ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

3. ನೀತಿಬೋಧೆ ಓಲಗ ಸುಲಭವೋ ರಂಗೈಯನ ಪ ಓಲಗ ಸುಲಭವೊ ಪುಸಿಯಲ್ಲ ಕರುಣಾಲ-ವಾಲನಾದ ಕರಿರಾಜ ವರದನ ಅ.ಪ ದೂರ ಹೋಗಲಿಬೇಡ ತೊಡೆಯ ಗುದ್ದಲಿ ಬೇಡನೀರ ನೆರೆಯಬೇಡ ನಿಗಡದಲ್ಲಿರಬೇಡನಾರಾಯಣನೆಂಬ ನರನ ಯೋಗಕ್ಷೇಮಭಾರ ತನ್ನದೆಂಬ ಪ್ರಹ್ಲಾದ ವರದನ1 ಸಂತೇಲಿ ಮಾಡಿದ ಸಾಷ್ಟಾಂಗ ನಮಸ್ಕಾರದಂತೆ ಅಲ್ಲವೆ ಅನ್ಯರ ಭಜಿಸುವುದುಅಂತರಂಗದಲ್ಲಿ ಹರಿ ನೀನೆ ಗತಿಯೆಂದುಚಿಂತಿಸಿದರೆ ಕಾಯ್ವ ಶ್ರೀರಾಮಚಂದ್ರನ2 ತಪ್ಪು ಸಾಸಿರಗಳ ತಾಳಿ ರಕ್ಷಿಸುವತಪ್ಪು ಮೇಘವರ್ಣ ಕಾಂತಿಯಿಂದೊಪ್ಪುವಸರ್ಪಶಯನನಾದ ಸರ್ವಲೋಕೇಶÀನಅಪ್ರಮೇಯ ನಮ್ಮಪ್ಪ ಶ್ರೀಕೃಷ್ಣನ 3
--------------
ವ್ಯಾಸರಾಯರು
ಆವಭೇಧವಿಲ್ಲದವನೆ ನಿಜಜ್ಞಾನಿಯು ತನು ಭಾವವರಿತು ನಡೆಯುವನೆ ನಿಜ ಭಾಗವತನು ಪ ಮಾನ ಅಪಮಾನ ಸಮಕಾಣುವನೆ ಸಜ್ಜನನು ತಾನು ತನ್ನದೆಂಬ ಮಾಯವಳಿದವನೆ ಸಾಧು ಏನು ಕೊಟ್ಟರು ಒಲ್ಲೆನೆಂಬುವನೆ ಸನ್ಯಾಸಿ ದೀನರನು ಕಂಡು ಮನಮರುಗುವನೆ ಭಕ್ತ 1 ನಿಜಧರ್ಮವರಿಯದ ಪಾಮರನೆ ಶೂದ್ರನು ನಿಜವಾಕ್ಯಗಳ ಕೇಳಿ ಅಳಿವವನೆ ಭವಿಯು ಸುಜನರಿಗೆ ತಲೆಬಾಗಿ ನಡೆವವನೆ ಸಿದ್ಧಾಂತಿ ಕುಜನರ ಮಾತಿಗೊಳಪಡುವವನೆ ನರಕಿ 2 ಪಿಡಿದ ವ್ರತನೇಮಗಳ ಬಿಡದವನೆ ಕಡುಗಲಿ ಜಡದೇಹ್ಯಮೋಹವನು ತೊಡೆದವನೆ ಸತ್ಯ ಬಂಟ ಜಗದೊಳಗೆ ಒಡೆಯ ಶ್ರೀರಾಮನಡಿ ದೃಢಯುತನೆ ಮುಕ್ತ 3
--------------
ರಾಮದಾಸರು
ಕಲಿಮುಖ್ಯ ದೈತ್ಯರನು ಸ್ಮರಿಸಿ ಬಿಡದೆ ಕಲುಷವರ್ಜಿತ ಭಾಗವತರು ಮರೆಯದಲೆ ಪ ಮಲಮೂತ್ರಗಳ ವಿಸರ್ಜನೆ ಗೈವಾಗ ಎಂ ಜಲ ಕೈ ಬಾಯ್ದೊಳೆದು ಉಗುಳುವಾಗ ಹುಳಿ ಬೀಜ ಕವಡೆ ಪಗಡೆಗಳಾಡುವಾಗ ಮ ಕ್ಕಳನಾಡಿಸುತಲಿ ವಿಸ್ಮರಣೆಯಿಂದಿರುವಾಗ 1 ಸಂಧಿಕಾಲದಲಿ ಸತಿಯೊಡನೆ ಪವಡಿಸಿದಾಗ ನಿಂದ್ಯ ಕರ್ಮಗಳನಾಚರಿಸುವಾಗ ತಂದೆ ತಾಯಿಗಳ ದಿನ ಮರೆತು ಒಟ್ಟಾಗ ಕ ರ್ಮೇಧಿ ಭಿಕ್ಷಕೆ ಬರಲು ಇಲ್ಲೆಂಬುವಾಗ 2 ಮಾಸೋಕ್ತ ಧರ್ಮವನು ತೊರೆದಾಗ ವಿಪ್ರಗೋ ಗ್ರಾಸಗಳ ಕೊಡದೆ ಭುಂಜಿಸುವಗಲೇ ಮೀಸಲು ಮಡಿ ಮೈಲಿಗೆಗಳ ನೋಡದಲೆ ದು ಷ್ಯಾಸೆಯಲಿ ನೀಚರಾಲಯದಲುಂಬಾಗ 3 ಪ್ರಾಯ ಧನ ಮದದಿಂದ ಹೇಯ ವಿಷಯಗಳು ಪಾ ದೇಯವೆಂದರಿದು ಭುಂಜಿಸುವಾಗಲು ಜಾಯಾತ್ಮ ದೇಹಾದಿಗಳು ತನ್ನದೆಂಬಾಗ ಮಾಯವಾದಿಯ ಉಕುತಿ ಮನಕೆ ತಂದಾಗ 4 ಮತಿವಮತರೊಡನೆ ಮತ್ಸರ ಪುಟ್ಟಿದಾಗವ ರ್ಪಿತ ಪದಾರ್ಥಗಳ ಭುಂಜಿಸುವಾಗಲು ಮೃತ ವತ್ಸ ಗೋವಿನ ಚಲಮಂಬಾಗ ಶ್ರೀ ಪತಿ ಜಗನ್ನಾಥವಿಠಲನ ಸ್ಮøತಿ ಬಿಟ್ಟಾಗ 5
--------------
ಜಗನ್ನಾಥದಾಸರು
ಡಿಂಬದಲ್ಲಿ ಇರುವ ಜೀವ ಕಂಬಸೂತ್ರ ಗೊಂಬೆಯಂತೆಎಂದಿಗಿದ್ದರೊಂದು ದಿನ ಸಾವು ತಪ್ಪದು ಪ ಬಟ್ಟೆ ಕಾಣದು1 ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರಅರ್ಥಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರುಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ 2 ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲಅಣ್ಣತಮ್ಮ ತಾಯಿ ತಂದೆ ಬಯಸಲಾಗದುಅನ್ನ ವಸ್ತ್ರ ಭೋಗಕಾಗಿ ತನ್ನ ಸುಖವ ಕಾಣಲಿಲ್ಲಮಣ್ಣುಪಾಲು ಆದಮೇಲೆ ಯಾರಿಗಾಹುದೊ 3 ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡುಅಳ್ಳಾಚಾರಿ ಗೊಂಬೆಯಂತೆ ಆಡಿ ಹೋಯಿತುಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆಉಳ್ಳೆ ಪೊರೆಯಂತೆ ಕಾಣೊ ಸಂಸಾರದಾಟವು 4 ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನುಕರ್ತೃ ಕಾಗಿನೆಲೆಯಾದಿಕೇಶವನ ಚರಣಕಮಲನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ 5
--------------
ಕನಕದಾಸ
