ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳು ಚೆನ್ನಿಗರಾಯ ನನ್ನೀನಾಗರ ಏಳು ಪ. ಏಳೆನ್ನ ಕಣ್ಮಣಿಯೇ ಕಾಳಿಮರ್ಧನಕೃಷ್ಣ ಅ.ಪ. ಮಾರನೆಯ ದಿನದಲ್ಲಿ ನೀ ಹಾರುತ್ಯಾರುತ ಬಂದು ಸೀರೆ ಸೆರಗನು ಪಿಡಿದು ಬೆಲ್ಲವನು ಬೇಡಲು ಕೇಳಿಕೊಳ್ಳವುದೇಕೆ ಹಗಲುಗಳ್ಳನೆ ಹೋಗು ಒಳಿತು ಚೋರರಿಗೆಲ್ಲ ಕೇಳಿ ಕೊಳಲೆಂದೆ 1 ಚೋರ ನೀನೆಂದುದಕ್ಕೆ ಈ ಸೀರೆಯನು ಜರಿವರೇ ಚೋರನಲ್ಲವೇ ನೀನು ಮಧ್ವರ ಹೃದಯ ಕದ್ದ 2 ಜಾರ ನೀನೆಂದುದಕೆ ಕರೆಕರೆಗೊಳಿಸುವರೆ ಜಾರೆಯಾಸಹುದು ನೀನಲ್ಲ ಜಾರರಮಣ 3 ಕಂಡದನು ಆಡಿದರೆ ಕಡುಕೋಪವ್ಯಾತಕೆ ಹಿಂಡು ಗೋವಳಲೊಡೆಯ ಪುಂಡನೀನಹುದು 4 ಮಜ್ಜನವ ಮಾಡಿಸುವೆ ಸುಳಿಗುರುಳ ತಿದ್ದುವೆ ಸಜ್ಜಾದ ಚಂದನದ ಚಂದ್ರಮನ ಫಣಿಯಲಿಡುವೆ 5 ಗೊಲ್ಲಬಾಲರು ಈಗ ಕರೆಯಲು ಬರುವರು ಮೆಲ್ಲಗೆ ಎದ್ದು ನೀ ಬೆಲ್ಲವನು ಮೆಲ್ವ ಬಾಲಕೃಷ್ಣ 6 ಮಧ್ವೇಶ ನೀನೇಳು ಮುದ್ದು ಮೊಗದವನೆ ಏಳು ಹದ್ದುವಾಹನ ಏಳೂ ಹಾಲಕುಡಿಯೇಳು 7 ಹಾಲು ಬೆಲ್ಲವ ಸವೆದು ಸುಧೆಯನು ಸುರಿಸೇಳೋ ಪಾಲಗಡಲ ಶಯನ ಶಯನದಿಂದೇಳೋ 8 ಮುನಿಸು ಏಕೇಕೆ ರಮಣ ಮುಸುಕನು ತೆಗೆದೇಳು ತಿನಿಸು ತಿಂಡಿಯ ಕೊಡುವೆ ತನಿವಣ್ಣ ಕೊಡುವೆ 9 ಚಿನ್ನದಾ ಒಂಟೆಳೆಯ ರನ್ನಧಾಭರಣ ಭಿನ್ನ ಭಿನ್ನವಾದ ಆಭರಣಗಳಿಡುವೆ ಕೃಷ್ಣ 10 ಹೆಚ್ಚೇನು ಪೇಳಲಿ ಮಗಸಾಮ್ರಾಜ್ಯದ ದೊರೆತನವು ನಿನ್ನದೊ ಸ್ವಚ್ಚಾಗಿ ಹೇಳುವೆನು ಫಲಿಸೇಳು ಕೃಷ್ಣಾ 11 ಬಾಧಿಸದೆ ಜಾಗವನು ಬಿಟ್ಟೇಳೊ 12 ಏನು ಬಯಸಿದ ಕೊಡುವೆ ಮನಬಯಕೆ ಪೂರೈಸೊ ಮನದನ್ನನೇ ಎನ್ನ ಕಾಳಿಮರ್ಧನಕೃಷ್ಣ 13
--------------
ಕಳಸದ ಸುಂದರಮ್ಮ
ಶ್ರೀ ಗುರು ಮೂರ್ತಿಯನು ನಂಬಿ ಧ್ಯಾನಿಸಿ ಜನರು | ನೀಗಿ ಚಂಚಲ ಚಿತ್ತದಾ ಭಾಗವತ ಧರ್ಮದಿಂದರ್ಚಿಸಲು ಕರುಣ ಮಳೆ | ಭವ ಪಾಶದೆಶೆಯಿಂದ ಪ ಎಳೆಯ ಮಾದಳಿರ ಸೋಲಿಸುವ ಮೃದುತರ ಬೆರಳ ನಖ ಚಲುವ ಪಾದಾ | ನಳ ನಳಿಪ ಪವಳ ಮಣಿಯಂತೆ ಹರಡಿನ ಸೊ.... ವಿಲಸಿತದ ಜಂಘೆದ್ವಯದಾ | ನಿಚ್ಚಳದ ಜಾನೂರದ ಸ್ಪುರದಾ | ವಲುಮೆಮಿಗೆ ತನು ಮಧ್ಯ ಸಂಪಿಗೆಯ ಗಂಭೀರನಾಭಿ ಕಿರು ಡೊಳ್ಳು ತ್ರಿವಳಿ ವಾಸನೆಯ ಛಂದಾ 1 ಪುತ್ಥಳಿಯ ಹಲಗಿ ಕಾಂತಿಯ ಲೊಪ್ಪುತಿಹ ಉರದ | ವತ್ತಿಡದ ಕೊರಳ ಮಾಟಾ| ಮಣಿ ಬಂಧ | ಮತ್ತ ಊರ್ಪರಿಯಕಟಾ | ಮೊತ್ತದೋರ್ವಂಡ ಭುಜ ಶ್ರವಣ ನುಣ್ಗದಪುಗಳು | ಹೆತ್ತ ಪಲ್ವಧರ ನೀಟಾ | ಸೂರ್ಯ ಪರಿನಯನ | ವೆತ್ತ ಭ್ರೂಲತೆ ಪೆರ್ನೊಸಲ ಸುಕೇಶಿಯ ಜೂಟಾ 2 ಮಣಿ ತೇಜದೊಳೆ ಯುಗ್ಮ ಕುಂಡಲಗಳು | ನವರತ್ನ ಹಾರ ಮಂಡಿತ ಪದಕ ವಡ್ಯಾಣ | ಠವ ಠವಿಸುತಿಹ ಸರಳು | ಬವರದೊಳು ಚಿತ್ತ ತೆತ್ತೀಸ ತಾಯಿತ ಕಡ ವಜ್ರ ದುಂಗುರಗಳು | ತವಕದೊಳ್ ನಿರೆ ಹಾಕಿ ದಂಬರವ ಮೌಲಿಕದ | ಕಾಲ ಕಡಗ ಅಂದುಗೆಗಳು 3 ದ್ವಿನಯನ ಮಧ್ಯ ರಾಜಿಸುವ ಮಂಟಪದೊಳಗ ಧ್ಯಾನ ಸಿಂಹಾಸನದಲಿ | ಸಾನು ರಾಗದಲಿ ಕುಳ್ಳಿರಿಸಿ ಚರಣ ದ್ವಯವ ಜ್ಞಾನ ಗಂಗೋದಕದಲಿ | ಮಾನಸದಿ ಅಭಿಷೇಕವನೆ ಮಾಡಿ ಸಲೆ ಪೂಸಿ ಆನಂದ ವಸ್ತ್ರ ಗುಣಲಿ | ಮೌನದಲಿ ಲಯಲಕ್ಷಿ ಗಂಧಾಕ್ಷತೆಯ ಸುಮನ ತಾನಿಟ್ಟು ಬೆಳಗಿ ಧೂಪದಿ ಏಕಾರತಿಗಳಲಿ 4 ಬಳಿಕ ಕಸ್ತೂರಿಯ ಕೇಶರದ ಚಂದನ ಪೂಸಿ | ಕಳೇವರಕ ವಪ್ಪಿಲಿಂದಾ | ಥಳ ಥಳನೆ ರಂಜಿಸುವ ಬಟ್ಟ ಮುತ್ತಿಶಾಶೆ ಗಳನಿಟ್ಟು ಬೇಗ ಛಂದಾ | ಚಲುವ ಮಲ್ಲಿಗೆ ಕುಂದರ್ಕೆ ಜಾಜಿ ಕೇತಕಿಯು ನಳಿನ ಮೊದಲಾದರಿಂದಾ | .....