ಒಟ್ಟು 10 ಕಡೆಗಳಲ್ಲಿ , 5 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆವೆ ಶರಣಾ ಪ ಗುರುಗರಡಿಯ ಮನಿಯೊಳು ಬೆರೆದು | ಗುರುದಾಸರ ಸಂಗವ ಬಲಿದು | ಅರಿತಾವಿನಾ ಅಲ್ಲಿಯ ಕಳೆಗಳ ತಿಳಿದು 1 ಹರಿದಾಡುವ ಚಂಚಲ ನೀಗಿ | ಗುರುಸೇವೆಯಲಿ ತತ್ಪರನಾಗಿ | ಕರುಣವ ಬೀರ್ವನು ಅರಿಸಖರೊಳಗಾಗಿ2 ಆರಿಗೆ ಹೊಲ್ಲೆಯ ತಾ ನುಡಿಯಾ | ಆರಿಂದು ನಿಷ್ಟುರ ಪಡಿಯಾ | ಧರಿಯೊಳು ಸನ್ಮತ ಮಾರ್ಗದಿ ತಾ ನಡಿಯಾ3 ದೋರಗಡುದೆ ಬಲ್ಲವಿಕೆಯನು | ಪರರವಗುಣವನು ಅರಿಸನು | ನೀರು ಹಾಲಿನ ಸಖ್ಯಕ ಪರಿಲಿಹನು4 ತನುಧನ ಮದದೊಳು ಬೆರಿತಿರದೇ ಘನದೆಚ್ಚರಿಕೆಯ ಮರೆದಿರದೇ ನೆನೆವನು ಗುರುಮಹಿಪತಿಸ್ವಾಮಿಯ ಬಿಡದೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನುಜಾ ಹಿಡಿ ದಾರಿ ದಾರಿ ದಾರಿ ದಾರಿ | ಪ್ರಾಣಿ ಹಿಡಿ ದಾರಿ ದಾರಿ ದಾರಿ ದಾರಿ ಪ ದೃಢಭಾವದಿಂದಾ | ಪಡೆದು ಸದ್ಬೋಧಾ | ಒಡನೆ ಸದ್ಗುರು ಪಾರಾ | ಸಾರಿ ಸಾರಿ ಸಾರಿ ಸಾರಿ 1 ಚಾರು ಭಕುತಿಯಾ | ದಾರಿ ನಿಶ್ಚಯಾ | ಆರು ಅರಿಗಳ ಕೈಯ್ಯಾ | ಮೀರಿ ಮೀರಿ ಮಮೀರಿ ಮೀರಿ 2 ತನುಧನ ಬೆರೆದು | ಋಣವೆಲ್ಲ ಮರೆದು | ಕ್ಷಣದೊಳೆಲ್ಲಡಗುವದು | ತೋರಿ ತೋರಿ ತೋರಿ ತೋರಿ 3 ಸ್ವಾನಂದ ವಿರಹಿತಾ | ದಿನಗಳೆವರೆ ವ್ಯರ್ಥಾ| ಮಾನವಜನ್ಮದಿ ಮತ್ತೆ | ಬಾರಿ ಬಾರಿ ಬಾರಿ ಬಾರಿ 4 ಸಾರಥಿ | ತೋರಿ ತೋರಿ ತೋರಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾನವನ್ಯಾಕದ್ಯೋ ಎಲೊ ಎಲೋ ಮಾನವನ್ಯಾಕದ್ಯೋ ಪ ಮಾನವನ್ಯಾಕದ್ಯೋ ಹೀನನೆ ಥೂಥೂ ಮಾನವಜನುಮದ ಖೂನವ ತಿಳಿಯದೆ ಅ.ಪ ನರನಾಗವತರಿಸಿಬಂದಿಹ್ಯ ಪರಿಯನು ಶೋಧಿಸಿ ಅರುಹುಗೂಡಿ ಸಿರಿವರನ ಕಥಾಮೃತ ಪರಮಭಕ್ತಿಯಿಂದ ಶ್ರವಣಮಾಡದ 1 ತನುನಿಜವಲ್ಲೆನಿಸಿ ಸತತದಿ ತನುಧನರ್ಪಿಸಿ ಘನತರಭಕುತಿಲಿ ವನಜನಾಭನ ಘನಸತ್ವಚರಿತವನು ಮನನ ಮಾಡದ 2 ಮಂದಮತಿಯ ಹರಿದು ಜಗಕೆ ಬಂದ ಕುರುಹು ತಿಳಿದು ಸಿಂಧುಶಯನ ಮಮತಂದೆ ಶ್ರೀರಾಮನ ಬಂಧುರಂಘ್ರಿ ನಿಜಧ್ಯಾಸವ ರುಚಿಸದ 3
--------------
ರಾಮದಾಸರು
ವಂದಿಸುವೆನು ರಘುವರನಾ ಸುರವಂದಿತ ಚರಣಾಂಬುಜನ ಪ ತಂದೆ ಮಾತಿಗೆ ವನಕ್ಹೋಗಿ ಬಂದವನಾಸುಂದರ ಸಹ ಸೀತೆಯಿಂದ ಅನುಜನಾ ಅ.ಪ ಚಾಪ ಭಂಜಕನಾ 1 ವಾರಿಧಿ ಸೇತು ಬಂಧಕನಾ ಸೀತಾ -ಚೋರನ ಶಿರವಳಿದವನಾಚಾರು ಸಿಂಹಾಸನವೇರುತ ಸರಯು -ತೀರದ ಅಯೋಧ್ಯಾ ವಿಹಾರ ಸುಂದರನಾ2 ಕೇಸರಿ ಸುತಗೆ ತನುಧನಮಣಿಆಶ್ರಯವನು ಕೊಟ್ಟವನಾಕೋಸಲ ಜನರಿಗೆ ಮೋಕ್ಷವವಿತ್ತವನಾಇಂದಿರೇಶ ಸುಖಾತ್ಮ ನಿರ್ದೋಷ ಪುರುಷನಾ 3
--------------
ಇಂದಿರೇಶರು
ಸಾಧಿಸು ಪರಲೋಕ ಮನವೆ ನೀ ಸಾಧಿಸು ಪರಲೋಕ ಪ ಮಾಧವನ ಮಹ ಪಾದದಾಸರಿಂದ ಶೋಧಿಸಿ ನಯದಿ ಸಂಪಾದಿಸಿ ಜ್ಞಾನವ ಅ.ಪ ಭೇದಬುದ್ಧಿ ಬಿಡೋ ಸುಜನರಿಂ ವಾದಿಸಿ ಕೆಡಬೇಡೋ ಆದರದಿಂದಲಿ ಸಾಧು ಸಂತರ ಸು ಬೋಧ ವಾಕ್ಯಗಳ ಮೋದದಿಂ ಕೇಳುತ 1 ರಾಗರಹಿತನಾಗೋ ಸಂಸಾರ ಭೋಗದಾಸೆ ನೀಗೋ ಯೋಗಿಗಳಿಗೆ ತಲೆವಾಗಿ ದಿಟದಿ ನೀ ಹೋಗಲಾಡಿಸಿ ಭವಬೇಗ ಸುಪಥಕ್ಹತ್ತಿ 2 ಕಾಮಿತಂಗಳ ಅಳಿಯೋ ತನುಧನ ಪ್ರೇಮಮೋಹ ಕಳೆಯೋ ಕಾಮಜನಕ ನಮ್ಮ ಭೂಮಿಜೆಪತಿ ಶ್ರೀ ರಾಮನಾಮಬೆಂಬ ವಿಮಾನವೇರಿ 3
--------------
ರಾಮದಾಸರು
