ರಘುರಾಮಗೆ ಬೆಳೆಗಿರೆ ಬೇಗ ಆರತಿ ಪ.
ಪಶುಪತಿ ಮಿತ್ರಗೆ
ಋಷಿಗಳ್ಯಾಗವ ಕಾಯ್ದವಗೆ
ಶಶಿಮುಖಿ ಅಹಲ್ಯೆ ಶಾಪವ ಕಳೆದ
ಅತುಳ ಮಹಿಮ ಶ್ರೀಹರಿಗೆ 1
ಶಿವನ ಧನುವ ಮುರಿದವನಿಜೆಯಳ ತಂದು
ಜವದಿ ಪರಶುರಾಮನಿಗೆ
ತವಕದಿ ಗರ್ವವ ಮುರಿದವನೀಶಗೆ
ಕಮಲಾಕ್ಷಿಯರೀಗ ಬೇಗಾ 2
ಅನುಜನವಡಗೂಡಿ ವನಿತೆ ಸಹಿತಲೀ
ತನುಜನಗೂಡಿದನುಜನ ಮುರಿದ
ಘನದ ಶ್ರೀ ಶ್ರೀನಿವಾಸನಿಗೆ 3