ಸತ್ಸಂಗದೊಳಗಿರಿಸೋ ಮಮದೇವ ಆಹ
ಮತ್ಸರ್ವವ್ಯಾಪೀಶ ತ್ರಿಗುಣಪ್ರಭಾವಾ ಪ
ನಿಸ್ಸಂಗ ನಿರ್ಮೋಹ ನಿಶ್ಚಲಾತ್ಮಕ ಪಾದ
ತತ್ಸೇವೆಯೊಳಗಿರಿಸೊ ಕರುಣ ಪ್ರಭಾವಾ 1
ಅಧಮರಾಶ್ರಯದೊಳಗೆ ಅಧಿಕನಾಗಿರುತಿರುವೆ
ಇದು ಬಿಡಿಸಿಯೆ ಪರಮಪದದೊಳಗೆ ಯಿರುವಾ 2
ನಿಜಪದಾಶ್ರಯನ ಮಾಡೊ ಭುಜಗಾಸನನೆ ರಂಗಾ
ಭಜನೆಯೊಳಗಿರುತಿರಿಸು ಶ್ರೀ ತುಲಶಿರಾಮಾ 3