ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳು ಒಳ್ಳೆವರ ಕೂಡಾ ನಿನ್ನ ಹಿತವ ಪ್ರಾಣೀ | ತಾಳಿ ನರದೇಹದಿಂದ ಮಾಡುವರೇ ಹಾನಿ ಪ ಮುತ್ತಿನಂಥಾ ದಿನವಿದು | ಸಿಕ್ಕದಣ್ಣಾ ಮುಂದ | ಚಿತ್ತ ಸ್ಥಿರವಾ ಮಾಡಿ ಹರಿಯ ನೆನೆಯಬೇಕು ಇಂದ 1 ಬಾಲನಾಗಿ ಕೆಲವು | ದಿನದಿಂದ ಯೌವನದಿ | ಮ್ಯಾಲ ಯೆಚ್ಚರವ ಬಿಟ್ಟು | ಹರಿಗೆ ವಿಮುಖನಾದಿ 2 ಜರೆಯು ಬಂದ ಕಾಲದಲ್ಲಿ | ತನುವು ತನ್ನದಲ್ಲಾ | ಸರಕು ಮನೆಯೊಳಿಲ್ಲಾ 3 ಈಗಳವೆ ಯಚ್ಚರಿತು | ಹರಿಯಾ ಬಲಗೊಂಡು | ಹಿಂಡು 4 ಶರಣು ಹೋಗುವಾ | ಭಾವಭಕ್ತಿಯಲ್ಲಿ ದಾವಪ್ರೇಮಿ | ತಾರಿಸುವಾ ಗುರು ಮಹಿಪತಿಸುತ ಸ್ವಾಮಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾಸನಾಗೋ ಭವಪಾಶನೀಗೋ - ವಿಶೇಷನಾಗೋ ಪ ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನಪಾಶಕ್ಕೊಳಗಾಗದೆ ನಿರ್ದೋಷಿಯಾಗೊ - ಸಂತೋಷಿಯಾಗೊಅ ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರಏಸು ದೇಶ ತಿರುಗಿದರೆ ಬಾಹೋದೇನೊ - ಅಲ್ಲಿ ಆಹೋದೇನೊದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ - ಉಪವಾಸದಲ್ಲಿಮೀಸಲಾಗಿ ಮಿಂದು ಜಪತಪ ಹೋಮನೇಮಗಳಏಸು ಬಾರಿ ಮಾಡಿದರೂ ಫಲವೇನೊ - ಇದು ಚೆಲುವೇನೊವಾಸುದೇವನೆಂಬ ಒಳಗಿಹ ಹಂಸನ ಸೇರಿಲೇಸನುಂಡು ಮೋಸಗೊಳದೆ ಮುಕ್ತನಾಗೊ - ನೀ ಶಕ್ತನಾಗೊ1 ಅತ್ತಲೋ ಇತ್ತಲೋ - ಎತ್ತಲೋ ಈ ಸಂಸಾರಬತ್ತಲೆಗೆ ಬತ್ತಲೆ ನಿತ್ಯವಲ್ಲ - ಪರಿಮಿತಿ ಇಲ್ಲಕತ್ತಲೆ ಕಾವಳದೊಳು ಕಾಣಲಾರದೆ ನೀನುಸತ್ಯವೆಂಬ ದಾರಿಯನು ಸೇರಲಿಲ್ಲ - ಲೇಸು ತೋರಲಿಲ್ಲಉತ್ತಮ ಅ ಉ ಮ ಎಂಬ ಓಂಕಾರ ಬೀಜಾಕ್ಷರಚಿತ್ತದಲಿ ಗ್ರಹಿಸು ನೀ ಬಿಡಬೇಡ - ಬಿಟ್ಟು ಕೆಡಬೇಡಹೊತ್ತಾರೆಯಲೊ ಬೈಗಿನಲೊ ಆಗಲೊ ಈಗಲೊ ಕಾಯನಿತ್ಯವೆಂದು ಸ್ಥಿರವೆಂದು ನಂಬಬೇಡ - ನಿನಗೆ ಡಂಬ ಬೇಡ 2 ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆತಾಯಿ ಯಾರೊ ತಂದೆ ಯಾರೊ ಮಡದಿ ಯಾರೊ ಮಕ್ಕಳ್ಯಾರೊಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀರಘುರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು - ಭವದಿ ಮಮತೆ ಇಟ್ಟುನಾಯ ಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದುಬಾಯಿ ಬಾಯಿ ಬಿಡುತಲಿ ಸಾವುದೇನೊ - ನೀ ನೋವುದೇನೊತ್ರಾಯಿ ತ್ರಾಯಿ ತ್ರಾಯಿಯೆಂದು ತ್ರೈಲೋಕ್ಯದೊಡೆಯ ಪುಣ್ಯದಾಯಕನ ಹೊಂದಿ ನೀ ಧನ್ಯನಾಗೊ - ಮುಕ್ತ ಮಾನ್ಯನಾಗೊ 3 ಸಿರಿ ಕಮಲೇಶನನ್ನುಒಂದು ಬಾರಿ ಅರುಹಿಂದ ನೆನೆಯಲಿಲ್ಲ - ಮನ ತಣಿಯಲಿಲ್ಲಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿನೊಂದು ಬೆಂದು ಒಂದರಿಂದ ಉಳಿಯಲಿಲ್ಲ - ಬಂಧ ಕಳೆಯಲಿಲ್ಲಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದುಇಂದು ಕಾಣು ದೇಹದಲಿ ಪಿಂಡಾಂಡ - ಹಾಗೆ ಬ್ರಹ್ಮಾಂಡಇಂದಿರಾ ರಮಣನ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕುತಿಯ ಬೇಡು ಕಂಡ್ಯ - ನೀ ನೋಡು ಕಂಡ್ಯ 4 ತುಂಬಿ ಲಂಡ
--------------
ಕನಕದಾಸ
ದಿನಗಳನು ಕಳೆವ ಜನರೆ ಸುಜನರು ವನಜನಾಭನ ದಾಸರ ಸಮಾಗಮದಿಂದ ಪ. ಅರುಣೋದಯದಲೆದ್ದು ಆಚಮನ ಕೃತಿಯಿಂದ ಪರಿಶುದ್ಧರಾಗಿ ಇಹಪರಗಳಿಂದ ಎರಡುವಿಧ ಸುಖವೀವ ಗುರುಮಧ್ವಮುನಿವರನ ಪರಮಮತವಿಡಿದು ಹರಿಕಥಾಮೃತ ಸವಿದು 1 ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ- ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು ಭಾನುನಾಮಕನಾದ ಪರಮಾತ್ಮನಂಘ್ರಿಯನು ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ 2 ವಾಸುದೇವ ಅಡಿಗಡಿಗೆ ನೆನೆದು ಪಾವಕಗೆ ಪ್ರಾತರಾಹುತಿಯನಿತ್ತು ಭಾವಜ್ಞರಲಿ ಸಕಲಪುರಾಣಗಳ ಕೇಳಿ ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ 3 ನದನದಿಗಳಲಿ ಸ್ನಾನವನು ಮಾಡಿ ಕಂಠÀದಲಿ ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು ಮುದದಿಂದ ಧರಿಸಿ ಮಧ್ಯಾಹ್ನ ಕಾಲದಿ ಬ್ರಹ್ಮ ಯ- ಜ್ಞ ದೇವ ಋಷಿ ಪಿತೃಗಳ ತೃಪ್ತಿಯನು ಬಡಿಸಿ4 ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ ದೇವಪೂಜೆಯ ಮಾಡಿ ದೇವೇಶಗೆ ನೈವೇದ್ಯಗಳನಿಟ್ಟು ನಿತ್ಯತೃಪ್ತಗೆ ವೈಶ್ವ- ದೇವ ಬಲಿಹರಣ ಅತಿಥಿ ಪೂಜೆಗಳಿಂದ 5 ಪರಮ ಹರುಷದಿಂದ ದೇವ ಪ್ರಸಾದವನು ವರ ಮಾತೃ ಪಿತೃ ಸೋದರರು ಸಹಿತ ಪರಮ ಸಖರ ಪಂಙÂ್ತ ಪಾವನರೊಡಗೂಡಿ ನರಹರೆ ಎನುತ ಭೋಜನ ಮಾಡಿ ಮೋದಿಸುತ 6 ಸಾಯಾಹ್ನದಲಿ ಸಂಧ್ಯಾನ ಗಾಯಿತ್ರಿ ಜಪ ಶ್ರೀಯರಸನಂಘ್ರಿ ಸೇವೆಯನು ಮಾಡಿ ವಾಯುಸಖನೊಳಗಾಹುತಿಯನಿತ್ತು ಲಕ್ಷ್ಮೀನಾ- ರಾಯಣನ ಗುಣಗಳನು ಪೊಗಳುತಲಿ 7 ತನುಮನವÀ ಶ್ರೀಹರಿಯಾಧೀನವ ಮಾಡಿ ಅನುಸರಿಸಿ ಭಾಗ್ಯಬಡತನ ಎಣಿಸದೆ ಮನವರಿತು ಹರಿಕೊಟ್ಟುದು ತನ್ನದಲ್ಲದೆ ಅಧಿಕ ಅಣುಮಾತ್ರ ಬಾರದೆಂದು ಅಲ್ಪ ಸಂತುಷ್ಟನಾಗಿ8 ಈ ವಿಧದಿ ಅನುದಿನವಾಚರಿಸಿ ರಾತ್ರಿಯಲ್ಲೊಂದು ಜಾವ ಜಾವಕೆ ಎದ್ದು ನೆರೆಹೊರೆಯು ಕೇಳ್ವಂತೆ ಪಾವನ ಚರಿತ್ರ ಹಯವದನನ ನೆನೆದು 9
--------------
ವಾದಿರಾಜ
ರಂಗನ್ಯಾಕೆ ಬಾರ ತಂಗಿ ಮಂಗಳ ಮಹಿಮನ ದಿವ್ಯಾಂಗವ ಕಾಣದೆ ಎನ್ನಕಂಗಳು ಕಂಗೆಡುತಿವೆಪ. ರಂಗುಮಾಣಿಕದುಂಗುರದಂಗುಲಿಯ ಸನ್ನೆಯಿಂದಪೊಂಗೊಳಲೂದುವನ ತೋರೆ ರಮಣಿ ಅ.ಪ. ತಿಂಗಳು ಮೂಡಿತು ಪಿಕ ಸಂಗೀತವ ತೊಡಗಿತುಭೃಂಗ ತನ್ನಂಗನೆಯರ ಸಂಗಡ ನಲಿದು ಬಂದಶೃಂಗಾರವನದ ಮೃದು ತಂಗಾಳಿ ಬೀಸಿತು ನೋಡಾ-ನಂಗ ನೆಚ್ಚ ಬಾಣಗಳೆಂತೊ ಅಂತರಂಗವ ತಾಕಿದರೆನ್ನ ಇಂಗಿತವರಿತು ದೇವೋ-ತ್ತುಂಗ ಕಾಯದಿರೆ ಉಳಿವಂಗನ ನಾಕಾಣೆ ನಮ್ಮಪೆಂಗಳಿಗೆ ಬಂದ ಬಲುಭಂಗ ತನ್ನದಲ್ಲವೆ ಸಾ-ರಂಗಾಕ್ಷಿ ಬೇಗವನ ತೋರೆ ರಮಣಿ 1 ಕೌಸ್ತುಭ ರತ್ನಕರ್ಣಕುಂಡಲಸರಸಿಜಮುಖದಿ ಕಸ್ತೂರಿ ತಿಲಕವೆಸೆಯೆಪರಿಮಳಿಸುವ ಪೂಮಾಲೆಮೆರೆಯೆ ಪೊಳೆವ ಪೀತಾಂಬರದ ಸುತ್ತಲೊಲೆವಕಿರುಗೆಜ್ಜೆ ಮಣಿಮಯಕಾಂತಿ ಮಿಂಚುತಿರಲುಚರಣನೂಪುರ ಘಲುಘಲುಕೆನೆ ಕುಣಿವÀ ಶ್ರೀಹರಿಯನು