ಸಾಧುರ ಸಂಗವ ಮಾಡೋ ಪ್ರಾಣಿ | ಸಾಧುರ ಸಂಗಾ ಮಾಡಲು ಯೋಗಾ | ಸಾಧಿಸಿ ಬಾಹುದು ನೋಡೋ ಪ್ರಾಣಿ ಪ ಅತಿ ಬಳಲಿಸುವ ತಾಪತ್ರಯದೊಳಗ | ಮತಿಗಾಣದೆ ನೋಯ ಬ್ಯಾಡೋ ಪ್ರಾಣೀ | ಮತಿಯುತನಾಗಿ ಭವಖೋರೆ ದಾಟುವ | ಪಥವಾನರಿತು ಬ್ಯಾಗ ಕೂಡೋ ಪ್ರಾಣೀ 1 ಕ್ಷೀರ ನೀರ ವಿಭೇದವ ಮಾಡುವ ಮುಕ್ತಾ | ಹಾರನ ಗುಣ ಭರಣೀ ಮಾಡೋ ಪ್ರಾಣೀ | ಚಾರು ವಿವೇಕದಿ ಸೇವಿಸಿ ಸಾರಾವ | ಸಾರಾ ತ್ಯಜಿಸಿ ನಲಿದಾಡೋ ಪ್ರಾಣಿ 2 ಪರಿ ಜನದಲಿ ಮನವನು ಸಂಸಾರಲಿಡೋ ಪ್ರಾಣೀ ತನುಧನ ಬೆರಿಯದೆ ಮಹಿಪತಿಸುತ ಪ್ರಭು ವಿನ ಸ್ತುತಿ ಸ್ತವನವ ಪಾಡೋ ಪ್ರಾಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾವಧಾನಾಗಿ ಮಾಡೆಲೋ ಗುರುಭಕ್ತಿ | ಕಾವಕರುಣಾಳುದೋರಿ ನಿಜ ಮುಕ್ತಿ ಪ ಗುರುನಾಮ ಸ್ಮರಣೆ ಅನುದಿನಾ | ಗುರುಮೂರ್ತಿಯ ಮಾಡಿ ನಿಜಧ್ಯಾನಾ | ಗುರುಚರಣವ ಪೂಜಿಸು ನಿಧಾನಾ | ಗುರು ನಮನದಿ ಹಾಕಿ ಲೋಟಾಂಗಣಾ 1 ಗುರುಭಕ್ತರ ಸಂಗವನು ಮಾಡಿ | ಗುರು ಕರುಣದ ಮಹಿಮೆಯ ಪಾಡಿ | ಗುರುವಾಕ್ಯ ಪ್ರಸಾದವನು ಬೇಡಿ | ಗುರು ಅಭಯವ ಕೊಂಡು ನಲಿದಾಡಿ 2 ಗುರುವಿನಲ್ಲಿ ಹಿಡಿಯದೆ ನರಭಾವಾ | ಗುರುವಿಗರ್ಪಿಸಿ ತನುಧನ ಮನ ಜೀವಾ | ಭವ ಬಂಧನವಾ | ಗುರುಮಹಿಪತಿ ಬಾಲನಾಗಿರುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಭಜನೆಯ ಮಾಡು ಮನವೇ ಪ ಚರಿತವ ಕೇಳಿ ಹರುಷದಿ ಬಾಳೀ | ಸ್ಮರಿಸುತ ಜಿಹ್ವದಿ ವನಮಾಲಿ ಮನವೇ 1 ತನುಧನವಾಣೀ ಇಂದ್ರಿಯ ಶ್ರೇಣಿ | ಕಮಲ ಪಾಣಿ ಮನವೇ 2 ಗುರುಮಹಿಪತಿ ಪ್ರಭು ಧರಿಯೊಳಿದು | ಇಹಪರ ಗತಿಮನವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನೆಕರ್ತಎನ್ನಕರ್ತನಾ ನಿನ್ನಭೃತ್ಯಹಿತಮಾನಹಾನಿ ನಿನ್ನದಯ್ಯ ಕೊನೇರಿ ತಿಮ್ಮ ನಮ್ಮ್ಮಯ್ಯ ಪ.