ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಹರಿಯ ಗುಣ ಕೊಂಡಾಡುವುದೇ ಲೇಸು ಮುರಲೀಧರನೊಲಿಸಿ ಪರಗತಿ ಸುಖವ ಬಯಸು ಪ ಸುಳ್ಳುಮಾತಾಡಿ ಧನಗಳಿಸುವುದಕಿಂತಲಿ ಒಳ್ಳೆಯವನೆನಿಸುವ ಬಡತನವೇ ಲೇಸು ಕಳ್ಳತನದಿಂದಲಿ ಕದ್ದು ತಿಂಬುವುದಕಿಂತ ಕೇಳಿ ಸಿಕ್ಕಷ್ಟುಂಡು ಇರುವುದೇ ಲೇಸು 1 ಸಾಲದಿಂದರಮನೆಯ ಕಲ್ಪಿಸಿರುವುದಕಿಂತಾ ಸಾಲಿಲ್ಲದ ಮನೆಯಲ್ಲಿಹುದೇ ಲೇಸು ಕಾಲನ ದೂತರಿಂದೆಳೆಸಿಕೊಳ್ಳದೇ ಲಕ್ಷ್ಮೀ ಲೋಲನಾ ಪಾದದಲ್ಲಿರುವುದೇ ಲೇಸು 2 ಅನ್ಯ ಸ್ತ್ರೀಯರ ಸುಖವ ಬಯಸಿ ಕೆಡುವುದಕಿಂತ ತನ್ನವಳ ಕೂಡ ಬಡಿದಾಡುವುದೇ ಲೇಸು ಹೊನ್ನು ಹೆಣ್ಣು ಮಣ್ಣಿಗಾಸೆ ಮಾಡದೇ ಮನಸನ್ನ ಸಿರಿಪತಿಗೆ ಒಪ್ಪಿಸುವುದೇ ಲೇಸು 3 ತಾನು ಮಾಡಿದೆನೆಂಬುದಕಿಂತ ಹರಿಯ ಆಧೀನವೆಂದರಿಯುವುದು ಪರಮ ಲೇಸು ಶ್ವಾನಗೆ ಮಾಂಸವನು ತಿನಿಸಿ ಸಲಹುವುದಕಿಂತ ಜ್ಞಾನಿಯಾದವನ ಸಲಹುವುದೇ ಲೇಸು 4 ದುಷ್ಟ ಮನುಜನು ಮಾಡುವ ಕೃಪೆಗಿಂತಲೂ ಶ್ರೇಷ್ಠ ನರರಿಂದ ಬೈಸಿಕೊಳ್ಳವುದೇ ಲೇಸು ಕೆಟ್ಟ ಸಂಸಾರ ಸುಖ ಬೇಡುವುದಕಿಂತ ಹನುಮೇಶ ವಿಠಲನ ಧ್ಯಾನದ ಸುಖವೇ ಲೇಸು 5
--------------
ಹನುಮೇಶವಿಠಲ
ನೀನೆಕರ್ತಎನ್ನಕರ್ತನಾ ನಿನ್ನಭೃತ್ಯಹಿತಮಾನಹಾನಿ ನಿನ್ನದಯ್ಯ ಕೊನೇರಿ ತಿಮ್ಮ ನಮ್ಮ್ಮಯ್ಯ ಪ.ತನುಧನ ನೆಚ್ಚಿಕಿಲ್ಲಮಾನಿನಿತನ್ನವಳಲ್ಲಸೂನುಬಂಧುಗಳೆಲ್ಲ ಕ್ಷಣದವರಲ್ಲನಾನಾ ಜನ್ಮದಲಿ ಎನ್ನ ಪ್ರಾಣ ಕಿತ್ತೈಯ್ಯ ಚೈತನ್ಯದಾನವಾರಾತಿ ಕೃಷ್ಣಯ್ಯ ದೀನನ ಬಿಡದಿರಯ್ಯ 1ಭವಾಂಧಕಾರದೊಳನುಭವಿಸಿ ಬೆಂಡಾಗುವೆನುವಿವರಿಸಿನಿತ್ಯಹಿತವ ಕಾಣೆನುಜಾವ ಒಂದದರೊಳರ್ಧ ದಾರಿಯಲಿ ಶ್ರೀಪಾದಭಾವಿಸಲೊಲ್ಲೆ ನೋಡಲವಗುಣಾಂಕಿತ ಮೂಢ 2ಸ್ವಾಮಿ ನಿನ್ನ ಮುದ್ರಾಂಕನ ಮಾಡಿನ್ನನುಮಾನ್ಯಾಕೆಶ್ರೀಮಂತ ಭಾಗವತರ ಪ್ರೇಮಾನ್ವಿತರಶ್ರೀ ಮಧ್ವರಾಯರ ಸಿಕ್ಷಾನೇಮರಾಚರಣಾಧ್ಯಕ್ಷಸಾಮೀಪ್ಯ ಮುಕ್ತಿಯನೀಯೊ ನನ್ನ ಪ್ರಸನ್ವೆಂಕಟಯ್ಯ 3
--------------
ಪ್ರಸನ್ನವೆಂಕಟದಾಸರು