ತಪ್ಪು ತಪ್ಪು ತಪ್ಪು ತಪ್ಪಪರಾಧ ಕೋಟಿಯಸರ್ವಂ ತಪ್ಪನ್ನೆಲ್ಲಾ ಕ್ಷ'ುಸಿ ಒಪ್ಪಿಕೊಳ್ಳಯ್ಯ ಗುರುವೆ ಪದೇಹ ತನ್ನದೆಂಬ ಅಹಂಕಾರದ ತಪ್ಪು ತನ್ನಗೇಹ ಸತಿಸುತರ ಮಮತೆ ಪಾಶದ ತಪ್ಪುಮೋಹ ಮದ ಮಾತ್ಸರ್ಯವ ಭ್ರಮೆಗೊಂಬೊ ತಪ್ಪುಓಹೋ! ವ್ಯರ್ಥಕಾಲವ ಕಳೆದೆನಹುದಯ್ಯ 1ಬಕವೃತ್ತಿಯ ಸೇಮೆಂದ ಮುಕುತನೆಂಬೆನೋ ಹರಿ'ಕಳಮತಿಗಳ ಕೂಡಿ ಯೋಗ್ಯನೆಂಬೆನೋಸಕಲ 'ಷಯಸುಖವನುಂಡು ವೈರಾಗಿಯೆಂಬೆನೋ ಹರಿಭಕ್ತರ ಸಂಗವ ಬಿಟ್ಟು ಜ್ಞಾನಿಯೆಂಬೆನೋ 2ಬರಿಯ ಬ್ರಹ್ಮಜ್ಞಾನದಿಂದ ಮರುಳು ಮಾಡಿದೆಪರಿಪರಿಯ ಭಾವಭೇದಗಳನು ತೋರಿದೆಅರಿಯದ್ಹೋದೆನಯ್ಯ ಶ್ರೀಮದ್ಗುರುವೆ ವಾಸುದೇವಾರ್ಯ ನರಸಾರ್ಯ ಅಮರಗಿರಿನಿಲಯ ಸಕಲ ತಪ್ಪು ಮರೆಯಯ್ಯಾ * 3
--------------
ವೆಂಕಟದಾಸರು
ನಂಬಬೇಡಿ ಸಿರಿಯ ತನ್ನದೆ ? ಪ ನಂಬಬೇಡಿ ಸಿರಿಯು ತನ್ನದೆಂಬ ನಿಮಿಷದೊಳಗೇನಹುದೊಡಂಬತನವಿದೇಕೆ ಹರಿಯ ಪಾ-ದಾಂಬುಜವನು ಭಜಿಸಿ ನರರು ಅ ಜಲಧಿಯನ್ನು ಪೀರ್ದ ಮುನಿಯಜನನಿ ಪೆಸರ್ಗೆ ಕಿವಿಯನಾಂತಖಳನ ಬಲವ ನಂಬಲಾತುತಲೆಯ ತವಿಸಿದವನ ಸಿರಿಯುಗಳಿಗೆಯೊಳಗೆ ಕೀಲು ಸಡಿಲದೆ - ಎಣಿಕೆ ಇಲ್ಲದದಳವು ಯಮನನಗರಿಗೈದದೆ - ದೈವಕೃಪೆಯುತೊಲಗಲೊಡನೆ ದಾಳಿವರಿಯದೆ - ಕೇಳಿ ಜನರೆ 1 ಇಭ ನೃಪತಿ ಶೌರಿ ಮುನಿಯಲಂದು ಅವನ ಪದವು ಮುರಿಯದೆ - ಕೇಳಿ ಜನರೆ2 ಧರಣಿಯ ಮುನ್ನಾಳ್ದ ನಹುಷಸಗರರೆನಿಪ ಭೂಪತಿಗಳುಸಿರಿಯ ಜಯಿಸಲಿಲ್ಲ - ಮಿಕ್ಕನರರ ಪಾಡಿದೇನು ನೀವುಬರಿದೆ ಭ್ರಾಂತರಾಗಬೇಡಿರೊ - ಎಂದಿಗಾದರುಸ್ಥಿರವಿದಲ್ಲವೆಂದು ತಿಳಿಯಿರೊ - ಶ್ರೀ ಕಾಗಿನೆಲೆಯವರದ ಕೇಶವನನು ಭಜಿಸಿರೊ - ಕೇಳಿ ಜನರೆ 3
--------------
ಕನಕದಾಸ
ಬುದ್ಧಿಯ ನಾನೇ ಹೇಳುವೆ ಎಲೆ ಎಂಗರವಟ್ಟೆಬುದ್ಧಿಯ ನಾನು ಹೇಳುವೆಬುದ್ಧಿಯ ನಾನು ಹೇಳುವೆ ಶುದ್ಧ ಬ್ರಹ್ಮನು ನೀನು ಎಲೆ ಎಂಗರವಟ್ಟೆ ಪ ಸತಿ ಎಲ್ಲಿ ಹಿಂದಣ ಸುತರೆಲ್ಲಿಹಿಂದಾದುದನು ಬಿಟ್ಟು ಇಂದಿದು ನನ್ನದೆಂಬೆ ಎಲೆ ಎಂಗರವಟ್ಟಿ 1 ಮುಂದಾವ ಜನ್ಮ ಭೋಗಿಪೆಯೋ ಎಲೆ ಎಂಗರವಟ್ಟೆಮುಂದಾರ ಮದುವೆಯಹೆ ಎಲೆ ಎಂಗರವಟ್ಟೆಮುಂದಣ ತಾಯಿ ಯಾರು ಮುಂದಣ ತಂದೆ ಯಾರುಮುಂದಣ ಹಿಂದಣದರಿಯೆ ಇಂದಿನದು ಎನ್ನದೆಂಬೆ ಎಲೆ ಎಂಗರವಟ್ಟಿ2 ಭಿಕ್ಷವ ಹಾಕಲಾರಿ ಎಲೆ ಎಂಗರವಟ್ಟೆ ಕುಕ್ಷಿಗೆ ತಿನ್ನಲಾರಿಲಕ್ಷ ಹೊನ್ನುಗಳನ್ನು ನೆತ್ತಿಗೆ ಇಟ್ಟುಕೊಂಬೆಯಾ ಎಲೆ ಎಂಗರವಟ್ಟೆ 3 ತನುವಿದು ತನ್ನದೆಂಬೆ ಎಲೆ ಎಂಗರವಟ್ಟೆ ತನುವನು ನೋಡಿಕೊಂಬೆನಿನ್ನ ಮುಂದೆಯೇ ತನು ತಾನು ಹೋಗುವುದುತನುವದು ನಿನಗಿಲ್ಲ ತನು ಸಂಬಂಧವೆಂತೋ ಎಲೆ ಎಂಗರವಟ್ಟೆ4 ಹಿಡಿಯೋ ಗುರುಪಾದವನು ಎಲೆ ಎಂಗರವಟ್ಟೆ ಪಡೆಯೋ ಕಟಾಕ್ಷವನುಸಡಿಲದೇ ದೃಷ್ಟಿಯನು ತಿರುಹಿ ನಿನ್ನೊಳಗಿಟ್ಟುಒಡೆಯ ಚಿದಾನಂದನು ನೀನಾಗಿ ನೀನಿರು 5
--------------
ಚಿದಾನಂದ ಅವಧೂತರು
ಯೋಗಿಯಾಗ ಬೇಕು ಅಲ್ಲವೆ ಭೋಗಿಯಾಗ ಬÉೀಕು ನೀ ಪೋಗಬೇಕು ಪ ತನ್ನ ತಾನು ತಿಳಿದು ಆತ್ಮಜ್ಞಾನಿಯಾಗಬೇಕು ಅನ್ನ ವಸ್ತ್ರಗಳನು ಚಾತುರ್ವರ್ಣಕೀಯಬೇಕು ತನ್ನದೆಂಬ ಮಮತೆಯನ್ನು ಬಿಟ್ಟು ಚರಿಸಬೇಕು ಭಿನ್ನ ಭಾವವಳಿದು ಏಕೋ ದೇವನಾಗಬೇಕು 1 ಸತ್ಪಾತ್ರ ಗೀಯಬೇಕು ನಾನಾ ಜೀವ ಜಂತುಗಳಲಿ ಪ್ರೇಮವಿರಲು ಬೇಕು ತಾನು ತಾನೆಯಾಗಿ ಹರಿಯ ಧ್ಯಾನಿಸುತಿರಲು ಬೇಕು ಭಾನು ಸುತನ ಕೈಗೆ ಸಿಕ್ಕಿದಂತೆ ಇರಲು ಬೇಕು 2 ನಿತ್ಯ ಕರ್ಮವ ಮಾಡಬೇಕು ಕರುಣದಿಂದ ದೀನ ಜನರ ನಿರುತ ಪೊರೆಯ ಬೇಕು ಗುರುಗಳಲ್ಲಿ ಹಿರಿದು ವಿಶ್ವಾಸವಿರಲು ಬೇಕು ಮರುತ ಸುತನ ಕೋಣೆ ಲಕ್ಷ್ಮೀರಮಣನ ಕೂಡಬೇಕು 3
--------------
ಕವಿ ಪರಮದೇವದಾಸರು
