ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿನ್ನೈಸಲೇನಿನ್ನು ಎನ್ನ ಗುರುವೇ ನಿ ಮ್ಮ ನಿತ್ಯಾನಂದನಿರುವ ಬಗೆಯನ್ನ ಪ. ತನ್ನ ಕಾರ್ಯಗಳನ್ನು ನಿಮ್ಮ ಮೇಲೊರಗಿಸಿ ಬೆನ್ನಿನಂದದಿ ನಿಮ್ಮ ಕಾಡುತಿಹನು ತನ್ನಿಂದಲಾಗದ ಕಾರ್ಯಗಳು ಇನ್ನುಂಟೆ ತನ್ನನೆ ತಾನು ಮರೆತಂತೆ ಇರುತಿಹನು 1 ತನ್ನ ಮಾರ್ಗಕೆ ಬರುವ ಜೀವರುಗಳೆಲ್ಲರನು ನಿಮ್ಮ ವಶಕೊಪ್ಪಿಸಿ ಓರೆಯಾಗಿಹನು ತಾನೊಬ್ಬ ನಿಮ್ಮಿಂದ ತೇರ್ಗಡೆಯಾದಮೇಲ್ ತನ್ನವರ ತಾನು ಸಲಹದಲೆ ಇರುತಿಹರೆ 2 ಬನ್ನಬಡುತಲಿ ಇರುವ ಘನ್ನ ಜೀವರುಗಳನು ಮನ್ನಿಸಿ ಕರೆದು ಅಂಕಿತವಿತ್ತಿರಿ ಇನ್ನಾದರೂ ತಾನು ನಿಮ್ಮ ಕಾರ್ಯಕೆ ನಿಂತು ನಿಮ್ಮ ಸೇವೆಯನು ಮಾಡದಲೆ ಇರುತಿಹನು 3 ಒಂದೊಂದು ಸೇವೆಗೆ ಒಬ್ಬೊಬ್ಬರಿಹರೆಂದು ಮುಂದೆ ತನಗಾವುದೂ ತಿಳಿಯದೆಂದು ಇಂದು ಈ ಪರಿಯಿಂದ ಇರುತಿಹುದು ನ್ಯಾಯವೆ ತಂದೆ ಮುದ್ದು ಮೋಹನಗುರುವೆ ನೀವ್ ಪೇಳಿ 4 ಸಾಕು ನಿಮ್ಮಯ ಶ್ರಮವ ನೋಡಲಾರೆ ನಾನು ಈ ಕಂದನಿಗೆ ಇನ್ನು ವರವ ಕೊಟ್ಟು ಲೋಕಕಾರ್ಯವ ನಡೆಸಿ ನೋಡಿ ಸಂತಸಪಡಿರಿ ಲೋಕೇಶ ಗೋಪಾಲಕೃಷ್ಣವಿಠ್ಠಲ ಪ್ರಿಯರೆ 5
--------------
ಅಂಬಾಬಾಯಿ
ಶ್ರವಣಮನನ ನಿಧಿ ಧ್ಯಾನವು ಯೋಗಕ್ಕೆಸಮನಿಸೆ ಸಾಧಕಂಗೇತಕೆ ಈ ಮೂರುಪನಿತ್ಯಗುರುಮುಖದಿಂದ ನಿಜವೇದಾಂತ ಸಾರವ-ನಿತ್ಯಕಾಲದಲ್ಲಿ ಕೇಳುತಲಿ ಇದ್ದುನಿತ್ಯಜೀವರಪರಮನಿಲುಗಡೆಗಳ ತಿಳಿದುಸತ್ಯತಾನೆಂದು ಕಂಡು ನಿಶ್ಚೈಸಿದುದೆ ಶ್ರವಣ1ವಾಸನೆಹರವಾಗಿ ಬಲಿದು ಆತ್ಮಾನಂದಕೆಸೂಸದೆ ಮನವನು ನಿಲ್ಲಿಸುತದೇಶಿಕೋತ್ತಮನಿಂದ ತನಗಾವ ಉಪದೇಶಬೇಸರಿಸದೆ ಮತ್ತೆ ಮತ್ತೆ ನೆನೆವುದೆ ಮನನ2ದಧಿಮಥನವ ಮಾಡೆನವನೀತತೇಲುವೊಲುಉದಧಿಮಥಿಸೆ ಅಮೃತ ತಾ ಬಂದಂತೆಮಥಿಸೆ ಕಾಷ್ಟಕ್ಕೆಕಾಷ್ಠಅಗ್ನಿ ತಾ ಪುಟಿದಂತೆವಿಧಿಸೆ ಈ ತೆರದಲಿ ತಾನದುವೆ ನಿಧಿಧ್ಯಾಸ3ಈ ಮೂರು ಸಾಧನಗಳಿರಬೇಕು ಯೋಗಕ್ಕೆಈ ಮೂರು ಸಾಧಿಸಲು ರಾಜಯೋಗಿ ತಾನುಇವರೊಳು ಒಂದು ಕಡಿಮೆಯಾದರು ಯೋಗಿಯಾಗನುಇಂತಿಲ್ಲದಿರೆ ನಿಜಮುಕ್ತಿ ದೊರಕದು4ಶ್ರವಣವೆಂಬುದು ಅದು ಸರ್ವಸಾಧನವಯ್ಯಶ್ರವಣ ಮನನವಾಗೆ ಶ್ರಮ ಪರಿಹಾರವುಶ್ರವಣ ಮನನ ನಿಧಿಧ್ಯಾಸ ಮೂರಾಗೆಶಿವನೆ ಆತನು ಚಿದಾನಂದ ದೇವನವನು5
--------------
ಚಿದಾನಂದ ಅವಧೂತರು