ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿರಿರಾಜತನೂಜಾತೆವೇದ ವಿಖ್ಯಾತೆಪರಮಂಗಳದಾತೆ ಪದ್ಮಜಮುಖಿ ಸುರಗಣ ಪರಿಪೂಜಿತೆಶಂಕರಪ್ರೀತೆಧುರದಿ ಮಧುಕೈಟಭರ ವಧಿಸಿ ವಿ-ಸ್ತರದ ಜಲದೊಳು ಸ್ಥಿರಮೆನಲು ಭಾ-ಸುರ ಧರಿತ್ರಿಯ ನಿಲಿಸಿ ಸರ್ವಾಮರರಪೊರೆದಮರೇಂದ್ರಸನ್ನುತೆಲೋಕೈಕಮಾತೆ 1 ನಾರದಗಾನಲೋಲೆಶ್ರೀಚಕ್ರಸಂಚಾರಿಣಿ ಶುಭಲೀಲೆದಿವ್ಯಮೌಕ್ತಿಕಹಾರೆ ಕುಂಕುಮನಿಟಿಲೆಮುಕುರಕಪೋಲೆಧೀರಸುರಪತಿಮುಖ್ಯಸುರಪರಿವಾರ ಜಯವೆಂದಾರುತಿರೆ ಜುಝೂರ (?) ಮಹಿಷಾಸುರನ ಮರ್ಧಿನಿಮೂರು ಲೋಕವ ಪೊರೆವ ಮಂಗಲೆಕಸ್ತೂರಿಫಾಲೆ 2 ಎಸಳುಗಂಗಳ ನೀರೆಪರಾತ್ಪರೆಮಿಸುಪ ಕಂಕಣಹಾರೆಬಂದುಗೆಯ ಹೂವಿನಂತೆಸೆವಸುಶೋಣಾಧರೆಬಿಸಜಬಾಣನ ಪೊಸಮಸೆಯ ಕೂರಸಿಯೆನಲು ಮಿಸುಮಿಸುಪ ಕಂಗಡೆಎಸವ ಪೊಸವೆಳಗಿಂದ ದೆಸೆಗಳವಿಸರವನು ಪಸರಿಸುವ ಶ್ರೀಕರೇಮೋಹನಾಕಾರೇ3 ಸುಲಲಿತ ಮಧುರವಾಣಿಮೋಹನಕರಜಲರುಹ ಸದೃಶಪಾಣಿಮಂಗಲಸೂತ್ರೋ-ಜ್ವಲೆ ಹರಿ ನೀಲವೇಣಿಸಿಂಹವಾಹಿನಿನಳನಳಿಪ ನಳಿತೋಳ ಥಳ ಥಳಥಳಿಸುವಳಿಕುಂತಳದದರಸಮಗಳದತಿಲಸುಮನಾಸಿಕದಅರಗಿಳಿನುಡಿಯರುದ್ರಾಣಿ ಗುಣಮಣಿಪರಮಕಲ್ಯಾಣಿ4 ಸರಸಿಜದಳನಯನೆಸಾಮಜಯಾನೆ ಸರಸಮಂಗಲಸದನೆಶಂಕರಿಪೂರ್ಣೆಶರದಿಂದುನಿಭವದನೆಕೋಕಿಲಗಾನೆಪರಮಪಾವನತರ ಸು-ವರದಾನದಿಯ ತೀರದಿ ಮೆರವ ಕೆಳದಿಯಪುರದ ರಾಮೇಶ್ವರನ ವಲ್ಲಭೆಯೆನಿಸಿ ಭ-ಕ್ತರ ಪೊರೆವ ಪಾರ್ವತಿಕಲಹಂಸಗಮನೆ ಪರಮರುದ್ರಾಣಿ5
--------------
ಕೆಳದಿ ವೆಂಕಣ್ಣ ಕವಿ
