ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೌ ಶ್ರೀ ರಮಾದೇವಿಯೆ ಸದಾ ತೋಯಜಾಂಬಕಿಯೇ ಭಯವ ಬಿಡಿಸಿ ಭರದಿಂದ 1 ಕ್ಷೀರಾಂಬೋನಿಧಿ ತನಯೇ ತಾಯೇ ಮಾರನಯ್ಯನರಸಿ ಕರುಣಾವೆರಸಿ ನಲವಿಂದ 2 ಶಿ ್ರೀ ಶೇಷಾದ್ರೀಶ ಮನೋಲ್ಲಸಿತೆ ಕಾಂತೇ ವಾಸವಾದಿ ವಿನುತೇ ಮಹಿತೇ ವರದಾತೇ ತಾಯೆ 3
--------------
ನಂಜನಗೂಡು ತಿರುಮಲಾಂಬಾ
ಕೈಲಾಸನಾಥ ಮಹೇಶ ಈಶ ಶೈಲೇಶ ತನಯೇಶ ಬಾಲಾರ್ಕ ಸಮಭಾಸ ಪ ಶೂಲಾಕ್ಷ ಡಮರುಗಳಿಂದ ಶೋಭಿಪ ಹಸ್ತ ತಾಲಾಂಕನನುಜನೊಳ್ಸಮರಗೈದೀರ್ಪ ಫಾಲಾಕ್ಷದಿಂದಲಿ ಕಾಮನ ದಹಿಸಿರ್ಪ ಶೂಲಿಯ ಮಹಿಮೆಯನೇನು ಬಣ್ಣಿಸಲಿ 1 ವಿಷ್ಣುಭಕ್ತರೊಳಗತಿ ಪ್ರೇಮವಿರುವ ಕೃಷ್ಣ ದ್ವೈಪಾಯನರ ಸುತರಾಗಿ ಶೋಭಿಪ ಸನಕಾದಿಗಳ ಶಿಷ್ಯ ದುರ್ವಾಸರೆನಿಪ 2 ನಂಜುಂಡನೆನಿಸಿರ್ಪ ಪ್ರಖ್ಯಾತ ಮಹಾದೇವ ಕಂಜಜಾತನ ಸುತನೆನಿಸಿರ್ದ ದೇವ ರಾಜೇಶ ಹಯಮುಖ ಭಕ್ತಪುಂಗವ ನೀನು ಅಂಜಲಿ ಬಂಧದಿಂ ನಮಿಪೆ ನಿನ್ನಡಿಗೆ 3
--------------
ವಿಶ್ವೇಂದ್ರತೀರ್ಥ
ಜಯ ಜಯ ಶ್ರೀಹರಿಪ್ರಿಯೆ ಜಯಕ್ಷೀರಾಂಬುಧಿತನಯೇ ಜಯ ಜಯ ಕೋಮಲಕಾಯೆ ಬಿಡದೆನ್ನನು ಕಾಯೆ ಪ ಜಯ ರತ್ನಾಕರ ತನಯೆ ಕುರುಕರುಣಾಮಯಿ ಸದಯೆ ಹರಿ ವಕ್ಷ ಸ್ಥಳ ನಿಲಯೆ ಸುರಮುಖಗೇಯೆ 1 ಜಯ ಜಯ ಪಾವನ ಚರಿತೆ ಜಯಚತುರಾನನ ಮಾತೆ ಜಯ ಭಕುತಾಭಯ ದಾತೆ ನಮಿಸುವೆ ಭೂಜಾತೆ 2 ಜಯ ಜಯ ಕಾರ್ಪರ ಸದನೆ ಜಯನರಸಿಂಹನ ರಾಣಿ ಸುರಸಂಶೇವಿತಚರಣೆ ಪಾಹಿಜಗಜ್ಜನನಿ 3
--------------
ಕಾರ್ಪರ ನರಹರಿದಾಸರು
ನಮೋ ನಮೋ ಜಯ ತುಂಗಭದ್ರೆ ನಮಿತರನು ಪಾಲಿಸುವ ಸದ್ಗುಣ ಸಮುದ್ರೆ ಪ ವೈರಾಚ ನಗರಿಯಲಿ ವಿಧಾರುಣಿಯ ರೋಚಕನು ಮೀರಿ ದೇವಾದಿಗಳಿಗಂಜದಿರಲು ಘೋರ ರೂಪವ ತಾಳಿ ಅವನ ಕೊಲ್ಲಲು ಹರಿಯ ಮೋರೆ ಕರಿಬೆವರಿಡಲು ಅತಿ ಹರುಷದಿಂದ 1 ರೂಢಿಯೊಳಗೆಲ್ಲ ಸಮಸ್ತ ನದಿ ಉದಕಗಳು ನೋಡಿದರು ರುಚಿಕರವಿಲ್ಲವೆಂದೂ ಸುರರು ಕೊಂಡಾಡುತಿರೆ ಈಡ್ಯಾರು ನಿನ್ನ ಮಹಿಮೆಗೆ ವರಹತನಯೇ 2 ಸಲಿಲವೇ ಹರಿಯಾದ ಶಿವ ನಿನಗೆ ಶಿಲೆಯಾದ ಬಲು ಮುನಿಗಳು ಮಳಲವಳಗಾದರೂ ಜಲಜ ಸಂಭವನು ತೃಣನಾದ ಬಳಿಕ ವಿಷ್ಣು ಕೆಲವುಕಾಲ ನಿನ್ನೊಳಗೆ ನಿಲಿಸಿದನು ತುಂಗೆ ಗಂಗೆ3 ವೇದಾದ್ರಿಯಲಿ ಜನಿಸಿ ನರಸಿಂಹ ಕ್ಷೇತ್ರದಲಿ ಭೇದವಿಲ್ಲದಲೆ ಸಂಗಮವು ಎನಿಸೀ ಆದರದಿಂದ ಹರಹರ ಪೊಂಪ ಬಲಗೊಂಡು ಮೊದಲು ಶ್ರೀ ಕೃಷ್ಣ ಬೆರದೆ ಕೂಡಲಿಯೊಳು 4 ತುಂಗೆ ತುಂಗೆ ಎಂದು ಸ್ಮರಿಸುವಾ ಜನರಿಗು ತ್ತಂಗ ಗತಿಯಾಗುವುದು ಪಾಪವಳಿದು ಮಂಗಳ ಮೂರುತಿ ವಿಜಯವಿಠ್ಠಲನ ಚರಣಂಗಳಲಿ ಇದ್ದವರ ಸತತ ಪೊರೆವುದು ದೇವಿ 5
--------------
ವಿಜಯದಾಸ
ಪತಿ ತನಯೇ ಪ ಆರು ನಿನಗೆ ಸರಿ ಮೂರು ಲೋಕದೊಳುವೃತ್ರಾರಿಗಳಿಂದಾರಾಧಿತಳೇ ಅ.ಪ. ಅಗಜೆ ಎನ್ನ ವದನಾ | ಮಾಡಲಿ | ನಗಧ5ಗುಣಸ್ತವನಾಖಗ ವಹ ಸಖ ಶಿವ | ಮೃಗ ಪಾಣಿಯ 5iÉುಹಗಲಿರುಳಲಿ ಹರಿ ಗಾಯನ ಮಾಡಿಸೇ 1 ಮನಸಿಜಾರಿಯ ಜಾಯೇ | ಮನ್ಮನ | ಚಪಲ ಬಿಡಿಸು ತಾಯೇಕನಸಿಲಿ ಮನಸಿಲಿ ಘನ ವಿಷಯಂಗಳನೆನೆವ ಕೊಡದೆ ಹರಿ ಧ್ಯಾನವನೀಯೇ 2 ಲೋಕ ಪಾವನ ಮೂರ್ತೇ | ಪಾಲಿಸು | ಏಕದಂತನ ಮಾತೇನೋಕನೀಯ ಗುರು ಗೋವಿಂದ ವಿಠಲನಜೋಕೆಯಿಂದ ನೆನೆ ನೆನೆಯುವ ಮಾತೇ 3
--------------
ಗುರುಗೋವಿಂದವಿಠಲರು
ಶ್ರೀ ಭಾಗೀರಥಿ ತಾಯೇ ಶೃಂಗಾರ ಶುಭಕಾಯೆ | ಶ್ರೀ ಭೂರಮಣನ ತನಯೇಪ ನಿನ್ನ ಯಾತ್ರಿಗೋಸುಗ ಎನ್ನ ಮನಸು ಪುಟ್ಟಿತು | ಇನ್ನು ನೀ ಮರಿಸದೇ | ಪುಣ್ಯನರನ ಮಾಡೊ ಪೂತೋಭಾವವೆಂದು | ಧನ್ಯ ಜನ ಮಾನ್ಯಾ ಭಕ್ತಜನ ಪ್ರಸನ್ನೇ 1 ಶಿವ ನಿನ್ನ ಶಿರದಲ್ಲಿ ಧರಿಸಿದೆ ಕಾರಣ ಪವಿತ್ರಂಗನಾದನೆಂದು | ಅವನಿಯೊಳಗೆ ಮಹಾ | ಕವಿಜನ ಪೇಳಿದ ಶ್ರವಣದಿಂದಲಿ ಭಕುತಿಯಿಂದಲಿ ನಿಂದೆ 2 ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ | ಪಾದ | ವಾರಿಜ ಪೊಗಳುವಂತೆ ಬುದ್ಧಿ ಪಾಲಿಸುವದು 3