ಭಾವೆತೋರೆಲೆ ಶ್ರೀನಿವಾಸನ ಜಗದಜೀವಗಳಿಗೆ ಭಿನ್ನನಾದ ವಾವೆಯಿಲ್ಲದ ಶ್ರೀನಿವಾಸನ ಪ.ಮಾವನ ಅಣುಗನನುಜೆಯಳಿಗೆ ಮಾವನೆನಿಸಿದ ತನ್ನ ಮಗಳಮಾವನ ಸೊಸೆಯ ಬಸಿರಲುದಿಸಿ ಮರಮೆಳೆಯನು ಸೇರಿ ಮತ್ತೆಮಾವನ ಸುತರಿಗಜ್ಜನೆನಿಸಿದ ಮಗುಳೆಮಾವನ ಮಾವನ ಮಗಳಿಗಣ್ಣನೆನಿಸಿದ ಒಮ್ಮೆ[ಬಾವನ] ಭವನವೆಣ್ಗಳ ಬಿಡಿಸಿ ರಮಿಸಿದ 1ಸತಿಯ ಸುತೆಗೆ ಅರಸನಾದ ಸತಿಯಳಿಗೆ ಸಹೋದರನಾದಸತಿಯಳನುಜ ಕುಲದಿ ಜನಿಸಿಸತಿಹಲವರ ಕೂಡಿ ಸುಖಿಸಿಸತಿಸಖಿಯರ ಬಂಧುವೆನಿಸಿದ ಮತ್ತೆ ಸುತನಸತಿಯ ಮಗನ ಮೊಮ್ಮನೆನಿಸಿದ ಓರ್ವ ಮೊಮ್ಮನಸತಿಗೆ ನೋಡಿದಳಿಯನೆನಿಸಿದ 2ಅಣ್ಣಗೆ ಜನಕನಾಗಿ ಮಗನ ಅಣ್ಣನೆನಿಸಿದ ಜಗವರಿಯಲುಅಣ್ಣನೆ ತಮ್ಮ್ಮಗೆ ತಮ್ಮನಾದ ಹುಟ್ಟಿದ ತಾಣವಜರಿದುಬೆಳೆದುಅಣ್ಣಗೆ ಭಾವನಾಗಿರುವ ಚೆಲುವನೆ ತನ್ನ ಬಾವನಅಣ್ಣನಯ್ಯಂಗೆ ಪುತ್ರನಾದವನೆ ಪ್ರಸನ್ನವೆಂಕಟತನ್ನವಳಿಗಾಪ್ತನಾಗಿ ಹೊರೆವನೆ 3
--------------
ಪ್ರಸನ್ನವೆಂಕಟದಾಸರು
ಸ್ಥಿರವಲ್ಲೀಕಾಯಸ್ಥಿರವಲ್ಲ ಹೀಗರಿವಿದ್ದು ಹರಿಪಾದ ಮರೆವರೆ ಪ್ರಾಣಿ ಪ.ಅಟ್ಟಡಿಗೆಎರವುಉಟ್ಟುಡುಗೆಎರವುಇಟ್ಟರೆ ಸಂತತಿಸಿರಿಎರವುಕಟ್ಟೊಡೆದು ಬೆಮರಿಡಿಸಿ ಜವನವರೊಯ್ಯೆಇಟ್ಟಿರುವ ಧಾನ್ಯ ಧನವೆಲ್ಲೊ ಪ್ರಾಣಿ 1ಕೃಪಣತೆಯೊಳಗಿನ ನಿಪುಣತೆ ಬಾರದುಸ್ವಪನ ಸುಖ ಭೋಗಕೆ ಬಾರದುವಿಪಿನದಹನ ಮೃಗದಂತಾಪ್ತರು ಬರರುನೃಪನಾರಾಧನೆ ಫಲವು ಸ್ಥಿರವೆಲೊ ಪ್ರಾಣಿ 2ಹರಿಕೊಟ್ಟಾಗಲೆ ಧರ್ಮ ದೊರಕಿಸಬೇಕುಸರಕಿದ್ದು ತಿರುಕಬುದ್ಧಿಯನು ಬಿಡುಅರಿವುಳ್ಳವರ ಕೂಡಿ ಕೋಟೆಜತನಮಾಡುಮರುಗಲಿ ಬೇಡ ಮುತ್ತಿಗೆ ಬಂತು ಪ್ರಾಣಿ 3ಹವಳ ಮುತ್ತಿನಂಥ ಅವಳಿ ಮಕ್ಕಳ ನಂಬಿಕುವಲಯೇಶನ ಪ್ರಿಯಕುಲೇಶನ ಪುರದಲವಲವಿಕೆಯಲಿ ನಿರಯವಾರ್ತೆ ಜರೆವರೆ ತನ್ನವಳೆ ತನಗೆ ಓಕರಿಸುವಳೊ ಪ್ರಾಣಿ 4ಫಣಿತಲ್ಪಗೊಪ್ಪಿಸಿ ಹಣ ತೃಣ ಮಾಡದಹೆಣ ತನ್ನ ತಾನೆ ಹೊಗಳಿಕೊಂಡರೆಎನಿತುಕಾಲಕೆ ಮೆಚ್ಚ ಪ್ರಸನ್ವೆಂಕಟಪತಿಘನತಪ್ಪ ಕಾಯೆ ತನ್ನವರನು ಪ್ರಾಣಿ5
--------------
ಪ್ರಸನ್ನವೆಂಕಟದಾಸರು