ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ಸುಖವ ಜಗಪಾಲಯ ಒಡೆಯ ವೈಕುಂಠದಾಲಯ ಪ ಕೊಡು ಸುಖ ನಿಮ್ಮಯ ಅಡಿಯದಾಸರ ಸೇವೆ ಸಡಗರ ಸಂಪದ ಎಡೆಬಿಡದೆ ಅ.ಪ ಜಡಮತಿಯನು ಕೆಡಿಸಿ ಜಡದೇಹಮೋಹ ಬಿಡಿಸಿ ಜಡಭವತೊಡರನು ಕಡೆಹಾಯ್ಸಿ ಅಡಿಗಡಿಗೆ ನಿನ್ನಡಿದೃಢ ಭಕುತಿ 1 ಸಾಗರಸಂಸಾರಭೋಗದ ಬಲುಘೋರ ನೀಗಿಸಿ ನಿಜಜ್ಞಾನ ಪಾಲಿಸಿ ಬೇಗನೆ ನೀಡು ತವದರುಶನವ 2 ಮನಸಿನ ಹರಿದಾಟ ಘನಘನ ದುಶ್ಚಟ ವನು ಪರಿಹರಿಸಿ ದಯಮಾಡು ಮನಶಾಂತಿ ಸದುಗುಣವ 3 ತನುತ್ರಯದಲಿ ನಿನ್ನ ನೆನಹನು ನಿಲಿಸೆನ್ನ ಬಿನುಗು ತ್ರಿದೋಷ ದೂರಮಾಡಿ ಜನನ ಮರಣಂಗಳ ಗೆಲಿಸಭವ 4 ಭೂಮಿಯೊಳಧಿಕೆನಿಪ ಸ್ವಾಮಿ ಶ್ರೀರಾಮಭೂಪ ನೇಮದಿ ಬೇಡುವೆ ವರ ನೀಡು ಆ ಮಹಕೈವಲ್ಯ ಪದವಿಯ 5
--------------
ರಾಮದಾಸರು
ಪಾಲಯ ಕೃಪ ಆಲಯ ಬಾಲಗೋ ಪಾಲ ಬೇಗ ಪಾಲಿಸು ಪಿಡಿದೆನ್ನ ಪ ನಿತ್ಯನಿರ್ಮಲ ಸತ್ಯಚರಿತ ದೇವ ಸತ್ಯಭಾಮೆಯ ಪ್ರಿಯನಾಥ ಸ್ವಾಮಿ ನಿತ್ಯನಿಗಮ ವೇದವಿನುತ ಜಗ ಕರ್ತು ಕಾರುಣ್ಯರಸಭರಿತ ಆಹ ಭಕ್ತಾಂತರ್ಗತ ಕಾಲಮೃತ್ಯುಸಂಹರ ಸ ಚ್ಚಿತ್ತಾನಂದ ಹರಿ ಸತ್ಯ ಸರ್ವೋತ್ತಮ 1 ದಿನಮಣಿಕೋಟಿಪ್ರಭಾಕರನುತ ವನಜಸಂಭವ ಸುರನಿಕರ ದಿವ್ಯಗುಣ ಘನನಿಧಿಗಂಭೀರ ಜೀಯ ಅನುಪಮ ಭೂಗಿರಿವರ ಆಹ ಮನಸಿಜಪಿತ ಮನುಮುನಿಮನಮಂದಿರ ತನುತ್ರಯದಲಿ ನಿನ್ನ ನೆನಹನು ಪಾಲಿಸು 2 ಶ್ಯಾಮಸುಂದರ ಕೋಮಲಾಂಗ ಭಕ್ತ ಕಾಮಿತಫಲಪ್ರದಪುಂಗ ದುಷ್ಟ ಸೋಮಕಸುರಮದಭಂಗ ಪುಣ್ಯ ನಾಮಕ ಸುಜನತರಂಗ ಆಹ ತಾಮಸ ಪರಿಹರ ಭೂಮಿಜನಕ ಜಯ ಕ್ಷೇಮ ಕರುಣಿಸು ಮಮಸ್ವಾಮಿ ಶ್ರೀರಾಮಯ್ಯ3
--------------
ರಾಮದಾಸರು
ಲೋಕೈಕ ಬಂಧು ಹೇ ದಯಾಸಿಂಧು ಜೋಕೆಮಾಡಭವ ನೀನೆನ್ನೊಳು ನಿಂದು ಪ ಹೇಯಪ್ರಪಂಚದ ಮಾಯಾಮೋಹದಿ ಎನ್ನ ಕಾವದೇವರು ನೀನೆ ಕೈಯ ಪಿಡಿದು ಸಲಹೊ 1 ದಿವನಿಶಿ ಬಿಡದೊಂದೇಸಮನೆ ಬೆನ್ನ್ಹತ್ತಿ ಮಾಯ ಕವಿದು ವಿಧವಿಧದೆನ್ನ ಸುವಿಚಾರ ಮರೆಸಿ ಭವಭವದೊಳಗೆಳಸಿ ಭವಿಯೆಂದೆನಿಸಿ ಕೆಟ್ಟ ಜವನಿಗೀಡೆನಿಸುವ ಭವಮಾಲೆ ಗೆಲಿಸು 2 ಘನದು:ಖಮಯವಾದ ಜನನಮರಣಬಾಧೆ ರಿಣಭಾದೆ ತನುಭಾದೆಯನು ಪರಿಹರಿಸಿ ತನುತ್ರಯದಲಿ ನಿನ್ನ ನೆನೆವೆನಗೆ ಪಾಲಿಸು ಕನಿಕರದಿಂ ಕಾಯೊ ಜನಕ ಶ್ರೀರಾಮ ಪ್ರಭು 3
--------------
ರಾಮದಾಸರು
ತುಂಬಿಕೊಂಡಿರುತಿಹನೊಬ್ಬ ಜಗವಿಂಬಿಲ್ಲದೆಲ್ಲವ ಸಕಲವೆಲ್ಲವತುಂಬಿಪಆರರೊಳಗೆತುಂಬಿಅತ್ತತ್ತಲುತುಂಬಿಮೂರು ಠಾವಲಿತುಂಬಿಮೂರುಮನೆತುಂಬಿಬೇರೆ ಮೇಲಕೆತುಂಬಿಬೆಳಗಿನೊಳಗೆತುಂಬಿಸಾರಾಮೃತದಿತುಂಬಿಸಾಕ್ಷಾತ್ಕಾರದಲಿತುಂಬಿ1ಮನಸಿನೊಳಗೆತುಂಬಿಮನವರ್ತನದಿತುಂಬಿತನುವಿನಲ್ಲಿಯೆತುಂಬಿಸರ್ವಾಯವತುಂಬಿತನುತ್ರಯದಲಿತುಂಬಿತನುವಿನಲ್ಲಿಯೆತುಂಬಿಘನಸುಖದಿತುಂಬಿ2ಇಳೆಯ ಒಳಗೆತುಂಬಿಇಹಜಂಗಮದಿತುಂಬಿಬಲು ಸ್ಥಾವರದಿತುಂಬಿಬಯಲಿನಲ್ಲಿಯೆತುಂಬಿಕೆಳಗೆ ನಡುವೆತುಂಬಿಕೇವಲ ಕೊನೆಯತುಂಬಿಚಲಿಸದಂದದಿತುಂಬಿಚಿದಾನಂದನೇತುಂಬಿ3
--------------
ಚಿದಾನಂದ ಅವಧೂತರು