ಒಟ್ಟು 10 ಕಡೆಗಳಲ್ಲಿ , 8 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ ಬಿಟ್ಟರೆ ಸೃಷ್ಟಿಯೊಳು ಪಾರುಗಾಣುವುದೆಂತೂ ಪ ಇಷ್ಟದಿಂದಲೋ ಅನಿಷ್ಟದಿಂದಲೋ ನಾನೇ ಹುಟ್ಟಿಬಂದೆನೆ ದೇವ-ನಿನ್ನಿಷ್ಟದಿಂದಲ್ಲವೇ ಅ.ಪ ಬಿಂಬನೆನಿಸಿದೆ ಎನಗೆ ಪ್ರತಿಬಿಂಬ ನಾ ನಿನಗೆ ಬಿಂಬ ಪ್ರತಿಬಿಂಬಕೆ ಉಪಾಧಿಯು ನಿತ್ಯ- ವೆಂಬನ್ವಯಕೆ ಗುಣತ್ರಯಬದ್ಧವೇ ಕಾರಣ- ವೆಂಬ ಗುಣಜೀವಸ್ವರೂಪೋಪಾಧಿಯು ಬೆಂಬಲನೀನಿದ್ದೂ ಗುಣಕಾರ್ಯಕನುವಾಗಿ ಇಂಬುಕೊಡುವೆ ಫಲಭೋಗಿಸಲೀವೇ ಎಂಬನುಡಿ ಶ್ರುತಿಶಾಸ್ತ್ರಸಿದ್ಧವು ನಂಬಿಹುದು ಜಗವೆಲ್ಲ ಸತ್ಯವು ಶಂಬರಾಂತಕ ಪಿತನೆ ಎನ್ನ ಹೃದ- ಯಾಂಬರದಿ ನಿನ್ನ ಬಿಂಬ ತೋರೈ 1 ಕಾಲಕರ್ಮಾದ್ಯಷ್ಟಗುಣಗಳೆಲ್ಲವು ನಿಜ- ವೆಲ್ಲಜಡಗಳು ಮತ್ತು ಅಚೇತನಂಗಳೈ ಶೀಲ ಮೂರುತಿ ನೀ ಪರಮ ಚೇತನನಾಗಿ ಎಲ್ಲ ಕಾಲದಿ ನಿನ್ನ ನಿಯಮನಂಗಳೈ ಕಾಲಕರ್ಮಗುಣಂಗಳೇನಿಹುದೆಲ್ಲ ಫಲಪ್ರದಾನವ ಮಾಡೆ ಶಕ್ತಿ ಜಡಕೆಂತಿಹುದಯ್ಯ ಕಾಲನಾಮಕ ನೀನೆ ಸರ್ವ ಕಾಲದಲಿ ಸ್ವಾತಂತ್ರ್ಯ ನಿನ್ನದೋ ಇಲ್ಲ ಘನ ಸಮರಿಲ್ಲ ಸರ್ವಕರ್ಮ ಫಲವೆಲ್ಲ ನೀನೆ ದಾತೃವೋ 2 ಮರ್ಮವರಿಯೆನೊ ದೇವ ಧರ್ಮಭ್ರಷ್ಟನಾದೆ ಕರ್ಮಫಲಾನುಭವಮಾಡಿ ಬೆಂಡಾದೆನು ಕರ್ಮ ತಾ ಶಿಕ್ಷಿಸಲರಿಯದು ನ್ಯಾಯ ಧರ್ಮಾಧಿಪತಿ ಭೀಕರ ಫಲಕೊಟ್ಟು ಶಿಕ್ಷಿಪಂತೆ ಧರ್ಮಮೂರುತಿ ಶುದ್ಧನಿಷಿದ್ಧಕರ್ಮಂಗಳಿಗೆ ಪೂರ್ಣಫಲವಿತ್ತು ಸಮನೆಂದೆನಿಸಿರುವೆ ಕರ್ಮಮೋಚಕ ನೀನೆ ಸಕಲ ಕರ್ಮಪ್ರದನೆಂದೆನಿಸಿ ಪೂರ್ವ- ಕರ್ಮಫಲ ಭೋಗಿಸಲು ಜನ್ಮವನಿತ್ತು ಕರ್ಮಪ್ರವಹದೊಳಿಡುವೇ 3 ವಿಮುಖನಾಗಿಹೆ ಶ್ರುತಿಸ್ಮøತಿಶಾಸ್ತ್ರಧರ್ಮಕೆ ಪ್ರಮುಖನಾಗಿಹೆ ದುಷ್ಕರ್ಮ ಮಾರ್ಗದಲ್ಲಿ ಕರ್ಮಕಲಾಪದ ಧರ್ಮ ಮರ್ಮವನರಿಯೆ ಹೆಮ್ಮೆಯಿಂದಲಿ ನಾನಾ ಕರ್ಮಕೂಪದಲಿರುವೆ ಪೆರ್ಮೆಗೋಸುಗ ಅಧರ್ಮವೆಷ್ಟೋ ಮಾಡ್ದೆ ಒಮ್ಮೆಗಾದರು ಸದ್ಧರ್ಮಾಚರಿಸಲಿಲ್ಲ ಕರ್ಮ ಅಕರ್ಮ ವಿಕರ್ಮ ಪರಿಚಯವಿಲ್ಲ ಜನ್ಮಕೆ ಧರ್ಮಪುತ್ರನೆ ದ್ವಂದ್ವಕರ್ಮಸಮರ್ಪಿಸಲು ಸನ್ಮತಿಯ ಕೊಟ್ಟಿನ್ನು 4 ಬೆಟ್ಟದೊಡೆಯನೆ ಶ್ರೀ ವೇಂಕಟೇಶ ನೀ ತುಷ್ಟಿಯಾದರೆ ನಿನ್ನಿಷ್ಟದಂತೆ ಫಲವು ಸೃಷ್ಟಿಯೊಳು ಪುಟ್ಟಿಸಿ ದುಷ್ಟಕರ್ಮದ ಪಾಶ ಕಟ್ಟಿನೊಳಿಟ್ಟೆನ್ನ ಕಷ್ಟಪಡಿಸುವರೇ ಸೃಷ್ಟೀಶ ಉರಗಾದ್ರಿವಾಸ ವಿಠಲ ಎನ್ನ ನೀನಿಟ್ಟಿರುವಷ್ಟುಕಾಲ ಧಿಟ್ಟಭಕುತಿಯ ಕೊಟ್ಟು ದಿಟ್ಟ ರಕ್ಷಿಸು ಇಷ್ಟಮೂರುತಿಯೆ ಇಷ್ಟದಾಯಕನೆಂದು ನಾನಿಷ್ಟು ನುಡಿದೆನೋ ನಿನ್ನ ಎನ್ನ ಮನೋಭೀಷ್ಟೆ ಸಲಿಸೆ ನಿನ್ನಿಷ್ಟವಯ್ಯ5
--------------
ಉರಗಾದ್ರಿವಾಸವಿಠಲದಾಸರು
ತಾನೇ ಬ್ರಹ್ಮನಿರುತಲಿರೆತಾನೇ ವಸ್ತುವಿರುತಲಿರೆತಾನೇ ತನ್ನ ತಿಳಿಯಲಾರದೆಏನೇನೋ ಮಾಡುತಲಿಹರು ಪ ಆಸನವನು ಒಲಿದು ಒಲಿದುನಾಸಿಕದೊಳು ದೃಷ್ಟಿಯಿಟ್ಟುಸೂಸಲೀಯದೆ ಮನವ ನಿಲ್ಲಿಸಿಈಸು ಪರಿಯ ಕಾಂಬುದೇನೋ 1 ಅನ್ನವ ವರ್ಜಿಪುದಾರಿಗೆಅಡವಿಯೊಳು ಇಹುದು ಯಾರಿಗೆತನ್ನ ತಿಳಿಯಲಾರದ ದುಃಖತನ್ನ ನಿಂತು ಮಾಡುತಲಿಹುದು 2 ಚೇತನರಹಿತ ಶರೀರಕ್ಕೆಚೇತನವಾಗಿ ತಾನೆ ಇರ್ದುಚೇತನಾತ್ಮಕ ಚಿದಾನಂದಚೇತನನಾಗಿ ಆಡುತಲಿರೆ 3
--------------
ಚಿದಾನಂದ ಅವಧೂತರು
ದಶವಿಧ ನಾದವು ಭಕ್ತರಿಗೆ ಕೇಳುತಿದೆದಶವಿಧ ನಾದವು ಭಕ್ತರಿಗೆ ಕೇಳುತಿದೆದುಶ್ಮಾನರು ಇಬ್ಬಗೆಯಾಗಲು ದೆಸೆ ಬಿರಿಯಲುಯೋಗಿಯ ಕಿವಿ ಎರಡರಲಿ ಪ ಛಿಣಿ ಛಿಣಿ ಎಂಬ ಚಿನ್ನಿನ ನಾದವು ಚಿತ್ಕøತಿಯಾಗಿ ಚಿಮ್ಮತಿರೆಝಣಝಣವೆಂಬ ಝಿಲ್ಲಿಯ ನಾದವು ಝೇಂಕಾರದಿ ಝೇಂಕರಿಸುತಿದೆಎಣಿಕೆಯಿಲ್ಲದೆ ನಾಗಸ್ವರದ ಧ್ವನಿ ಎಡೆದೆರೆಪಿಲ್ಲದೆ ಕೂಗುತಿದೆಧಣಧಣ ಎನಿಪ ತಾಳನಾದವು ದಟ್ಟಣೆಯಾಗಿ ತುಂಬುತಿದೆ 1 ಮೃಣು ಮೃಣು ಎನಿಪ ಮೃದಂಗ ನಾದವುಮುಂಕಾಟ್ಟಾಗಿಯೆ ನುಡಿಯುತಿದೆತನನಾ ಎಂಬ ವೀಣಾಸ್ವರವು ತಂಪಾಗೆಲ್ಲವ ಮುಚ್ಚುತಿದೆಘನಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ2 ಭೇರಿಯ ನಾದವು ಧಮಧಮ ಎನುತಲಿ ಬಹಳಾಗಿಯೆ ಭೋಂಕರಿಸುತಿದೆಘೋರದಿ ಮೇಘದ ನಾದವು ಘರ್ಜಿಸುತಿದೆ ಘುಡಿ ಘುಡಿಸುತಿದೆನೂರಾರು ಸಿಡಿಲಂತೆ ನೂಕು ನುಗ್ಗಡಿಸುತಿದೆವೀರ ಚಿದಾನಂದ ವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ3
--------------
ಚಿದಾನಂದ ಅವಧೂತರು
ದಶವಿಧ ನೌಬತ್ತಾಗುತದಣ್ಣದಶವಿಧ ಸೌಬತ್ತಾಗುತದೆದುಸುಮಾನರ ಎದೆ ಇಬ್ಬಗೆಯಾಗಲುದೆಸೆ ಬಿರಿಯಲು ಯೋಗಿಯ ಕಿವಿಯೆರಡಲ್ಲಿ ಪ ಚಿಣಿ ಚಿಣಿ ಎಂಬ ಸಿಂಜಿಣಿನಾದವುಚಿತ್ಕøತಿಯಾಗಿ ಚಿಮ್ಮುತಿದೆಝಣಝಣಕೃತವೆಂಬ ಝಿಯಾನಾದವುಝೇಂಕಾರದಿ ಝೇಂಕರಿಸುತಿದೆಎಣಿಕೆಯು ಇಲ್ಲದೆ ನಾಗಸ್ವರ ಧ್ವನಿಎಡದೆರಪಿಲ್ಲದೆ ಕೂಗುತಿದೆಘಣಘಣ ಎನಿಪ ತಾಳದ ನಾದವುದಟ್ಟಣೆಯಲಿ ತಾ ತುಂಬುತಿದೆ 1 ಮೃಣು ಮೃಣು ಎನಿಪ ಮೃದಂಗ ನಾದವುಮುಂಕಟ್ಟಾಗಿಯೆ ನುಡಿಯುತಿದೆ ತನನಾ ಎಂಬವೀಣಾ ಸ್ವನವು ತಂಪಾಗೆಲ್ಲವ ಮುಚ್ಚುತಿದೆಘನ ಘನ ಎನುತಲಿ ಶಂಖನಾದವುಘಮ್ಮೆನ್ನುತಲಿ ಭೋರೆನುತಲಿದೆಘಣಘಣ ಎನುತಲಿ ಘಂಟಾನಾದವುಘಂಟ್ಯಾಗಿಯೆ ಓಂ ಎನುತಲಿದೆ 2 ಭೇರಿಯ ನಾದವು ಧಮಧಮ ಎನುತಲಿಧಾಂಧಮ ಧಾಂಧಮ ನುಡಿಯುತಿದೆಘೋರದಿ ಮೇಘದ ನಾದವು ಗರ್ಜಿಸುತಿದೆಘುಡಿ ಘುಡಿಸುತಿದೆ ನೂರಾರು ಸಿಡಿಲಂತೆನೂಕು ನುಗ್ಗಡಿಸುತಿದೆ ವೀರ ಚಿದಾನಂದವಿಸ್ಮಯನಾಗಲು ವಿಚಿತ್ರದಿ ಬಾರಿಸುತಿದೆ 3