--------------
ವಿಜಯದಾಸ
ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ ರಾಜೀವ ಚರಣದ ಸೇವೆಯ ಪಾಲಿಸು ಕೋವಿದರೊಡನೆ ಪ ಸಮಸ್ತಲೋಕ ವಂದಿತೆ ಸಂತತ ಮತ್ತೆ ತಾಮಸ ಜ್ಞಾನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ ರೋಮ ರೋಮ ಗುಣ ಭರಿತೆ ರಾಮನ್ನ ಪದ ನಾಮವನ್ನು ನಾ ಮರೆಯದಂತೆ ನೀ ಮನಸು ಕೊಡು ಹೇಮಾಂಬರೆ ಕಾಂಚಿದಾಮೆ ಅಮಮ ನಿ- ವನಧಿ ಸೋಮೆ ಕಾಮ ಜನನಿ ತ್ರಿಧಾಮೆ ಪುಣ್ಯನಾಮೆ ಕೋಮಲಾಂಗಿ ಸತ್ಯಭಾಮೆ ರಮೆ ಪೂರ್ಣ ಕಾಮೆ ಸುರಸಾರ್ವಭೌಮೆ 1 ಚಂದನ ಗಂಧಲೇಪಿನೀ ಚತುರವಾಣೀ ಮಂದಹಾಸಗಮನೀ ಗಂಧಕಸ್ತೂರಿ ಜಾಣಿ ಗಂಭೀರ ಗುಣಶ್ರೇಣಿ ಸಿಂಧುತನಯೇ ಕಲ್ಯಾಣಿ ಇಂದಿರೆ ಪದ್ಮಮಂದಿರೆ ಕಂಬು ಕಂಧರೆ ಸರ್ವಸುಂದರೆ ಮಾಯೆ ಬಂದೆನು ಕರುಣದಲಿಂದ ನೋಡು ಶತ - ಕಂಧರÀರಿಪು ಸುಖಸಾಂದ್ರ ನಿರಾಮಯೆ ಹಿಂದಣ ಕಲ್ಮಷ ವೃಂದಗಳೋಡಿಸಿ ನಿಂದೆ ನಮೋನಮೋ ಯೆಂದೆ 2 ನಿತ್ಯ ಸಲ್ಲಾಪೆ ಅನ್ನಂತಾನಂತ ರೂಪೆ ಕನ್ಯಾಮಣಿಯೆನಿಪೆ ನಿನ್ನ ಕಡೆಗಣ್ಣಿನ ನೋಟ- ವನ್ನು ಹರಹಿ ಹಿರಣ್ಯಗರ್ಭಾದಿ- ಅನುದಿನ ಧನ್ಯನ ಮಾಳ್ಪಳೆ ಅನ್ಯರಿಗೆ ಕಾರ್ಪಣ್ಯ ಬಡದಂತೆ ಚನ್ನ ವಿಜಯವಿಠ್ಠಲನ್ನ ಪೂಜಿಪ ಗುರು ರನ್ನೆ ಪುರಂದರರನ್ನ ಪೊಂದಿಸು ಸಂ-ಪನ್ನೆ ಯೆನ್ನ ಪ್ರಾಸನ್ನೆ 3
--------------
ವಿಜಯದಾಸ
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂ ಪ. ಭೇರಿತಮ್ಮಟಾದಿ ಭಾರಿವಾದ್ಯಂಗಳು ಭೋರ್ಗರೆಯುತ್ತಿರಲು ನಾರಿ ನಿನ್ನ ಕಾಣಲು ಅ.ಪ. ಭಾವಜಾದಿ ಜನನೀ ಭಾರ್ಗವೀ ಕಲ್ಯಾಣಿ ದೇವದೇವನ ರಾಣೀ ಶ್ರೀಮತೀ ಪದ್ಮಿನೀ 1 ಕ್ಷೀರವಾರಿಧಿಜಾತೆ ಮಾರವೈರಿವಿನುತೆ ವಾರಿಜಾಸನ ಮಾತೆ ಸಾರಿ ಬಾ ಸುಪ್ರಿತೇ 2 ಶೇಷಶೈಲನಿಲಯೆ ವಾಸವಾದಿಗೇಯೆ ವಾಸುದೇವಜಾಯೇ ವಸುಮತೀ ತನಯೇ3
--------------
ನಂಜನಗೂಡು ತಿರುಮಲಾಂಬಾ