ನೀನೇ ದಯಾಸಂಪನ್ನ ಭಕ್ತ ಪ್ರಸನ್ನಾ ಪ ಕಂದನಿನ್ನಯ ದಿವ್ಯಾನಂದ ಮೂರುತಿಯ ನಾ ಕುಂದದೇ ಭಜಿಸಲು ಮರುಗಿ ಬೇಗಾ ಇಂದಿರೇ ಅಜಭವರೆಂದೂ ಕಾಣದ ನಿಜ ವೆಂದೆಂಬೋ ರಾಜ್ಯದೊಳಿದ್ದ ಕಾರಣದಿಂದ 1 ಹರಿಸರ್ವೋತ್ತಮನೆಂದು ಪಿತನಾಜ್ಞೆಯ ಮೀರಲು ಹರಿರೂಪತಾಳ್ದು ದೈತ್ಯನ ಶಿರವಾ ಹರಿದು ಬಾಲನನೆತ್ತಿ ಸಲಹಿದ ಬಗೆಯಿಂದ ಕರುಣಾಕರನೆಂದು ಶ್ರುತಿಯು ಪೇಳುತ್ತಿರಲೂ 2 ಪಾತಕದಿಂದ ಗೌತಮಸತಿ ಶಿಲೆಯಾಗೆ ಭೂತಳದೊಳು ಪರಬೊಮ್ಮನೆಂಬೋ ಸೀತಾರಾಮಾವತಾರರಿಂದ ಸೌಂದರ್ಯ ನೂತನಪದ ಸೋಕಲು ನಿಜಸತಿಯಾದಳೋ 3 ಗುರುತನೂಜನ ಮಂತ್ರಶಕ್ತಿ ವೇದನೆ ತಡೆದೆ ಹರಿಯೆಂದು ಕರೆದ ಉತ್ತರೆಗೆ ಬೇಗಾ ವರಚಕ್ರವನು ಮರೆಮಾಡಿ ಪರೀಕ್ಷಿತನ ಪೊರೆಯೆ ತ್ರಿಜಗದೊಳು ಕೀರ್ತಿಯಾಹುದರಿಂದ 4 ಹರನಿಂದ ಉರಿಯ ಹಸ್ತವ ಪಡೆದು ಭಸ್ಮಾ ಸುರನು ಫಾಲಕ್ಷನ ಖತಿಗೊಳಿಸೆ ಸಿರಿವೇಲಾಪುರ ಚನ್ನಕೇಶವನಾವೇಶದಿಂ ಪರಿದಸುರನ ಕೊಂದು ಸ್ಥಿರವಾದಕಾರಣ 5
--------------
ಬೇಲೂರು ವೈಕುಂಠದಾಸರು
ಮಂಜುಳಾ ಪಾಶಾಂಕುಶದ ರಂಜಿತವರ ಬಾಹುದಂಡಮಂಜುಳಹಾರ ಕೇಯೂರಾದಿಭೂಷಮೌಂಜಿ ಕೃಷ್ಣಾಜಿನಧರನಿತ್ಯತೋಷಕಂಜ ಬಾಂಧವ ಶತರೂಪಿಸಂಕಾಶಕುಂಜರವದನಾ ಹಸೆಗೇಳು 1 ಪಾದ ಪಯೋಜರಾವಣಾಸುರಗರ್ವಹರ ಗಾನಲೋಲಪಾವನತರಸುರಕಾರ್ಯಾನುಕೂಲಗ್ರಾವತನೂಜೆಯ ಪ್ರೇಮದ ಬಾಲಶ್ರೀ ವಿಘ್ನರಾಜ ಹಸೆಗೇಳು 2 ಸೂರ್ಯ ಸು-ತ್ರಾಮಾಚ್ಯುತ ಚಂದ್ರ ವಂದ್ಯಹೇಮಾದ್ರಿಸನ್ನಿಭ ಕೋಮಲಗಾತ್ರರಾಮಣೀಯಕ ಕಾಂಚನಯಜ್ಞ ಸೂತ್ರಸೋಮಶೇಖರನ ಸಮ್ಮೋಹದ ಪುತ್ರಶ್ರೀಮದ್ಗಣೇಶ ಹಸೆಗೇಳು 3 ಕಾಮಕರ್ಮಾತೀತ ಸನ್ಮುನಿಜಾಲ ಮಾನಸರಾಜಹಂಸಬಾಲಾರ್ಕಶತರೂಪಿಕಾಂತಿ ಶರೀರಸ್ಥೂಲಕಂಧರ ದುಃಖದುರಿತವಿದೂರಫಾಲಲೋಚನ ಚಂದ್ರಗರ್ವಾಪಹಾರಬಾಲವಟುರೂಪ ಹಸೇಗೇಳು4 ಸಂತತ ಬಹುವಿಧಲೀಲಾಸಂತತ ಮುದಿತಾದ್ರಿಬಾಲಾಅಂತರಹಿತ ಶುಭಗುಣಗಣಸಾಂದ್ರದಂತದೀಧಿತಿನಿರ್ಜಿತಶರಶ್ಚಂದ್ರಕಾಂತವಿಗ್ರಹವಿಪದದ್ರಿಮಹೇಂದ್ರಚಿಂತಿತಾರ್ಥಪ್ರದನೇ ಹಸೆಗೇಳು 5
--------------
ಕೆಳದಿ ವೆಂಕಣ್ಣ ಕವಿ
ಶ್ರೀ ಗ್ರಂಥಮಾಲಿಕ ಮಧ್ವಸ್ತೋತ್ರ ಜಯ ಮಧ್ವ ಮುನಿರಾಯ ನಿನ್ನ ಚಾರು ತೋಯಜಾಂಘ್ರಿಯಲಿ ನಾ ಶರಣು ಅಹ ಮಾಯೇಶನಿಗೆ ಪ್ರಿಯ ಮುಖ್ಯಪ್ರಾಣನೇ ಎನ್ನ ಕರ್ಮ ದೋಷ ಮನ್ನಿಸಿ ಕಾಯೋ ಪ ಭಾವಿ ವಿರಂಚಿ ಮಹೋಜ ಜಯಾ - ದೇವಿ ಸಂಕರ್ಷಣ ತನೂಜ ಸೂತ್ರ ಸಂವಿದ್ ಬಲಾದಿ ಸುಭ್ರಾಜ ಶ್ರಧ್ಧಾ - ದೇವಿ ಹೃದಬ್ಜವಿರಾಜ ಅಹ ಇನಶಶಿ ಋಷಿಕುಲ ತಿಲಕ ಶ್ರೀವರನಂಘ್ರಿ ವನರುಹ ನಿಷ್ಠ ಹನುಮಭೀಮ ಮಧ್ವ 1 ಜಯತು ಶ್ರೀಹರಿ ರಾಮಚಂದ್ರ ಭಕ್ತ ಜಯದ ಮೋದದ ಅರ್ತಿಹಂತ ಕೃಷ್ಣ ಜಯತು ಕಾರುಣ್ಯ ಸಮುದ್ರ ಭಕ್ತ ಜಯದ ಕ್ಷೇಮದ ಜ್ಞಾನ ಸುಖದ ಅಹ ರಾಮವಚನ ಕಾರ್ಯರತ ಹನುಮಗೆ ನಮೋ ನಮೋ ಕುರುಕುಲ ಹರ ಭೀಮ ಕೃಷ್ಣೇಷ್ಟಗೆ 2 ಜಯತು ಶ್ರೀಹರಿ ವೇದವ್ಯಾಸ ಭಕ್ತ ಜಯದ ಹೃತ್ತಿಮಿರ ನಿರಾಸ ಮಾಳ್ಪ ಸೂರ್ಯ ಸ್ವಕಾಂತಿ ಪ್ರಕಾಶ ಮಧ್ವ - ರಾಯಗೆ ನಿಜಗುರು ಶ್ರೀಶ ಅಹ ವೈದಿಕಶಾಸ್ತ್ರದಿಂದಲೇ ವೇದ್ಯ ಶ್ರೀಶನ ಹಿತದಿ ನಮಗೆ ತೋರ್ಪಾನಂದ ಮುನಿಗೆ ನಮೋ 