ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾವೀ ಸಮೀರ ಶ್ರೀವಾದಿರಾಜರು ಕಾಯ ಕಾಯ ಬೇಕಯ್ಯ ಪ ಕಾಯ ಬೇಕೈ | ವಿಪ ಅಹಿಪ ಸುರಪಾದಿ ವಂದ್ಯವೆ |ವಿಪುಲ ಪಾಪಾಳಿಗಳ ಹರಿಸೀ | ಸುಪಥ ಸದ್ಗತಿಗೆನ್ನ ಒಯ್ದು ಅ.ಪ. ಗೌರಿದೇವಿಯ ಉದರಸಂಭವನೆ | ಹಯಾಸ್ಯನಂಘ್ರಿಸರಸಿರುಹದಲಿ ಮಧುಪ ನೆನಿಸಿದನೆ ||ದ್ವಾರಕಾದಿ ಕ್ಷೇತ್ರ ಚರಿಸುತ | ಥೋರ ಹಿಮಗಿರಿ ಸೇತುಯಾತ್ರೆಯಸಾರಿ ಸತ್ತೀರ್ಥ ಪ್ರಬಂಧವ | ಧೀರ ನೀ ರಚಿಸುತ್ತ ಮೆರೆದೆಯೊ 1 ಲಕ್ಷಿಸುತ್ತಲಿ ಮಾತೆ ಬಿನ್ನಪವ | ಮಹ ಭಾರತಸ್ಥಲಕ್ಷಪದ ಬಹು ಕ್ಲಿಷ್ಟವೆನಿಸೂವ ||ಲಕ್ಷಣದಿ ಸದ್ಯುಕ್ತ ಪದಗಳ | ಈಕ್ಷಿಸುತ ಅವಕರ್ಥ ಪೇಳುತಲಕ್ಷಸದ್ದಾಭರಣ ಮಾಲಿಕೆ | ಲಕ್ಷ್ಮಿಪತಿ ಹಯಾಸ್ಯಗರ್ಪಿತ 2 ಸೇವಿಸುತ್ತಿಹ ವಿಪ್ರನಾದವನ | ಕೌಟಿಲ್ಯ ಕಂಡುತೀವ್ರದಿಂದಲಿ ಶಾಪವಿತ್ತವನ ||ಭಾವ ತಿಳಿದು ಬೊಮ್ಮರಾಕ್ಷಸ | ಭಾವತಾಳೆಂದೆನುತ ಪೇಳಲುತೀವ್ರ ಯಾಚಿಸೆ ಕ್ಷಮೆಯ ಮಂತ್ರವ | ಆವ ಆಕಾಮ್ಮೈವ ನೊರೆದೆ 3 ಮರಳಿ ಉತ್ತರ ಯಾತ್ರೆಯಲ್ಲಿರಲು | ಗುರು ವಾದಿರಾಜರಅರಿಯದಲೆ ತನ್ಮಂತ್ರ ಪೇಳಲು ||ಒರೆದರೂ ರಂಡೇಯ ಮಗ ನೀ | ನಿರುತಿರುವೆನ ಸ್ನಾತ ಕಾರ್ತಿಕಮರಳಿ ಮಾಘಾಷಾಢ ವಿಶಿಖದಿ | ಹರಿಯಿತೂ ನಿನ ಶಾಪವೆಂದರು 4 ಆತುಗುರುಪದ ಕ್ಷಮೆಯ ಪ್ರಾರ್ಥಿಸಲು | ಗುರುರಾಜರಾಗಭೂತ ರಾಜನು ನೀನೆ ಎನ್ನುತಲು ||ಖ್ಯಾತಿ ಪೊಂದುತ ಭಾವಿರುದ್ರನೆ | ಪೊತ್ತು ಎನ್ನಯ ಮೇನೆ ಮುಂಗಡೆಕೌತುಕವ ತೋರುತ್ತ ಮೆರೆವುದು | ಪೋತ ಭಾವದಿ ತಮಗೆ ಎಂದರು 5 ಕಾಕು ಶೈವನ ಖಂಡಿಸುತ್ತಲಿಆಕೆವಾಳರ ಪೊರೆದು ದಶಮತಿ | ತೋಕನೆಂದೆನಿಸುತ್ತ ಮೆರೆದೇ 6 ಭೂವಲಯದೊಳು ಕಾರ್ಯ ಪೂರೈಸಿ | ಬದರಿಯಿಂದಲಿಭಾವಿ ಶಿವನಿಂ ಪ್ರತಿಮೆ ರಥತರಿಸೀ ||ದೇವ ಗೃಹ ಸಹ ವಿರುವ ವಿಗ್ರಹ | ತ್ರೈವಿಕ್ರಮನ ಸಂಸ್ಥಾಪಿಸುತ್ತಭಾವ ಭಕ್ತಿಯಲಿಂದ ಉತ್ಸವ | ತೀವರದಿ ರಚಿಸುತ್ತ ಮೆರೆದೆ 7 ಹಂಚಿಕಿಂದಲಿ ಪೂರ್ವರಚಿತೆನ್ನ | ವೃಂದಾವನಂಗಳುಪಂಚ ಸಂಖ್ಯೆಯಲಿಂದ ಮೆರೆವನ್ನೆ ||ಮುಂಚೆಯೇ ಸ್ಥಾಪಿತವು ಎನ್ನುವ | ಪಂಚರೂಪೀ ವ್ಯಾಸ ಸಮ್ಮುಖಸಂಚುಗೊಳಿಸೀ ಸ್ಥಾಪಿಸುತ್ತ | ಕೊಂಚವಲ್ಲದ ಕಾರ್ಯ ರಚಿಸಿದೆ 8 ಯುಕ್ತಿಮಲ್ಲಿಕೆ ರುಕ್ಮೀಣೀಶ ಜಯ | ಗುರ್ವರ್ಥ ದೀಪಿಕೆಮತ್ತೆ ಪರಿಪರಿ ಶಾಸ್ತ್ರ ಗ್ರಂಥಗಳ ||ವಿಸ್ತರಿಸಿ ಭುವನದಲಿ ಮೆರೆದೆ | ಉತ್ತಮೋತ್ತಮ ದೇವ ದೇವನುಕರ್ತೃ ಶ್ರೀಹಯ ಮುಖನು ಎನ್ನುತ | ವತ್ತಿ ಪೇಳುತ ವ್ಯಾಪ್ತಿಸಾರಿದೆ 9 ಶಿಷ್ಟ ಜನ ಸಂಸೇವ್ಯ ಧೀವರನೆ | ಶಮದಮಾನ್ವಿತಕಷ್ಟಹರ ಕಾರುಣ್ಯ ಸಾಗರನೇ ||ಕುಷ್ಟ ಅಪಸ್ಮಾರ ರೋಗದ | ಅಟ್ಟುಳಿಯ ಕಳೆಯುತ್ತ ಮೃತ್ತಿಕೆಸುಷ್ಠುಸೇವನೆಯಿಂದ ಭಕ್ತರ | ಇಷ್ಟವನೆ ಸಲಿಸುತ್ತ ಮೆರೆವೆ 10 ಹಯಾಸ್ಯ ವಾಹನ | ಬಿಡದೆ ಏರುತ ಸಾರ್ದೆ ಹರಿಯನು 11
--------------
ಗುರುಗೋವಿಂದವಿಠಲರು
ವಿಜಯ ಗುರು ತವಪಾದರಜವ ಕರುಣಿಸಿ ಎನಗೆ ಭುಜಗಶಯನನ ಧ್ಯಾನ ಭಜನೆ ನೀಡುವುದು ಪ. ತವ ಶಿಷ್ಯವಂಶ ಸಂಜಾತಳೆನ್ನುತಲಿ ಬಹು ತವಕದಲಿ ಕರುಣಾರ್ದ ದೃಷ್ಟಿಯಿಂದ ತವ ಸೇವೆ ಎನಗಿತ್ತು ತವ ಕೀರ್ತನೆಯ ನುಡಿಸಿ ಮೂರ್ತಿ ತೋರೆನ್ನ ಭವತಾಪ ಹರಿಸಯ್ಯ 1 ನಿನ್ನ ಮಹಿಮೆಯ ಗುಟ್ಟು ವರ್ಣಿಪರು ಯಾರಿನ್ನು ನಿನ್ನ ಚರ್ಯೆಯ ಚರಿತೆ ಬರೆದವರ್ಯಾರೊ ನಿನ್ನ ನಿಜ ಸಂಕಲ್ಪ ಇನ್ನು ಅರಿಯುವರುಂಟೆ ಬನ್ನ ಭವ ಉಂಟೆ 2 ಆ ದೇವಮುನಿ ಆಜ್ಞೆ ಮೋದದಲಿ ಸ್ವೀಕರಿಸಿ ಪಾದನ್ಯೂನತೆ ಕವನ ಪೂರ್ಣಗೊಳಿಸಿ ವೇದಶಾಸ್ತ್ರಗಳರ್ಥ ಸುಲಭದಲಿ ತಿಳಿಸುತಲಿ ಹಾದಿ ತೋರಿದೆ ಶಿಷ್ಯರಾದ ಸುಜನರಿಗೆ 3 ಸತ್ಕರ್ಮ ಫಲಗಳನು ನಿತ್ಯದೊಳಗರ್ಪಿಸಲು ಉತ್ತಮನು ಆರೆಂಬ ಚಿತ್ತದಳಲ ಮುಕ್ತಿಯೋಗ್ಯರಿಗೆ ಬಹು ಯುಕ್ತಿಯಿಂದಲಿ ತೋರಿ ಉತ್ತಮನು ಹರಿಯೆಂದು ಶಕ್ತಿಯಿಂ ಸ್ಥಾಪಿಸಿದ 4 ವೈಕುಂಠಪುರದೊಳಗೆ ಶ್ರೀ ಕರನ ವಕ್ಷಕ್ಕೆ ಸೋಕಿಸಿದೆ ಚರಣವನು ಜೋಕೆಯಿಂದ ಈ ಕಾರ್ಯಕಾರಣವ ನಾ ಕೇಳಿ ನುಡಿವಂಥ ವಾಕು ಲಾಲಿಸುತ ವಿವೇಕ ಮತಿ ಕರುಣಿಪುದು 5 ಆ ಕಮಲನಾಭನಾ ಹೃದಯ ಕರುಣಾಮೃತವು ಸೋಕಿ ತುಂಬಿಹುದು ತವ ಚರಣ ಕಮಲದಲಿ ನಾ ಕೇಳ ಬಂದೆನಾ ಕರುಣಾಮೃತದ ಕಣವ ಯಾಕೆ ಮರೆಮುಚ್ಚಿನ್ನು ನೀ ಕೊಡೈ ತವಕದಲಿ 6 ಪಾದ ರೂಢಿಗೊಡೆಯಗೆ ಲಕುಮಿ ಓಡಿದಳು ಕರವೀರಪುರಕೆ ಸ್ವಾಮಿ ಬೇಡಾಗೆ ವೈಕುಂಠ ನೋಡಿ ಆನಂದಾದ್ರಿ ಮಾಡಿದನು ಮಂದಿರವ ಕೂಡಿ ಪದ್ಮಿನಿಯ 7 ನೋಡಿ ವೈಕುಂಠದೊಳು ನಾಡಿಗೊಡೆಯನ ಚರ್ಯ ರೂಢಿಯೊಳು ಜನಿಸಿ ಭೂಸುರವಂಶದಿ ದುರಿತ ಈಡಾಡಿ ಹರಿದಾಸ್ಯವನು ಬೇಡಿ ಬಯಸುತ ಪೊಂದಿ ನಾಡಿನೊಳು ಮೆರೆದೆ 8 ಪ್ರತಿವರ್ಷ ಬಿಡದೆ ತಿರುಪತಿ ಯಾತ್ರೆ ಭಕ್ತಿಯಲಿ ಪತಿತಪಾವನನ ಓಲೈಸಿ ಮೆರೆದೆ ಕ್ಷಿತಿಯಕ್ಷೇತ್ರ ಅಪ್ರತಿಮಹಿಮ ಸಂಚರಿಸಿ ಕ್ಷಿತಿಗೆ ತೋರಿದೆ ನಿನ್ನ ಮಹಿಮೆ ಜಾಲಗಳ 9 ಅಂಕಿತವದಲ್ಲದೆ ದಾಸತ್ವ ಸಿದ್ಧಿಸದು ಕಿಂಕರಗೆ ಅಂಕಿತವೆ ಕುರುಹು ಎಂದು ಅಂಕಿತವ ಪಡೆದು ಚಕ್ರಾಂಕಿತನ ಗುಣ ಮಹಿಮೆ ಶಂಕಿಸದೆ ಪೇಳ್ದೆ ತವ ಕಿಂಕರೋದ್ಧಾರಕನೆ 10 ನಿನ್ನ ಮಹಿಮಾದಿಗಳ ವರ್ಣಿಸಲು ಎನ್ನಳವೆ ಚನ್ನ ಗುರು ವಿಜಯವಿಠ್ಠಲನ ಪದಕಮಲ ಚನ್ನಾಗಿ ಕಂಡು ಹೃನ್ಮಂದಿರದಿ ಸತತದಲಿ ತನ್ಮಂತ್ರ ಕಿರಣವೆಮ್ಮಲ್ಲಿ ಬೀರಿದ ಕರುಣಿ 11 ವಿಕ್ರಮ ಕಾರ್ತೀಕ ಶುದ್ಧ ದಶವಿೂ ದಿವ್ಯ ಶುಕ್ರ ನಾಮರು ವಾರ ಶುಭದಿನದಿ ಇಂದು ಅಕ್ಕರದಿ ಕರಸಿಲ್ಲಿ ಉಕ್ಕಿಸಿದೆ ತವ ಸ್ತೋತ್ರ ಮಕ್ಕಳಂದದಿ ಪೊರೆವ ಅಕ್ಕರೆಯು ಉಂಟೊ 12 ಮಧ್ವರಾಯರ ಕುಲದಿ ಉದ್ಭವಿಸಿದಂಥ ಈ ಶುದ್ಧ ವೈಷ್ಣವ ಕುಲದಿ ಜನಿಸಿ ಬಂದೆ ಶುದ್ಧ ದಾಸತ್ವದ ಮುದ್ರಾಂಕಿತದ ರತ್ನ ಪಾದ ಕಂಡೆ 13 ಪಾಪಿ ಜನರುದ್ಧರಿಪ ಪಾವನಗಾತ್ರನೆ ಆ ಪಯೋಜಾಸನರ ತರತಮ್ಯವ ಸ್ಥಾಪಿಸಿದ ಮಹಿಮನೆ ಸದ್ಗುಣಾಂಬುಧಿ ನಿಲಯ ಗೋಪಾಲಕೃಷ್ಣವಿಠ್ಠಲನ ಪದಭೃಂಗ 14
--------------
ಅಂಬಾಬಾಯಿ