ರ ಮಾಲೆಯಾ ಹಾಕಿ ಪರಿಮಳದಿ ಧೂಪವನು | .....ಸಂಚಿತ ದಶಾಂಗದಿ ಚಕ್ಷು ಜ್ಯೋತಿಯಿಂದಾ 5 ವರಶಾಂತಿ ಶಕ್ತಿ ಯರ್ಚಿಸಿ ಕುಳ್ಳಿರಿಸಿ ಪುರುಷಾರ್ಥ ದೀಪಂಗಳು | ಮೆರೆಯುತ ಪ್ರಜ್ವಲಿಸಿ ತರುವಾಯ ಕನಕಮಯ | ಹರಿವಾಣ ಬಟ್ಟಲುಗಳು | ಪರಮಾನ್ನ ಪಂಚಭಕ್ಷಗಳನ್ನ ಸೂಪಘೃತ ಪರಿ ಪರಿಯ ಶಾಖಂಗಳು | ಸುರಸ ಪಾಲು ಮೊಸರು ತನಿವಣ್ಣಲುವಗಾಯಿಕೇಸರ | ಧರಿಯೊಳಗ ಲೇಹ ಪೇಹ ಮೊದಲಾದ ಭೋಜ್ಯಂಗಳು 6 ಇನಿತು ಅರ್ಪಿಸಿ ಸ್ವಾದುದಕ ಕೈದೊಳೆದು | ಗುಣದಿತ್ತು ತಾಂಬೂಲವಾ | ಅನುಭವದಾರತಿಯು ಪುಷ್ಪಾಂಜುಳಿ ನಮನ ಪ್ರದ ಕ್ಷಿಣ ಗೀತ ನೃತ್ಯ ಮುದವಾ | ಘನ ತೀರ್ಥಸು ಪ್ರಸಾದವ ಕೊಂಡು ಸೂರ್ಯಾಡಿ ಅನುವಾಗಿ ಸಖ್ಯದನುವಾ | ಮನುಜ ಜನ್ಮಕ ಬಂದು ಗುರು ಮಹಿಪತಿ ಸ್ವಾಮಿ | ಘನದಯವ ಪಡಕೊಂಡು ಪಡೆಯೋ ಮುಕ್ತಿಯ ಸ್ಥಳವಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂಥ ಗಾಡಿಕಾರನೆ ಯಶೋದೆ ನಿನ್ನ ಮಗ ಏಕಾಂತಕಾಂತೆರೊಳಾಡುವ ಕೊಂಕು ನೋಡುವ ಪ.ಮುಗುಳುನಗೆಗಳಿಂದ ಮಡದೇರ ಕಂಚುಕದಬಿಗುಹಿನ ಮಲಕ ಬಿಟ್ಟ ಬಹಳ ದಿಟ್ಟಉಗುರೊತ್ತಿ ಗುರುತು ಪೊಂಬುಗುರಿಗಳೆಮ್ಮವೆಮೊಗ್ಗು ಮೊಲೆಗಳ ಪಿಡಿದು ಮೊನೆ ನೋಡಿದ 1ತೋಳೆರಡನು ತಳಕಿಕ್ಕಿ ಇವಿಗೋ ದುಂಡುಮೊಲೆ ಎನಗಂದವೆಂದು ಮೋಹನಸಿಂಧುತಾಳಿದ್ದ ಕೊರಳೊಳು ತನ್ನ ಪದಕದೊಳುಮೇಲದೆಯೆಂದಪ್ಪಿದ ಬಿಗಿದಪ್ಪಿದ 2ರಾಕೇಂದುಮುಖಿಗೆರಾಹುಬಂದು ತೊಡರಿತುಈಕೆಗೆ ಮೋಸವೆಂದು ಎತ್ತಿದ ಬಂದುಜೋಕೆ ಮಾಡುವೆನೆಂದುಜಡಿದುಮಾರವೇಣಿಯಸಾಕಿ ಉಪಕಾರವೆಂದಸಚ್ಚಿದಾನಂದ3ಎಲೆಲೆ ನಾಭಿ ಒಲ್ಪಕಾಯಳೆ ನಾವು ಮುಟ್ಟಿ ಕೆಂಪಿನಾಮೊಲೆ ಮೊಗ್ಗು ಕಪ್ಪಾದವೆಂದು ಮುಟ್ಟಿ ಅಹುದೆಂದುಅಲಕದ ಪೆಳಲ ಬಿಟ್ಟು ಅಹಿರಿಪು ನವಿಲುಥರಅಲರ್ಗಳಾರ್ಮುಡಿಗಟ್ಟಿದ ಅಂಜಬ್ಯಾಡೆಂದ 4ಚದುರೇರೆನ್ನ ವಂಚಿಸಿ ಚಿನ್ನಿಪಾಲು ತನಿವಣ್ಣುಇದೀಗ ಬಚ್ಚಿಟ್ಟರೆಂದು ಯದುಕುಲೇಂದುಮುದ್ದು ಬಟುಗಲ್ಲದಿ ಮೊನೆವಲ್ಗಳ ನಾಟಿಸಿಅಧರಾಮೃತ ಪೀರಿದ ಅತಿಕೊಬ್ಬಿದ 5ಮುಡಿಯ ತೋರಕ ಕೊಡ ಮಲಿ ಭಾರಕಬಡನಡು ಮುರಿವದೆಂದು ನಗೆಯಲ್ಲವೆಂದುಜಡಿತದೊಡ್ಯಾಣವ ಜಾಣೆ ಕಟಿಗೆ ಬಿಗಿದುಡಿಗೆ ಕರವನಿಡಿದ ದುಡುಕು ಮಾಡಿದ 6ಮೃಗಮದಬಾವನ್ನ ಮಘಮಘಿಪ ಪೂಮಾಲೆಝಗಝಗಿಪ ಭೂಷಣವ ಜಾತಿ ಮೌಕ್ತಿಕವಮುಗುದೇರಿಗಿತ್ತ ಮೋಹಿಪ ಪ್ರಸನ್ನವೆಂಕಟಜಗಕೊಬ್ಬ ಚೆಲುವನಮ್ಮ ಜಯಿಸಿದ ನಮ್ಮ 7
--------------
ಪ್ರಸನ್ನವೆಂಕಟದಾಸರು
ಚಪ್ಪಾಳೆನಿಕ್ಕೆಲೊ ಕೃಷ್ಣಮ್ಮ ಚಪಲ ಬಾಲ ರಂಗಮ್ಮಕಾಪುರುಷರ ಚಪ್ಪಾಳೆ ಮಾಳ್ಪ ಚಪ್ಪಾಳೆ ಪ.ತುಪ್ಪ ಬೆಣ್ಣೆ ಪಾಲನೊಲ್ಲೆ ಹೆಪ್ಪನಿಟ್ಟ ದಧಿಯೊಲ್ಲೆಗೋಪಿಯರೊಡನೆ ಕೇಳಿಗೊಪ್ಪಿದ ಚಪ್ಪಾಳೆ 1ಪಾಯಸವುಣ್ಣಲೊಲ್ಲೆ ಕಜ್ಜಾಯ ಸಕ್ಕರೆಯನೊಲ್ಲೆಆಯತಾಕ್ಷಿಯರ ಮೇಲೆ ಸ್ನೇಹದ ಚಪ್ಪಾಳೆ 2ತನಿವಣ್ಣ ಮೆಲ್ಲಲೊಲ್ಲೆ ಮನೆಯ ಸೇರಲೊಲ್ಲೆ ಪ್ರಸನ್ನ ವೆಂಕಟಾದ್ರಿಲಿ ಕುಣಿವ ಚಪ್ಪಾಳೆ 3
--------------
ಪ್ರಸನ್ನವೆಂಕಟದಾಸರು