ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನೀ ತಿಳಿದು ನೋಡೊ ಪ್ರಾಣಿ ಧ್ರುವ ನಿನ್ನ ನೀ ತಿಳಿಯೊ ನೀ ಭಿನ್ನಬೇದವಳಿದು ಚೆನ್ನಾಗ್ಯನುಭವದಲಿ ಉನ್ಮನವಾಗಿ 1 ನಾನಾರು ಎಂದು ನೀ ಖೂನ ತಿಳಿದು ನೋಡೊ ಘನ ಗುರು ಕೃಪೆಯಿಂದಲಿ ತನುವಿನೊಳು 2 ಎಲ್ಲಿಂದ ಬಂದ್ಯೊ ನೀ ಎಲ್ಲಿಗ್ಹೋಗುವಿ ಮುಂದೆ ಇಲ್ಲೆವೇ ತಿಳಿದು ನೋಡೊ ಸುಲಭದಿಂದ 3 ಬಂದೆ ನಾ ತಂದೆ ನಾ ಬಂದು ಘಳಿಸಿದೆ ನಾ ಹೊಂದಿಕಿ ಹೊಲಬು ನೋಡೊ ಸಂಧಿಸಿ ಘನ 4 ನಡೆದೆ ನಾ ನುಡಿದೆ ನಾ ಹಿಡಿದೆ ನಾ ಪಡೆದೆ ನಾ ಒಡನೆ ನಿನ್ನೊಳು ನೀ ನೋಡೊ ಪಿಡಿದು ನಿಜ 5 ತಾನೇನು ತನುವೇನು ತನ್ನೊಳಗಿಹುದೇನು ಮನಮುಟ್ಟಿ ಘನವ ನೋಡೊ ಚಿನ್ನುಮಯನ 6 ಏನುಂಟು ಏನಿಲ್ಲ ಅನಿಮಿಷದಲಿ ನೋಡೊ ಘನಕ ಘನವ ಬೆರೆದು ಸನ್ಮತವಾಗಿ 7 ಮರ ಹುಟ್ಟಿ ಮರಬಿದ್ದ ತೆರನಾಗದಿರೊ ನೀನು ಎರಗೊ ಶ್ರೀಗುರುಪಾದಕ ಕರಿಗಿ ಮನ 8 ಎಡಬಲ ನೋಡದೆ ಪಿಡಿದು ಸದ್ಗುರು ಪಾದ ಬೋಧ ನೋಡಿ ನಿನ್ನೊಳು9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೆನಿ ಮನವೇ ಪಾವನ ದೇವನ ಚರಿತ ಕಥನುವೇ | ನಿನಗಿದ-ವನಿಲಿ ನೆಚ್ಚಿರೆ ತನುವೇ ಪ ಘನ ಶ್ಯಾಮನದಯ ಪಡಿಯದ ಸಾರ್ಥಕ | ಜನುಮಗಳೇವದಿದು ಗುಣವೇ ಅ.ಪ ಸುರಲೋಕ ಮೊದಲಾದ ಸುರಪ ವಿಚ್ಛೈಸಿ | ಪರಿ ಸಾಧನ ಮಾಳ್ಪರೆ | ಸುರಭಿಯಿರಲು ವಿಡಿಸದ ಪುಳಿ ಪಾಲವ | ಕರೆಸುವೆನೆಂದು ಅರಸುವರೇ 1 ಗುರು ಶರಣ ನಿಷ್ಠೆಯೊಂದ್ಹಿಡಿಯದೇ ಕಂಡಾ | ಧರೆಯ ದೈವಕ ತಲೆವಾಗುವರೇ | ಸುರ ತರುವಿನ ನೆರಳವನೇ ತ್ಯಜಿಸಿ | ಬ| ರ್ಬುರ ದ್ರುಮವನು ಸಾರುವೇ 2 ವಿಕಳಿತ ಮಾಡುವ ತಾಪತ್ರಯದಾ | ಸಕಲ ಹಳಾಹಳ ತ್ಯಜಿಸೀ ಅಖಿಳ ಜೀವನದೊಡಿಯನ ಸದ್ಮೂರ್ತಿಯ | ಹೃತ್ಕಮಲದೊಳಗಿರಿಸೀ 3 ಹರಿಮಹಿಮೆಯ ಕೊಂಡಾಡುತ ಪೊಗಳುತ | ಬೀರುತ ಗುರು ಭಕುತರಿಗೇ | ಪರಮ ಸದ್ಭಾವದ ಭಕುತಿಲಿ ಮುಣುಗೈನ | ವರತ ಪ್ರೇಮಾರ್ಣವದೊಳಗೇ 4 ನಯನದಿಂದಲೀ ಸ್ಮರಿಸುವ ಬಹು ಶರಣರ | ಭಯವ ನಿವಾರಣ ಮಾಡುವ | ದಯದಲಿ ಮಹಿಪತಿ ನಂದನ ಪಾಲಿಸು | ತಿಹಕರುಣಾಕರ ಮಾಧವಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಲಾಭವಹುದು ಹರಿಕಥಾಮೃತ ಪ ಪದುಮನಾಭನ ಪದದ ಪಥದಿಅಹುದು ಸಜ್ಜನಗಣಕೆ ಸತ್ಯ ಅ.ಪ ಅರಿಷಡ್ವರ್ಗಂಗಳ ತೊರೆದುಜರಿದು ತಾಪತ್ರಯವ ಕಳೆದುಮುರಹರನ ಪದದ ಪಥದಿಇರಲು ಸಜ್ಜನ ಗಣಕೆ ಸತ್ಯ 1 ಏಳು ದಿನವು ಪರೀಕ್ಷಿತನುವೇಳೆಯರಿತು ಹರಿಯ ಕಥೆಯಕೇಳಿ ಮುಕ್ತನಾದ ಮೇಲೆಕೇಳಿದ ಕಥೆಯ ಕೇಳಬೇಕು2 ಎರಡು ಘಳಿಗೆ ಖಟ್ಟಾಂಗರಾಯಕರಣ ಪುಟದಿ ಕೃಷ್ಣನ ಕಥೆಯಸ್ಮರಿಸಿ ಮುಕ್ತನಾದ ಮೇಲೆನಿರುತ ಕಥೆಯ ಕೇಳಬೇಕು 3
--------------
ವ್ಯಾಸರಾಯರು