ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿತ್ತಾಭಿಮಾನಿ ಬಾರೆ ತ್ವಚ್ಚರಣಕಮಲ ತೋರೆ ಪ ಭೃತ್ಯಾರ್ಥಕಾರಿಣೆ ನೀರೆ ಭುವನೈಕ ಸುಗುಣಧಾರೆ ಅ.ಪ ನಿರ್ಜರವರದೆ ಸಂಪನ್ನೆ ನಿಗಮಾಭಿಮಾನಿ ಪ್ರಸನ್ನೆ 1 ಬುದ್ಧ್ಯಾದಿ ತತ್ವದೊಡೆಯರು ಭೃತ್ಯರು ನಿನಗೆನಿಸುವರು ಬದ್ಧರು ನಿಮ್ಮನ್ನು ಬಿಟ್ಟು ದುರ್ಭವದಿ ಬೀಳ್ವರು ಕೆಟ್ಟು 2 ಜಾನಕಿ ನೀನೆ ಮಹಾಮಾಯೆ ಮನ್ಮಾನಸದೊಳಿರು ತಾಯೆ 3 ಐಶ್ವರ್ಯಮದದಿ ಕೆÀಲರು ಈಶ್ವರಿ ನಿನ್ನನು ಮರೆಯುವರು ಪಶ್ವಾದಿಗಳ ಸಮವವರೂ ನಿಸ್ವರಾಗಿಗತಿ ದೂರರಹರು 4 ಸ್ವಾಮಿ ಜೀವೇಶ ತವ ಭರ್ತ ಕಾಮಿತ ಪ್ರದಾಯಕ ಪಾರ್ಥ- ಸೂತನ ನಾಮ ಸ್ಮರಣೆ ಸ್ವಾರ್ಥ ಗುರುರಾಮ ವಿಠಲ ಕರ್ತ 5
--------------
ಗುರುರಾಮವಿಠಲ
ಶೇಷ-ರುದ್ರದೇವರು ಪಾದ ಭೂ- ಪಾದ ಪ. ಹರಿಗೆ ಹಾಸಿಗೆಯಾಗಿ ಹರುಷಪಡುವ ಪಾದ ಹರಿಯ ಮಂದಿರಲ್ಲಿ ಇರುವ ಪಾದ ಹರ ಪುರಂದರರಿಗೆ ಪೂಜ್ಯವಾಗಿಹ ಪಾದ ಪಾದ 1 ವಾರುಣಿ ದೇವಿಗೆ ವರನೆನಿಸಿದ ಪಾದ ಶ್ರೀ ರಾಮಗೆ ಕಿರಿಯನಾದ ಪಾದ ಘೋರ ಇಂದ್ರಾರಿಯ ಸಂಹರಿಸಿದ ಪಾದ ಪಾದ 2 ವಾಯುದೇವರು ಜೊತೆಗೆ ವಾದವಾಡಿದ ಪಾದ ನೋಯದೆ ಭೂಮಿಯನು ಪೊತ್ತಿಹ ಪಾದ ಶ್ರೀಯರಸನ ಪಾದಪದ್ಮ ಸೇವಿಪ ಪಾದ ಸುರರು ಪಾದ 3 ಸಪ್ತೆರಡು ಭುವನದಲಿ ಗುಪ್ತವಾಗಿಹ ಪಾದ ಚಿತ್ತದಭಿಮಾನಿಗೆ ಸೇವಕನಾದ ಪಾದ ಮತ್ತೆ ಮನ ಅಹಂಕಾರ ತತ್ವದೊಡೆಯನ ಪಾದ ಪಾದ 4 ಘೋರರೂಪವ ತೊರೆದು ಸೌಮ್ಯವಾಗಿಹ ಪಾದ ಸೇರಿದವರನು ಪೊರೆವ ಶ್ರೇಷ್ಠ ಪಾದ ಹಾರೈಸಿ ಗೋಪಾಲಕೃಷ್ಣವಿಠ್ಠಲನ ಪಾದ ಪಾದ 5
--------------
ಅಂಬಾಬಾಯಿ
ಗಂಗಾಧರ ದೇವ ಜಯಗೀಷ ವ್ಯಾನಂಗಾರಿ ಗಿರಿಜಾಧವ |ಮಂಗಳ ಪ್ರದನೆ ಅಮಂಗಳ ಶೀಲ | ಭುಜಂಗ ರೂಪದಿ ಪಾಂಡು |ರಂಗ ಘಾಸಿಗೆಯಾದ ಪವೈಕಾರಿಕಾಹಂಕಾರ ತತ್ವದೊಡೆಯ, ನಾಕುಮೊಗನ ಕುಮಾರ |ಶ್ರೀಕಂಠ, ಸ್ಥಾಣು, ವಿಶ್ಖೋಜನಕ, ಚಂದ್ರಶೇಖರ, ಈಶಪಿನಾಕಿಭಕ್ತವತ್ಸಲ |ಶೋಕನಾಶಕ ಶಂಭು, ಪಶುಪತಿ, ಹೇ ಕರುಣಿ, ಸದ್ಗುಣ ಸುಖಾರ್ಣವ |ಪಾಕಶಾಸನ ಪ್ರಮುಖ ವಂದ್ಯ, ವಿಶೋಕ, ಎನ್ನಭಿಲಾಷೆ ಪೂರ್ತಿಸು1ಪ್ರಾಣನಂದನ ತೈಜಸಾಹಂಕಾರಾಭಿಮಾನಿ ಶ್ರೀಶುಕದೂರ್ವಾಸ|ಕ್ಷೋಣಿಸಂಧೃತ ಧನ್ವಿ, ದಾನವಾಂತಕ, ಶೂಲಪಾಣಿ, ಪ್ರಮಥಾಧಿಪ ಬಾಣವರದಯನ್ನ |ಮಾನನಿನ್ನದು ಚಕ್ರಿ ಪದಕಂಜರೇಣುತೋರಿಸು ತವಕದಿಂದಲಿ |ದ್ರೌಣಿ, ಶಿವ, ಪ್ರಣತ ಜನ ಸುಮನಸಧೇನು, ತವ ಪದ ಸಾರ್ವೆ ಸತತ 2ತಾಮಸಾಹಂಕಾರೇಶ ಸಂಕರ್ಷಣನಾ ಮಗನೇ ಕೊಡು ಲೇಸ ರಾಮನಾಮ ಮಂತ್ರ |ಪ್ರೇಮದಿ ಜಪಿಸುವ ಸ್ವಾಮಿ, ಅನಲ,ವಹ್ನಿಸೋಮಲೋಚನ ಹರ |ವಾಮದೇವ, ಕಪರ್ದಿ,ಭವಭಯ ಭೀಮ ಶ್ರೀ ಪ್ರಾಣೇಶ ವಿಠಲನ |ಪ್ರೇಮ ಪುಟ್ಟಿಸೋ ರೌಪ್ಯ ಪರ್ವತಧಾಮ ಶ್ರೀ ವಿರೂಪಾಕ್ಷ ಗುರುವೇ 3
--------------
ಪ್ರಾಣೇಶದಾಸರು