ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂಕಾರ ರೂಪಿಣಿ ಭದ್ರಾಣಿ ಕಲ್ಯಾಣಿ ಪಂಕೇಜದಳಲೋಚನೀ ಅಂಬಾ ಪ ಶಂಕರ ಪ್ರಿಯರಾಣಿ ಗೀರ್ವಾಣೆ ರುದ್ರಾಣಿ | ಸ ರ್ವ ಮಂಗಳವಾಣಿ | ಕರುಣಿ ಶುಶ್ರೋಣಿ ಅ.ಪ ಹೈಮವತೀ ಮಾತೆ | ಹಿಮಗಿರಿ ತನುಜಾತೆ ಭಾಮೆ ಸ್ವಯಂಜಾತೆ | ಸುರಮೌನಿಗೀತೆ ಪ್ರೇಮ ರಸಾನ್ವಿತೇ | ರಾಮಾಭಿನಂದಯುತೆ ಶ್ರೀಮಾಂಗಿರೀಶ | ರಂಗಸಹಜಾತೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭವಭಯಹರ ಶ್ರೀ ಮುಕ್ಕುಂದ ಭವರೋಗಕ್ವೈದ್ಯ ಶ್ರೀ ಗೋವಿಂದ ಪ ಧ್ರುವ ದ್ರುಪದತನುಜಾತೆಯೊರೆದ ಹರಿ ಶಿವನುತ ಸಚ್ಚಿತ್ತಾನಂದ ಅ.ಪ ಪಂಕಜಾನಪಿತ ಗೋವಿಂದ ಕಿಂಕರಾಶ್ರಿತ ಗೋವಿಂದ ಶಂಖಧಾರಣ ಸಿರಿಗೋವಿಂದ ಶಂಖಾಸುರನ ಹರ ಗೋವಿಂದ ಮಂಕು ದನುಜಕುಲ ಬಿಂಕ ಮುರಿದ ಅಕ ಳಂಕಮಹಿಮ ಮಹ ಗೋವಿಂದ1 ಸ್ಮರಿಪ ನೆರೆವಾಸ ಗೋವಿಂದ ದುರುಳರ ಕುಲನಾಶ ಗೋವಿಂದ ದುರಿತ ನಿವಾರಣ ಗೋವಿಂದ ಶರಣಜನರಪ್ರಾಣ ಗೋವಿಂದ ತರಳನೋದ್ಧಾರಣ ಕರಿರಾಜವರದನ ತರುಣೆಯ ರಕ್ಷಣ ಗೋವಿಂದ 2 ಜಗದಾಧಾರನೆ ಗೋವಿಂದ ಸುಗಣಗುಣಾಂತರಂಗ ಗೋವಿಂದ ರಘುಕುಲಪಾವನ ಗೋವಿಂದ ಖಗಪತಿವಾಹನ ಗೋವಿಂದ ನಿಗಮಕೆ ಸಿಲುಕದ ಅಗಾಧ ಮಹಿಮ ಜಗತ್ರಯ ಮೋಹನ ಗೋವಿಂದ 3 ನೀಲಮೇಘಶ್ಯಾಮ ಗೋವಿಂದ ಕಾಲಕಾಲಹರ ಗೋವಿಂದ ಪಾಲಸಾಗರಶಾಯಿ ಗೋವಿಂದ ಲೋಲ ವಿಶ್ವರೂಪ ಗೋವಿಂದ ಪಾಲಭಜಕ ಭವ ಜಾಲಹರಣ ಸರ್ವ ಮೂಲಮಂತ್ರ ಹರಿ ಗೋವಿಂದ 4 ಭೂಮಿಜಾತೆಪತಿ ಗೋವಿಂದ ಕಾಮಜನಕ ಶ್ರೀಶ ಗೋವಿಂದ ಕೋಮಲಾಂಗ ರಂಗ ಗೋವಿಂದ ಸ್ವಾಮಿ ಪುಣ್ಯನಾಮ ಗೋವಿಂದ ಶಾಮವರ್ಣನುತ ಪ್ರೇಮಮಂದಿರ ಶ್ರೀ ರಾಮ ದಾಮೋದರ ಗೋವಿಂದ 5
--------------
ರಾಮದಾಸರು
ಭಾವಿಸಮೀರ ಗುರು ಶ್ರೀ ವಾದಿರಾಜ ನಿಮ್ಮ ಸೇವಿಪ ಜನರಿಗಭೀಷ್ಟವನೀವ ಪ ಹನುಮ ಭೀಮ ಮಧ್ವರೊಡಗೂಡಿ ವೃಂದಾವನ- ದೊಳು ಮೆರಸುವ ಮುಂದಿನ ಸೊಬಗ ಪಂಥದಿ ವೀರಶೈವರ ಗುರುವನೆ ಗೆದ್ದು ಹತ್ತಿದೆ ಮುತ್ತಿನ ದಿವ್ಯ ಪೀಠವನು 1 ಕುಂಡಿನೇಶನ ತನುಜಾತೆಯ ಪತ್ರವ ಪುಂಡರೀಕಾಕ್ಷನಿಗರ್ಪಿಸಿದ್ಯಲ್ಲೋ ಮದುವೆಯ ಸಮಯದಿ ಶಪಥದಿಂದಲಿ ಬಂದು ವಧುವಿನ ಭಾಗ್ಯವನುಳಿಸಿದೆಯಲ್ಲೋ 2 ಅರಿತುಂಡು ವಿಷವ ನೀನರಗಿಸಿಕೊಂಡ್ಯಲ್ಲೊ ನರಪತಿತನಯನ ಬದುಕಿಸಿದ್ಯಲ್ಲೋ ಭಜಿಸುತ ರಾಜೇಶ ಹಯಮುಖನಂಘ್ರಿಯ ತ್ರಿಜಗದೊಳಧಿಕ ಸೋದಾಪುರದೊಳು ನಿಂದ್ಯೋ 3
--------------
ವಿಶ್ವೇಂದ್ರತೀರ್ಥ