ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾದವ ಯದುಕುಲ ಬಾಲನೆ ಬಾರೋಮಾಧವಮದನಗೋಪಾಲನೆ ಬಾರೋ ಪಸಾಧುಗಳೊಡೆಯ ಯಶೋದೆ ನಂದನೆ ಬಾರೋಶ್ರೀಧರ ಸುಗುಣ ಶರೀರನೆ ಬಾರೋ ಅ.ಪಮನೆಮನೆಯೊಳು ಮೊಸರ ಕಡೆವರು ಬಾರೋವನಜಾಕ್ಷಿಯರು ಬೆಣ್ಣೆ ಕೊಡುವರು ಬಾರೋತನಯರೊಡನೆ ಚಂಡಿನಾಟವಾಡಲು ಬಾರೋಕೊನೆ ಬೆರಳೊಳು ಪಿಡಿದ ಕೊಳಲನೂದುತ ಬಾರೋ 1ಸುರರುನಾರದರೆಲ್ಲ ಸ್ಮರಿಸುವರ್ ಬಾರೋಕರವಮುಗಿವೆ ನಿನ್ನ ಚರಣಕ್ಕೆ ಬಾರೋನರನಸಾರಥಿಕೃಷ್ಣ ಹರುಷದಿ ಬಾರೋ 2ಪಾಂಡುಪುತ್ರರ ಪಾಲ ಪಾಹಿಯೆಂಬೆನು ಬಾರೋಕಂಡು ರಕ್ಷಿಸೋ ಎನ್ನಕಮಲನಯನ ಬಾರೋಪಂಡರೀಪುರವಾಸ ಚಂಡವಿಕ್ರಮ ಬಾರೋಅಂಡಜವಾಹನಮಾರ್ತಾಂಡನಂತಿಳಿದು ಬಾರೋ 3ಗಂಧಚಂದನ ಪುಷ್ಪದಿಂದ ಪೂಜಿಪೆ ಬಾರೋಸುಂದರ ಚಿನುಮಯ ಮೂರ್ತಿಯೆ ಬಾರೋಮಂದರಧರಮದನಜನಕನೆ ಬಾರೋಇಂದಿರೆಯರಸ ಗೋವಿಂದನೆ ಬಾರೋ 4
--------------
ಗೋವಿಂದದಾಸ
ಸೆರಗ ಬಿಡಯ್ಯ ಕೃಷ್ಣ - ಕರೆಯಲು ಪೋಪೆನು |ಕರುಗಳು ಹಸಿದಿವೆ ಕರುಣಿಗಳರಸನೆ ಪಕೆನೆಮೊಸರನೆ ಕಡೆದು ನಿನಗೀವೆ ಬೆಣ್ಣೆಯ |ಗೊನೆಯ ಬಾಳೆಯ ಹಣ್ಣ ತಿನಲು ಕೊಡುವೆ ||ನೆನೆಗಡಲೆ ಕೊಬ್ಬರಿ ನಿನಗೆ ಮೆಲಲಿಕ್ಕುವೆ |ತನಯರೊಡನೆ ಆಡಕಳುಹುವೆ ರಂಗಯ್ಯ 1ಗೋವಳರೆಲ್ಲ ಬಂದು ಬಾಗಿಲೊಳಗೆನಿಂದು|ಗೋವುಗಳನು ಬಿಡಲು ಸಾರುತಿಹರು ||ನೋವುಗೊಳಿಸಬೇಡ ಪರರ ಮಕ್ಕಳ ನೀನು |ಭಾವಜನಯ್ಯನೆ ಲಾಲಿಸೀ ನುಡಿಯನು 2ಶರಧಿಯ ತಡಿಯಲಿ ನೆರೆದಿಪ್ಪ ಸತಿಯರ |ಪರಿಪರಿ ವಸ್ತ್ರವ ಸೆಳೆಯಬೇಡ ||ನೆರೆಮನೆ ಹೊರೆಮನೆ ಕರುಗಳ ಬಿಡಬೇಡ |ಸುರರಿಗೊಡೆಯ ನಮ್ಮ ಪುರಂದರವಿಠಲ 3
--------------
ಪುರಂದರದಾಸರು