--------------
ಚಿದಾನಂದ ಅವಧೂತರು
ನಂಬಿದೆನೊ ನಂಬಿದೆನೊ ಅಂಬುಜಾಕ್ಷ ತೊಂಬಲಿಗೆ ಹಂಬಲಿಸಿ ಹಾರೈಸಿದೆ ನಿನ್ನ ಪ ಮೊದಲುಂಡ ಪಾಪದಲಿ ಕಳೆಗುಂದಿ ಕಳೆಗುಂದಿ ಮುದದಿಂದ ನಿತ್ರಾಣನಾದೆನಯ್ಯಾ ಪದುಮನಾಭನೆ ನಿನ್ನಭಯದೊಂಬಲನಿತ್ತು ವದನ ಚೇತನನಾಗುವಂತೆ ದಯಮಾಡೊ 1 ವಿಷವ ಸೇವಿಸಿದ ತರುಣನಂತೆ ಮೆಲವು ಭಾವಿಸದೆ ಬೀಳುತೀ ನೀ ನೆಲೆಗಾಣದೆ ಬಿಸಿಜಾಕ್ಷ ನೀನೆ ಕೃಪಾಳು ಎಂದೆಂದಿಗೆ ರಸ ಸುರಿವ ಸುರಿವ ಬಾಯದೊಂಬಲಾನಿತ್ತು ಸಲಹೊ2 ಆವದಾದರುವಲ್ಲೆ ಅನಿಮಿತ್ತ ಬಂಧು ಕೇಳು ಜೀವವೇ ನಿನ್ನ ಪಾದದಾಧೀನವೋ ಶ್ರೀವಧುರಮಣ ನಮ್ಮ ವಿಜಯವಿಠ್ಠಲ ನೀನೆ ದೇವ ಯನಗ ಹುದು ತೊಂಬಲನಿತ್ತು ಪೊರಿಯೊ 3
--------------
ವಿಜಯದಾಸ
ಪೂರ್ಣಿಮೆಯ ದಿನ (ಗರುಡ ದೇವರನ್ನು ಕುರಿತು) ರಂಭೆ :ಮಂದಗಮನೆ ಪೇಳಿದಂದವನೆಲ್ಲ ಸಾ- ನಂದದಿ ತಿಳಿದೆನೆ ಬಾಲೆ ವಾಹನ ವೇರಿ ಮಂದರಧರ ಬಹನ್ಯಾರೆ1 ಅಕ್ಕ ನೀ ಕೇಳಲೆ ರಕ್ಕಸವೈರಿಯ ಪಕ್ಕದ ಮೇಲೇರಿಸುತ ಅಕ್ಕರದಿಂದ ಕಾಲಿಕ್ಕಿ ಬರುವನೀತ ಹಕ್ಕಿಯಂತಿಹನೆಲೆ ಜಾಣೆ2 ಘೋರನಾಸಿಕದ ಮಹೋರಗ ಭೂಷಣ ಧಾರಿವನ್ಯಾರೆಂದು ಪೇಳೆ ಮಾರಜನಕಗೆ ವಾಹನನಾಗುವನೀತ ಕಾರಣವೇನೆಂದು ಪೇಳೆ3 ಊರ್ವಶಿ : ಈತನೆ ಮಹಾತಿಬಲ ಕಾಣೆ ಶ್ರೀವಿಷ್ಣುವಿಂಗೆ ಕೇತನನಾದ ಪುನೀತನೆಲೆ ಜಾಣೆ ಭೀತಿರಹಿತವಿಖ್ಯಾತಿ ಸರ್ಪಾ- ರಾತಿ ಸೂರ್ಯಾನ್ವಯನ ಬಲಗಳ ಚೇರಿಸಿದ ನಿಷ್ಕಾತುರನ ಹರಿ ಪ್ರೀತ ವಿನತಾ ಜಾತ ಕಾಣಲೆ4 ಗಂಡುಗಲಿ ಮಾರ್ತಾಂಡತೇಜಮಖಂಡ ಬಲನಿವನು ಮಾತೆಯ ಚಂಡವಿಕ್ರಮನು ನೇಮವ ತಂಡವೆಲ್ಲವನು ಕೋಪದಿ ನಂಡಲೆದು ಕರದಂಡನಾಭನ ಕೊಂಡುಬಂದವನಂಡಜಾಧಿಪ5 ಭೂರಿವೈಭವದಿ ಗರುಡನ ದಯದಿ ತೋರುತ ರವದಿ ಸನಕ ಸ- ಚಾರುಚರಣವ ತೋರಿ ಭಕ್ತರ ಶ್ರೀರಮಾಧವ ಮಾರಜನಕನು6
