ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯದಿರೆಲೊ ಮನುಜಾ ಮಾಧವನನ್ನು ಮರೆಯದಿರೆಲೋ ಶುದ್ಧ ಮರುಳೆ ಮಾತನು ಕೇಳು ಪರಿಪರಿಯಲಿ ನಮ್ಮ ಪೊರೆವ ಕಾರುಣಿಕನ ಪ. ತನ್ನ ಸೇವೆಗೆ ಸಾಧನವಾಗಿಹ ದೇಹ- ವನ್ನು ಪಾಲಿಸಿದವನ ಯಿನ್ನು ನೀ ತಿಳಿಯದೆ ಅನ್ಯ ದೈವಗಳನ್ನು ಮನ್ನಿಸಿ ಮನದಣಿದನ್ನ ನಾಯಕನನ್ನು 1 ಹಸ್ತ ಪಾದಾದಿಗಳ ಕೊಟ್ಟದರಿಂದ ವಿಸ್ತರಿಸಿರುವಾನಂದ ತೋರುವ ಸುರ ಮಸ್ತಕ ಮಣಿಯನು ಮರೆತು ಮೂಢರ ಸೇರಿ ಬಸ್ತಕನಂತೆ ನಿರಸ್ತನಾಗದೆಯೆಂದು 2 ಮನೆಯಲಿ ನಿಲಿಸಿರುವ ವಾಕ್ಕಾಯಕರ್ಮ ಮನದಲಿ ತುಂಬಿರುವ ನಮ್ಮಯ ಸರ್ವ ವನು ತನಮನ ತಾನೆ ನೆನೆದು ಪಾಲನೆ ಗೈವ ವನಜನಯನ ಲಕ್ಷ್ಮಿಯಿನಿಯನ ಮಹಿಮೆಯ 3 ದುರಿತರಾಶಿಯನರದು ದುರ್ ಹೃದಯರ ತರಿದು ಕಾಲಿಂದಲೊದೆದು ಸಿರಿ ಸಹಿತವಾಗಿ ನಮ್ಮಲ್ಲಿರುವನ ಸರ್ವಾಮಯ ಹರ ಪದದಲ್ಲಿ ಭಾರವಿರಿಸು ವಿಚಾರಿಸು 4 ಬಿಡು ಬಿಡು ಭ್ರಾಂತಿಯನು ಮುರಾಂತಕನ- ಲ್ಲಿಡು ನಿನ್ನ ಚಿಂತೆಯನು ಕಡಿವನು ವೈರಿಗಳ ಕೊಡುವನು ಶುಭಗಳ ಒಡೆಯ ವೆಂಕಟಪತಿ ತಡಿಯ ತೋರುವನೆಂದು 5
--------------
ತುಪಾಕಿ ವೆಂಕಟರಮಣಾಚಾರ್ಯ
ರಾಜವದನೆ ಸುರರಾಜನ ಪುರದೊಳುರಾಜಿಸುತಿಹ ಕುಜವ ಪ ರಾಜೀವ ಮುಖಿಯೆನಿಸುವ ಸಖಿಗೊಲಿದಿತ್ತರಾಜನ ತೋರೆನಗೆ ಅ ನೆತ್ತಿಯಿಂದಿಳಿದಳ ಹೆತ್ತ ಮಗನ ಮೊಮ್ಮನೆತ್ತಿದಾತನ ಪಿತನ ತುತ್ತು ಮಾಡುವನ ವೈರಿಯನೇರಿ ಜಗವನು ಸುತ್ತು ಬರುತಲಿಪ್ಪನಕತ್ತಲೆಯೊಳು ಕಾದಿ ಅಳಿದಯ್ಯನ ಶಿರವಕತ್ತರಿಸಿದ ಧೀರನಸತ್ತ ಮಗನ ತಂದಿತ್ತವನನು ಎ-ನ್ನೊತ್ತಿಗೆ ಕರೆದು ತಾರೆ 1 ವರುಷವೈದರ ಪೆಸರವನ ತಾಯನುಜನಧರಿಸಿದಾತನ ಸಖನಧುರದೊಳು ತನಗೆ ಬೆಂಬಲ ಮಾಡಿಕೊಂಡು ಭೂವರಗೆ ತಾನೊಲಿದವನಸುರಗಿರಿಯನು ಸುತ್ತಿ ಬಾಹನ ಸುತನ ಕೈಯಲಿಹರಸಿ ದಾನವ ಕೊಂಡನಧರಣಿಜಾತನ ಶಿರವರಿದು ನಾರಿಯರನುಪುರಕೆ ತಂದವನ ತೋರೆ 2 ಹನ್ನೆರಡನೆಯ ತಾರೆಯ ಪೆಸರಾಕೆಯಕನ್ನೆಯಯ್ಯನ ಮನೆಯತನ್ನ ತಾ ಮರೆ ಮಾಡಿಕೊಂಡಿಪ್ಪರಸಿಯಬಣ್ಣವ ಕಾಯ್ದಿಹನಪನ್ನಗಶಯನ ಬೇಲಾಪುರದರಸನುತನ್ನ ನೆನೆವ ಭಕ್ತನಮನ್ನಿಸಿ ಕಾಯುವ ಚೆನ್ನಾದಿಕೇಶವ ಪ್ರ-ಸನ್ನನ ತೋರೆನಗೆ 3
--------------
ಕನಕದಾಸ