ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಅಪಮೃತ್ಯು ಪರಿಹರಿಸೊ ಶ್ರೀ ವೆಂಕಟೇಶ ಅಪರಾಧವೆಣಿಸದಲೆ ಉದ್ಧರಿಸೊ ಶ್ರೀಶಾ ಪ ಅಪರಾಧ ಸಹಸ್ರಗಳ ಮಾಡುತನುದಿನದಿ ಅಪರಿಮಿತ ಮಹಿಮ ನಿನ್ನನ್ನು ಸ್ಮರಿಸದೆ ಚಪಲ ಬುದ್ಧಿಗಳಿಂದ ತಪಿಸಿದೆನೊ ಭವದೊಳಗೆ ಗುಪಿತದಿಂ ಸಲಹಯ್ಯ ಪಿತನೆ ಕೈ ಮುಗಿವೆ 1 ಪೂರ್ವಕಾಲದೊಳೊಬ್ಬ ರಾಜಶೇಖರ ತನ್ನ ಮೋಜಿನಿಂದಲೆ ನಿನ್ನ ಸ್ಮರಣೆ ಮರೆತು ಮೂರ್ಜಗತ್ಪತಿಯ ಪೂಜಿಸದೆ ಕಾಲವ ಕಳೆಯೆ ಆ ಜವನ ದೂತರೆಳೆ ತಂದರೈ ಹರಿಯೆ 2 ಅಂದು ಯಮ ಭಟರುಗಳ ಬಂಧನದೊಳಿರೆ ನೃಪನು ಚಂದದಿಂ ಪಾಪಕರ್ಮಗಳ ನೋಡೆ ತುಂಬಿದ ಪಾಪವೆ ಬಹಳವಾಗುತಿರಲು ಇಂದಿರೇಶನ ಪೂಜೆ ಒಂದೆ ದಿನವೆನಲು 3 ಬಿಡದೆ ಇವನಿಗೆ ಶಿಕ್ಷೆ ಕೊಡಿರಿ ಎಂದೆನಲು ನುಡಿದರಾ ಭಟರುಗಳು ಮೊದಲು ಯಾವದು ಎನಲು ಮೊದಲು ಪುಣ್ಯವು ಎಂದು ನುಡಿದನಾ ನೃಪನು4 ತಕ್ಷಣವೆ ವಿಷ್ಣುದೂತರು ಬಂದು ನೃಪವರನ ಚಿತ್ತಜನಯ್ಯನಿಹ ಉತ್ತಮ ಸ್ಥಳಕೆ ಸತ್ಯವಂತರು ಬಹಳ ಕೀರ್ತಿಸುತ ಶ್ರೀಹರಿಯ ಮತ್ತೆ ವೈಕುಂಠದಲಿ ಮೆರೆಸಿದರು ಕ್ಷಣದಿ 5 ಒಡನೆ ಪುಣ್ಯವು ಮುಗಿಯೆ ನಡಿ ನರಕಕೆಂದೆನಲು ಒಡೆದು ಎದೆ ನಡುಗಿ ಕಳವಳಿಸಿ ನೃಪನು ನುಡಿದ ಹೀಗೆನುತ ಘರ್ಜಿಸುತ ಯಮದೂತರಿಗೆ ಬಿಡಿರಿ ನಿಮ್ಮಯ ಸತ್ಯ ನಿಜವಲ್ಲವೆನುತ 6 ನಾರಾಯಣನ ನೋಡಿದವರಿಗೆ ನರಕ ಭಯ ನಾರದರೆ ಈ ರೀತಿ ಸಾರಿ ಡಂಗುರವ ಹೀಗೆನಲು ನುಡಿಕೇಳಿ ಸಾರಿ ಪೇಳಿದರಾಗ ದೇವ ದೇವನೆ ಇದಕೆ ಉಪಾಯವೇನೆನಲು7 ಪರಮ ಕೃಪಾಳು ಹರಿ ಪರಮ ಭಕ್ತರನೆಲ್ಲ ಕರೆದು ಏಕಾಂತದಲಿ ಸರಸವಾಕ್ಯದಲಿ ಇರಲಿ ಈ ನರನ ವಾಕ್ಯದ ಜಾಣತನವನು ಸುರ ಲೋಕದವರು ಸ್ತುತಿ ಮಾಡಲೆಂದೆನಲು8 ಭಾಗವತ ಜನಪ್ರಿಯ ಬಾಗಿ ನಮಿಸುತಲಿ ವಂದನೆ ಮಾಡುವೆ ನಾಗಶಯನನೆ ನಿನ್ನ ಮಹಿಮೆಗೆಣೆಗಾಣೆನೊ ಬೇಗ ಪಾಲಿಸು ಕಮಲನಾಭ ವಿಠ್ಠಲನೆ 9
--------------
ನಿಡಗುರುಕಿ ಜೀವೂಬಾಯಿ
