ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡೆಲೆ ಸುಮತಿ ಪೆಣ್ಮಣಿಗೊಲಿದ ಗಾಡಿಗಾರ ಚೋರ ರೂಢಿಗೆ ರಂಗ ಪ. ಈಡುಂಟೇ ಶತ ಜೋಡಿಶೆ ಶಿಶುಗಳ ಬೇಡ ಪಂಥ ನಿನ್ನ ಬೇಡಿಕೊಂಬೆನೆ ಕುಮತಿಅ.ಪ. ಅಪ್ರಾಮೇಯನ ಗುಡಿಯೊಳಗಿದನೆ ಸುಪ್ರಕಾಶ ಎನ್ನಪ್ಪಾ ಮುಂಗುರುಳುಗಳೊ ಳೊಪ್ಪುತಲಿಹನೆ ಬೆಡಗಿಂದೊಡನೆ ಅಪ್ಪನ ಬ್ರಹ್ಮಗಂಟುಡಿದಾರ ಉಡುಗೆಜ್ಜೆ ಬೊಮ್ಮ ನಪ್ಪ ಅಂಬೆಗಾಲಿಕ್ಕಿ ನೆಲಸಿಹನೆ ಕಂ ದರ್ಪ ಕೋಟಿ ತೇಜದಿ ಮೆರೆವನ 1 ಅರವಿಂದದಳ ವೆಂಕಟನಿರುವಲ್ಲೆ ತಿರುಮಲ ನಾರಾಯಣ ಚರಿತಾಪ್ರಮೇಯ ಚೆÉನ್ನಪಟ್ಟಣ ತೀರ ಮುಳೂರಲ್ಲೆ ಸರಸ ಸಂಚರಿಸುವ ವರ ಚೈತ್ರದ ರಥ ಅರಿವಿಲ್ಲವೆ ಕಣ್ತೆರೆದು ನೋಳ್ಪರಿಗೆ ದುರಿತ ದೂರ ಕಣಿ ವರಪ್ರದ ದೇವ ಅರಿದವರಿಗೆ ಕಣ್ ತೆರೆವನು ದೇವ ನೋಡೆ 2 ಅಪ್ಪ ಕೃಷ್ಣಗೆ ಬೆಣ್ಣೆ ಹಣ್ಣನುಗೊಡಲು ಇಪ್ಪನೆ ತನಯರನು ಸುತ್ತೇಳು ಲೋಕದಿ ನೋಡಲು ಇಲ್ಲೆಲ್ಲೆಲ್ಲೂ ಶಿಶು ಇಹನಲ್ಲೇ ಅಪ್ಪ ಶ್ರೀ ಶ್ರೀನಿವಾಸ ಒಪ್ಪನೋ ತಪ್ಪನೆಲ್ಲವಪ್ಪಿಪ್ಪನೊ ಕರುಣವ ಸರ್ಪಶಯನ ತಿಮ್ಮಪ್ಪನ ಕರುಣ ಒಪ್ಪ ತೆರದಿ ಸ್ತುತಿ ಮಾಡುವ ಬಾರೆ 3
--------------
ಸರಸ್ವತಿ ಬಾಯಿ
ಸ್ಮರಿಸಿ ಸುಖಿಸೊ ನರನೆ - ಗುರುರಾಯರನನುದಿನ ಪ ಶರಣು ಜನರ‌ಘ ತರಿದು ಕರುಣದಿ ಚರಣ ಸರಸಿಜ ಹರುಷದಿಂದಲಿ ಅ.ಪ ನಳಿನ ಬಾಂಧವ ಕುಲದಿ ಅವತಾರ ಮಾಡಿದೆ ಇಳಿಜರಮಣನಾಜ್ಞದಿ ಕಲಿಯುಗದಿ ದ್ವಿಜರನು ಸಲಹಲೋಸುಗ ಜಗದಿ ಜನಿಸಿ ಗುರುಗಳ || ವಲಿಮೆಯನು ತಾಪಡೆದು ಕೊರಳಲಿ ತುಲಸಿ ಮಾಲೆಯ ಧರಿಸಿ ಹರಿಯನು ವಲಿಸಿ ಥಳ ಥಳ ಪೊಳೆವವ ಸ್ತಂಬದಿ ಕುಳಿತ ಶ್ರೀರಂಗವಲಿದ ದಾಸರ 1 ಮಾನಿನಿಯಳ ಮಾನರಕ್ಷಿಸಿದೆ ಶ್ರೀ ಪವ ಮಾನನಯ್ಯನ ಕರುಣವನು ಪಡೆದು ಸ್ತುತಿಸಿದಿ ವನು ಪಾಲಿಸಿ ಗುರು ಭವ ಕಾನನಕೆ ಕೃಶಾನುವೆನಿಸಿದ ಮಾನವಿ ಪುರ ನಿಲಯರನು ಅನುಮಾನವಿಲ್ಲದೆ ಮಾನಸದಿನೀ 2 ಶ್ರೀಮಧ್ವಾಚಾರ್ಯ ಸುಮತ ಶರಧಿಗೆ ಹಿಮ ಧಾಮನೆನಿಸಿ ನಿರುತ ಸೇವಿಪರಿಗೆ ಕಾಮಿತಾರ್ಥಗಳಿಗೆ ತ್ವರಿತ ನೀಡಿ ಶಿರಿವರ ಶಾಮಸುಂದರ ಸ್ವಾಮಿ ಪರನೆಂಬೊ | ಪ್ರೇಮದಿಂದಲಿ ಹರಿಕಥಾಮೃತ ಈ ಮಹಾಸುಗ್ರಂಥ ರಚಿಸಿದ ಹೇಮ ಕಶ್ಯಪ ತನಯರನುಜರ 3
--------------
ಶಾಮಸುಂದರ ವಿಠಲ