯೋಗಿಎನಿಪ ಚಿದಾನಂದನೊಲಿದ ಯೋಗಿಗೆ ಇದು ನೋಡ5
--------------
ಚಿದಾನಂದ ಅವಧೂತರು