ಕರೆದುತಾರೆ ರಮಣಿ 2 ಮಂದಜಾಸನನ ತಂದೆಯೆಂದೆನಿಪ ಗೋವಿಂದನಕಂದರ್ಪ ವೃಂದಾದಿಗಳ ಕಂದಿಸುವ ಕುಂದಿಲ್ಲದಸೌಂದರ್ಯಸಂದೋಹದೊಳಗೊಂದೊಂದನಾರು ಬಲ್ಲರುಎಂದೆಂದಿವನನು ಪೊಂದಿಪ್ಪಇಂದಿರೆ ಇವನ ಗುಣಸಾಂದ್ರ ಕಿರುಬೆರಳಿನಂದವನೋಡುತ್ತ ಆನಂದಸಿಂಧುವಿನೊಳ್ಮುಣುಗಿದಳಿಂದು ಹಯವದನ ಮುಕುಂದನ ತಂದೆನ್ನ ಮುಂದೆಇಂದುಮುಖಿ ಕರೆದುತಾರೆ ರಮಣಿ3
--------------
ವಾದಿರಾಜ
ನಂಬಿ ಚೊಕ್ಕಟಿಂಬು ಪಡೆಯಿರೈ ಪ.ಇಂಬುಪಡೆದು ಹರಿಯಚರಣಅಂಬುಜಬಂಡುಂಡು ಮಿಕ್ಕಹಂಬಲವ ಉಳಿದುಭೂರಿಸಂಭ್ರ್ರಮಿಸುವವರಕೇಳಿಅ.ಪ.ಹರಿವ ಮನವಕಟ್ಟಿವಿೂರಿಬರುವ ದುರಿತಕಂಜದೆ ಸುತ್ತಿರುವ ಮಾಯಾಪಾಶ ಹರಿವ ಹರುವನಾಲಿಸಿಗುರುವಿನಾಜ್ಞಾದಂತೆ ಪುಣ್ಯದುರುಹು ಬಲ್ಲ ಪ್ರೇಕ್ಷಕಲ್ಪತರುವ ಪಿಡಿದು ನಷ್ಟ ಕಳೇವರವು ತನ್ನದಲ್ಲವೆಂದು 1ಆವಾಗೆ ಸಚ್ಛಾಸ್ತ್ರ ಶ್ರವಣಭಾವಗುಟ್ಟುಕೇಳಿಭಕುತಿಠಾವುಗಂಡು ಹಸಿವು ತೃಷೆಯಕಾವಘಸಣೆಯಸಾವಿಗ್ಹೊಂದದಂತೆ ಸಾಧುಸೇವ್ಯಗರುಡಗಮನನಂಘ್ರಿಸೇವೆಗಧ್ಯಕ್ಷಿತರಾಗಿ ನೀವೀಗ ವೈರಾಗ್ಯ ಬಲಿದು 2ಕ್ಷುದ್ರಭೋಗಬಯಸದೆ ದಾರಿದ್ರ ಭೀತನಾಗದೆ ಸಮುದ್ರಭವನನೆಂದು ಶ್ರೀಮುದ್ರಾಭರಣದಭದ್ರ ಭಾಗವತನು ಆಭದ್ರ ಬುದ್ಧಿಯಲ್ಲಿ ಕೂಡಿಚಿದ್ರೂಪ ಪ್ರಸನ್ನವೆಂಕಟಾದ್ರಿ ಭೋಗಶಯನನೆಂದು 3
--------------
ಪ್ರಸನ್ನವೆಂಕಟದಾಸರು
ನೀನಲ್ಲದೆನಗಾರಿಲ್ಲ ಗೋವಿಂದನೀನಲ್ಲದೆ ಇಹಪರವಿಲ್ಲ ಪಪರರ ಬೇಡಿ ಪಂಥವಾಡಿ ಹೋಯಿತಲ್ಲನರರ ಕೊಂಡಾಡಿ ನಾಲಗೆ ಬರಡಾಯಿತಲ್ಲ ||ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲನರಗೆ ಪಾಮರಗೆ ಪಾತಕದ ಪಂಜರಗೆ 1ತನುವು ತನ್ನದಲ್ಲ ತನ್ನವರು ತನಗಿಲ್ಲಧನಧಾನ್ಯ ಸಂಪತ್ತು ಅವಗಿರದು ||ತನುವು ಹೋಗಿ ಇನ್ನು ಮಣ್ಣು ಕೂಡುವಾಗತನುಮನಕ್ಕೆ - ಇನ್ನಾರಯ್ಯ ಸ್ವಾಮಿ 2ಮಾತಾಪಿತರು ಗೋತ್ರಜರು ಮೊದಲಾಗಿಪ್ರೀತಿಯಿಂದ ಬಹಳ ಸತಿಸುತರು ||ಕೀರ್ತಿಗೆ ಅವರು ಸ್ವಾರ್ಥಕೆ ಇವರು ಸಂಗಾತಿಗಿನ್ನಾರಯ್ಯಪುರಂದರವಿಠಲ3
--------------
ಪುರಂದರದಾಸರು