ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧೂಪವಿಡುವನ ಬಳಿಗೇ ದೀಪವಿಡುವ ಆ ಪರಮ ಕರುಣಾಳು ಶ್ರೀಪತಿಯ ನೆನೆನೆನೆದು ಪ ವಸುಮತಿಯನಿತ್ತವನ ಹೊಸಲಬಳಿಯಾಳಾದ ಬಸಿವಲೆಯನಿತ್ತಳಿಗೆ ವಸನಗಳನಿತ್ತ ಬಿಸಜವೊಂದಿತ್ತವನ ಹೊಸಖೇಚರನಗೈದು ಬಿಸವುಂಡ ಬಾಲಕನ ಜಸವ ಚಿರಗೈದ 1 ಅವಲಕ್ಕಿ ಇತ್ತವಗೆ ನಿಧಿಯನೇ ಅರ್ಪಿಸಿದ ಸವಿಗಂಧವಿತ್ತವಳ | ಸುಂದರಿಯ ಗೈದ ನವನೀತವಿತ್ತವರನೆಲ್ಲ ತನ್ನೊಳೆ ಹುಗಿದ ಭವವ ಪರಿಹರಿಸಲ್ಕೆ ಬೇಸರಿಹುದೇ ಹರಿಗೆ 2 ಅವನ ಜಾನಿಪ ಜನರ ಮರೆಯನಾ ನೀಲಾಂಗ ಅವನ ಪೂಜಿಪ ನರರ ಮುನ್ನಿಲುವನಾಗಾಗ ಅವನ ಕಥೆ ಕೇಳ್ವರ್ಗೆ ಉಂಟವನ ಸತ್ಸಂಗ ಅವನೆ ಗತಿಯೆಂದವನಿಗೊಲಿವ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಕ್ತಿಯು ಸುಲಭ ತಾನಲ್ಲ ನಿಜಭಕ್ತಿ ದೊರಕಲವಗಾಗುವುದು ಎಲ್ಲ ಪ ಎಲ್ಲ ಸಂಗವ ಬಿಡಬೇಕು ತಾನುಬಲ್ಲ ಗುರುವ ಸೇವೆ ಮಾಡಬೇಕುಎಲ್ಲಕೆ ತಾನಿರಬೇಕು ಭಕ್ತಿಬಲ್ಲವನಿಂದ ನಿತ್ಯದಿ ಹೆಚ್ಚಬೇಕು 1 ಹೇಳಿದಲ್ಲಿಗೆ ಹೋಗಬೇಕು ಮನಕೇಳದಿರಲು ಬುದ್ಧಿಯ ಹೇಳಬೇಕುಕಾಳರಾತ್ರೆಯೆನ್ನದಿರಬೇಕು ನಿತ್ಯಬಾಲಕನಂತೆ ತೋರುತಲಿರಬೇಕು 2 ಹಸಿವು ತೃಷೆಯ ಬಿಡಬೇಕು ತಾನುಎಸಗಿ ಗುರುಸೇವೆ ಮಾಡಬೇಕುಬಿಸಿಲು ಮಳೆ ಎನ್ನದಿರಬೇಕು ಧೈರ್ಯವೆಸಗಿ ಭಯಕೆ ಬೆಚ್ಚದಲಿರಬೇಕು 3 ಗುರುವಿನನಡೆ ನೋಡಬೇಕು ಆಗುರುವಿನ ನಡೆಯ ಕಂಡಂತಿರಬೇಕುಕರಣ ವಿಷಯ ಹೋಗಬೇಕು ನಿತ್ಯಭರಿತವಾನಂದವಾಗಿರಬೇಕು 4 ಕರವ ನೀಡುವನು ಏ-ನೆಂತು ಪೇಳಲಿ ತನ್ನೊಳೆರಕ ಮಾಡುವನು 5
--------------
ಚಿದಾನಂದ ಅವಧೂತರು