ತನುಧನ ನೆಚ್ಚಿಕಿಲ್ಲಮಾನಿನಿತನ್ನವಳಲ್ಲಸೂನುಬಂಧುಗಳೆಲ್ಲ ಕ್ಷಣದವರಲ್ಲನಾನಾ ಜನ್ಮದಲಿ ಎನ್ನ ಪ್ರಾಣ ಕಿತ್ತೈಯ್ಯ ಚೈತನ್ಯದಾನವಾರಾತಿ ಕೃಷ್ಣಯ್ಯ ದೀನನ ಬಿಡದಿರಯ್ಯ 1ಭವಾಂಧಕಾರದೊಳನುಭವಿಸಿ ಬೆಂಡಾಗುವೆನುವಿವರಿಸಿನಿತ್ಯಹಿತವ ಕಾಣೆನುಜಾವ ಒಂದದರೊಳರ್ಧ ದಾರಿಯಲಿ ಶ್ರೀಪಾದಭಾವಿಸಲೊಲ್ಲೆ ನೋಡಲವಗುಣಾಂಕಿತ ಮೂಢ 2ಸ್ವಾಮಿ ನಿನ್ನ ಮುದ್ರಾಂಕನ ಮಾಡಿನ್ನನುಮಾನ್ಯಾಕೆಶ್ರೀಮಂತ ಭಾಗವತರ ಪ್ರೇಮಾನ್ವಿತರಶ್ರೀ ಮಧ್ವರಾಯರ ಸಿಕ್ಷಾನೇಮರಾಚರಣಾಧ್ಯಕ್ಷಸಾಮೀಪ್ಯ ಮುಕ್ತಿಯನೀಯೊ ನನ್ನ ಪ್ರಸನ್ವೆಂಕಟಯ್ಯ 3
--------------
ಪ್ರಸನ್ನವೆಂಕಟದಾಸರು
ಶ್ಲೋ||ಮಣಿಮಂತ್ರೌಷಧವೆಂಬ ಭ್ರಾಂತಿಯಲಿಮಾಯಾಮೋಹದೊಳ್ ಸಿಕ್ಕಿ ತಾಮಣಿಮಾದ್ಯಷ್ಟ ವಿಭೂತಿಯೆಂಬಯ ಸುಜ್ಞಾನಾಂಧರಾಗೆಲ್ಲಿಯುಂಎಣೆಯಾರಿಲ್ಲೆಮಗೆಂದು ಮೋಹಿಸುವ ಈ ಮೂಢಾತ್ಮರಂ ಬೇಗದಿಂಗುಣಮೂರೊಂದಕೊುದು ಪಾಲಿಸುಗೆ ಗೋಪಾಲ ಸಚ್ಚಿದಾನಂದಮಂಮತಿಹೀನನಾಗದಿರೊ ಓ ಜೀವಾಮತಿಹೀನನಾಗದಿರೊ ಪಸುತರ ತನುಧನಗಳ ಹಿತವೆಂದು ನಂಬಿ ನೀ ಅ.ಪಶೃತಿ ಮತಗಳ ಬಿಟ್ಟು ಪ್ರತಿದಿನ ವಿಷಯವೆಗತಿಯೆಂದು ನೆಚ್ಚದಿರೊ ರಾಗದ್ವೇಷಯುತರ ನೀ ಮೆಚ್ಚದಿರೊ ನಿನ್ನ ತೋರದವ್ರತದಿಂದ ಹೆಚ್ಚದಿರೊ ಓ ಜೀವಾ 1ಪರಿಭವವ ಮಾಡುವ ಪರಸೇವೆಗೆಳಸುವಸಿರಿಯ ನೀ ಬೇಡದಿರೊ ಕಾಮುಕನಾಗಿಪರಸತಿಯ ನೋಡದಿರೊ ಮುಂದುಗೆಡಿಪಪರಧರ್ಮವ ಕೂಡದಿರೊ ಓ ಜೀವಾ 2ಧೈರ್ಯವಿಲ್ಲದೆ ನಿನ್ನೊಳಾರ್ಯ ಸಂಗವ ಬಿಟ್ಟುಕಾರ್ಯದೊಳ್ಬೆರೆಯದಿರೊ ಮನದಿಮಾತ್ಸರ್ಯದೊಳ್ ಕೊರೆಯದಿರೊ ಶ್ರೀ ಗೋಪಾಲಾರ್ಯನ ಮರೆಯದಿರೊ ಓ ಜೀವಾ 3
--------------
ಗೋಪಾಲಾರ್ಯರು