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಗುರುಪ್ರಾಣೇಶದಾಸರಾಯರ ಸ್ತೋತ್ರ ತರುಳನ ಪರಿಪಾಲಿಸು ಜೀಯಾ ಪ ಪತಿ ಸದ್ವಂಶೋದ್ಭವನೆ ವರಕವಿ ಪ್ರಾಣೇಶರ ಸುತನೆ ಕೋಪವಿತಾಪಮೋಹಕ ಜಿತನೆ ಶ್ರೀ ಕಮಲಾಪತಿ ಸೇವಕನೆ ಭವಜನಿ ತಾಪದಾದಿ ಸಂ - ತಾಪ ಹರಿಸುತಲಿ ಶ್ರೀಪದ್ಮಜ ಮತ್ತಾಪಿನಾಕಿನುತ ಶ್ರೀಪರಮಾತ್ಮದಾಸರಿಗೆ ಸದಾಪರೋಕ್ಷ ತೋರ್ದಾ 1 ರತಿಪತಿ ಪಿತನನಾಮ ಸ್ಮರಣೆಯಲ್ಲಿ ನಲಿ - ಯುತಸುಖಿಸುವಕರುಣಿ ಬಿಡದೆ ಸಂತತ ಹರಿಗುಣಗಾನಾ- ದಲ್ಲಿ ಬಲುತರನಿರುತಿಹ ಜಾಣಾನಾನತಿ ಪತಿತನಾಗಿ ಇರುವೆ ಅತಿ ದುಷ್ಕøತಿಯನೆಸಗಿ ಸದ್ಗತಿಗೆ ದಾರಿಗಾಣೇ ಪತಿತಪಾವನ ನಿಮ್ಮನಾ ತುತಿಪೆನೆ ಮತಿಮಂದ2 ಮತಗಳಹಳಿದು ಪ್ರೇಮದಿಂದ ಪೊರೆದು ಪಾತಕಿ ಪಾಮರನೆನ್ನಗೆ ರಾಮ ಶ್ರೀವರದೇಶ ವಿಠಲನ ದೂತಮಹಾಮುನಿವರದೇಂ- ಪ್ರೇಮದಿ ಕೊಡು ಮುದದಿ 3
--------------
ವರದೇಶವಿಠಲ
ಪೂರ್ಣಿಮೆಯ ದಿನ(ಗರುಡ ದೇವರನ್ನು ಕುರಿತು)ರಂಭೆ : ಮಂದಗಮನೆ ಪೇಳಿದಂದವನೆಲ್ಲ ಸಾ-ನಂದದಿ ತಿಳಿದೆನೆ ಬಾಲೆಇಂದಿದು ಪೊಸತು ಮತ್ತೊಂದುವಾಹನವೇರಿಮಂದರಧರಬಹನ್ಯಾರೆ1ಅಕ್ಕ ನೀ ಕೇಳಲೆ ರಕ್ಕಸವೈರಿಯಪಕ್ಕದ ಮೇಲೇರಿಸುತಅಕ್ಕರದಿಂದ ಕಾಲಿಕ್ಕಿ ಬರುವನೀತಹಕ್ಕಿಯಂತಿಹನೆಲೆ ಜಾಣೆ 2ಘೋರನಾಸಿಕದ ಮಹೋರಗ ಭೂಷಣಧಾರಿವನ್ಯಾರೆಂದು ಪೇಳೆಮಾರಜನಕಗೆ ವಾಹನನಾಗುವನೀತಕಾರಣವೇನೆಂದು ಪೇಳೆ 3ಊರ್ವಶಿ : ಈತನೆ ಮಹಾತಿಬಲ ಕಾಣೆ ಶ್ರೀವಿಷ್ಣುವಿಂಗೆಕೇತನನಾದ ಪುನೀತನೆಲೆ ಜಾಣೆಭೀತಿರಹಿತವಿಖ್ಯಾತಿ ಸರ್ಪಾ-ರಾತಿ ಸೂರ್ಯಾನ್ವಯನ ಬಲಗಳಚೇರಿಸಿದ ನಿಷ್ಕಾತುರನಹರಿಪ್ರೀತ ವಿನತಾ ಜಾತ ಕಾಣಲೆ 4ಗಂಡುಗಲಿ ಮಾರ್ತಾಂಡತೇಜಮಖಂಡಬಲನಿವನು ಮಾತೆಯಲಂಡಲೆಯ ಪರಿಖಂಡನಾರ್ಥದಿಚಂಡವಿಕ್ರಮನು ನೇಮವಗೊಂಡು ಬಳಿಕಾಖಂಡಲಾದ್ಯರತಂಡವೆಲ್ಲವನು ಕೋಪದಿಗಿಂಡುಗೆದರಿಯಜಾಂಡವೆಲ್ಲವನಂಡಲೆದು ಕರದಂಡನಾಭನಕಂಡು ಮೆಚ್ಚಿಸಿ ಅಮೃತಕುಂಭವಕೊಂಡುಬಂದವನಂಡಜಾಧಿಪ 5ವಾರಿಜಾಸನೆ ವಾಸುದೇವನುಭೂರಿವೈಭವದಿ ಗರುಡನನೇರಿ ಪೂರ್ಣಮಿವಾರದಲಿ ಸಾಕಾರವನುದಯದಿ ತೋರುತಸ್ವಾರಿ ಬರುತ ಶೃಂಗಾರಮೂರುತಿ ಭೇರಿಗಳರವದಿಸನಕಸ-ನಾರದಾದಿಮುನೀಂದ್ರವಂದಿತಚಾರುಚರಣವ ತೋರಿ ಭಕ್ತರಘೋರದುರಿತವ ಸೊರೆಗೊಳ್ಳಲುಶ್ರೀರಮಾಧವ ಮಾರಜನಕನು 6
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪ್ರೀತಿಲಿ ಭಜಿಪನಿಗೆ ಪಪೋತರುಸತಿಮಹಭೂತಿಯ ನೃಪತನನಾಥನಿಗರ್ಪಿಸಿ ದೂತ ನಾನೆಂಬುವಗೆ ಅ.ಪಮಂದಿರದಲಿ ತಾ ತಂದು ಭಜಿಪನಿಗೆ 1ಮದನಕೇಳಿಯೊಳು ಸುದತಿಯ ಸಹಿತದಿಹೃದಯದೊಳಗೆ ಬಲು ಮುದದಲಿ ಭಜಿಪನಿಗೆ 2ಬನ್ನನುಡಿಯಾಡಿದರೇನೂಸನ್ನುತಿಪ ಗುರುರನ್ನ ಚರಗೆ 3
--------------
ಗುರುಜಗನ್ನಾಥದಾಸರು
ಯಾತರ ಬಲ್ಲತನವೊ ಕೃಷ್ಣಯ್ಯ ನಿನಗ್ಯಾತರ ಬಲ್ಲತನವೊ ಪ.ಯಾತರ ಬಲ್ಲತನನಾಥರ ನಮ್ಮ ಸನಾಥರ ಮಾಡಿ ಸಂಪ್ರೀತಿಯ ಬಡಿಸದಿನ್ಯಾತರ 1ಬಿರುದಂತೆ ಭಕುತರ ಪೊರೆವುದು ಗಡ ನಿನ್ನಸ್ಮರಣೆಗೆ ಮರೆವಿತ್ತು ದುರಿತಕೊಪ್ಪಿಸುವುದಿನ್ಯಾತರ 2ಬಲ್ಲತನದ ಗುರುತೆಲ್ಲ ದೇಶದೊಳು ನನ್ನಲ್ಲಿ ಅಜ್ಞಾನದ ಬಳ್ಳಿಯ ತೊಡಕಿಸೂದ್ಯಾತರ 3ನಿಜರವಮಾನದ ಕುಜಕೆ ಪರಶುರಾಮತ್ರಿಜಗವಂದಿತ ನಿನ್ನ ಭಜಕರೊಳಿಡಲೊಲ್ಲದ್ಯಾತರ 4ದುರಿತಗಿರಿತ ಅರಿಗಿರಿಗಂಜೆ ನಾಮವಜ್ಜರವಿರೆ ಪ್ರಸನ್ವೆಂಕಟರಸ ಮನ್ನಿಸಲೊಲ್ಲದ್ಯಾತರ 5
--------------
ಪ್ರಸನ್ನವೆಂಕಟದಾಸರು