ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದವಾ ನೋಡು ನೀ ವಿಚಾರಿಸಿ ಏನೊಂದುಮಿಲ್ಲಾಗಿ ತಾನೆ ತಾನಾಗಿಹ ಪ ಅನಿಸಿಕೆ ತೋರಿಕೆ ಅಡಗುತಲಿರುತಿರೆ ತನಿನಿದ್ರೆಯೆನಿಸದ ಘನಪದವಾಗಿಹ ಮನಸಿನಿಂದಾಚೆಗೆ ನಿಜವಾಗಿ ನೆಲಗೊಂಡ 1 ಇದೇ ಬ್ರಹ್ಮಾನಂದವು ನೋಡೈ ಸದಾ ನಿರ್ವಿಕಲ್ಪವಾಗಿರುವಾ ಆ ಸ್ಥಿತಿಯನೆ ಗುರುತಿಸಿ ಅನುಭವಿಸುತದನಾ ಮರಳಿ ಜಾಗರದಲಿ ನೆನೆಸಿ ಆ ಸ್ಥಿತಿಯನು ಮರಣರಹಿತವದು ಅದೇ ಪರಮಾತ್ಮನುಗುರುಶಂಕರನು ಪೇಳ್ದ ಅದೇ ತಾನು ಎನ್ನುತ 2
--------------
ಶಂಕರಭಟ್ಟ ಅಗ್ನಿಹೋತ್ರಿ
ತಿಳಿ ಆದೆ ದೇವನು ಇರುತಿಹೆ ನೀ ಪ ಅದು ಕೊನೆಯಾಚೆಗೆ ಬೇರಿಲ್ಲ ಅದು ಮನಸಿಗೆ ನಿಲುಕುವದಲ್ಲ ಅದನನು ಭವದಲಿ ತಿಳಿಯಲ್ಲ ಬಿಡು ಮನಸಿನ ಗೊಡವೆಯನೆಲ್ಲ ಇದೆ ಜ್ಞಾನಾಗ್ನಿಯು ಸುಡುತಿಹುದೋ ಒದಗಿದ ಕರ್ಮದ ಕಾಷ್ಮಗಳ 1 ಮನವಡಗಿದ ಪದ ಪರಿಚಯವ ತನಿನಿದ್ರೆಯ ಮೀರಿದ ಸ್ಥಿತಿಯ ಅನುಭವದಲಿ ತರುವುದೆ ಯೋಗ ಅದನೇ ಯತ್ನದಿ ಸಾಧಿಸು ತಾ ನನಸಿನಲೇ ಗುರು ಮುಖದಿಂದ ಕೇಳಿ ನಿವೇಕದಿ ತಿಳಿ ಬೇಗಾ 2 ಎಚ್ಚರವಿದು ತಿಳಿ ಕನಸೆಂದು ಅಚ್ಚಳಿಯದ ಸ್ಥಿತಿ ನಾನೆಂದು ನಿಚ್ಚಳದಲಿ ನಿಶ್ಚಯಿಸುವದು ತುಚ್ಛದ ತೋರಿಕೆ ಎಂದು ತಿಳಿ ಸಚ್ಚಿತ್‍ಶಂಕರ ಬೋಧವನಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಹೃದಯಾಧಿವಾಸಾ ಚಿನ್ಮಂiÀi ಪಾವನ ಅವನೆ ದೇವಾಧಿದೇವ ಮೂರು ಕಾಲದ ಸಾಕ್ಷಿ ಪರಮಾತ್ಮನೇ ಅವನೇ ಜಗದಾಧಿವಾಸ ಪ ಆಕಾರದೊರ ಏಕಾಂತಪೂರ ಏಕಾಂತಘನಪೂರ ತಾ ನಿರ್ವಿಕಾರ ಮನೋವಾಣಿದೂರ ಮನೋವಾಣಿಗೆದೂರ ಜಗಕೆಲ್ಲ ಆಧಾರ ತಾನಾಗಿಹ ಇವನೆ ಪರಮಾತ್ಮ ಈಶ ಹೃದಯಾಧಿವಾಸ 1 ಮನವೆಲ್ಲ ಉಡುಗಿ ಅನಿಸಿಕೆಯಡಗಿ ಅನಿಸಿಕೆ ತಾನಡಗಿ ತನಿನಿದ್ರೆಯಲ್ಲಿ ಇವು ಎಲ್ಲ ಮುಳುಗಿ ತಾನೇ ತಾನಾಗಿರ್ದ ಚಿನ್ಮಾತ್ರನೆ ಅವನೆ ಆನಂದರೂಪ ಹೃದಯಾಧಿವಾಸ 2 ಅವನೇ ನಾನೆಂದು ತಿಳಿ ಈಗ ನಿಂದು ಜಗವೆಲ್ಲ ಕನಸೆಂದು ಪರಮಾರ್ಥ ಸತ್ಯ ಶ್ರೀನಾರಾಯಣ ಇವನೇ ಗುರುಶಂಕರೇಶ ಹೃದಯಾಧಿವಾಸ 3
--------------
ಶಂಕರಭಟ್ಟ ಅಗ್ನಿಹೋತ್ರಿ