ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ಆತ್ಮ ಪರಮಾತ್ಮ ತತ್ವ ನೀ ತಿಳಿಯೋ ಪ್ರಾಣಿ ಈ ತನುವಿನೊಳ್ ದ್ವಯ ಪಕ್ಷಿಗಳಿಪ್ಪುದು ನೀತಿಯರಿತು ಭಜಿಸೆ ಪ್ರೀತಿಯಿಂ ಸಲಹುವ ವಾತ ಜನಕ ನಮ್ಮ ಗೋಪಾಲಕೃಷ್ಣವಿಠಲ
--------------
ಅಂಬಾಬಾಯಿ
ಒಂದು ಕೊಟ್ಟರೆ ಶಿವ ಮತ್ತೊಂದು ಕೊಡನಯ್ಯ ಆನಂದ ವಸ್ತುವಿಗೊಂದು ಲೀಲೆ ಇದಯ್ಯ ಪ ರೊಕ್ಕವಿದ್ದವರಿಗೆ ಮಕ್ಕಳೆಂಬವರಿಲ್ಲ ಮಕ್ಕಳಿದ್ದರೆ ತಕ್ಕವನಿತೆಯಿಲ್ಲ ಚೊಕ್ಕಸತಿಯು ಸಿಕ್ಕಿತಾನುರೂಪದೊಳಿರೆ ಪಕ್ಕನೆ ಅಗಲಿ ಪೋಗುವರಯ್ಯ 1 ಚೆಲುವ ಹೆಣ್ಣೆಗೆ ತಕ್ಕ ಚೆಲುವ ಪುರುಷನಿಲ್ಲ ಚೆಲುವ ನಾದವ ಗೊಳ್ಳೆಲಲನೆಯಿಲ್ಲ ಹಲವು ಜನ್ಮದ ಪುಣ್ಯ ಫಲದಿಂದ ಸೇರಲು ಹೊಳೆದು ಹೋಗುವರಿದರೊಳಗೊಬ್ಬರಯ್ಯ 2 ಸತಿ ಸುತರು ಇರುತಿರಲು ದಾರಿದ್ರ ತಿಂಬುವುದಕಿಲ್ಲ ಗತಿಯಿಲ್ಲದವನಿಗೆ ನರಕವಿಲ್ಲ ಅತಿಶಯವಾಗಿ ತಿಂಬುದಕ್ಕಿದ್ದ ನರರಿಗೆ ಸತತ ಶಾರೀರ ಸುಖವಿಲ್ಲವಯ್ಯ 3 ಉಂಬಲೂಡಲು ಸರ್ವಸಕಲ ಸಂಪತ್ತೆಲ್ಲ ತುಂಬಿರಲು ತನ್ನ ಗೃಹದೊಳೆಲ್ಲ ಬೆಂಬಿಡದೆ ರೋಗವು ಪುಟ್ಟಿತನುವಿನೊಳ್ ತಿಂಬುದಕವಗೆ ಬಾಯಿಗಳಿಲ್ಲವಯ್ಯ 4 ಸಕಲ ಜೀವರಿಗು ಚಿಂತೆಗಳಿಲ್ಲದವರಿಲ್ಲ ಸುಖವು ಸ್ವಪ್ನದೊಳು ಕಾಣುವುದಿಲ್ಲವಯ್ಯ ಬಕನ ವೈರಿಯ ಕೋಣೆಯ ಲಕ್ಷ್ಮೀಪತಿ ಪ್ರಿಯ ಮಕರ ಕೇತನ ವೈರಿಯಾಟವಿದಯ್ಯ 5
--------------
ಕವಿ ಪರಮದೇವದಾಸರು
ಈ ಶರೀರದ ಭ್ರಾಂತಿ ಇನ್ನೇಕೆ ಮನವೆ |ವಾಸುದೇವನ ನೆನೆದು ಸುಖಿಯಾಗು ಮನವೆ ಪ.ಕಾಲು ಜವಗುಂದಿದುವು ದೃಷ್ಟಿಗಳು ಹಿಂಗಿದುವು |ಮೇಲೆ ಜವ್ವನ ಹೋಗಿ ಜರೆಯಾದಗಿತು ||ಕಾಲ - ಕರ್ಮಾದಿಗಳು ಕೂಡಿದಾಕ್ಷಣದಲಿ |ಬೀಳುವೀ ತನುವಿನೊಳ್ ಇನ್ನಾಸೆಯ ಮನವೆ 1ದಂತಗಳು ಸಡಿಲಿದುವು ಧಾತುಗಳು ಕುಂದಿದುವು |ಕಾಂತೆಯರುಜರಿದು ಓಕರಿಸುವರು ||ಭ್ರಾಂತಿ ಇನ್ನೇಕೆ ಈ ತನುವು ಬೀಳದ ಮುನ್ನ |ಸಂತತ ಶ್ರೀ ಹರಿಯ ನೆನೆ ಕಾಣೊ ಮನವೆ 2ನೀರಬೊಬ್ಬುಳಿಯಂತೆ ನಿತ್ಯವಲ್ಲ ಈ ದೇಹ |ಸಾರುತಿದೆ ನೀ ಮೆಚ್ಚಿ ಮರುಳಾಗದೆ ||ಶ್ರೀರಮಣ ಪುರಂದರವಿಠಲನ ನೆನೆ ನೆನೆದು |ಸೂರೆಗೊಳ್ಳಿರೊ ಸ್ವರ್ಗ ಸುಮ್ಮನಿರಬೇಡಿ 3
--------------
ಪುರಂದರದಾಸರು