ಪಿಡಿದೆತ್ತೊ ಕೈಯ್ಯಾ ಕೃಷ್ಣಯ್ಯ ಪ ಪಿಡಿದೆತ್ತೊ ಕೈಯ್ಯಾ ಪಾಲ್ಗಡಲೊಡೆಯನೆ ಭವ ಕಡಲಿನೊಳಗೆ ಬಿದ್ದು ಬಾಯ್ಬಿಡುವೆ ಬೇಗದಿ ಬಂದು ಅ.ಪ ತಾವರೆನಾಭಾ ಕಾವದÀು | ಎನ್ನ ಜೀವನಲಾಭಾ ಶ್ರೀವ್ಯಾಸಮುನಿಗೊಲಿದವ | ನೆಂದರಿತು ಬಂದೆ ಶ್ರೀವೇಣುಗೋಪಾಲಕೃಷ್ಣ | ಗೋವಳರೊಡೆಯ ಭಾವ ಭಕುತಿಗಳೊಂದನರಿಯೆನು ಹೇವವಿಲ್ಲದೆ ದಿನವ ಕಳೆದೆನು ಸಾವಧಾನವ ಮಾಡಲಾಗದು ಶ್ರೀವರನೇ ನವವಿಧ ಭಕುತಿ ನೀಡುತ 1 ಅನುಮಾನವ್ಯಾಕೆ | ನೀನೆ ಗತಿ ಎನುವೆನು ಬಲ್ಲಿ ಅನುದಿನ ಸೇವಿಪೆ ಅನಘನೆ | ಎನ್ನಘ ಗಣನೆ ಮಾಡದೆ ಮುನ್ನ ಅನುವಾಗಿ ಪಾಲಿಸೊ ಮಾನವೇದ್ಯನೆ ಮನದಿ ನಿರ ತನುದಿನದಿ ನಿನ್ನಯ ಧ್ಯಾನವಿತ್ತು ಮನೋವಿಷಾದವನಳಿಯೆ ನಿನ್ನನು ಮರೆಯೆನುಪಕೃತಿ ಸತತ ಸ್ಮರಿಸುವೆ 2 ಶ್ರೀ ನರಹರಿಯೆ ಭಕುತಜನ | ವನಜದಿನಮಣಿಯೆ ಸಾನುರಾಗದಿ ಕೇಳ್ವೆ | ಹನುಮನ ಮತದಲ್ಲಿ ಅನುಚಾದ ಜ್ಞಾನವ | ಕನಸಿನಲಿ ಮನಸಿನಲಿ ಜನನಿ ಜನಕ ತನುಜೆ ವನಿತೆಯಾ ತನುವಿನಲಿ ನೆಲೆಸಿರುವ ಭ್ರಾಂತಿಯ ಹೀನಗೈಸಿ ಮನೋಭಿಲಾಷೆಯ ಭಾರ ನಿನ್ನದು 3
--------------
ಪ್ರದ್ಯುಮ್ನತೀರ್ಥರು
ಸೃಷ್ಟಿಗೀಶ ನಿನಗಿಷ್ಟು ದಯಬಾರದ್ಯಕೊ ಎಷ್ಟು ಬೇಡಲು ಎನ್ನ ಮೊರೆ ಕೇಳದಿರುವಿ ಪ ಕರಿರಾಜನ ಪೊರೆದೆಲೋ ನರಗೆ ಸಾರಥಿಯಾದಿ ತರುಣಿಯನುದ್ಧರಿಸಿ ಪರಿಶುದ್ಧಗೈದಿ ಪರಮಕುರುಣಿಯು ನೀನು ದುರಿತಕಾರ್ಯದಿಂ ನಾನು ನರಕಿಯಾಗ್ವುದನರಿತು ಅರಿಯದಂತಿರುವಿ 1 ಖುಲ್ಲದಾನವರೊದೆದು ಎಲ್ಲ ದೇವತೇರಿಗೆ ನೀ ನುಲ್ಲಾಸವನು ಕೊಟ್ಟು ಪುಲ್ಲನಾಭ ಹರಿಯೆ ಕ್ಷುಲ್ಲಕರ ಸಂಗದಿಂ ನಾ ಸಲ್ಲದಂತಾಗುವೆ ಕ ಣ್ಣಲ್ಲಿ ಕಂಡು ನೀ ಕಂಡಿಲ್ಲದಂತಿರುವಿ 2 ಮುನಿಶಾಪದಿಂ ನೃಪನ ಕನಿಕರದಿ ಕಾಯ್ದಿ ನಿಂ ತನುದಿನದಿ ಬಾಗಿಲವ ಘನವಾಗಿ ಕಾಯ್ದಿ ಶುನಕನಂದದಿ ನಾನು ದಿನದಿನಕೆ ಮತ್ತಿಷ್ಟು ಘನಪಾಪಿಯಾಗ್ವುದನು ಮನಕೆ ತರದಿರುವಿ 3 ವನವಾಸಗೈದಯ್ಯಾ ವಾನರನ ಸಲಹಿದಿ ದನುಜನನು ಸಂಹರಿಸಿ ದನುಜನನುಜಂಗೆ ಮಾಣದ ಪಟ್ಟವನು ಮೆಚ್ಚಿ ನೀ ಕೊಟ್ಟೆಯ್ಯಾ ಎನಗ್ಯಾಕೀದುರ್ಬವಣೆ ದೂರಮಾಡದಿರುವಿ 4 ಇನಿತೆಲ್ಲ ಯೋಚಿಸಲು ಘನ ಕುರಣಾನಿಧಿ ನೀನು ನಿನಗವರೆ ದಾಸರೆ ನಾನಲ್ಲವೇನು ಮನಸಿಜಪಿತ ನಿನ್ನ ವನರುಹಂಘ್ರಿಯ ನಂಬಿ ಮಣಿದು ಬೇಡುವೆ ಕಾಯೊ ತಂದೆ ಶ್ರೀರಾಮ 5
--------------
ರಾಮದಾಸರು