ಶ್ರೀನಿಕೇತನ ಲಕ್ಷ್ಮೀ ಕಾಂತನ ಪದಪದ್ಮ ಧ್ಯಾನ ಮಾಡುತ ಎನ್ನ ಸ್ಥಿತಿಯ ದೀನಭಾವನೆಯಿಂದಲೊರೆವೆನು ಗುರುಪವ ಮಾನ ಪಾಲಿಸಲಿ ಸನ್ಮತಿಯ ಪ. ತಾನು ತನ್ನದೆಂಬ ಹೀನ ಭಾವನೆಯಿಂದ ನಾನಾ ಯೋನಿಗಳಲ್ಲಿ ಚರಿಸಿ ಮಾನವ ಜನ್ಮವನೆತ್ತಲು ಮುಂದಾದ- ದೇನೆಂಬೆ ಗರ್ಭದೊಳುದಿಸಿ 1 ಮಾತಾಪಿತರುಗಳು ಮೋಹದಿ ರಮಿಸಲು ಕೇತ ತತಿಗೆ ಸರಿಯಾಗಿ ಆತು ಬಂದಿಹೆನು ಗರ್ಭದಿ ಮೆಲು ನರ ವ್ರಾತ ಬಂಧಕೆ ಗುರಿಯಾಗಿ 2 ಸೇರಿದ ಕ್ರಿಮಿ ಪರಿವಾರ ಕಚ್ಚುತಲಿರೆ ಚೀರಲಾದರು ಶಕ್ತಿಯಿರದೆ ಭಾರ ವಸ್ತುವು ಕಣ್ಣಸಾರವು ತಡೆಯದೆ ಗಾರುಗೊಂಡೆನು ಗರ್ಭದೊಳಗೆ 3 ಮೂರರಾ ಮೇಲೆ ಮತ್ತಾರುಮಾಸಗಳಿಂತು ಭಾರಿ ಭವಣೆಗೊಂಡು ಕಡೆಗೆ ಭೋರನೆ ಭೂಮಿಗೆ ದೂರಿ ಬಂದೆನು ಮಲ ಧಾರೆಯಾ ಕೂಡಿ ಮೈಯೊಳಗೆ 4 ಹೇಸಿಗೆ ಮಲಮೂತ್ರ ರಾಶಿಯ ಒಳಗೆ ದು- ರ್ವಾಸನೆ ಬರುವ ಗೆರಸಿಯ ಹಾಸಿಗೆ ಒಳಗೆ ಹಾಕಿರುತಿರೆ ದೇಹದ ಲೇಶ ಸ್ವಾತಂತ್ರ್ಯವೇನಿರದೆ 5 ಮೂಸಿ ಮುತ್ತುವ ನುಸಿಮುತ್ಕುಣ ಬಾಧೆಗೆ ಘಾಸಿಗೊಳುತ ಬಾಯ ತೆರದೆ ದೋಷ ಶಂಕಿಸಿ ಮೈಯೊಳಿಕ್ಕಿದ ಬರೆಗಳ ಬಾಸಲೆಯುನು ತಾಳ್ದೆ ಬರಿದೆ 6 ನಾಲ್ಕು ಕಾಲುಗಳಿಂದ ನಾಯಿಗೆ ಪರಿಯಾಗಿ ಸೋಕಿದೆ ಸರ್ವತ್ರ ತಿರುಗಿ ಸಾಕುವ ಜನರೆಡಬಲಗಾಲ ತುದಿಯಿಂದ ದೂಕಿದರಲ್ಲಿಯೆ ಸುಳಿದೆ 7 ವಾಕುಗಳೆಂಬ ಕೂರಂಬನು ಸಹಿಸಿ ಪ- ರಾಕೆಂದು ಪರರ ಸೇವಿಸಿದೆ ಮಾಕಳತ್ರನೆ ನಿನ್ನ ಕೃಪೆಯಾದ ಬಳಿಕ ಮೋ- ಹಾಕಾರ ಮಡುವಿನೊಳಿಳಿದೆ 8 ಈಗಲಾದರು ದೇಹ ಭೋಗವೆ ಬಯಸುತ ನೀಗಿದೆ ವ್ರತ ನೇಮಾದಿಗಳ ಸಾಗದ ಫಲ ತನಗಾಗಬೇಕೆಂಬ ಮ- ನೋಗತಿಯಿಂದ ಕರ್ಮಗಳ 9 ಮೂಗಭಾವನೆಯನ್ನು ನೀಗದೆನಿಸಿ ಮುಂ- ದಾಗಿಯಾಡುವೆ ಮಥನಗಳ ಕಾಗೆಯು ಕುಂಭದ ಜಲ ಕುಕ್ಕುವಂತೆ ಬೆಂ- ಡಾಗಿ ಕೊಂಡೆನು ಝಗಳಗಳ 10 ಕಂತುಜನಕ ಕಂಜನಾಭ ವೆಂಕಟರಾಜ ಚಿಂತಾಮಣಿ ಸುರತರುವೆ ಎಂತಾದರು ನಿನ್ನ ದಾಸ್ಯ ಸೇರಿದ ಮೇಲೆ ಇಂತುಪೇಕ್ಷಿಸುವುದು ಥರವೆ 11 ಭ್ರಾಂತಿ ಎಂಬುದ ಬಿಡಿಸಿನ್ನಾದರು ಲಕ್ಷ್ಮೀ ಕಾಂತ ಕಾರುಣ್ಯ ವಾರುಧಿಯೆ ಚಿಂತಿತದಾಯಿ ಎನ್ನಂತರಂಗದಿ ಬೇಗ ನಿತ್ಯ ವಿಧಿಯೆ 12
--------------
ತುಪಾಕಿ ವೆಂಕಟರಮಣಾಚಾರ್ಯ