3 ಅಸುರರು ಪುಟ್ಟಿ ಭೂಮಿಯಲಿ ಸಾಧು ಭೂಸುರರೆಂದು ತೋರುತಲಿ ವೇದ ಶಾಸ್ತ್ರಕ್ಕೆ ಅಪಾರ್ಥ ಪೇಳಿ ಮೋಹ ವಶವಾಗೆ ಸುಜನರಲ್ಲಿ ಅಹ ಶ್ರೀಶನಾಜೆÉ್ಞ ಯತಾಳಿ ಮಧ್ವಾಭಿದಾನದಿ ಮೋಸ ದುರ್ಮತ ಧ್ವಾಂತ ಭಾಸ್ಕರನುದಿಸಿದಿ 4 ಮಧ್ಯಗೇಹರ ಮನೆಯಲ್ಲಿ ಮುಖ್ಯ ವಾಯುವೇ ಶಿಶುರೂಪ ತಾಳಿ ಬಲ ಸಂನ್ಯಾಸ ಸುಪ್ರಮೋದದಲಿ ಅಹ ಮಧ್ಯಗೇಹರ ಪುರುಷೋತ್ತಮತೀರ್ಥರ ಭಾಗ್ಯಕ್ಕೆ ಎಣೆವುಂಟೇ ಮೂರ್ಲೋಕದೊಳಗೆ 5 ಪುರುಷೋತ್ತಮಾಚ್ಚ್ಯುತಪ್ರೇಕ್ಷ ತೀರ್ಥ ಗುರುಗಳ ಸೇವಿಸಿ ಮೋಕ್ಷ ಮೋದ ಉರುಗುಣಸಿಂಧು ನಿರ್ದೋಷನಾದ ಶಿರಿವರನು ಕಮಲಾಕ್ಷ ಅಹ ಭಾರಿ ಪ್ರಸಾದವ ದಯದಿ ಬೀರಲ್ಲೇವೆ ದೊರೆಯುವದೆಂದು ಬೋಧಿಸಿದೆಯೋ ಮಧ್ವ 6 ಶ್ರೀಶ ವೇದವ್ಯಾಸನಲ್ಲಿ ಗೀತಾ ಭಾಷ್ಯ ಸಮರ್ಪಿಸಿ ಅಲ್ಯಿಲ್ಲಿ ಉಪ - ದೇಶಕೊಂಡು ಮತ್ತಿಲ್ಲಿ ಬಂದು ವ್ಯಾಸನಭಿಪ್ರಾಯದಲ್ಲಿ ಅಹ ಸರಿಯಾದ ತತ್ವಬೋಧಕ ಗ್ರಂಥಗಳ ಮಾಡಿ ಬೀರಿದ ಅಧಿಕಾರಿಗಳಿಗೆ ನೀ ದಯದಿ ಮೂಲಗ್ರಂಥಗಳು ಮೂವತ್ತು ಏಳು 7 ಳಾಳುಕ ಪ್ರಿಯತಮವಾದ್ದು ಭಕ್ತಿ ಪರ - ಕೈವಲ್ಯ ತೋರುವುದು ಅಹ ಪುನರಪಿ ಬದರಿಗೆ ಪೋಗಿ ಶ್ರೀಶನ ಕಂಡು ಧನ್ಯ ಮನದಿ ಬಂದು ಶಾಸ್ತ್ರ ಬೋಧಿಸಿದಿ 8 ಸೂತ್ರ ಭಾಷ್ಯಗೀತಾ ತಾತ್ಪರ್ಯ ಸೂತ್ರಾಣುಭಾಷ್ಯ ವಿಷ್ಣು ತತ್ವನಿರ್ಣಯಾ ಋಗ್ಭಾಷ್ಯ ತತ್ವೋ - ಭಾಗವತ ತಾತ್ಪರ್ಯ ಅಹ ನಿರ್ಣಯ ಶ್ರೀಮಹಾಭಾರತ ತಾತ್ಪರ್ಯ ಕರ್ಮ ನಿರ್ಣಯ 9 ಸನ್ನ್ಯಾಯ ವಿವರಣ ತಂತ್ರಸಾರ ಅನುವ್ಯಾಖ್ಯಾನವು ಸದಾಚಾರ ಸ್ಮøತಿ ಅನುತ್ತಮ ದ್ವಾದಶಸ್ತೋತ್ರ ಯತಿ ಪ್ರಣವ ಕಲ್ಪದಿ ಪ್ರಣವಸಾರ ಅಹ ಉಪನಿಷದ್ಭ್ಬಾಷ್ಯವು ಹತ್ತು ಉತ್ಕøಷ್ಟವು ಷಟ್ಟ್ರಶ್ನಕಾಠಕ ಬೃºದಾರಣ್ಯಾಖ್ಯ 10 ಮನನ ಮಾಡಲು ಐತರೇಯ ಪುನಃ ಶ್ರವಣ ಮಾಡಲು ತೈತಿರೀಯ ಸಂ - ಚಿಂತಿಸಲು ಈಶಾವಾಸ್ಯ ಬಹು ಘನವಿದ್ಯಾಯುತವು ಛಾಂದೋಗ್ಯ ಅಹ ಅರ್ಥವಣಮಾಂಡೂಕ್ಯ ತಲವ ಕಾರೋಕ್ತವು ಸತತ ಸಂಸ್ಮರಣೀಯ ಜ್ಞಾನದಾಯಕವು11 ಕೃಷ್ಣಾಮೃತ ಮಹಾರ್ಣದಿ ಬಾಲ ಕೃಷ್ಣ ಜಯಂತಿ ನಿರ್ಣಯದಿ ಭಕ್ತಿ ಜ್ಞಾನ ಸಾಧನವ ಬೋಧಿಸಿ ನರ - ಸಿಂಹನ ನಖಸ್ತುತಿ ಮುದದಿ ಅಹ ಪಠಿಸೆ ಭದ್ರದ ಕಥಾಲಕ್ಷಣದಲಿ ವಾದ ಮಾಡುವ ಬಗೆ ತೋರ್ದಿಯೈನೃಹರಿಯ ನಮಿಸಿ 12 ಅವಿದ್ಯಾ ಆವೃತವು ಬ್ರಹ್ಮ ಅದ್ಯಸ್ಥ ಜಗತೆಂಬ ಮತವ ತರಿದು ಮಾಯಾವಾದ ಖಂಡನವ ಮಾಡಿ ನ್ಯಾಯ ಪ್ರಮಾಣ ಲಕ್ಷಣವ ಅಹ ನುಡಿದು ಪ್ರಪಂಚ ಮಿಥ್ಯಾತ್ವಾನುಮಾನ ಖಂ - ಡನವ ಉಪಾಧಿಖಂಡನ ಸಹಗೈದಿ 13 ಪಂಚಭೇದ ಸತ್ಯ ಹರಿಯೇ ಸರ್ವೋತ್ತಮ ಸುಹೃದ ಶಿರಿ ವರನೇ ಸ್ವತಂತ್ರ ಪ್ರಮೋದ ಸ್ವಾಮಿ ಸೃಷ್ಟಾ ಪಾತಾ ಅತ್ತಾತ್ರಾಹ ಅಹ ತತ್ವ ವಿವೇಕವು ತತ್ವ ಸಂಖ್ಯಾನವು ನಿತ್ಯ ಸುಪಠನೀಯ ಹರಿ ಸರ್ವೋತ್ಕøಷ್ಟ 14 ನೀನಿಂತು ನುಡಿಸಿದೀ ನುಡಿಯು ನಿನ್ನ ಸನ್ನಿಧಾನದಿ ಸಮರ್ಪಣೆಯು ನಾನು ಏನೂ ಓದದ ಮಂದಮತಿಯು ನೀನು ಪೂರ್ಣಪ್ರಜ್ಞನು ಜೀವೋತ್ತಮನು ಅಹ ಎನ್ನ ಕೊರತೆಗಳ ನೀಗಿಸಿ ಹೃಸ್ಥಶ್ರೀ 'ಪ್ರಸನ್ನ ಶ್ರೀನಿವಾಸ' ನ್ನೊ ಲಿಸೋ ಎನಗೆ ಜೀಯ 15
--------------
ಪ್ರಸನ್ನ ಶ್ರೀನಿವಾಸದಾಸರು